Daily Horoscope

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಬುಧವಾರ, 16 ಜೂನ್ 2021 (08:44 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಉದ್ಯೋಗ ಕ್ಷೇತ್ರದಲ್ಲಿ ನೀವು ಹಿಂದೆ ಕೈಗೊಂಡಿದ್ದ ನಿರ್ಧಾರಗಳನ್ನು ಪುನರಾಮರ್ಶಿಸಬೇಕಾಗುತ್ತದೆ. ಆರ್ಥಿಕವಾಗಿ ಹೊಸ ಯೋಜನೆಗಳನ್ನು ಕೈಗೊಳ್ಳಲು ಕೆಲವು ದಿನ ಕಾಯುವುದು ಒಳಿತು. ದಿನದಂತ್ಯಕ್ಕೆ ಸಂತೋಷದ ಸುದ್ದಿ ಕೇಳಲಿದೆ.

ವೃಷಭ: ಹಿಂದೆ ನೀವು ಮಾಡಿದ ಕೆಲಸಗಳಲ್ಲಿನ ತಪ್ಪುಗಳನ್ನು ತಿದ್ದಿ ಮುನ್ನಡೆಯಬೇಕಾಗುತ್ತದೆ. ಸಹೋದ್ಯೋಗಿಗಳ ಕಷ್ಟಕ್ಕೆ ನೆರವಾಗಲಿದ್ದೀರಿ. ಸಂಗಾತಿಗೆ ಅಚ್ಚರಿಯ ಉಡುಗೊರೆ ನೀಡಲಿದ್ದೀರಿ. ಯೋಗ್ಯ ವಯಸ್ಕರಿಗೆ ಕಂಕಣ ಬಲ ಕೂಡಿಬರಲಿದೆ.

ಮಿಥುನ: ನಿಮ್ಮಲ್ಲಿರುವ ಶಕ್ತಿ, ಸಾಮರ್ಥ್ಯವನ್ನು ಪ್ರದರ್ಶಿಸುವ ಕಾಲವಿದು. ನನ್ನಿಂದ ಆಗದು ಎಂದು ಕೈಕಟ್ಟಿ ಕೂರಬೇಡಿ. ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ. ವಿದ್ಯಾರ್ಥಿಗಳಿಗೆ ಭವಿಷ್ಯದ ಬಗ್ಗೆ ಯೋಚಿಸಬೇಕಾಗುತ್ತದೆ. ದೇವತಾ ಪ್ರಾರ್ಥನೆ ಮಾಡಿ.

ಕರ್ಕಟಕ: ನಿಮ್ಮದಲ್ಲದ ವಸ್ತುವಿನ ಬಗ್ಗೆ ಅತಿಯಾದ ಮೋಹ ಬೇಡ. ವಾಹನ ಸವಾರರು ಚಾಲನೆಯಲ್ಲಿ ಎಚ್ಚರಿಕೆ ವಹಿಸಬೇಕಾಗುತ್ತದೆ. ಪ್ರೇಮಿಗಳಿಗೆ ಮನೆಯವರ ಒಪ್ಪಿಗೆ ಸಿಗಲಿದೆ. ಶುಭ ಮಂಗಲ ಕಾರ್ಯಕ್ಕೆ ಸಿದ್ಧತೆ ನಡೆಸಲಿದ್ದೀರಿ.

ಸಿಂಹ: ವೃತ್ತಿರಂಗದಲ್ಲಿ ನಿಮಗೆ ತೊಡಕಾಗಿದ್ದ ವಿಚಾರಗಳನ್ನು ನಿವಾರಿಸಲು ದಾರಿ ಕಂಡುಕೊಳ್ಳಲಿದ್ದೀರಿ. ನಿಮ್ಮ ಆರ್ಥಿಕ ಸ್ಥಿತಿ ಗತಿ ಸುಧಾರಣೆಗೆ ಮುಂದಾಗಲಿದ್ದೀರಿ. ವೈಯಕ್ತಿಕ ದೇಹಾರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಿ. ಅನಗತ್ಯ ಚಿಂತೆ ಬೇಡ.

ಕನ್ಯಾ: ಹಿಂದೆ ಆಗಿ ಹೋದ ಘಟನೆಗಳ ಬಗ್ಗೆ ಯೋಚಿಸುತ್ತಾ ಕೂರುವುದರಲ್ಲಿ ಅರ್ಥವಿಲ್ಲ. ಹೊಸ ದಾರಿ, ಹೊಸ ಅವಕಾಶಗಳಿಗೆ ಹೊಂದಿಕೊಳ್ಳಬೇಕಾಗುತ್ತದೆ. ಸಂಗಾತಿಯ ಮಾತಿಗೆ ಕಿವಿಗೊಡಬೇಕಾಗುತ್ತದೆ.

ತುಲಾ: ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ನೆರವಾಗುವಂತಹ ಅವಕಾಶಗಳು ಒದಗಿಬರಲಿದೆ. ನಿರುದ್ಯೋಗಿಗಳು ಪಾಲಿಗೆ ಬಂದ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ವ್ಯಾಪಾರಿಗಳಿಗೆ ಕೊಂಚ ಚೇತರಿಕೆ ಕಂಡುಬರಲಿದೆ.

ವೃಶ್ಚಿಕ: ಅನಗತ್ಯ ಯೋಚನೆಗಳಿಂದ ಮಾನಸಿಕವಾಗಿ ಉತ್ಸಾಹ ಕಳೆದುಕೊಳ್ಳಬೇಡಿ. ವೈಯಕ್ತಿಕ ಕಷ್ಟ-ಸುಖವನ್ನು ಆಪ್ತರೊಂದಿಗೆ ಹಂಚಿಕೊಳ್ಳಲಿದ್ದೀರಿ. ಮನೋಕಾಮನೆಗಳನ್ನು ಪೂರೈಸಿಕೊಳ್ಳುವಿರಿ. ಕಿರು ಸಂಚಾರ ಮಾಡುವಿರಿ.

ಧನು: ಸಂಗಾತಿಯ ಬಹುದಿನಗಳ ಕನಸು ನನಸು ಮಾಡಲು ಪ್ರಯತ್ನಿಸುವಿರಿ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚಗಳಾಗಲಿವೆ. ವ್ಯಾವಹಾರಿಕವಾಗಿ ಮುನ್ನಡೆಯ ದಿನಗಳಿವು. ಕೋರ್ಟು ಕಚೇರಿ ವ್ಯವಹಾರದಲ್ಲಿ ಮುನ್ನಡೆ ಗಳಿಸುವಿರಿ.

ಮಕರ: ಮನೆಯಲ್ಲಿ ನಡೆಯಬೇಕಿದ್ದ ಶುಭ ಮಂಗಲ ಕಾರ್ಯಗಳು ನಿರೀಕ್ಷಿತ ರೀತಿಯಲ್ಲಿ ಸಾಗಲಿವೆ. ಸಾಮಾಜಿಕವಾಗಿ ನಿಮ್ಮ ಕೀರ್ತಿ ಹೆಚ್ಚಲಿದೆ. ಆರ್ಥಿಕವಾಗಿ ಹಣಕಾಸಿನ ಸಮಸ್ಯೆಗಳು ಕಂಡುಬಂದರೂ ಸಕಾಲದಲ್ಲಿ ಸಹಾಯ ಸಿಗಲಿದೆ.

ಕುಂಭ: ಮಹಿಳೆಯರಿಗೆ ಮಂಗಳ ವಸ್ತ್ರ ಖರೀದಿಸುವ ಯೋಗ ಕೂಡಿಬರಲಿದೆ. ಆರ್ಥಿಕವಾಗಿ ಅಧಿಕ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಬೇಕಾಗುತ್ತದೆ. ಹಿರಿಯರ ದೇಹಾರೋಗ್ಯದಲ್ಲಿ ಏರುಪೇರಾಗಿ ಚಿಂತೆಗೆ ಕಾರಣವಾದೀತು.

ಮೀನ: ಚಿತ್ತಚಾಂಚಲ್ಯ ಕಾಡಲಿದ್ದು, ನಿರ್ಧಾರ ತೆಗೆದುಕೊಳ್ಳುವಾಗ ಗೊಂದಲವಾದೀತು. ಆದಾಯ ವೃದ್ಧಿಗೆ ನಾನಾ ದಾರಿಗಳನ್ನು ಹುಡುಕಾಡಲಿದ್ದೀರಿ. ಎಲೆಕ್ಟ್ರಾನಿಕ್ ವೃತ್ತಿಯವರಿಗೆ ಮುನ್ನಡೆ. ಕುಲದೇವರ ಪ್ರಾರ್ಥನೆ ಮಾಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಕಾಳ ಸರ್ಪ ದೋಷವಿದ್ದರೆ ಈ ಸ್ತೋತ್ರವನ್ನು ಪಠಿಸಿ

ಶತ್ರುಭಯ ನಾಶಕ್ಕಾಗಿ ಕಾಳಿಕಾ ಕವಚ ಸ್ತೋತ್ರವನ್ನು ಓದಿ

ಶಿವನ ಕುರಿತಾದ ಶ್ರೀ ಗಂಗಾಧರ ಸ್ತೋತ್ರ ಇಲ್ಲಿದೆ

ಗೌರಿ ಹಬ್ಬಕ್ಕೆ ಉಪವಾಸ ವ್ರತ ಮಾಡುವುದು ಹೇಗೆ, ಏನು ಫಲ

ಗಣೇಶನಿಗೆ ಪ್ರಿಯವಾದ ಪಂಚಾಮೃತವನ್ನು ಅರ್ಪಿಸುವುದರಿಂದ ಸಿಗುವ ಪ್ರಯೋಜನ ಗೊತ್ತಾ

ಮುಂದಿನ ಸುದ್ದಿ
Show comments