ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಸೋಮವಾರ, 7 ಜೂನ್ 2021 (08:27 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 

ಮೇಷ: ಬಂಧು ಮಿತ್ರರ ಚಾಡಿ ಮಾತುಗಳಿಂದ ತೊಂದರೆಯಾದೀತು. ಸಂಗಾತಿಯೊಂದಿಗೆ ಹೊಂದಾಣಿಕೆಯಿಂದ ನಡೆದುಕೊಳ್ಳಿ. ಯಾರ ಜೊತೆಗೂ ಸಂಘರ್ಷಕ್ಕಿಳಿಯುವುದು ಬೇಡ. ತಾಳ್ಮೆ,ಸಂಯಮವೇ ಮುಖ್ಯವಾಗಲಿದೆ.

ವೃಷಭ: ವಿದ್ಯಾರ್ಥಿಗಳು ಉತ್ತಮ ಸ್ನೇಹ ಸಂಗ ಮಾಡುವುದು ಮುಖ‍್ಯವಾಗಲಿದೆ. ಅಭ್ಯಾಸದ ಕಡೆಗೆ ಗಮನ ಕಡಿಮೆ ಆಗದಿರಲಿ. ಸ್ವಯಂ ಉದ್ಯೋಗಿಗಳಿಗೆ ಭವಿಷ್ಯದ ದಾರಿ ಬಗ್ಗೆ ಚಿಂತೆಯಾದೀತು. ಖರ್ಚು ವೆಚ್ಚದ ಬಗ್ಗೆ ನಿಯಂತ್ರಣವಿರಲಿ.

ಮಿಥುನ: ಸಾಂಸಾರಿಕವಾಗಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ ಸರಿಪಡಿಸಿಕೊಂಡು ಹೋಗಬೇಕಾಗುತ್ತದೆ. ಕೆಳ ಹಂತದ ನೌಕರರಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಲಿದೆ. ಕ್ರಯ-ವಿಕ್ರಯ ವ್ಯವಹಾರಗಳಲ್ಲಿ ಲಾಭವಾದೀತು.

ಕರ್ಕಟಕ: ವೃತ್ತಿರಂಗದಲ್ಲಿ ಚೇತರಿಕೆಯ ವಾತಾವರಣ ಕಂಡುಬರಲಿದೆ. ನಿರುದ್ಯೋಗಿಗಳು ಇದುವರೆಗೆ ಪಟ್ಟ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ. ಸಾಮಾಜಿಕವಾಗಿ ಹೊಸಬರ ಭೇಟಿಯಿಂದ ನಿಮ್ಮ ಕಾರ್ಯಾನುಕೂಲವಾಗಲಿದೆ. ದಿನದಂತ್ಯಕ್ಕೆ ನೆಮ್ಮದಿ.

ಸಿಂಹ: ತಪ್ಪಾದ ದಾರಿಯಲ್ಲಿ ನಡೆಯುವಾಗ ಸಂಗಾತಿಯು ನಿಮಗೆ ಎಚ್ಚರಿಕೆ ಕೊಡಲಿದ್ದಾರೆ. ಹಿರಿಯರ ಸಲಹೆಗಳನ್ನು ಪಾಲಿಸಿರಿ. ಆರ್ಥಿಕವಾಗಿ ಅನಿರೀಕ್ಷಿತ ಖರ್ಚು ವೆಚ್ಚಗಳು ಕಂಡುಬಂದೀತು. ಕಿರು ಓಡಾಟ ನಡೆಸಲಿದ್ದೀರಿ.

ಕನ್ಯಾ: ಆರ್ಥಿಕವಾಗಿ ನಿಮ್ಮ ಲೆಕ್ಕಾಚಾರಗಳು ತಲೆಕೆಳಗಾಗುವ ಸಂದರ್ಭ ಎದುರಾಗಲಿದೆ. ಕೌಟುಂಬಿಕವಾಗಿ ಅಭಿವೃದ್ಧಿಗೆ ಅವಕಾಶಗಳು ತೋರಿಬರಲಿವೆ. ದೇಹಾರೋಗ್ಯದ ಬಗ್ಗೆ ಉಪೇಕ್ಷೆ ಬೇಡ. ಕುಲದೇವರ ಪ್ರಾರ್ಥನೆ ಮಾಡಿ.

ತುಲಾ: ಉದ್ಯೋಗ ಕ್ಷೇತ್ರದಲ್ಲಿ ಹಿನ್ನಡೆಯಾದರೂ ಸಹೋದ್ಯೋಗಿಗಳ ಸಹಕಾರ ಕಂಡುಬರಲಿದೆ. ಕ್ರಿಯಾತ್ಮಕ ಕೆಲಸಗಳಿಂದ ಇತರರ ಗಮನ ಸೆಳೆಯಲಿದ್ದೀರಿ. ಮಾನಸಿಕವಾಗಿ ನಿಮ್ಮ ಸುಖ-ದುಃಖಗಳನ್ನು ಪ್ರೀತಿ ಪಾತ್ರರೊಂದಿಗೆ ಹಂಚಿಕೊಳ್ಳಲಿದ್ದೀರಿ.

ವೃಶ್ಚಿಕ: ವ್ಯಾಪಾರಿಗಳಿಗೆ ಇದು ಸಕಾಲವಲ್ಲ. ಆರ್ಥಿಕವಾಗಿ ಸಂಕಷ್ಟಕ್ಕೀಡಾಗಲಿದ್ದೀರಿ. ಹೊಸ ದಾರಿಗಳನ್ನು ಹುಡುಕಬೇಕಾಗುತ್ತದೆ. ಗೃಹಿಣಿಯರಿಗೆ ಗೃಹಕೃತ್ಯಗಳಿಂದ ಬಿಡುವು ಸಿಗದು. ತಾಳ್ಮೆ, ಸಂಯಮ ಮುಖ್ಯ.

ಧನು: ಹೊಸ ವಸ್ತು, ಭೂಮಿ ಖರೀದಿಗೆ ಕೆಲವು ದಿನ ಕಾಯುವುದು ಉತ್ತಮ. ನೆರೆಹೊರೆಯವರೊಂದಿಗೆ ಸಂಘರ್ಷವಾಗದಂತೆ ಎಚ್ಚರಿಕೆ ವಹಿಸಿ. ದೂರ ಪ್ರಯಾಣಗಳನ್ನು ರದ್ದುಗೊಳಿಸಲಿದ್ದೀರಿ. ವ್ಯಾಪಾರಿಗಳಿಗೆ ಲಾಭವಿಲ್ಲದಿದ್ದರೂ ನಷ್ಟವಾಗದು.

ಮಕರ: ಮಕ್ಕಳ ವಿದ್ಯಾಭ್ಯಾಸದ ಬಗೆಗಿನ ಗೊಂದಲಗಳು ಚಿಂತೆಗೆ ಕಾರಣವಾಗಲಿದೆ. ವೈದ್ಯಕೀಯ ವೃತ್ತಿಯವರಿಗೆ ಬಿಡುವಿಲ್ಲದ ಕೆಲಸದಿಂದ ದೇಹಾಯಾಸವಾದೀತು. ಕೃಷಿಕರಿಗೆ ವ್ಯವಹಾರದಲ್ಲಿ ಸಮಾನ ಫಲ ಅನುಭವಿಸಬೇಕಾಗುತ್ತದೆ.

ಕುಂಭ: ನಾಲಿಗೆ ಚಪಲದಿಂದ ದೇಹಾರೋಗ್ಯದಲ್ಲಿ ಏರುಪೇರಾದೀತು. ಅನಿರೀಕ್ಷಿತ ಖರ್ಚು ವೆಚ್ಚಗಳು ಹೈರಾಣಾಗಿಸಲಿದೆ. ಬಂಧು ಮಿತ್ರರ ಚಾಡಿ ಮಾತುಗಳಿಗೆ ಕಿವಿಗೊಡಬೇಕಾಗಿಲ್ಲ. ಮಕ್ಕಳ ದೇಹಾರೋಗ್ಯದ ಬಗ್ಗೆ ಗಮನವಿರಲಿ.

ಮೀನ: ನಿರುದ್ಯೋಗಿಗಳಿಗೆ ಅನಿರೀಕ್ಷಿತವಾಗಿ ಉದ್ಯೋಗ ಲಾಭವಾಗಲಿದೆ. ಪ್ರೀತಿ ಪಾತ್ರರ ಭೇಟಿಗೆ ಮನಸ್ಸು ಹಾತೊರೆಯಲಿದೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸಂಜೆ ದೀಪ ಹಚ್ಚುವಾಗ ಪಠಿಸಬಹುದಾದ ಸ್ತೋತ್ರಗಳು ಇಲ್ಲಿವೆ

ಕೆಟ್ಟ ದೃಷ್ಟಿ ನಿವಾರಿಸಿ ಸಂಪತ್ತು ವೃದ್ಧಿಗೆ ಈ ಲಕ್ಷ್ಮೀ ಮಂತ್ರ ಪಠಿಸಿ

ಸಂಜೆ ದೀಪ ಹಚ್ಚುವ ಅತ್ಯಂತ ಮಂಗಳಕರ ಸಮಯ ಯಾವುದು ಗೊತ್ತಾ

ಮೇಷಾದಿ ದ್ವಾದಶ ರಾಶಿಫಲ 2026: ಖ್ಯಾತ ಜ್ಯೋತಿಷಿ ಶ್ರೀ ವೆಂಕಟೇಶ್ವರ ಭಟ್ ಅವರಿಂದ

ಬುಧವಾರ ಗಣೇಶನ ಅನುಗ್ರಹಕ್ಕೆ ಈ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments