ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಭಾನುವಾರ, 18 ಏಪ್ರಿಲ್ 2021 (08:51 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ರಾಜಕೀಯ ರಂಗದಲ್ಲಿರುವವರಿಗೆ ಹೊಸ ಸವಾಲುಗಳು ಎದುರಾಗಲಿವೆ. ಆತ್ಮೀಯ ವರ್ಗದವರ ದೇಹಾರೋಗ್ಯ ಚಿಂತೆಗೆ ಕಾರಣವಾದೀತು. ವಿದ್ಯಾರ್ಥಿಗಳಿಗೆ ಕಠಿಣ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ. ಖರ್ಚುಗಳಿಗೆ ಕಡಿವಾಣವಿರಲಿ.

ವೃಷಭ: ವ್ಯಾವಹಾರಿಕವಾಗಿ ನಿಮಗೆ ಇಂದು ಶುಭ ದಿನ. ಅಂದುಕೊಂಡ ಕೆಲಸಗಳು ಸುಗಮವಾಗಿ ನೆರವೇರಲಿದೆ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಿರದು. ಗೃಹೋಪಯೋಗಿ ವಸ್ತುಗಳ ಖರೀದಿ ಮಾಡಲಿದ್ದೀರಿ.

ಮಿಥುನ: ವೃತ್ತಿರಂಗದಲ್ಲಿ ನಿಮಗೆ ಅಡೆತಡೆಗಳು ಎದುರಾದೀತು. ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ಪಡೆಯಲಿದ್ದೀರಿ. ಸಂಗಾತಿಯ ಬಹುದಿನಗಳ ಕನಸು ನನಸು ಮಾಡಲಿದ್ದೀರಿ. ಕಾರ್ಯನಿಮಿತ್ತ ಕಿರು ಸಂಚಾರ ಮಾಡುವಿರಿ.

ಕರ್ಕಟಕ: ಕೌಟುಂಬಿಕವಾಗಿ ನೀವು ಕೈಗೊಳ್ಳುವ ಕೆಲವು ನಿರ್ಧಾರಗಳು ಇತರರ ಅಸಮಾಧಾನಕ್ಕೆ ಕಾರಣವಾದೀತು. ಹಿರಿಯರೊಂದಿಗೆ ವಾಗ್ವಾದ ನಡೆಸದಿರಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗುವುದು.

ಸಿಂಹ: ದೇಹಾರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾದ ಪರಿಸ್ಥಿತಿ ಬರಲಿದೆ. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶಗಳು ದೊರೆಯಲಿದೆ.

ಕನ್ಯಾ: ಉದ್ಯೋಗ ಕ್ಷೇತ್ರದಲ್ಲಿ ಬರುವ ಸಣ್ಣ ಅವಕಾಶಗಳನ್ನೂ ಬಿಡದೇ ಉಪಯೋಗಿಸಿಕೊಳ್ಳಿ. ಬೇರೆಯವರು ನಿಮ್ಮ ಬಗ್ಗೆ ಏನಂದುಕೊಳ್ಳುವರೋ ಎಂಬ ಕೀಳರಿಮೆ ಬೇಡ. ಮಹಿಳೆಯರಿಗೆ ಗೃಹ ಕೃತ್ಯಗಳಿಂದ ಕೊಂಚ ಬಿಡುವು ಸಿಗಲಿದೆ.

ತುಲಾ: ನಿಮ್ಮ ಕೆಲಸಗಳಿಗೆ ಕುಟುಂಬ ಸದಸ್ಯರ ಸಹಕಾರವಿರಲಿದೆ. ಅರ್ಧಕ್ಕೇ ನಿಂತ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಅನಿರೀಕ್ಷಿತವಾಗಿ ಹಳೆಯ ಮಿತ್ರರ ಭೇಟಿಯಾಗುವಿರಿ.

ವೃಶ್ಚಿಕ: ನಿಮ್ಮ ಭವಿಷ್ಯಕ್ಕೆ ಪೂರಕವಾದ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ಸ್ವಯಂ ಉದ್ಯೋಗಿಗಳಿಗೆ ಆರ್ಥಿಕವಾಗಿ ಮುನ್ನಡೆಯ ಯೋಗವಿದೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಖರ್ಚು ಮಾಡಿ. ದೇವತಾ ಪ್ರಾರ್ಥನೆ ಮಾಡಿ.

ಧನು: ನೀವು ಹಿಂದೆ ಮಾಡಿದ ಒಳ್ಳೆಯ ಕೆಲಸಗಳ ಫಲ ಅನುಭವಿಸಲಿದ್ದೀರಿ. ಉದ್ಯೋಗಾರ್ಥವಾಗಿ ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ. ವೈಯಕ್ತಿಕವಾಗಿ ಏಳಿಗೆ ಕಂಡುಬರಲಿದೆ. ನೆರೆಹೊರೆಯವರೊಂದಿಗೆ ಸಹಕಾರ ಸಿಗಲಿದೆ.

ಮಕರ: ಬೇರೆಯವರು ಮಾಡುವ ತಪ್ಪುಗಳಿಗೆ ನೀವು ಬೆಲೆ ತೆರಬೇಕಾದೀತು. ತಾಳ್ಮೆ, ಸಂಯವಿರಲಿ. ಮಹಿಳೆಯರಿಗೆ ಬಿಡುವಿನ ದಿನದ ಖುಷಿ ಸಿಗಲಿದೆ. ಸಮಸ್ಯೆಗಳಿಗೆ ಸಮಾಧಾನದಿಂದ ಯೋಚಿಸಿದರೆ ಪರಿಹಾರ ಸಿಗಲಿದೆ.

ಕುಂಭ: ಸರಕಾರೀ ನೌಕರರಿಗೆ ಮುಂಬಡ್ತಿ ಯೋಗ ಸದ್ಯದಲ್ಲೇ ಕೂಡಿಬರಲಿದೆ. ಶೈಕ್ಷಣಿಕ ರಂಗದಲ್ಲಿರುವವರಿಗೆ ಉನ್ನತ ಸ್ಥಾನ ಮಾನದ ಯೋಗ ಕೂಡಿಬರಲಿದೆ. ಮಕ್ಕಳ ದೇಹಾರೋಗ್ಯದ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ. ಅನಗತ್ಯ ಚಿಂತೆ ಬೇಡ.

ಮೀನ: ಮನೆಯ ಕೆಲಸಗಳಲ್ಲಿ ಉತ್ಸಾಹದಿಂದ ತೊಡಗಿಸಿಕೊಳ್ಳಲಿದ್ದೀರಿ. ನಿಮ್ಮಿಂದ ಉಪಕಾರ ಪಡೆದವರು ನಿಮಗೆ ಇಂದು ಆಗಿಬರಲಿದ್ದಾರೆ. ದೈವಾನುಗ್ರಹದಿಂದ ವ್ಯಾಪಾರಿಗಳಿಗೆ ಲಾಭವಾಗಲಿದೆ. ಕಿರು ಓಡಾಟ ನಡೆಸಲಿದ್ದೀರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸಂಕಟ ಮೋಚನ ಹನುಮಾನ್ ಅಷ್ಟಕಂ ಸ್ತೋತ್ರ

ಹಣಕಾಸಿನ ಸಮಸ್ಯೆಯಿದ್ದರೆ ಕನಕಧಾರಾ ಸ್ತೋತ್ರ ತಪ್ಪದೇ ಓದಿ

2026 ರಲ್ಲಿ ಯಾವ ರಾಶಿಯವರು ಯಾವ ದೇವರ ಪ್ರಾರ್ಥನೆ ಮಾಡಬೇಕು ಗಮನಿಸಿ

ಗಣೇಶ ಕವಚ ಸ್ತೋತ್ರವನ್ನು ಮಕ್ಕಳಿಗೆ ಹೇಳಿಸಿ

ಈ ಐದು ರಾಶಿಯವರಿಗೆ 2026 ರಲ್ಲಿ ಸ್ವಂತ ಮನೆ ಕನಸು ನನಸಾಗುತ್ತದೆ

ಮುಂದಿನ ಸುದ್ದಿ
Show comments