ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಶುಕ್ರವಾರ, 24 ಸೆಪ್ಟಂಬರ್ 2021 (08:37 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಹಿರಿಯರಿಂದ ಸುಖ ಸಂತೋಷ ಸಿಗಲಿದೆ. ಸರಕಾರಿ ಕೆಲಸಗಳಿಗೆ ಓಡಾಟ ನಡೆಸಬೇಕಿದ್ದರೂ ಅಂದುಕೊಂಡ ಕೆಲಸವಾಗಲಿದೆ. ವ್ಯಾಪಾರಿಗಳಿಗೆ ಆರ್ಥಿಕ ಮುನ್ನಡೆ ಸಿಗುವುದು.  ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಷಭ: ಸ್ವಾಭಿಮಾನಕ್ಕೆ ಧಕ್ಕೆ ತರುವ ವಿಚಾರಗಳು ಎದುರಾದೀತು. ನಿಮ್ಮ ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ. ಮಹಿಳೆಯರಿಗೆ ತವರಿನ ಕಡೆಯವರ ಭೇಟಿ ಯೋಗವಿದೆ. ದೇವತಾ ಪ್ರಾರ್ಥನೆ ಮಾಡಿ.

ಮಿಥುನ: ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಖರ್ಚು ವೆಚ್ಚ ಮಾಡಲಿದ್ದೀರಿ. ಸಂಭಾವ್ಯ ಸಮಸ್ಯೆಗಳು ಸ್ವಲ್ಪದರಲ್ಲೇ ದೂರವಾಗಲಿದೆ. ವಾಹನ ಖರೀದಿ ಯೋಗ ಸದ್ಯದಲ್ಲೇ ಕೂಡಿಬರುವುದು. ದಿನದಂತ್ಯಕ್ಕೆ ನೆಮ್ಮದಿ.

ಕರ್ಕಟಕ: ಹಿಂದೆ ಕೂಡಿಟ್ಟ ಹಣ ಆಪತ್ಕಾಲದಲ್ಲಿ ನೆರವಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಪ್ರಗತಿಗೆ ತಕ್ಕ ವಾತಾವರಣವಿರಲಿದೆ. ವಿದ್ಯಾರ್ಥಿಗಳು ಪಾಲಿಗೆ ಬಂದ ಅವಕಾಶಗಳನ್ನು ಬಳಸಿಕೊಳ್ಳಬೇಕು.

ಸಿಂಹ: ವ್ಯಾಪಾರಿ ವರ್ಗದವರಿಗೆ ಆರ್ಥಿಕವಾಗಿ ಲಾಭವಾಗದಿದ್ದರೂ, ನಷ್ಟವಾಗದು. ಆರ್ಥಿಕ ಯೋಜನೆಗಳನ್ನು ಸರಿಯಾಗಿ ಹಾಕಿಕೊಂಡಿದ್ದಲ್ಲಿ ತೊಂದರೆಯಾಗದು. ಮಕ್ಕಳ ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.

ಕನ್ಯಾ: ನಿಮ್ಮ ಮನಸ್ಸಿನಲ್ಲಿರುವ ಯೋಜನೆಗಳನ್ನು ಕಾರ್ಯಗತಗೊಳಿಸಲು ಮುಂದಾಗಲಿದ್ದೀರಿ. ಪತ್ನಿಯ ಪ್ರೀತಿಗೆ ಪಾತ್ರರಾಗುವಿರಿ. ಸಂಶೋಧನಾ ವೃತ್ತಿಯಲ್ಲಿ ತೊಡಗಿಸಿಕೊಂಡವರಿಗೆ ಮುನ್ನಡೆಯಿರಲಿದೆ. ತಾಳ್ಮೆಯಿರಲಿ.

ತುಲಾ: ದೊಡ್ಡದಾಗಿ ಎದುರಾಗಲಿದ್ದ ಅಪಾಯ ಸ್ವಲ್ಪದರಲ್ಲೇ ತಪ್ಪಿಹೋಗಲಿದೆ. ಸಂಗಾತಿಯ ಕೆಲಸಗಳಿಗೆ ಸಾಥ್ ನೀಡಲಿದ್ದೀರಿ. ಹಿರಿಯರಿಗೆ ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗುವುದು.

ವೃಶ್ಚಿಕ: ವೃತ್ತಿರಂಗದಲ್ಲಿ ಸುವರ್ಣಾವಕಾಶಗಳು ನಿಮ್ಮದಾಗಲಿದೆ. ಮೇಲಧಿಕಾರಿಗಳಿಂದ ಪ್ರಶಂಸೆಗೊಳಗಾಗಲಿದ್ದೀರಿ. ಕೃಷಕರಿಗೆ ವ್ಯವಹಾರದಲ್ಲಿ ಅಡೆತಡೆಗಳು ಸಾಮಾನ್ಯ. ಕಾರ್ಯನಿಮಿತ್ತ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ.

ಧನು: ನೆರೆಹೊರೆಯವರು ನಿಮ್ಮ ಕಷ್ಟದ ಸಮಯದಲ್ಲಿ ಸಹಾಯಕ್ಕೆ ಬರಲಿದ್ದಾರೆ. ಮಕ್ಕಳಿಂದ ಸಂತಸದ ವಾರ್ತೆ ಕೇಳಿಬಂದೀತು. ವ್ಯವಹಾರದಲ್ಲಿ ಕಠಿಣವಾಗಿ ವರ್ತಿಸುವುದು ಅನಿವಾರ್ಯವಾಗಲಿದೆ. ಚಿಂತೆ ಬೇಡ.

ಮಕರ: ದೇಹಾರೋಗ್ಯದಲ್ಲಿ ತೃಪ್ತಿದಾಯಕ ಸುಧಾರಣೆಯಾಗಲಿದೆ. ಹಿರಿಯರೊಂದಿಗೆ ಅನಗತ್ಯ ಸಂಘರ್ಷ ಬೇಡ. ಆರ್ಥಿಕವಾಗಿ ಚೇತರಿಕೆ ಕಂಡುಬರಲಿದ್ದು, ಹೊಸ ಯೋಜನೆಗಳಿಗೆ ಕೈಹಾಕಲಿದ್ದೀರಿ.

ಕುಂಭ: ಇಷ್ಟ ವಸ್ತು ಖರೀದಿಗಾಗಿ ಧನ ವ್ಯಯವಾಗಲಿದೆ. ಮನೆಗೆ ಅನಿರೀಕ್ಷಿತವಾಗಿ ನೆಂಟರಿಷ್ಟರ ಆಗಮನವಾಗಲಿದೆ. ಇನ್ನೊಬ್ಬರಿಗೆ ಸಹಾಯ ಮಾಡುವ ಮೊದಲು ಪೂರ್ವಾಪರ ತಿಳಿದುಕೊಳ್ಳಿ. ತಾಳ್ಮೆ, ಸಂಯಮ ಅಗತ್ಯ.

ಮೀನ: ಎಷ್ಟೋ ದಿನದಿಂದ ಬಾಕಿಯಿದ್ದ ದೈವ ಹರಕೆ ಪೂರ್ತಿ ಮಾಡಲಿದ್ದೀರಿ. ಸಾಂಸಾರಿಕವಾಗಿ ಸಂತೋಷದಾಯಕ ದಿನವಾಗಿರಲಿದೆ. ಸಾಮಾಜಿಕವಾಗಿ ಸ್ಥಾನ ಮಾನ ವೃದ್ಧಿಯಾಗಲಿದೆ. ಕಿರು ಸಂಚಾರ ಮಾಡಲಿದ್ದೀರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ದೋಷ ನಿವಾರಣೆಗೆ ದಶರಥ ಕೃತ ಶನಿ ಮಂತ್ರ ಕನ್ನಡದಲ್ಲಿ

ಅಭಿವೃದ್ಧಿಗಾಗಿ ಲಕ್ಷ್ಮೀ ದೇವಿಯ ಈ ಮಂತ್ರ ಪಠಿಸಿ

ಶ್ರೀ ಹರಿ ಸ್ತೋತ್ರ ಮಕ್ಕಳಿಗೂ ಹೇಳಿಸಿ

ವಿದ್ಯೆಗೆ ಸಂಬಂಧಿಸಿದ ಸಮಸ್ಯೆಯಾಗುತ್ತಿದ್ದರೆ ಈ ಸರಸ್ವತಿ ಸ್ತೋತ್ರ ಓದಿ

ಮಂಗಳವಾರ ಸುಬ್ರಹ್ಮಣ್ಯನ ಈ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments