Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಗುರುವಾರ, 2 ಸೆಪ್ಟಂಬರ್ 2021 (08:37 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಭವಿಷ್ಯಕ್ಕಾಗಿ ನಿಮ್ಮ ಕೆಲವೊಂದು ಸಮಸ್ಯೆಗಳನ್ನು ಇಂದೇ ಬಗೆಹರಿಸಿಕೊಳ‍್ಳಬೇಕಾಗಿದೆ. ಬಾಯ್ತಪ್ಪಿ ಆಡಿದ ಮಾತಿಗೆ ಪಶ್ಚಾತ್ತಾಪಪಡುವ ಪರಿ‍ಸ್ಥಿತಿ ಎದುರಾದೀತು. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಾಗದು. ಚಿಂತೆ ಬೇಡ.

ವೃಷಭ: ಉದ್ಯೋಗದಾತರ ನಿರೀಕ್ಷೆ ತಲುಪಲು ಕಠಿಣ ಪ್ರಯತ್ನ ಪಡಬೇಕಾದೀತು. ಸಾಲಗಾರರ ಕಾಟ ಚಿಂತೆಗೆ ಕಾರಣವಾದೀತು. ಸಂಗಾತಿಯ ಸೂಕ್ತ ಸಲಹೆಗಳು ಉಪಯೋಗಕ್ಕೆ ಬರಲಿವೆ. ದೇವತಾ ಪ್ರಾರ್ಥನೆ ಮಾಡಿ.

ಮಿಥುನ: ಎಷ್ಟೋ ದಿನದಿಂದ ಅರ್ಧಕ್ಕೇ ನಿಂತಿದ್ದ ಕೆಲಸಗಳನ್ನು ಪೂರ್ತಿ ಮಾಡಲು ಮುಂದಾಗಲಿದ್ದೀರಿ. ವೈಯಕ್ತಿಕ ವಿಚಾರಗಳನ್ನು ಪ್ರೀತಿ ಪಾತ್ರರೊಂದಿಗೆ ಹಂಚಿಕೊಂಡು ಹಗುರವಾಗುವಿರಿ. ಕಿರು ಸಂಚಾರ ಮಾಡಬೇಕಾಗಬಹುದು.

ಕರ್ಕಟಕ: ನಿಮ್ಮ ಉದ್ದೇಶಿತ ಕೆಲಸಗಳಿಗೆ ಅಡೆತಡೆಗಳುಂಟಾದೀತು. ಆದರೆ ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ. ಪಾಲು ಬಂಡವಾಳ ಹೂಡಿಕೆ ವ್ಯವಹಾರದಲ್ಲಿ ಲಾಭ ಕಂಡುಬರಲಿದೆ. ದೂರ ಸಂಚಾರಕ್ಕೆ ಸಿದ್ಧತೆ ನಡೆಸುವಿರಿ.

ಸಿಂಹ: ವೃತ್ತಿರಂಗದಲ್ಲಿ ನಿಮ್ಮ ಏಳಿಗೆಯನ್ನು ಯಾರಿಂದಲೂ ತಡೆಯಲಾಗದು. ಸರಕಾರಿ ಉದ್ಯೋಗಿಗಳಿಗೆ ಮುಂಬಡ್ತಿ ಯೋಗವಿದೆ. ವ್ಯಾಪಾರಿಗಳಿಗೆ ಚೇತರಿಕೆಗೆ ದಾರಿ ಕಂಡುಬರಲಿದೆ. ಕೃಷಿಕರಿಗೆ ಬೆಳೆ ಕೈಗೆ ಬರಲಿದೆ.

ಕನ್ಯಾ: ಅಧಿಕ ಕಾರ್ಯದೊತ್ತಡದಿಂದ ದೇಹಾಯಾಸವಾಗದಂತೆ ಎಚ್ಚರಿಕೆ ವಹಿಸಿ. ಮಕ್ಕಳ ಬಹುದಿನಗಳ ಬೇಡಿಕೆ ಪೂರೈಸಲಿದ್ದೀರಿ. ಸಾಂಸಾರಿಕವಾಗಿ ಸಂತೋಷದ ದಿನಗಳು ನಿಮ್ಮದಾಗಲಿದೆ. ಅನಗತ್ಯ ಚಿಂತೆ ಬೇಡ.

ತುಲಾ: ಬಹಳ ದಿನಗಳ ನಂತರ ಇಷ್ಟಮಿತ್ರರನ್ನು ಭೇಟಿಯಾದ ಸಂತೋಷ ನಿಮ್ಮದಾಗಲಿದೆ. ಹಿರಿಯರಿಗೆ ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗುವುದು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ.

ವೃಶ್ಚಿಕ: ಪಾಲಿಗೆ ಬಂದಿದ್ದು ಪಂಚಾಮೃತ ಎಂದು ತಿಳಿದು ಮುನ್ನಡೆಯಬೇಕು. ಕಟ್ಟಡ ಕಾಮಗಾರಿ ಕೆಲಸಗಳು ಅರ್ಧಕ್ಕೇ ನಿಂತು ಹೋದೀತು. ಇನ್ನೊಬ್ಬರ ಕಷ್ಟಕ್ಕೆ ನೆರವಾಗಲಿದ್ದೀರಿ. ನೆರೆಹೊರೆಯವರೊಂದಿಗೆ ವ್ಯವಹರಿಸುವಾಗ ಎಚ್ಚರವಿರಲಿ.

ಧನು: ಕಾರ್ಯನಿಮಿತ್ತ ಕತ್ತೆ ಕಾಲು ಹಿಡಿ ಎಂಬ ಪರಿಸ್ಥಿತಿ ನಿಮ್ಮದಾಗಲಿದೆ. ಶತ್ರುಗಳನ್ನೂ ಮಿತ್ರನ್ನಾಗಿ ಮಾಡಬೇಕಾದ ಪರಿಸ್ಥಿತಿ ಬಂದೀತು. ಸಂಗಾತಿಯ ಸಲಹೆಗಳನ್ನು ಪಾಲಿಸಿದರೆ ಉತ್ತಮ. ಅನಿರೀಕ್ಷಿವಾಗಿ ಧನಾಗಮನವಾಗಲಿದೆ.

ಮಕರ: ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ಕಂಡುಬರಲಿದೆ. ಬೇರೆಯವರು ನಿಮ್ಮ ಬಗ್ಗೆ ಏನಂದುಕೊಳ್ಳುವರೋ ಎಂಬ ಕೀಳರಿಮೆ ಬೇಡ. ಹಣ ಗಳಿಕೆಗೆ ಹೊಸ ಮಾರ್ಗಗಳ ಬಗ್ಗೆ ಯೋಚನೆ ಮಾಡಲಿದ್ದೀರಿ. ದಿನದಂತ್ಯಕ್ಕೆ ಅಚ್ಚರಿ ಸುದ್ದಿ.

ಕುಂಭ: ಉದ್ಯೋಗ ಸಂಬಂಧವಾದ ಸಮಸ್ಯೆಗಳು ನಿಮ್ಮ ಸಾಂಸಾರಿಕವ ಜೀವನದದ ಮೇಲೆ ತೊಂದರೆಯಾಗದಂತೆ ನೋಡಿಕೊಳ್ಳಿ. ಬಂಧು ಮಿತ್ರರ ಭೇಟಿ ಸಂಭವವಿದೆ. ಮಹಿಳೆಯರಿಗೆ ಗೃಹಕೃತ್ಯಗಳಿಂದ ಬಿಡುವು ಸಿಗುವುದು.

ಮೀನ: ಎಷ್ಟೋ ದಿನದಿಂದ ಬಾಕಿಯಿದ್ದ ನಿಮ್ಮ ಕನಸು ಇಂದು ಈಡೇರಲಿದೆ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಿರದು. ಮನೆಗೆ ಬಂಧು ಮಿತ್ರರ ಆಗಮನ ಸಾಧ‍್ಯತೆಯಿದೆ. ಸಾಂಸಾರಿಕ ಅಭಿವೃದ್ಧಿ ಕಂಡುಬರುವುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Surya Mantra: ಇಂದು ಸೂರ್ಯನ ಕುರಿತಾದ ಈ ಸ್ತೋತ್ರವನ್ನು ತಪ್ಪದೇ ಓದಿ

Anjaneya Mantra: ಶನಿದೋಷವಿದ್ದವರು ಆಂಜನೇಯನ ಈ ಸ್ತೋತ್ರವನ್ನು ಓದಿ

Lakshmi Mantra: ಮನಸ್ಸಿನ ಭಯ ದೂರ ಮಾಡಲು ಧೈರ್ಯ ಲಕ್ಷ್ಮಿ ಸ್ತೋತ್ರ ಇಲ್ಲಿದೆ ನೋಡಿ

Vishnu Mantra: ಶ್ರೀ ವಿಷ್ಣು ಅಷ್ಟೋತ್ತರ ನಾಮಾವಳಿ ಕನ್ನಡದಲ್ಲಿ ಇಲ್ಲಿದೆ ತಪ್ಪದೇ ಓದಿ

Lakshmi Mantra: ರಾಜ್ಯದಲ್ಲಿ ಸರಾಸರಿ ಗರಿಷ್ಠ ತಾಪಮಾನ 34 ಡಿಗ್ರಿಯಷ್ಟಿರಲಿದೆ ಎಂದು ವರದಿಗಳು ಹೇಳುತ್ತಿವೆ.

ಮುಂದಿನ ಸುದ್ದಿ
Show comments