ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಭಾನುವಾರ, 22 ಆಗಸ್ಟ್ 2021 (08:38 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಅನಿರೀಕ್ಷಿತವಾಗಿ ಆಸ್ಪತ್ರೆಗೆ ಅಲೆದಾಡುವ ಪರಿಸ್ಥಿತಿ ಎದುರಾದೀತು. ಕಷ್ಟದ ಸಮಯದಲ್ಲಿ ನೆರೆಹೊರೆಯವರಿಂದ ಸಹಾಯ ಒದಗಿಬರುವುದು. ವಿದ್ಯಾರ್ಥಿಗಳಿಗೆ ಧನಾರ್ಜನೆಗೆ ಸಾಕಷ್ಟು ಅವಕಾಶಗಳು ಒದಗಿಬರಲಿದೆ.

ವೃಷಭ: ಮನೆಯವರೊಂದಿಗೆ ಸಂತೋಷದಿಂದ ಕಾಲ ಕಳೆಯುವ ಅವಕಾಶ ಸಿಗಲಿದೆ. ನಿಮ್ಮ ಮಾತಿನಿಂದ ಎಲ್ಲರನ್ನೂ ಸೆಳೆಯಲಿದ್ದೀರಿ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಲ್ಯಾಣ ಯೋಗವಿದೆ. ಅನಗತ್ಯ ಚಿಂತೆ ಬೇಡ.

ಮಿಥುನ: ಸಂದರ್ಭಕ್ಕೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳುವುದರಿಂದ ಸಂಭಾವ್ಯ ಸಮಸ್ಯೆಗಳಿಂದ ದೂರವಾಗಬಹುದು. ಹಿರಿಯರ ಸಲಹೆಗಳು ಉಪಯೋಗಕ್ಕೆ ಬರಲಿದೆ. ವ್ಯಾಪಾರ,ವ್ಯವಹಾರಗಳಲ್ಲಿ ಚೇತರಿಕೆ ಕಂಡುಬರುವುದು.

ಕರ್ಕಟಕ: ಹೊಸದಾಗಿ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದರೆ ಅಡೆತಡೆಗಳು ಸಾಮಾನ್ಯ. ಕಳೆದು ಹೋದ ಸಂಬಂಧಗಳು ಮರಳಿ ಕೂಡಿಕೊಳ್ಳಲಿವೆ. ಹಳೆಯ ವೈಷಮ್ಯಗಳನ್ನು ಮರೆತುಬಿಡುವುದು ಉತ್ತಮ. ಕಿರು ಸಂಚಾರ ಮಾಡುವಿರಿ.

ಸಿಂಹ: ಅಭಿವೃದ್ಧಿ ಕೆಲಸಗಳಿಗೆ ಧನವಿನಿಯೋಗ ಮಾಡಲಿದ್ದೀರಿ. ಒಳ್ಳೆಯ ಕೆಲಸ ಮಾಡಿದ ತೃಪ್ತಿ ನಿಮ್ಮದಾಗಲಿದೆ. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವ ಯೋಗ ನಿಮ್ಮದಾಗಲಿದೆ. ದೇವತಾ ಪ್ರಾರ್ಥನೆ ಮಾಡಿ.

ಕನ್ಯಾ: ನಿಮ್ಮ ಇತಿಮಿತಿಗಳನ್ನು ಅರಿತು ಖರ್ಚು ವೆಚ್ಚಗಳನ್ನು ಮಾಡುವುದು ಉತ್ತಮ. ಸಂಗಾತಿಯ ಬಹುದಿನಗಳ ಬೇಡಿಕೆ ಈಡೇರಿಸಲಿದ್ದೀರಿ. ವ್ಯವಹಾರ ನಿಮಿತ್ತ ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ತುಲಾ: ನೂತನ ದಂಪತಿಗಳಿಗೆ ಸಂತಾನ ಫಲ ಸೂಚನೆ ದೊರೆಯಲಿದೆ. ಕೌಟುಂಬಿಕವಾಗಿ ಸಂತೋಷದ ದಿನವಾಗಿದ್ದು, ಬಂಧು ಮಿತ್ರರ ಭೇಟಿ ಸಂಭವವಿದೆ. ಆರ್ಥಿಕವಾಗಿ ದುಂದು ವೆಚ್ಚಗಳಿಗೆ ಕಡಿವಾಣ ಹಾಕುವುದು ಉತ್ತಮ.

ವೃಶ್ಚಿಕ: ಹಿರಿಯರ ಸಲಹೆಗಳು ಅಪಥ್ಯವೆನಿಸೀತು. ಕಟ್ಟಡ ಕಾಮಗಾರಿ ಕೆಲಸಗಳಿಗೆ ಚಾಲನೆಎ ನೀಡಲು ಇದು ಸಕಾಲ. ಆರ್ಥಿಕ ಯೋಜನೆಗಳನ್ನು ಸಂಗಾತಿಯೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಂಡರೆ ಉತ್ತಮ.

ಧನು: ಮಕ್ಕಳ ವಿವಾಹಕ್ಕೆ ಪಡುತ್ತಿದ್ದ ಪ್ರಯತ್ನಕ್ಕೆ ಫಲ ಸಿಗಲಿದೆ. ಕೌಟುಂಬಿಕವಾಗಿ ಇದುವರೆಗೆ ಇದ್ದ ಸಮಸ್ಯೆಗಳು ಪರಿಹಾರವಾಗಲಿದೆ. ನಿಮ್ಮ ವಾಕ್ಚತುರತೆಯಿಂದ ತಕ್ಕ ಉದ್ಯೋಗ ಕಂಡುಕೊಳ್ಳಲಿದ್ದೀರಿ. ಚಿಂತೆ ಬೇಡ.

ಮಕರ: ಹಿಂದೆ ಮಾಡಿದ ತಪ್ಪುಗಳಿಗೆ ತಕ್ಕ ಬೆಲೆ ತೆರಬೇಕಾಗುತ್ತದೆ. ಸಂಗಾತಿಯ ಸಲಹೆಗಳನ್ನು ಪಾಲಿಸಿದಲ್ಲಿ ಉತ್ತಮ. ಮಕ್ಕಳ ಭವಿಷ್ಯಕ್ಕೆ ಯೋಜನೆ ರೂಪಿಸಲಿದ್ದೀರಿ. ಕೃಷಿಕರಿಗೆ ವ್ಯವಹಾರದಲ್ಲಿ ಮುನ್ನಡೆ ಕಂಡುಬರಲಿದೆ.

ಕುಂಭ: ಇಷ್ಟ ಮಿತ್ರರೊಂದಿಗೆ ಸಂಚಾರ, ಭೋಜನ ಮಾಡುವ ಯೋಗ ನಿಮ್ಮದಾಗುವುದು. ದೇಹಾರೋಗ್ಯದ ಬಗ್ಗೆ ಉಪೇಕ್ಷೆ ಬೇಡ. ವಾಹನ ಖರೀದಿ ಮಾಡುವ ಕನಸು ನನಸು ಮಾಡುವ ನಿಟ್ಟಿನಲ್ಲಿ ಹೆಜ್ಜೆಯಿಡಲಿದ್ದೀರಿ. ತಾಳ್ಮೆಯಿರಲಿ.

ಮೀನ: ಹಿರಿಯರಿಗೆ ದಾನ ಧರ್ಮಾದಿಗಳಿಂದ ಮನಸ್ಸಿಗೆ ಸಂತೋಷ ಸಿಗಲಿದೆ. ವೈಯಕ್ತಿಕ ಜೀವನದ ಕಷ್ಟಗಳು ಪರಿಹಾರವಾದೀತು. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚ ಮಾಡಲಿದ್ದೀರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿವಾರದಂದು ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಲೇ ಬೇಡಿ

2026 ರಲ್ಲಿ ದ್ವಾದಶ ರಾಶಿಯವರಿಗೆ ಹಣಕಾಸಿನ ತೊಂದರೆ ಬರುತ್ತಾ, ಇಲ್ಲಿದೆ ವಿವರ

ಶುಕ್ರವಾರ ಓದಬೇಕಾದ ಲಕ್ಷ್ಮೀ ಮಂತ್ರ

ದ್ವಾದಶ ರಾಶಿಯವರಿಗೆ 2026 ರಲ್ಲಿ ಪ್ರೇಮ ಸಂಬಂಧದ ಭವಿಷ್ಯ ಹೇಗಿರಲಿದೆ

ಭಯವಾಗುತ್ತಿದ್ದರೆ ಪ್ರಭು ರಾಮಚಂದ್ರನ ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments