ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಭಾನುವಾರ, 11 ಜುಲೈ 2021 (08:39 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ವೃತ್ತಿರಂಗದಲ್ಲಿ ನಿಮ್ಮ ಏಳಿಗೆಗೆ ಸಹಕಾರಿಯಾದ ವಾತಾವರಣ ಕಂಡುಬರಲಿದೆ. ಇಷ್ಟು ದಿನ ನಿಮ್ಮನ್ನು ಕಾಡುತ್ತಿದ್ದ ಸಮಸ್ಯೆ ದೂರವಾಗಲಿದೆ. ಆದರೆ ಕೌಟುಂಬಿಕವಾಗಿ ಮನಸ್ತಾಪಗಳು ಕಂಡುಬಂದೀತು. ಎಚ್ಚರಿಕೆಯಿಂದಿರಿ.

ವೃಷಭ: ಕಾರ್ಯಕ್ಷೇತ್ರದಲ್ಲಿ ನಿಮ್ಮ ಏಳಿಗೆಯನ್ನು ತಡೆಯಲು ಯಾರಿಂದಲೂ ಸಾಧ‍್ಯವಿಲ್ಲ. ಇಷ್ಟ ದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ವ್ಯವಹಾರಗಳು ಸುಗಮವಾಗಲಿದೆ. ಯೋಗ್ಯ ವಯಸ್ಕರಿಗೆ ಕಂಕಣ ಭಾಗ್ಯ ಕೂಡಿಬರಲಿದೆ.

ಮಿಥುನ: ಕೃಷಿಕರಿಗೆ ವ್ಯವಹಾರದಲ್ಲಿ ಲಾಭವೂ ಅಲ್ಲದ ನಷ್ಟವೂ ಅಲ್ಲದ ಸ್ಥಿತಿ ಎದುರಾಗಲಿದೆ. ವ್ಯಾಪಾರಿಗಳು, ವಾಣಿಜ್ಯೋದ್ಯಮಿಗಳಿಗೆ ಮುನ್ನಡೆಯ ದಿನಗಳು. ಆರ್ಥಿಕವಾಗಿ ಅನಗತ್ಯ ಖರ್ಚು ವೆಚ್ಚಗಳಿಗೆ ಕಡಿವಾಣವಿರಲಿ.

ಕರ್ಕಟಕ: ನಿಮ್ಮದಲ್ಲದ ತಪ್ಪಿಗೆ ಬೆಲೆ ತೆರುವ ಪರಿಸ್ಥಿತಿ ಬಂದೀತು. ತಾಳ್ಮೆಯಿಂದ ನಿಭಾಯಿಸಿ. ವಿದ್ಯಾರ್ಥಿಗಳಿಗೆ ಪರೀಕ್ಷೆ ಸಿದ್ಧತೆ ಮಾಡಬೇಕಾಗುತ್ತದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ತಾಳ್ಮೆ, ಸಂಯಮವಿರಲಿ.

ಸಿಂಹ: ಎಂದೋ ಮಾಡಿದ ಒಳ್ಳೆಯ ಕೆಲಸಗಳು ನಿಮ್ಮ ಕೈ ಹಿಡಿಯಲಿದೆ. ನಿಮ್ಮ ಭಾವನೆಗಳಿಗೆ ಪ್ರೀತಿ ಪಾತ್ರರಿಂದ ಸ್ಪಂದನೆ ಸಿಗುವುದು. ಆರ್ಥಿಕವಾಗಿ ಚೇತರಿಕೆ ಕಂಡುಬರಲಿದ್ದು, ಹೊಸ ಕೆಲಸಗಳಿಗೆ ಕೈ ಹಾಕಲಿದ್ದೀರಿ. ದೇವತಾ ಪ್ರಾರ್ಥನೆ ಮಾಡಿ.

ಕನ್ಯಾ: ಕೌಟುಂಬಿಕವಾಗಿ ನಿಮ್ಮ ಪ್ರೀತಿ ಪಾತ್ರರೊಂದಿಗೆ ಸಂತೋಷದ ಕ್ಷಣ ಕಳೆಯುವ ಯೋಗ ನಿಮ್ಮದಾಗಲಿದೆ. ದಾಯಾದಿಗಳೊಂದಿಗೆ ರಾಜೀ ಪಂಚಾಯ್ತಿ ನಡೆಯಲಿದೆ. ವೈಯಕ್ತಿಕ ದೇಹಾರೋಗ್ಯದ ಬಗ್ಗೆ ಗಮನವಿರಲಿ.

ತುಲಾ: ನಿಮ್ಮ ಚಲನವಲನಗಳನ್ನು ಹಿತಶತ್ರುಗಳು ಗಮನಿಸಲಿದ್ದೀರಿ. ಎಚ್ಚರಿಕೆಯಿಂದ ಹೆಜ್ಜೆಯಿಡಿ. ಹಿರಿಯರಿಗೆ ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವ ಯೋಗ. ಮಹಿಳೆಯರಿಗೆ ಕೌಟುಂಬಿಕ ಜವಾಬ್ಧಾರಿಗಳು ಹೆಚ್ಚಾದೀತು. ತಾಳ್ಮೆಯಿರಲಿ.

ವೃಶ್ಚಿಕ: ಮನಸ್ಸಿನ ಆತಂಕಗಳನ್ನು ಆಪ್ತರೊಂದಿಗೆ ಹಂಚಿಕೊಂಡು ಹಗುರವಾಗಲಿದ್ದೀರಿ. ಪ್ರೀತಿ ಪಾತ್ರರಿಗೆ ಅನಿರೀಕ್ಷಿತ ಉಡುಗೊರೆ ಕೊಡಲಿದ್ದೀರಿ. ಸಾಂಸಾರಿಕವಾಗಿ ಹೊಂದಾಣಿಕೆ ಅಗತ್ಯ. ನೂತನ ದಂಪತಿಗಳಿಗೆ ಸುಂದರ ದಿನವಾಗಲಿದೆ.

ಧನು: ನೀವೊಂದು ಬಗೆದರೆ ಆಗುವುದು ಇನ್ನೊಂದು ಎಂಬ ಪರಿಸ್ಥಿತಿಯಾದೀತು. ಬೇಡದ ವಿಚಾರಗಳಿಗೆ ತಲೆಕೆಡಿಸಿಕೊಂಡು ಮನಸ್ಸಿನ ನೆಮ್ಮದಿ ಹಾಳು ಮಾಡಬೇಡಿ. ಹಿರಿಯರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಅನಗತ್ಯ ಚಿಂತೆ ಬೇಡ.

ಮಕರ: ನಿಮ್ಮ ವ್ಯವಹಾರಗಳಿಗೆ ಇಷ್ಟು ದಿನ ಆಗುತ್ತಿದ್ದ ಅಡ್ಡಿ ಆತಂಕಗಳು ದೂರವಾಗಲಿದೆ. ಸ್ತ್ರೀಯರೊಂದಿಗೆ ಕಲಹವಾಗದಂತೆ ಎಚ್ಚರಿಕೆ ವಹಿಸಿ. ವಾಹನ ಖರೀದಿ ಯೋಗ ಸದ್ಯದಲ್ಲೇ ಕೂಡಿಬರಲಿದೆ. ದಿನದಂತ್ಯಕ್ಕೆ ನೆಮ್ಮದಿ.

ಕುಂಭ: ಕಾರ್ಯದೊತ್ತಡದಿಂದ ದೇಹಾಯಾಸವಾದೀತು. ಆರೋಗ್ಯದ ಮೇಲೆ ನಿಗಾ ಇರಲಿ. ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಖರ್ಚು ವೆಚ್ಚ ಮಾಡಲಿದ್ದೀರಿ. ಅನಿರೀಕ್ಷಿತವಾಗಿ ಬಂಧು ಮಿತ್ರರ ಭೇಟಿ ಮನಸ್ಸಿಗೆ ಖುಷಿ ಕೊಡಲಿದೆ.

ಮೀನ: ಬೇರೆಯವರು ನಿಮ್ಮ ಬಗ್ಗೆ ಏನು ಯೋಚಿಸುತ್ತಾರೋ ಎಂಬ ಕೀಳರಿಮೆ ಬೇಡ. ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿಗೆ ಖರ್ಚು ವೆಚ್ಚಗಳಾದೀತು. ನೆರೆಹೊರೆಯವರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಪವರ್ ಫುಲ್ ಸರಸ್ವತಿ ಮಂತ್ರ ಕನ್ನಡದಲ್ಲಿ ಇಲ್ಲಿದೆ

ಮಕರ ಸಂಕ್ರಾಂತಿ ನಾಳೆಯಾ, ನಾಡಿದ್ದಾ.. ಕನ್ ಫ್ಯೂಷನ್ ಬೇಡ ಇಲ್ಲಿ ನೋಡಿ

ಏಕಾದಶಮುಖ ಹನುಮತ್ಕವಚ ಸ್ತೋತ್ರಂ ಕನ್ನಡದಲ್ಲಿ

ಕಾಶೀ ವಿಶ್ವನಾಥನ ಭಕ್ತರಾಗಿದ್ದರೆ ಈ ಸ್ತೋತ್ರ ತಪ್ಪದೇ ಓದಿ

ಶನಿ ದೋಷ ನಿವಾರಣೆಗೆ ದಶರಥ ಕೃತ ಶನಿ ಮಂತ್ರ ಕನ್ನಡದಲ್ಲಿ

ಮುಂದಿನ ಸುದ್ದಿ
Show comments