Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಭಾನುವಾರ, 28 ಮಾರ್ಚ್ 2021 (08:51 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಕೌಟುಂಬಿಕವಾಗಿ ಹಿರಿಯರ ಅಸಮಾಧಾನಕ್ಕೆ ಗುರಿಯಾಗಲಿದ್ದೀರಿ. ವೃತ್ತಿರಂಗದಲ್ಲಿ ನಿಮ್ಮ ಬೆಳವಣಿಗೆಗೆ ಪೂರಕವಾಗಿ ಏನು ಮಾಡಬಹುದೆಂದು ಯೋಚಿಸಲಿದ್ದೀರಿ. ನಿಮ್ಮ ಕೆಲಸಗಳಿಗೆ ಸಂಗಾತಿಯ ಸಹಕಾರ ಸಿಗಲಿದೆ. ದೇವತಾ ಪ್ರಾರ್ಥನೆ ಮಾಡಿ.

ವೃಷಭ: ವ್ಯಾಪಾರ ವ್ಯವಹಾರದಲ್ಲಿ ಆರ್ಥಿಕವಾಗಿ ಅಭಿವೃದ್ಧಿ ಕಂಡುಬರಲಿದೆ. ಕೌಟುಂಬಿಕವಾಗಿ ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಇಷ್ಟಮಿತ್ರರ ಭೇಟಿಯಿಂದ ಮನಸ್ಸಿಗೆ ಸಂತೋಷ ಸಿಗಲಿದೆ.

ಮಿಥುನ: ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಸಾಮಾಜಿಕವಾಗಿ ನಿಮ್ಮ ಕೆಲಸ ಕಾರ್ಯಗಳಿಗೆ ಪ್ರಶಂಸೆ ವ್ಯಕ್ತವಾಗಲಿದೆ. ಮಹಿಳೆಯರಿಗೆ ಕಾರ್ಯದೊತ್ತಡದಿಂದ ದೇಹಾಯಾಸವಾಗಬಹುದು. ತಾಳ್ಮೆಯಿರಲಿ.

ಕರ್ಕಟಕ: ಸಾಹಿತ್ಯ ಕ್ಷೇತ್ರದಲ್ಲಿರುವವರಿಗೆ ಸಾಮಾಜಿಕವಾಗಿ ಕೀರ್ತಿ ಸಂಪಾದನೆಯಾಗಲಿದೆ. ಆರ್ಥಿಕವಾಗಿ ಅಧಿಕ ಖರ್ಚು ವೆಚ್ಚವಾಗದಂತೆ ಎಚ್ಚರಿಕೆ ವಹಿಸಿ. ಶುಭ ಕಾರ್ಯಗಳಿಗೆ ಮಂಗಳ ವಸ್ತ್ರ ಖರೀದಿ ಮಾಡಲಿದ್ದೀರಿ. ನೆಮ್ಮದಿಯಿರಲಿದೆ.

ಸಿಂಹ: ಸ್ಥಿರ ಉದ್ಯೋಗಕ್ಕಾಗಿ ನೀವು ಪಡುತ್ತಿರುವ ಪರಿಶ್ರಮಕ್ಕೆ ಹೊಸ ದಾರಿಗಳು ಸಿಗಲಿವೆ. ನಿರುದ್ಯೋಗಿಗಳು ಉದ್ಯೋಗ ಸಂದರ್ಶನ ನಿಮಿತ್ತ ದೂರ ಸಂಚಾರ ಮಾಡಲಿದ್ದಾರೆ. ದೇಹಾರೋಗ್ಯದಲ್ಲಿ ಕೊಂಚ ಏರುಪೇರಾದೀತು. ಚಿಂತೆ ಬೇಡ.

ಕನ್ಯಾ: ನಿಮ್ಮ ಮನಸ್ಸಿನ ಮಾತುಗಳಿಗೆ ಸಂಗಾತಿಯ ಸಹಕಾರ ಸಿಗಲಿದೆ. ಕೌಟುಂಬಿಕವಾಗಿ ಸಹೋದರ ವರ್ಗದವರೊಂದಿಗೆ ಭಿನ್ನಾಭಿಪ್ರಾಯಗಳಾಗದಂತೆ ಎಚ್ಚರಿಕೆ ವಹಿಸಿ. ಪ್ರೇಮಿಗಳಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ.

ತುಲಾ: ಹಣಕಾಸಿನ ವ್ಯವಹಾರಗಳಲ್ಲಿ ಏನೋ ತೊಂದರೆಯಾಗುತ್ತಿದೆ ಎಂಬ ಅನುಮಾನ ಬಂದೀತು. ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ಪಡೆಯಲಿದ್ದೀರಿ. ಪ್ರೀತಿ ವಿಚಾರಗಳನ್ನು ಮನೆಯವರ ಎದುರು ಬಹಿರಂಗಪಡಿಸಲು ಇದೇ ಸಮಯ.

ವೃಶ್ಚಿಕ: ನೀವು ಇಂದು ಎಷ್ಟು ತಾಳ್ಮೆಯಿಂದಿರುತ್ತೀರೋ ಅಷ್ಟು ಒಳ್ಳೆಯದು. ಸಣ್ಣ ಪುಟ್ಟ ವಿಚಾರಗಳು ಮನೆಯಲ್ಲಿ ಭಿನ್ನಾಭಿಪ್ರಾಯಗಳಿಗೆ ದಾರಿಯಾದೀತು. ಹಿರಿಯರು ದೇಹಾರೋಗ್ಯದ ಬಗ್ಗೆ ಕಾಳಜಿವಹಿಸುವುದು ಸೂಕ್ತ.

ಧನು: ಮನೆ ರಿಪೇರಿ, ವಾಹನ ರಿಪೇರಿ ಇತ್ಯಾದಿ ಕೆಲಸಗಳಿಗೆ ಮುಂದಾಗಲಿದ್ದೀರಿ. ಆರ್ಥಿಕವಾಗಿ ಅನಿವಾರ್ಯವಾಗಿ ಕೆಲವೊಂದು ಖರ್ಚು ವೆಚ್ಚಗಳು ಬರಲಿವೆ. ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ತಾಳ್ಮೆಯಿರಲಿ.

ಮಕರ: ಸಿಟ್ಟಿನ ಭರದಲ್ಲಿ ಕೈಗೊಳ್ಳುವ ನಿರ್ಧಾರಗಳಿಂದ ಮನೆಯಲ್ಲಿ ಅಶಾಂತಿ ಮೂಡೀತು. ಇಷ್ಟ ಮಿತ್ರರ ಭೇಟಿಯಾಗಲಿದ್ದೀರಿ. ಮನಸ್ಸಿನ ಮಾತುಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳುವುದು ಸೂಕ್ತ.

ಕುಂಭ: ಇನ್ನೊಬ್ಬರ ಬಗ್ಗೆ ಅತಿಯಾದ ವಿಶ್ವಾಸವೂ ಕೆಲವೊಮ್ಮೆ ನಿಮಗೆ ಮುಳುವಾದೀತು. ವ್ಯವಹಾರದಲ್ಲಿ ಶತ್ರು ಭಯ ಕಾಡಲಿದೆ. ಹಿರಿಯರು ನೀಡುವ ಸಲಹೆಗಳು ಕೆಲವೊಮ್ಮೆ ಉಪಯೋಗಕ್ಕೆ ಬಂದೀತು. ಯಾರನ್ನೂ ಅಲಕ್ಷಿಸಬೇಡಿ.

ಮೀನ: ಸಾಲಗಾರರ ಬಾಧೆ ಮನಸ್ಸಿಗೆ ತ್ರಾಸವಾದೀತು. ಆರ್ಥಿಕವಾಗಿ ಹಣ ಗಳಿಕೆಗೆ ನಾನಾ ಮಾರ್ಗಗಳನ್ನು ಕಂಡುಕೊಳ್ಳಲಿದ್ಧೀರಿ. ಮಹಿಳೆಯರಿಗೆ ಕಾರ್ಯದೊತ್ತಡದಿಂದ ಕೊಂಚ ಬಿಡುವು ಸಿಗಲಿದೆ. ತಾಳ್ಮೆಯಿರಲಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Shani Mantra: ಶನಿ ರಕ್ಷಾಸ್ತವಃ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ತಪ್ಪದೇ ಇಂದು ಓದಿ

Ram Navami 2025: ದಿನಾಂಕ, ಶುಭ ಮುಹೂರ್ತ ಇಲ್ಲಿದೆ

Saraswathi Mantra: ವಿದ್ಯೆ ತಲೆಗೆ ಹತ್ತಬೇಕೆಂದರೆ ಸರಸ್ವತಿಯ ಈ ಸ್ತೋತ್ರ ಓದಿ

Krishna Mantra: ಶ್ರೀಕೃಷ್ಣಾಷ್ಟಕಂ ಪ್ರತಿನಿತ್ಯ ಓದಿ: ಕನ್ನಡದಲ್ಲಿ ಇಲ್ಲಿದೆ

Lakshmi Mantra: ಹಣಕಾಸಿನ ಸಮಸ್ಯೆಯಿದ್ದರೆ ತಪ್ಪದೇ ಈ ಮಂತ್ರ ಓದಿ

ಮುಂದಿನ ಸುದ್ದಿ
Show comments