Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಸೋಮವಾರ, 27 ಸೆಪ್ಟಂಬರ್ 2021 (08:38 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಜಾಣತನ ಪ್ರದರ್ಶಿಸಲು ವೇದಿಕೆ ಸಿಗಲಿದೆ. ಮೇಲಧಿಕಾರಿಗಳಿಂದ ಪ್ರಶಂಸೆಗೊಳಗಾಗಲಿದ್ದೀರಿ. ಸರಕಾರಿ ಕೆಲಸಗಳಲ್ಲಿ ಮುನ್ನಡೆ ಸಿಗುವುದು. ಓಡಾಟ ನಡೆಸಲಿದ್ದೀರಿ.

ವೃಷಭ: ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಉತ್ತಮ ವೈವಾಹಿಕ ಸಂಬಂಧಗಳು ಕೂಡಿಬರಲಿವೆ. ವ್ಯಾಪಾರಿಗಳಿಗೆ ವ್ಯವಹಾರದಲ್ಲಿ ಸುಧಾರಣೆಗೆ ಅವಕಾಶಗಳು ಸಿಗಲಿವೆ. ಗೃಹೋಪಯೋಗಿ ವಸ್ತುಗಳ ಖರೀದಿ ಮಾಡಲಿದ್ದೀರಿ.

ಮಿಥುನ: ಬಹುದಿನಗಳ ಕನಸು ನನಸಾಗುವ ಕಾಲವಿದು. ಹಿಂದೆ ಮಾಡಿದ್ದ ಹೂಡಿಕೆಗೆ ತಕ್ಕ ಫಲ ಸಿಗಲಿದೆ. ವೈಯಕ್ತಿಕ ದೇಹಾರೋಗ್ಯದ ಬಗ್ಗೆ ಉಪೇಕ್ಷೆ ಬೇಡ. ಧಾರ್ಮಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ತಾಳ್ಮೆಯಿರಲಿ.

ಕರ್ಕಟಕ: ವೃತ್ತಿರಂಗದಲ್ಲಿ ಹೊಸ ಪ್ರತಿಸ್ಪರ್ಧಿಗಳು ಹುಟ್ಟಿಕೊಳ್ಳಲಿದ್ದಾರೆ. ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನ ವೃದ್ಧಿಯಾಗಲಿದೆ. ಕಟ್ಟಡ ಕಾಮಗಾರಿ ಕೆಲಸಗಳಿಗೆ ಭೂಮಿ ಪೂಜೆ ನೆರವೇರಿಸಲಿದ್ದೀರಿ. ಚಿಂತೆ ಬೇಡ.

ಸಿಂಹ: ದೈವಾನುಕೂಲದಿಂದ ಇಂದು ನೀವು ಅಂದುಕೊಂಡ ಕೆಲಸಗಳು ಸುಗಮವಾಗಿ ನೆರವೇರಲಿದೆ. ದಾಯಾದಿ ಕಲಹಗಳಿಗೆ ಹಿರಿಯರ ಮಧ್ಯಸ್ಥಿಕೆಯಲ್ಲಿ ಪರಿಹಾರ ಕಂಡುಕೊಳ್ಳಲಿದ್ದೀರಿ. ವ್ಯವಹಾರಗಳಲ್ಲಿ ಜಯ ಸಿಗುವುದು.

ಕನ್ಯಾ: ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದರಿಂದ ಸಂಭಾವ್ಯ ಸಮಸ್ಯೆಗಳಿಂದ ಪಾರಾಗಲಿದ್ದೀರಿ. ಸಂಗಾತಿಯ ಕಷ್ಟಗಳಿಗೆ ಹೆಗಲುಕೊಡಲಿದ್ದೀರಿ. ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯುವ ಅವಕಾಶ.

ತುಲಾ: ಅಧ‍್ಯಯನಶೀಲ ವೃತ್ತಿಯಲ್ಲಿ ತೊಡಗಿಸಿಕೊಂಡವರಿಗೆ ಉತ್ತಮ ಗೌರವಾದರಗಳು ಸಿಗಲಿವೆ. ಕೃಷಿಕರಿಗೆ ಕೈಗೆ ಬಂದ ಬೆಳೆಗೆ ತಕ್ಕ ಬೆಲೆ ಸಿಗದೇ ಹೋದೀತು. ಯಂತ್ರೋಪಕರಣಗಳ ವೃತ್ತಿಯವರಿಗೆ ಅವಘಡದ ಭಯ. ಎಚ್ಚರಿಕೆಯಿರಲಿ.

ವೃಶ್ಚಿಕ: ನಿಮ್ಮ ಮಾತುಗಳಿಗೆ ಇತರರು ಕಿವಿಗೊಡುತ್ತಿಲ್ಲ ಎಂಬ ಕೀಳರಿಮೆ ಮೂಡೀತು. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ನೆರವು ಪಡೆಯಲಿದ್ದೀರಿ. ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಪ್ರಗತಿ ಕಂಡುಬರಲಿದೆ.

ಧನು: ಆರ್ಥಿಕವಾಗಿ ಚೇತರಿಕೆ ಕಂಡುಬರಲಿದ್ದು, ಅಂದುಕೊಂಡ ಕೆಲಸಗಳನ್ನು ಪೂರ್ತಿ ಮಾಡಲಿದ್ದೀರಿ. ನೆರೆಹೊರೆಯವರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ದೇವತಾ ಪ್ರಾರ್ಥನೆ ಮಾಡಿ.

ಮಕರ: ದೇಹಾರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ಅಲೆದಾಡುವ ಪರಿಸ್ಥಿತಿ ಬಂದೀತು. ಇಷ್ಟಾನುಸಾರ ನಿರ್ಧಾರ ತೆಗೆದುಕೊಳ್ಳಲು ಹೋದರೆ ಆಪ್ತರ ಅಸಮಾಧಾನಕ್ಕೆ ಗುರಿಯಾಗಬೇಕಾದೀತು. ತಾಳ್ಮೆ, ಸಂಯಮವಿರಲಿ.

ಕುಂಭ: ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಸ್ಥಾನಪಲ್ಲಟವಾಗುವ ಸಾಧ್ಯತೆಯಿದೆ. ವಾಹನ ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ ಅಗತ್ಯ. ಧಾರ್ಮಿಕ ಆಚರಣೆಯಲ್ಲಿ ಆಸಕ್ತಿ ಕಂಡುಬರಲಿದೆ. ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ.

ಮೀನ: ಉದ್ಯೋಗ ವ್ಯವಹಾರಗಳಲ್ಲಿ ಇಂದೇ ಕೆಲಸ ಪೂರ್ತಿ ಮಾಡುವ ಒತ್ತಡ ಕಂಡುಬಂದೀತು. ಮನೆಯಲ್ಲಿ ಶುಭಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ. ಹಿರಿಯರಿಗೆ ಪುಣ್ಯಕ್ಷೇತ್ರಗಳ ಸಂದರ್ಶನ ಯೋಗವಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿದೋಷ ಪರಿಹಾರಕ್ಕಾಗಿ ಶನಿ ಸಹಸ್ರನಾಮವನ್ನು ಇಂದು ತಪ್ಪದೇ ಓದಿ

Dhanwanthari Mantra: ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಧನ್ವಂತರೀ ಸ್ತೋತ್ರ ಓದಿ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

Durga mantra: ದುರ್ಗಾ ದೇವಿಯ ಈ ಸ್ತೋತ್ರ ಓದಿದರೆ ಸೋಲಿನ ಭಯವಿರಲ್ಲ

ಮುಂದಿನ ಸುದ್ದಿ
Show comments