ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಬುಧವಾರ, 5 ಮೇ 2021 (08:58 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಬಹಳ ದಿನಗಳ ನಂತರ ನಿಮ್ಮ ದೈನಂದಿನ ಬದುಕಿಗೆ ಮರಳಿದ ಖುಷಿ ನಿಮ್ಮದಾಗಲಿದೆ. ನ್ಯಾಯಾಲಯದ ಕಲಾಪಗಳಲ್ಲಿ ಮುನ್ನಡೆ ಕಾಣಲಿದ್ದೀರಿ. ಹಣಕಾಸಿನ ಪರಿಸ್ಥಿತಿಯಲ್ಲಿ ಹಿನ್ನಡೆಯಾದರೂ, ಚಿಂತೆ ಬೇಡ.

ವೃಷಭ: ಹಾಸಿಗೆ ಇದ್ದಷ್ಟೇ ಕಾಲು ಚಾಚುವ ಪರಿಸ್ಥಿತಿ ನಿಮ್ಮದಾಗಲಿದೆ. ಅನಗತ್ಯ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಿ ಭವಿಷ್ಯಕ್ಕೆ ಯೋಜನೆ ರೂಪಿಸಲಿದ್ದೀರಿ. ಸರಕಾರಿ ಕೆಲಸದಲ್ಲಿ ಮುನ್ನಡೆ ಸಿಗಲಿದೆ. ದೇವತಾ ಪ್ರಾರ್ಥನೆ ಮಾಡಿ.

ಮಿಥುನ: ನಿಮ್ಮ ಅನುಕೂಲಕ್ಕೆ ತಕ್ಕಂತೆ ಕೆಲವು ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ವೈಯಕ್ತಿಕ ದೇಹಾರೋಗ್ಯದ ಬಗ್ಗೆ ಉಪೇಕ್ಷೆ ಬೇಡ.

ಕರ್ಕಟಕ: ವ್ಯಾಪಾರ, ವ್ಯವಹಾರದಲ್ಲಿ ಹಿತಶತ್ರುಗಳ ಕಾಟ ಕಂಡುಬಂದೀತು. ಹಣಕಾಸಿನ ವ್ಯವಹಾರ ನಡೆಸುವಾಗ ಎಚ್ಚರಿಕೆ ಅಗತ್ಯ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಸೂಕ್ತ ಸಂಬಂಧಗಳು ಕೂಡಿಬರಲಿವೆ. ಪ್ರೇಮಿಗಳಿಗೆ ಶುಭ ದಿನವಾಗಲಿದೆ.

ಸಿಂಹ: ನಿಮ್ಮದಲ್ಲದ ವಸ್ತುವಿನ ಮೇಲೆ ಅತಿಯಾದ ವ್ಯಾಮೋಹ ತೊಂದರೆಗೆ ಕಾರಣವಾದೀತು. ಮಹಿಳೆಯರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ವ್ಯಾಪಾರಿಗಳಿಗೆ ಏರುಪೇರುಗಳು ಸಹಜ. ತಾಳ್ಮೆಯಿಂದ ನಿಭಾಯಿಸಿ.

ಕನ್ಯಾ: ನಿಮ್ಮ ಕೌಟುಂಬಿಕ ವಿಚಾರದಲ್ಲಿ ಮೂರನೆಯವರು ಮೂಗು ತೂರಿಸಲು ಅವಕಾಶ ಕೊಡಬೇಡಿ. ನೆರೆಹೊರೆಯವರ ಚಾಡಿ ಮಾತುಗಳಿಗೆ ಕಿವಿಗೊಡಬೇಡಿ. ಅನಿರೀಕ್ಷಿತವಾಗಿ ಧನಾಗಮನವಾಗಲಿದೆ. ಕಿರು ಓಡಾಟ ನಡೆಸುವಿರಿ.

ತುಲಾ: ವೃತ್ತಿರಂಗದಲ್ಲಿ ನಿಮ್ಮ ಸಮಸ್ಯೆಗಳಿಗೆ ಸಹೋದ್ಯೋಗಿಗಳ ನೆರವು ಪಡೆಯಲಿದ್ದೀರಿ. ವಾಹನ ಸಂಚಾರದಲ್ಲಿ ಅತೀವ ಕಾಳಜಿ ಮುಖ್ಯ. ಮನೆಗೆ ಅತಿಥಿಗಳ ಆಗಮನವಾದೀತು. ಹಿರಿಯರೊಂದಿಗೆ ಅನವಶ್ಯಕ ವಾದ ವಿವಾದ ಬೇಡ.

ವೃಶ್ಚಿಕ: ನಿಮ್ಮ ಏಳಿಗೆಗಾಗಿ ಕ್ರಿಯಾತ್ಮಕವಾಗಿ ಯೋಚಿಸಬೇಕಾದ ಸಮಯವಿದು. ಬೇರೆಯವರು ನಿಮ್ಮ ಬಗ್ಗೆ ಏನಂದುಕೊಳ್ಳುವರೋ ಎಂಬ ಕೀಳರಿಮೆ ಬೇಡ. ಹಿರಿಯರ ಸಲಹೆಗಳನ್ನು ಪಾಲಿಸಿ. ದಿನದಂತ್ಯಕ್ಕೆ ನೆಮ್ಮದಿ.

ಧನು: ವ್ಯಾವಹಾರಿಕವಾಗಿ ಮುನ್ನಡೆಯಿದ್ದರೂ ಸಾಂಸಾರಿಕವಾಗಿ ಸಂಗಾತಿಯೊಂದಿಗೆ ಘರ್ಷಣೆಯಾದೀತು. ಮಾತಿನ ಮೇಲೆ ಸಂಯಮವಿರಲಿ. ಮಕ್ಕಳ ದೇಹಾರೋಗ್ಯದ ಕಡೆಗೆ ಗಮನ ಹರಿಸಿ. ವಿದ್ಯಾರ್ಥಿಗಳಿಗೆ ಮುನ್ನಡೆಯ ಯೋಗವಿದೆ.

ಮಕರ: ಅನಿರೀಕ್ಷಿತವಾಗಿ ಕೆಲವೊಂದು ಖರ್ಚು ವೆಚ್ಚಗಳು ಎದುರಾದೀತು. ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲಿದ್ದೀರಿ. ಕಟ್ಟಡ ಕಾಮಗಾರಿ ಕೆಲಸಗಳನ್ನು ಕೆಲವು ದಿನಗಳ ಮಟ್ಟಿಗೆ ಮುಂದೂಡುವುದು ಉತ್ತಮ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಕುಂಭ: ಬಹುದಿನಗಳಿಂದ ಕಾಡುತ್ತಿದ್ದ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿದ್ದೀರಿ. ಕಾರ್ಮಿಕ ವರ್ಗ ನಷ್ಟ ಅನುಭವಿಸುವ ಪರಿಸ್ಥಿತಿ ಎದುರಾದೀತು. ಮಕ್ಕಳ ಭವಿಷ್ಯಕ್ಕೆ ಯೋಜನೆ ರೂಪಿಸಲಿದ್ದೀರಿ. ದೇವರ ಪ್ರಾರ್ಥನೆ ಮಾಡಿ.

ಮೀನ: ಹಿರಿಯರ ದೇಹಾರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ಅಲೆದಾಡುವ ಪರಿಸ್ಥಿತಿ ಎದುರಾದೀತು. ಅಧಿಕಾರಿ ವರ್ಗದವರಿಗೆ ಮುಂಬಡ್ತಿಯ ಯೋಗ ಕೂಡಿಬರಲಿದೆ. ಅನಗತ್ಯ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕುವುದು ಉತ್ತಮ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದೀಪಾವಳಿ ದಿನ ಯಾವ ರಾಶಿಯವರು ಯಾವ ಬಟ್ಟೆ ಹಾಕಿಕೊಂಡರೆ ಅದೃಷ್ಟ ನೋಡಿ

ಅಹೋಬಲ ನರಸಿಂಹ ಸ್ತೋತ್ರ ಓದಿ

ದೀಪಾವಳಿಗೆ ಯಾವ ರಾಶಿಯವರು ಯಾವ ವಸ್ತುಗಳನ್ನು ದಾನ ಮಾಡಬೇಕು

ಸಂಕಷ್ಟ ನಿವಾರಣೆಗೆ ಉಚ್ಛಿಷ್ಟ ಗಣಪತಿ ಸ್ತೋತ್ರ

ದೀಪಾವಳಿ ನಂತರ ಈ ರಾಶಿಯವರ ಅದೃಷ್ಟ ಬದಲಾಗುತ್ತದೆ

ಮುಂದಿನ ಸುದ್ದಿ
Show comments