Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಬುಧವಾರ, 1 ಸೆಪ್ಟಂಬರ್ 2021 (08:37 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಸಂದರ್ಭಕ್ಕೆ ತಕ್ಕಂತೆ ನಡೆದುಕೊಳ್ಳುವುದನ್ನು ಕಲಿಯಬೇಕಾಗುತ್ತದೆ. ಮಿತ್ರರ ಕಷ್ಟಗಳನ್ನು ಅರಿತು ಸಹಾಯ ಮಾಡಲು ಮುಂದಾಗಲಿದ್ದೀರಿ. ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕಾಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಷಭ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ವಿಚಾರಧಾರೆಗಳಿಗೆ ಮನ್ನಣೆ ಸಿಗಲಿದೆ. ಕ್ರಿಯಾತ್ಮಕ ಕೆಲಸಗಳಿಗೆ ಮೇಲಧಿಕಾರಿಗಳ ಮೆಚ್ಚುಗೆ ಪಡೆಯಲಿದ್ದೀರಿ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ವಾಹನ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ.

ಮಿಥುನ: ಮಿತ್ರರಿಂದ ಬರುವ ಸಲಹೆಗಳು ಸಕಾಲದಲ್ಲಿ ನೆರವಾಗಲಿದೆ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶಗಳು ತೋರಿಬರಲಿವೆ. ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗದ ಯೋಚನೆಗಳು ಬರಲಿವೆ. ಅನಗತ್ಯ ಚಿಂತೆ ಬೇಡ.

ಕರ್ಕಟಕ: ಕಾರ್ಯನಿಮಿತ್ತ ದೂರ ಸಂಚಾರ ಮಾಡಬೇಕಾದ ಅನಿವಾರ್ಯತೆ ಬರಲಿದೆ. ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಎಲ್ಲವೂ ಶುಭವಾಗಲಿದೆ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಸಿಂಹ: ವೃತ್ತಿಸಂಬಂಧವಾದ ವಿಚಾರಗಳನ್ನು ಮನೆಗೆ ತಂದು ವೈಮನಸ್ಯ ಸೃಷ್ಟಿಸಿಕೊಳ್ಳಬೇಡಿ. ಇಷ್ಟಮಿತ್ರರೊಂದಿಗೆ ಇಷ್ಟ ಭೋಜನ ಮಾಡುವ ಯೋಗ ಕೂಡಿಬರಲಿದೆ. ಮಕ್ಕಳ ವಿಚಾರದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಿದ್ದೀರಿ.

ಕನ್ಯಾ: ಧಾರ್ಮಿಕ ಚಟುವಟಿಕೆಗಳಿಗೆ ನೇತೃತ್ವ ವಹಿಸಲಿದ್ದೀರಿ. ಗುರು ಹಿರಿಯರ ಪ್ರೀತಿ ಸಂಪಾದಿಸಲಿದ್ದೀರಿ. ವ್ಯವಹಾರದಲ್ಲಿ ದಾಕ್ಷಿಣ್ಯ ತೋರಿದರೆ ನಿಮಗೇ ನಷ್ಟ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚಗಳಾಗಲಿವೆ.

ತುಲಾ: ನಿಮ್ಮ ಕಾರ್ಯ ಚತುರತೆಯಿಂದ ಇತರರ ಗಮನ ಸೆಳೆಯಲಿದ್ದೀರಿ. ಹಣಕಾಸಿನ ವಿಚಾರದಲ್ಲಿ ಗಮನಾರ್ಹ ಬದಲಾವಣೆಗಳಾಗಲಿವೆ. ಕಟ್ಟಡ ಕಾಮಗಾರಿ ಕೆಲಸಗಳಿಗೆ ಚಾಲನೆ ನೀಡಲು ಇದು ಸಕಾಲ. ಚಿಂತೆ ಬೇಡ.

ವೃಶ್ಚಿಕ: ವೃತ್ತಿರಂಗದಲ್ಲಿ ನಿಮ್ಮ ಸ್ಥಾನ ಸುಧಾರಣೆಗೆ ಮುಂದಾಗಲಿದ್ದೀರಿ. ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿ ಯೋಗವಿದೆ. ಕೃಷಿಕರಿಗೆ ವ್ಯವಹಾರಕ್ಕೆ ಅನುಕೂಲ.

ಧನು: ನೀವು ಅಂದುಕೊಂಡ ಕೆಲಸಗಳು ಸರಿಯಾದ ರೀತಿಯಲ್ಲಿ ನಡೆಯದೇ ನಿರಾಸೆಯಾದೀತು. ಸಣ್ಣ ಉದ್ದಿಮೆದಾರರಿಗೆ ಚೇತರಿಕೆಗೆ ಅವಕಾಶಗಳಿವೆ. ಸಾಲಗಾರರಿಂದ ಬರಬೇಕಾದ ಬಾಕಿ ಬರಲಿದೆ. ದೇವತಾ ಪ್ರಾರ್ಥನೆ ಮಾಡಿ.

ಮಕರ: ಉದ್ಯೋಗ ಕ್ಷೇತ್ರದಲ್ಲಿ ಸ್ಥಾನ ಪಲ್ಲಟ ಭೀತಿಯಿದ್ದು, ಹೊಸ ವಾತಾವರಣಕ್ಕೆ ಹೊಂದಿಕೊಳ್ಳಬೇಕಾಗುತ್ತದೆ. ಯೋಗ್ಯ ವಯಸ್ಕರು ಸೂಕ್ತ ವೈವಾಹಿಕ ಸಂಬಂಧಕ್ಕೆ ಕೆಲವು ದಿನ ಕಾಯುವುದು ಉತ್ತಮ. ತಾಳ್ಮೆ, ಸಂಯಮವಿರಲಿ.

ಕುಂಭ: ಸಂಗಾತಿಯ ಬಹಳ ದಿನಗಳ ಬೇಡಿಕೆ ಈಡೇರಿಸಲಿದ್ದೀರಿ. ಕಾರ್ಯನಿಮಿತ್ತ ಓಡಾಟದಿಂದ ದೇಹಾಯಾಸವಾಗದಂತೆ ನೋಡಿಕೊಳ್ಳಿ. ಮಕ್ಕಳ ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ. ನೆಂಟರಿಷ್ಟರ ಭೇಟಿ ಯೋಗವಿದೆ.

ಮೀನ: ಸಾಂಸಾರಿಕವಾಗಿ ಸುಖ, ನೆಮ್ಮದಿ, ಅಭಿವೃದ್ಧಿ ಕಂಡುಬರಲಿದ್ದು, ಅನಗತ್ಯ ಚಿಂತೆ ಬೇಡ. ನೂತನ ದಂಪತಿಗಳಿಗೆ ಸಂತಾನ ಫಲ ಸೂಚನೆ ದೊರೆಯಲಿದೆ. ವ್ಯವಹಾರದಲ್ಲಿ ಅಪರಿಚತರೊಂದಿಗೆ ಎಚ್ಚರಿಕೆಯಿಂದಿರುವುದು ಉತ್ತಮ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Surya Mantra: ಇಂದು ಸೂರ್ಯನ ಕುರಿತಾದ ಈ ಸ್ತೋತ್ರವನ್ನು ತಪ್ಪದೇ ಓದಿ

Anjaneya Mantra: ಶನಿದೋಷವಿದ್ದವರು ಆಂಜನೇಯನ ಈ ಸ್ತೋತ್ರವನ್ನು ಓದಿ

Lakshmi Mantra: ಮನಸ್ಸಿನ ಭಯ ದೂರ ಮಾಡಲು ಧೈರ್ಯ ಲಕ್ಷ್ಮಿ ಸ್ತೋತ್ರ ಇಲ್ಲಿದೆ ನೋಡಿ

Vishnu Mantra: ಶ್ರೀ ವಿಷ್ಣು ಅಷ್ಟೋತ್ತರ ನಾಮಾವಳಿ ಕನ್ನಡದಲ್ಲಿ ಇಲ್ಲಿದೆ ತಪ್ಪದೇ ಓದಿ

Lakshmi Mantra: ರಾಜ್ಯದಲ್ಲಿ ಸರಾಸರಿ ಗರಿಷ್ಠ ತಾಪಮಾನ 34 ಡಿಗ್ರಿಯಷ್ಟಿರಲಿದೆ ಎಂದು ವರದಿಗಳು ಹೇಳುತ್ತಿವೆ.

ಮುಂದಿನ ಸುದ್ದಿ
Show comments