ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಸೋಮವಾರ, 17 ಮೇ 2021 (08:41 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ನಿಮ್ಮ ವ್ಯಕ್ತಿತ್ವಕ್ಕೆ ವಿರುದ್ಧವಾಗಿ ನಡೆದುಕೊಳ್ಳಬೇಕಾದ ಪ್ರಮೇಯ ಬರಲಿದೆ. ಸಂಗಾತಿಯೊಂದಿಗೆ ಕೆಲವೊಂದು ವಿಚಾರದಲ್ಲಿ ಸಂಘರ್ಷಗಳಾದೀತು. ದೇಹಾರೋಗ್ಯದ ಬಗ್ಗೆ ಉಪೇಕ್ಷೆ ಬೇಡ. ಕುಲದೇವರ ಪ್ರಾರ್ಥನೆ ಮಾಡಿ.

ವೃಷಭ: ನಿಮ್ಮ ಭವಿಷ್ಯದ ಒಳಿತಿಗಾಗಿ ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಯಾವುದೇ ಕೆಲಸ ಮಾಡುವ ಮೊದಲು ಹಿರಿಯರೊಂದಿಗೆ ಪರಾಮರ್ಶಿಸಿ. ಪ್ರೇಮಿಗಳಿಗೆ ಮನೆಯವರಿಂದ ವಿರೋಧ ವ್ಯಕ್ತವಾದೀತು.

ಮಿಥುನ: ಸಾಂಸಾರಿಕವಾಗಿ ನಿಮ್ಮ ಒಳಿತಿಗಾಗಿ ಹಿರಿಯರು ಕೈಗೊಳ್ಳುವ ನಿರ್ಧಾರಗಳನ್ನು ಬೆಂಬಲಿಸಿ. ವಿದ್ಯಾರ್ಥಿಗಳಿಗೆ ಭವಿಷ್ಯದ ಬಗ್ಗೆ ಚಿಂತೆಯಾಗಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ದಿನದಂತ್ಯಕ್ಕೆ ನೆಮ್ಮದಿ.

ಕರ್ಕಟಕ: ವ್ಯಾಪಾರಿಗಳು ವ್ಯವಹಾರದಲ್ಲಿ ಪೈಪೋಟಿ ಎದುರಿಸಬೇಕಾಗುತ್ತದೆ. ಕೃಷಿಕರಿಗೆ ತಮ್ಮ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಪಡೆಯಲು ಕ್ರಿಯಾತ್ಮಕವಾಗಿ ಯೋಚಿಸಬೇಕಾಗುತ್ತದೆ. ಖರ್ಚು ವೆಚ್ಚಗಳ ಬಗ್ಗೆ ಕಡಿವಾಣವಿರಲಿ.

ಸಿಂಹ: ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ಇಡಬೇಕಾಗುತ್ತದೆ. ಕೆಟ್ಟ ಸ್ನೇಹ ಸಂಗದಿಂದ ದುಶ್ಚಟಕ್ಕೆ ವ್ಯಸನರಾಗಬೇಡಿ. ರಾಜಕೀಯ ರಂಗದಲ್ಲಿರುವವರಿಗೆ ಕಾರ್ಯದೊತ್ತಡವಿರಲಿದೆ. ಕೆಳ ಹಂತದ ನೌಕರರಿಗೆ ಉದ್ಯೋಗದಲ್ಲಿ ಮುನ್ನಡೆ.

ಕನ್ಯಾ: ವೃತ್ತಿರಂಗದಲ್ಲಿ ಅತೀ ಒತ್ತಡದ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ. ಸರಕಾರಿ ಲೆಕ್ಕ ಪತ್ರಗಳ ಬಗ್ಗೆ ನಿಗಾ ಇರಲಿ. ಆರ್ಥಿಕವಾಗಿ ಅನಗತ್ಯ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಬೇಕಾಗುತ್ತದೆ. ಮಕ್ಕಳಿಂದ ಸಂತಸ ಸಿಗುವುದು.

ತುಲಾ: ಪಾಲಿಗೆ ಬಂದಿದ್ದೇ ಪಂಚಾಮೃತ ಎಂದು ತಿಳಿದು ಮುನ್ನಡೆಯಬೇಕಾಗುತ್ತದೆ. ಹೊಸ ಕೆಲಸಗಳಿಗೆ ಬಂಡವಾಳ ಹೂಡಲು ಕೆಲವು ದಿನ ಕಾಯುವುದು ಉತ್ತಮ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚುವೆಚ್ಚವಾಗಲಿದೆ.

ವೃಶ್ಚಿಕ: ಅನಗತ್ಯ ವಿವಾದಗಳನ್ನು ಮೈಮೇಲೆಳೆದುಕೊಳ್ಳಬೇಡಿ. ನೆರೆಹೊರೆಯವರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ಅನಿವಾರ್ಯ ಕಾರಣಗಳಿಗೆ ಕಿರು ಸಂಚಾರ ಮಾಡಬೇಕಾಗುತ್ತದೆ. ದೇವತಾ ಪ್ರಾರ್ಥನೆ ಮಾಡಿ.

ಧನು: ವೃತ್ತಿರಂಗದಲ್ಲಿ ನಿಮ್ಮ ಕೆಲಸಕ್ಕೆ ತಕ್ಕ ಮನ್ನಣೆ ಸಿಗುತ್ತಿಲ್ಲ ಎಂಬ ಬೇಸರ ಕಾಡೀತು. ಕೌಟುಂಬಿಕವಾಗಿ ಸಂಗಾತಿಯ ಸಾಂತ್ವನ ಮನಸ್ಸಿಗೆ ನೆಮ್ಮದಿ ಕೊಡಲಿದೆ. ಮಕ್ಕಳಿಂದ ಸಂತೋಷದ ವಾರ್ತೆ ಆಲಿಸಬಹುದು. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಮಕರ: ವೈಯಕ್ತಿಕ ದುಃಖ ದುಮ್ಮಾನಗಳನ್ನು ಆಪ್ತರೊಂದಿಗೆ ಹಂಚಿಕೊಂಡು ಹಗುರವಾಗಲಿದ್ದೀರಿ. ಬಹುದಿನಗಳಿಂದ ಕಾಡುತ್ತಿದ್ದ ಆರೋಗ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿದ್ದೀರಿ. ವೃತ್ತಿರಂಗದಲ್ಲಿ ಮುನ್ನಡೆಗೆ ಅವಕಾಶ ಸಿಗಲಿದೆ.

ಕುಂಭ: ನಿರುದ್ಯೋಗಿಗಳು ಪಾಲಿಗೆ ಬಂದ  ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಹಿತಶತ್ರುಗಳಿಂದ ತೊಂದರೆಗಳು ಎದುರಾದೀತು. ತಾಳ್ಮೆ, ಸಂಯಮದಿಂದ ಎದುರಿಸಿ. ಮಹಿಳೆಯರಿಗೆ ಬಿಡುವಿನ ದಿನ.

ಮೀನ: ನಿಮ್ಮ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ. ವ್ಯವಹಾರದಲ್ಲಿ ಮುನ್ನಡೆ ಕಂಡುಬರಲಿದೆ. ಆರ್ಥಿಕವಾಗಿ ಹಣಕಾಸಿಗೆ ತೊಂದರೆಯಿರದು. ಆದರೆ ದೇಹಾರೋಗ್ಯದಲ್ಲಿ ಏರುಪೇರಾದೀತು. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಮೂಡಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಈ ಮಂತ್ರವನ್ನು ಹೇಳಿಕೊಂಡು ಇಂದು ಶಿವನ ಪೂಜೆ ಮಾಡಿ

ಆಪದುದ್ದಾರಕ ಹನುಮತ್ ಸ್ತೋತ್ರ ಕನ್ನಡದಲ್ಲಿ

ಹಣಕಾಸಿನ ಸಮಸ್ಯೆ ನಿವಾರಣೆಗೆ ಈ ಲಕ್ಷ್ಮೀ ಸ್ತೋತ್ರ ಓದಿ

ಮಹಾವಿಷ್ಣುವಿನ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments