Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಭಾನುವಾರ, 19 ಸೆಪ್ಟಂಬರ್ 2021 (08:38 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಪಾರದರ್ಶಕವಾಗಿ ಮಾಡುವ ವ್ಯವಹಾರಗಳಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಲಿದ್ದೀರಿ. ಕಾರ್ಯ ನಿಮಿತ್ತ ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ. ಇಷ್ಟದೇವತೆಗಳ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಒಳಿತು.

ವೃಷಭ: ಹೊಸದಾಗಿ ಭೇಟಿಯಾಗುವ ವ್ಯಕ್ತಿಗಳಿಂದ ನಿಮ್ಮ ಉದ್ಯೋಗ,ವ್ಯವಹಾರಗಳಿಗೆ ಲಾಭವಾಗಲಿದೆ. ಸರಕಾರಿ ನೌಕರರಿಗೆ ಪಗಾರ ಹೆಚ್ಚಳ ಸಂಭವ. ಕಾರ್ಮಿಕರಿಗೆ ಅನುಕೂಲಕರ ವಾತಾವರಣವಿರಲಿದೆ. ಚಿಂತೆ ಬೇಡ.

ಮಿಥುನ: ಧಾರ್ಮಿಕ ಕ್ಷೇತ್ರ ಸಂದರ್ಶನ, ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾಗುವುದು ಇತ್ಯಾದಿಗಳಿಂದ ನೆಮ್ಮದಿ ಕಾಣಲಿದ್ದೀರಿ. ಹಿರಿಯರ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ. ಕುಲದೇವರ ಪ್ರಾರ್ಥನೆ ಮಾಡಿ.

ಕರ್ಕಟಕ: ವ್ಯಾಪಾರ, ವ್ಯವಹಾರದಲ್ಲಿ ನಿರೀಕ್ಷೆಯಂತೆ ಅಭಿವೃದ್ಧಿ ಕಂಡುಬರಲಿದೆ. ಮನೆಗೆ ಅನಿರೀಕ್ಷಿತ ಬಂಧು ಮಿತ್ರರ ಆಗಮನವಾಗಲಿದೆ. ಸಾಂಸಾರಿಕವಾಗಿ ಸಂತೋಷ ಕಂಡುಬರಲಿದೆ. ಆದರೆ ಮಾತಿನ ಮೇಲೆ ನಿಗಾ ಇರಲಿ.

ಸಿಂಹ: ನೂತನ ದಂಪತಿಗಳಿಗೆ ಸಂತಾನ ಫಲ ಸೂಚನೆ ದೊರೆಯಲಿದೆ. ವೈಯಕ್ತಿಕ ಜೀವನದಲ್ಲಿ ಮೂರನೆಯವರ ಪ್ರವೇಶಕ್ಕೆ ಅವಕಾಶ ಮಾಡಿಕೊಡದಿರಿ. ಗೃಹೋಪಯೋಗಿ ವಸ್ತುಗಳ ಖರೀದಿ ಮಾಡಲಿದ್ದೀರಿ. ದುಂದು ವೆಚ್ಚಗಳಿಗೆ ಕಡಿವಾಣವಿರಲಿ.

ಕನ್ಯಾ: ಇಷ್ಟಮಿತ್ರರ ಭೇಟಿ, ಭೋಜನ ಯೋಗವಿದೆ. ಸಾಂಸಾರಿಕವಾಗಿ ಸುಂದರ ಕ್ಷಣಗಳನ್ನು ಕಳೆಯುವ ಯೋಗವಿದೆ. ಸಾಲಗಾರರ ಕಾಟದಿಂದ ಮುಕ್ತಿ ಸಿಗುವುದು. ಹಿತ ಶತ್ರುಗಳನ್ನು ದೂರವಿಟ್ಟರೆ ಉತ್ತಮ. ತಾಳ್ಮೆ, ಸಂಯಮವಿರಲಿ.

ತುಲಾ: ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಹೆಜ್ಜೆಯಿಟ್ಟರೆ ವಂಚನೆಗೊಳಗಾಗುವ ಸಾಧ‍್ಯತೆಯಿಲ್ಲ. ಸಂಗಾತಿಯ ಮಾತುಗಳಿಗೆ ಕಿವಿಗೊಟ್ಟರೆ ಉತ್ತಮ. ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿ ಯೋಗವಿದೆ.

ವೃಶ್ಚಿಕ: ಉದ್ಯೋಗದಲ್ಲಿ ಸಫಲತೆ ಸಾಧಿಸಲು ಉನ್ನತ ಚಿಂತನೆ ಮಾಡಬೇಕಾಗುತ್ತದೆ. ಮನೆಯ ಸದಸ್ಯರೊಂದಿಗೆ ಹೊಂದಾಣಿಕೆ ಕೊರತೆ ಕಂಡುಬಂದೀತು, ತಾಳ್ಮೆಯಿರಲಿ. ಕಾರ್ಯನಿಮಿತ್ತ ಕಿರು ಓಡಾಟ ನಡೆಸಲಿದ್ದೀರಿ.

ಧನು: ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಏಕಾಗ್ರತೆಯ ಕೊರತೆ ಉಂಟಾಗಲಿದೆ. ಹಿರಿಯರ ಸಲಹೆಗಳು ಅಪಥ್ಯವೆನಿಸೀತು. ಸ್ವಯಂ ವೃತ್ತಿಯವರಿಗೆ ಆರ್ಥಿಕವಾಗಿ ಲಾಭವಾಗಲಿದೆ. ಹಣಕಾಸಿನ ವ್ಯವಹಾರದಲ್ಲಿ ಪಾರದರ್ಶಕತೆಯಿರಲಿ.

ಮಕರ: ಮಾನಸಿಕವಾಗಿ ನಿಮ್ಮನ್ನು ಕಾಡುತ್ತಿದ್ದ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳಲು ಯತ್ನಿಸಲಿದ್ದೀರಿ. ಉದಾಸೀನ ಪ್ರವೃತ್ತಿ ತೋರಿದರೆ ಕಾರ್ಯ ಸಾಗದು. ವಿರಾಮದ ದಿನದ ಖುಷಿ ಅನುಭವಿಸಲಿದ್ದೀರಿ.

ಕುಂಭ: ದೀರ್ಘ ಪ್ರಯಾಣದಿಂದ ದೇಹಾಯಾಸವಾಗದಂತೆ ಎಚ್ಚರಿಕೆ ವಹಿಸಿ. ಸ್ವಜನರೊಂದಿಗೆ ಪ್ರೀತಿ ವಿಶ್ವಾಸದಿಂದ ನಡೆದುಕೊಂಡರೆ ಉತ್ತಮ. ಸಾಮಾಜಿಕವಾಗಿ ಗೌರವ ಹೆಚ್ಚಾಗಲಿದೆ. ಬಂಧು ಮಿತ್ರರ ಭೇಟಿ ಯೋಗ.

ಮೀನ: ಆರ್ಥಿಕವಾಗಿ ಹೊಸ ಯೋಜನೆಗಳನ್ನು ಕಾರ್ಯಗತಗೊಳಿಸಲು ಇದು ಸಕಾಲ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ. ಉದ್ಯೋಗ, ವ್ಯವಹಾರದಲ್ಲಿ ಲಾಭದಾಯಕ ವಾತಾವರಣವಿರಲಿದೆ. ಚಿಂತೆ ಬೇಡ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Vishnu Mantra: ಶ್ರೀ ವಿಷ್ಣು ಅಷ್ಟೋತ್ತರ ನಾಮಾವಳಿ ಕನ್ನಡದಲ್ಲಿ ಇಲ್ಲಿದೆ ತಪ್ಪದೇ ಓದಿ

Lakshmi Mantra: ರಾಜ್ಯದಲ್ಲಿ ಸರಾಸರಿ ಗರಿಷ್ಠ ತಾಪಮಾನ 34 ಡಿಗ್ರಿಯಷ್ಟಿರಲಿದೆ ಎಂದು ವರದಿಗಳು ಹೇಳುತ್ತಿವೆ.

Subramanya mantra: ನಾಗದೋಷ, ವಿವಾಹಕ್ಕೆ ಸಮಸ್ಯೆಯಾಗಿದ್ದ ಸುಬ್ರಹ್ಮಣ್ಯನ ಈ ಸ್ತೋತ್ರ ಓದಿ

Mruthyunjaya Mantra: ರೋಗ ಭಯ, ಮೃತ್ಯು ಭಯವಿದ್ದರೆ ಮೃತ್ಯುಂಜಯ ಅಷ್ಟೋತ್ತರ ತಪ್ಪದೇ ಓದಿ

Anjaneya Mantra: ಆಂಜನೇಯ ಅಷ್ಟೋತ್ತರ ಮಂತ್ರವನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments