ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಬುಧವಾರ, 17 ಮಾರ್ಚ್ 2021 (08:50 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ತಾಳ್ಮೆಯಿಂದ ನಡೆದುಕೊಳ್ಳುವ ಅಗತ್ಯವಿದೆ. ಯಾವುದೇ ವಿಚಾರವಿರಲಿ ಆತುರದ ನಿರ್ಧಾರ ಬೇಡ. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳ ಸಲಹೆಗಳನ್ನು ಪಾಲಿಸಬೇಕಾಗುತ್ತದೆ. ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.

ವೃಷಭ: ಅನವಶ್ಯಕವಾಗಿ ವಾದ ವಿವಾದಗಳಿಗೆ ಆಸ್ಪದ ಕೊಡಬೇಡಿ. ಉದ್ಯೋಗ ಕ್ಷೇತ್ರದಲ್ಲಿ ಭಾವನೆಗಳನ್ನು ನಿಯಂತ್ರಿಸಿಕೊಳ್ಳಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ.

ಮಿಥುನ: ಯಾವುದೇ ಆತುರದ ನಿರ್ಧಾರಗಳಿಂದ ಒಳಿತಾಗದು. ಮನೆಯ ವಿಚಾರದಲ್ಲಿ ಸಂಗಾತಿಯೊಂದಿಗೆ ಪರಾಮರ್ಶಿಸಿ ಮುನ್ನಡೆಯುವುದು ಒಳ್ಳೆಯದು. ಮನಸ್ಸಿನ ಆಸೆಗಳನ್ನು ಪೂರೈಸಿಕೊಳ್ಳಲಿದ್ದೀರಿ. ಖರ್ಚು ವೆಚ್ಚಗಳಾಗಲಿದೆ.

ಕರ್ಕಟಕ: ಯೋಗ್ಯ ವಯಕಸ್ರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಸಹೋದ್ಯೋಗಿಗಳೊಂದಿಗೆ ಯಾವುದೇ ಭಿನ್ನಾಭಿಪ್ರಾಯಗಳಾಗದಂತೆ ನೋಡಿಕೊಳ್ಳಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ.

ಸಿಂಹ: ರಾಜಕೀಯವಾಗಿ ನಿಮ್ಮ ಶತ್ರುಗಳ ಕಾಟ ಕಡಿಮೆಯಾಗುವುದು. ಕ್ರಿಯಾತ್ಮಕಕವಾಗಿ ಯೋಚನೆ ಮಾಡಿ ಸಮಸ್ಯೆಗಳಿಂದ ದೂರವಾಗುವುದು ಉತ್ತಮ. ಸಂಬಂಧಿಕರ ಭೇಟಿಯಾಗಲಿದ್ದೀರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಕನ್ಯಾ: ಸಂಬಂಧದಲ್ಲಿ ಏರುಪೇರಾದೀತು. ತಾಳ್ಮೆ, ಸಂಯಮದಿಂದಿರಿ. ಎಲ್ಲವೂ ಒಳಿತಾಗುತ್ತದೆಂದು ಅಂದುಕೊಂಡಿದ್ದಾಗಲೇ ಅನಿರೀಕ್ಷಿತ ತಿರುವುಗಳು ಕಂಡುಬಂದೀತು. ಮನೆಯಲ್ಲಿ ಶುಭ ಮಂಗಲ ಕಾರ್ಯಕ್ಕೆ ಸಿದ್ಧತೆ ನಡೆಸಲಿದ್ದೀರಿ.

ತುಲಾ: ನೀವು ಯಾವುದೇ ಹೆಜ್ಜೆಯಿಡುವಾಗಲೂ ನೂರಾರು ವಿಘ‍್ನಗಳು ಕಂಡುಬಂದೀತು. ಮಾನಸಿಕವಾಗಿ ಆತ್ಮಸ್ಥೈರ್ಯದಿಂದ ಮುನ್ನಡೆಯುವುದು ಅಗತ್ಯ. ಹಿರಿಯರಿಗೆ ಪುಣ್ಯ ಕ್ಷೇತ್ರಗಳ ಸಂದರ್ಶನ ಯೋಗವಿದೆ.

ವೃಶ್ಚಿಕ: ಕಾರ್ಯಬಾಹುಳ್ಯದಿಂದಾಗಿ ಪ್ರೀತಿ ಪಾತ್ರರಿಗೆ ಸಮಯ ಒದಗಿಸಲು ಸಾಧ‍್ಯವಾಗದೇ ಹೋದೀತು. ಆದರೆ ಸಂಗಾತಿಯು ನಿಮ್ಮ ಕಷ್ಟಗಳಿಗೆ ಹೆಗಲು ಕೊಡಲಿದ್ದಾರೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ.

ಧನು: ಇನ್ನೊಬ್ಬರ ಬಗ್ಗೆ ಅತಿಯಾಗಿ ಕಾಳಜಿ ಮಾಡುವುದೂ ಕೆಲವೊಮ್ಮೆ ಅನಾಹುತಕ್ಕೆ ಕಾರಣವಾದೀತು. ವಿಶೇಷ ವ್ಯಕ್ತಿಗಳ ಭೇಟಿಯಿಂದ ನಿಮ್ಮ ಕಾರ್ಯಸಾಧನೆಯಾಗಲಿದೆ. ಆರ್ಥಿಕವಾಗಿ ಹಣಕಾಸಿನ ಸಮಸ್ಯೆಗಳು ಪರಿಹಾರವಾಗಲಿದೆ.

ಮಕರ: ಕರ್ತವ್ಯದಲ್ಲಿ ಏನೇ ಲೋಪ ಮಾಡಿದರೂ ಅದಕ್ಕೆ ದೊಡ್ಡ ಬೆಲೆ ತೆರಬೇಕಾದೀತು. ಕೌಟುಂಬಿಕವಾಗಿ ತೃಪ್ತಿ ಸಮಾಧಾನ ನೆಲೆಸಲಿದೆ. ಸಹೋದ್ಯೋಗಿಗಳ ಕಷ್ಟಕ್ಕೆ  ನೆರವಾಗಲಿದ್ದೀರಿ. ಕುಲದೇವರ ಪ್ರಾರ್ಥನೆ ಮಾಡಿ.

ಕುಂಭ: ಸ್ನೇಹಿತರೊಂದಿಗೆ ಮೋಜು ಮಸ್ತಿ ಮಾಡಲಿದ್ದೀರಿ. ಆದರೆ ಹಣಕಾಸಿನ ಖರ್ಚು ವೆಚ್ಚಗಳ ಬಗ್ಗೆ ಹಿಡಿತವಿರಲಿ. ಸ್ವಯಂ ಉದ್ಯೋಗಿಗಳಿಗೆಎ ಶತ್ರು ಕಾಟ ನಿವಾರಣೆಯಾದೀತು. ಹೊಸ ಅತಿಥಿಗಳ ಆಗಮನಕ್ಕೆ ಸಿದ್ಧತೆ ನಡೆಸಲಿದ್ದೀರಿ.

ಮೀನ: ಕಚೇರಿ ವಿಚಾರವನ್ನು ಮನೆಗೆ ತಂದು ಕೂಗಾಡುವುದರಿಂದ ಮನೆಯ ವಾತಾವರಣ ಹಾಳಾದೀತು. ತಾಳ್ಮೆ, ಸಂಯಮ ಅಗತ್ಯ. ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿಗೆ ಖರ್ಚು ವೆಚ್ಚಗಾಳದೀತು. ದಿನದಂತ್ಯಕ್ಕೆ ಶುಭ ಸುದ್ದಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸಂಜೆ ದೀಪ ಹಚ್ಚುವ ಅತ್ಯಂತ ಮಂಗಳಕರ ಸಮಯ ಯಾವುದು ಗೊತ್ತಾ

ಮೇಷಾದಿ ದ್ವಾದಶ ರಾಶಿಫಲ 2026: ಖ್ಯಾತ ಜ್ಯೋತಿಷಿ ಶ್ರೀ ವೆಂಕಟೇಶ್ವರ ಭಟ್ ಅವರಿಂದ

ಬುಧವಾರ ಗಣೇಶನ ಅನುಗ್ರಹಕ್ಕೆ ಈ ಸ್ತೋತ್ರ ಓದಿ

ವೈಕುಂಠ ಏಕಾದಶಿ ದಿನವಾದ ಇಂದು ಮಹಾವಿಷ್ಣುವಿನ ಈ ಮಂತ್ರವನ್ನು ತಪ್ಪದೇ ಪಠಿಸಿ

ವಿವಾಹ, ಸಂತಾನಕ್ಕೆ ಅಡ್ಡಿಯಾಗುತ್ತಿದ್ದರೆ ಸುಬ್ರಹ್ಮಣ್ಯನ ಈ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments