Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಮಂಗಳವಾರ, 15 ಜೂನ್ 2021 (08:57 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಅವಿವಾಹಿತರಿಗೆ ಯೋಗ್ಯ ವೈವಾಹಿಕ ಸಂಬಂಧಗಳು ಕೂಡಿಬರಲಿವೆ. ಹಿರಿಯರಿಗೆ ಧಾರ್ಮಿಕ ಕೆಲಸಗಳಿಂದ ಮನಸ್ಸಿಗೆ ನೆಮ್ಮದಿ ಸಿಗುವುದು. ಆರ್ಥಿಕವಾಗಿ ಚೇತರಿಕೆಯ ವಾತಾವರಣ ಕಂಡುಬರಲಿದೆ. ಆದರೆ ತಾಳ್ಮೆ ಅಗತ್ಯ.

ವೃಷಭ: ನಿಮ್ಮ ವ್ಯವಹಾರಗಳಿಗೆ ಅಡ್ಡಿಪಡಿಸುತ್ತಿದ್ದವರಿಂದ ಮುಕ್ತಿ ಸಿಗಲಿದೆ. ಹಿಂದಿನ ತಪ್ಪುಗಳ ಬಗ್ಗೆ ಪಶ್ಚಾತ್ತಾಪಪಡುತ್ತಾ ಕೂರುವುದರಲ್ಲಿ ಅರ್ಥವಿಲ್ಲ. ಧನ ಗಳಿಕೆಗೆ ನಾನಾ ಮಾರ್ಗ ಕಂಡುಕೊಳ್ಳಲಿದ್ದೀರಿ. ಕುಲದೇವರ ಪ್ರಾರ್ಥನೆ ಮಾಡಿ.

ಮಿಥುನ: ಆಕಸ್ಮಿಕವಾಗಿ ಹಣಕಾಸು ಒದಗಿಬರಲಿದ್ದು, ಅಂದುಕೊಂಡ ಕೆಲಸಗಳು ಸುಗಮವಾಗಲಿದೆ. ಕೌಟುಂಬಿಕವಾಗಿ ನಿಮ್ಮ ಕೆಲಸಗಳಿಗೆ ಸಂಗಾತಿಯ ಸಹಕಾರ ಕಂಡುಬರಲಿದೆ. ವಿದ್ಯಾರ್ಥಿಗಳಿಗೆ ಭವಿಷ್ಯದ ಬಗ್ಗೆ ಚಿಂತೆಯಾದೀತು.

ಕರ್ಕಟಕ: ವಾಹನ, ಭೂಮಿ ಖರೀದಿಗೆ ಸಮಯ ಕೂಡಿಬರಲಿದೆ. ಸಂಗಾತಿಗೆ ಅನಿರೀಕ್ಷಿತ ಉಡುಗೊರೆ ಕೊಡಲಿದ್ದೀರಿ. ಮಹಿಳೆಯರಿಗೆ ಹಿರಿಯರ ಕಾಳಜಿ ಮಾಡುವ ಜವಾಬ್ಧಾರಿ ಹೆಗಲಿಗೇರಲಿದೆ. ಕಿರು ಸಂಚಾರ ಮಾಡಲಿದ್ದೀರಿ.

ಸಿಂಹ: ಪ್ರೀತಿ ಪಾತ್ರರ ಸಮಾಗಮದಿಂದ ಸುಖ ಸಂತೋಷ ಸಿಗಲಿದೆ. ಬಹಳ ದಿನಗಳ ನಿಮ್ಮ ಕನಸು ನನಸಾಗಿಸಲಿದ್ದೀರಿ. ನೂತನ ದಂಪತಿಗಳಿಗೆ ಸುಂದರ ಕ್ಷಣ ಕಳೆಯುವ ಯೋಗ. ಆರ್ಥಿಕವಾಗಿ ಸಾಲಗಾರರ ಕಾಟದಿಂದ ಮುಕ್ತರಾಗುವಿರಿ.

ಕನ್ಯಾ: ಸಾಂಸಾರಿಕವಾಗಿ ಹಿತಶತ್ರುಗಳ ಕಾಟದಿಂದ ಭಿನ್ನಾಭಿಪ್ರಾಯಗಳು ಕಂಡುಬಂದೀತು. ತಾಳ್ಮೆ, ಸಂಯಮದಿಂದ ವರ್ತಿಸಿ. ವೃತ್ತಿರಂಗದಲ್ಲಿ ನಿಮ್ಮ ಏಳಿಗೆಗೆ ಸಹಕಾರಿಯಾದ ವಾತಾವರಣವಿರಲಿದೆ. ದೇಹಾರೋಗ್ಯದಲ್ಲಿ ಸುಧಾರಣೆ.

ತುಲಾ: ವ್ಯವಹಾರದಲ್ಲಿ ನಿಮ್ಮ ವಿಶ್ವಾಸದ ದುರುಪಯೋಗವಾಗಲಿದೆ. ಸರಕಾರಿ ಲೆಕ್ಕಪತ್ರಗಳನ್ನು ಎಚ್ಚರಿಕೆಯಿಂದ ಕಾಪಾಡಿ. ನೆರೆಹೊರೆಯವರೊಂದಿಗೆ ನೀರಿನ ವಿಚಾರಕ್ಕೆ ಭಿನ್ನಾಬಿಪ್ರಾಯಗಳು ಕಂಡುಬಂದೀತು. ದಿನದಂತ್ಯಕ್ಕೆ ನೆಮ್ಮದಿ.

ವೃಶ್ಚಿಕ: ಆಸ್ತಿಕರಿಗೆ ಧಾರ್ಮಿಕ ಕಾರ್ಯ ನೆರವೇರಿಸಲು ಓಡಾಟ ನಡೆಸಬೇಕಾಗಬಹುದು. ಅರ್ಧಕ್ಕೇ ನಿಂತ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ಆರ್ಥಿಕ ಅಡಚಣೆಗಳು ಹಂತ ಹಂತವಾಗಿ ನಿವಾರಣೆಯಾಗಲಿದೆ. ದೇವತಾ ಪ್ರಾರ್ಥನೆ ಮಾಡಿ.

ಧನು: ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ. ಅವಿವಾಹಿತ ಕನ್ಯಾಮಣಿಗಳಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಸಂಗಾತಿಯೊಂದಿಗೆ ಅನಗತ್ಯ ಸಂಘರ್ಷ ಬೇಡ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ.

ಮಕರ: ಯಂತ್ರೋಪಕರಣಗಳ ವೃತ್ತಿಯಲ್ಲಿರುವವರಿಗೆ ಚೇತರಿಕೆಗೆ ಅವಕಾಶ ಸಿಗುವುದು. ಸರಕಾರಿ ಉದ್ಯೋಗಿಗಳಿಗೆ ಕಾರ್ಯದೊತ್ತಡ ಕೊಂಚ ಕಡಿಮೆಯಾಗುವುದು. ವೈಯಕ್ತಿಕ ದೇಹಾರೋಗ್ಯ ಚಿಂತೆಗೆ ಕಾರಣವಾದೀತು.

ಕುಂಭ: ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೇರುವ ಯೋಗ ಕೂಡಿಬರಲಿದೆ. ನ್ಯಾಯಾಲಯದ ಕಲಾಪಗಳಲ್ಲಿ ನಿಮಗೆ ಜಯವಾಗಲಿದೆ. ಮನೆಯ ಸದಸ್ಯರೊಡನೆ ಅನಗತ್ಯ ಸಂಘರ್ಷ ಬೇಡ. ತಾಳ್ಮೆಯಿರಲಿ.

ಮೀನ: ಪ್ರೇಮ ಪ್ರಕರಣಗಳು ಮನೆಯವರೆದುರು ಬಹಿರಂಗವಾಗಲಿದೆ. ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಹಿರಿಯರೊಂದಿಗೆ ಸಮಾಲೋಚಿಸಿ. ಕೊಡು-ಕೊಳ್ಳುವ ವ್ಯವಹಾರಗಳು ಲಾಭ ತಂದುಕೊಡಲಿವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Anjaneya Mantra: ಆಂಜನೇಯ ಅಷ್ಟೋತ್ತರ ಮಂತ್ರವನ್ನು ತಪ್ಪದೇ ಓದಿ

Lakshmi Mantra: ಧನಾಭಿವೃದ್ಧಿ ಆಗಬೇಕಾದ ಧನಲಕ್ಷ್ಮೀ ಸ್ತೋತ್ರ ಓದಿ

Raghavendra swamy mantra: ಶ್ರೀ ರಾಘವೇಂದ್ರ ಕವಚ ಸ್ತೋತ್ರಂ ಭಕ್ತಿಯಿಂದ ಓದಿ

Devi Mantra: ಮನೆಯಲ್ಲಿರುವ ಅವಿವಾಹಿತ ಕನ್ಯಾಮಣಿಗಳು ತಪ್ಪದೇ ಈ ಸ್ತೋತ್ರ ಓದಿ

Ardanaristaka Stothram: ವಿವಾಹಾದಿ ಸಮಸ್ಯೆಗಳಿಗೆ ಅರ್ಧನಾರೀಶ್ವರಾಷ್ಟಕಂ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments