ಮೇಷ: ಉದ್ಯೋಗ ಕ್ಷೇತ್ರದಲ್ಲಿ ಕಾರ್ಯದೊತ್ತಡ ಅಧಿಕವಾಗಿದ್ದರೂ ನಿಮಗೆ ಅನುಕೂಲಕರವಾದ ಮುನ್ನಡೆ ಲಭಿಸಲಿದೆ. ಆರ್ಥಿಕವಾಗಿ ಖರ್ಚು ವೆಚ್ಚದ ಬಗ್ಗೆ ಮಿತಿಯಿರಲಿ. ಸಂಗಾತಿಯ ಬಹುದಿನದ ಬೇಡಿಕೆ ಪೂರೈಸಲಿದ್ದೀರಿ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.
ವೃಷಭ: ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಭಾಗ್ಯ ಕೂಡಿಬರಲಿದೆ. ಪ್ರೇಮಿಗಳ ಗುಟ್ಟು ಮನೆಯವರೆದುರು ಬಹಿರಂಗವಾಗಲಿದೆ. ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ನೆರವಿನಿಂದ ಸಂಭಾವ್ಯ ಸಮಸ್ಯೆಗಳು ತಪ್ಪಿಹೋಗಲಿದೆ.
ಮಿಥುನ: ಬೇರೆಯವರು ನಿಮ್ಮ ಬಗ್ಗೆ ಏನಂದುಕೊಳ್ಳುವರೋ ಎಂಬ ಕೀಳರಿಮೆಯಲ್ಲಿ ಹೊಸ ಪ್ರಯತ್ನಕ್ಕೆ ಕೈ ಹಾಕಲು ಹಿಂಜರಿಯಬೇಡಿ. ಗೃಹ ನಿರ್ಮಾಣ, ರಿಪೇರಿ ಮುಂತಾದ ಕೆಲಸಗಳಿಗೆ ಮುಂದಾಗಲಿದ್ದೀರಿ. ಹಣಕಾಸಿಗೆ ತೊಂದರೆಯಿರದು.
ಕರ್ಕಟಕ: ಮಹಿಳೆಯರಿಗೆ ತವರಿನ ಕಡೆಯವರ ಭೇಟಿ ಯೋಗ. ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗಳಿಗೆ ಸಿದ್ಧರಾಗಬೇಕಾಗುತ್ತದೆ. ನೂತನ ದಂಪತಿಗಳಿಗೆ ಏಕಾಂತದ ಸಮಯ ಸಿಗಲಿದೆ. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ.
ಸಿಂಹ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕಾಲೆಳೆಯುವವರ ಬಗ್ಗೆ ಎಚ್ಚರವಾಗಿರಬೇಕು. ಅಪರಿಚಿತರನ್ನು ನಂಬಿ ವ್ಯವಹರಿಸಲು ಹೋಗಬೇಡಿ. ಸಾಂಸಾರಿಕವಾಗಿ ದಾಂಪತ್ಯ ಸುಖಕ್ಕೆ ಕೊರತೆಯಿರದು. ಕಾರ್ಯನಿಮಿತ್ತ ಕಿರು ಓಡಾಟ ನಡೆಸಬೇಕಾಗುತ್ತದೆ.
ಕನ್ಯಾ: ನಿಮ್ಮ ಹೊಸ ನಿರ್ಧಾರಗಳಿಗೆ ಸಂಗಾತಿಯ ಸಹಕಾರ ಸಿಗಲಿದೆ. ಮಕ್ಕಳ ದೇಹಾರೋಗ್ಯದ ಬಗ್ಗೆ ಎಚ್ಚರಿಕೆಯಿರಲಿ. ಕಾರ್ಯಕ್ಷೇತ್ರದಲ್ಲಿ ಮೇಲಧಿಕಾರಿಗಳ ಕಿರಿ ಕಿರಿ ಇರಲಿದೆ. ತಾಳ್ಮೆ, ಸಂಯಮದಿಂದ ನಿಭಾಯಿಸಿ. ದೇವತಾ ಪ್ರಾರ್ಥನೆ ಮರೆಯದಿರಿ.
ತುಲಾ: ವೃತ್ತಿರಂಗದಲ್ಲಿ ಎಲ್ಲವೂ ನಿಮಗೆ ಅನುಕೂಲಕರವಾದ ರೀತಿಯಲ್ಲಿ ಇರದು. ಆದರೆ ನಿಮ್ಮ ಪ್ರಯತ್ನ ಮುಂದುವರಿಸಬೇಕು. ಹಿರಿಯರ ಕೆಲವೊಂದು ಸಲಹೆಗಳು ಉಪಯೋಗಕ್ಕೆ ಬರಲಿವೆ. ಖರ್ಚು ವೆಚ್ಚಗಳು ಹಿಡಿತದಲ್ಲಿರಲಿ.
ವೃಶ್ಚಿಕ: ಹಲವು ಅಭಿಪ್ರಾಯಗಳಿಗೆ ಕಿವಿಗೊಟ್ಟು ನಿರ್ಧಾರ ತೆಗೆದುಕೊಳ್ಳಲು ಹೋದರೆ ಅಧ್ವಾನವಾದೀತು. ಮನಸ್ಸಿನ ಮಾತಿಗೆ ಕಿವಿಗೊಡಿ. ಸಂಗಾತಿಯ ಸೂಕ್ತ ಸಲಹೆಗಳನ್ನು ಪಾಲಿಸಬೇಕಾಗುತ್ತದೆ. ಹಿರಿಯರಿಗೆ ಧಾರ್ಮಿಕ ಕಾರ್ಯಗಳಿಂದ ನೆಮ್ಮದಿ ಸಿಗಲಿದೆ.
ಧನು: ಅರ್ಧಕ್ಕೇ ನಿಂತ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ಹಿಂದೆ ಆಗಿ ಹೋದ ತಪ್ಪುಗಳನ್ನು ನೆನೆಸಿಕೊಂಡು ಪಶ್ಚಾತ್ತಾಪ ಪಡುತ್ತಾ ಸಮಯ ಹಾಳು ಮಾಡಬೇಡಿ. ಸಂಗಾತಿಯ ಕಷ್ಟಗಳಿಗೆ ಹೆಗಲುಕೊಡಲಿದ್ದೀರಿ. ವಿದ್ಯಾರ್ಥಿಗಳಿಗೆ ಮುನ್ನಡೆಯಿರಲಿದೆ.
ಮಕರ: ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗಕ್ಕೆ ಸಂದರ್ಶನ ಕರೆ ಬರಲಿದೆ. ಅನಿರೀಕ್ಷಿತವಾಗಿ ದೂರ ಪ್ರಯಾಣ ಮಾಡಬೇಕಾಗಿ ಬರಲಿದೆ. ಸರಕಾರಿ ನೌಕರರಿಗೆ ಕಾರ್ಯದೊತ್ತಡ ಕಡಿಮೆಯಾಗುವುದು. ತಾಳ್ಮೆ, ಸಂಯಮವಿರಲಿ.
ಕುಂಭ: ಮಿತ್ರರ ಕಷ್ಟಕ್ಕೆ ಸ್ಪಂದಿಸಲು ಹೋಗಿ ತೊಂದರೆಗೆ ಸಿಲುಕಿಕೊಳ್ಳಬೇಡಿ. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ. ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚೂ ಇರಲಿದೆ. ಕುಲದೇವರ ಪ್ರಾರ್ಥನೆ ಮಾಡಿ.
ಮೀನ: ವಾಹನ ಸವಾರರಿಗೆ ಅಪಘಾತದ ಭಯ. ಚಾಲನೆಯಲ್ಲಿ ಎಚ್ಚರಿಕೆ ಅಗತ್ಯ. ನೆರೆಹೊರೆಯವರಿಂದ ನಿಮ್ಮ ಕೆಲಸಗಳು ಸಲೀಸಾಗಲಿದೆ. ಹಣಕಾಸಿನ ವಿಚಾರದಲ್ಲಿ ಮಿತ್ರರೊಂದಿಗೆ ವೈಮನಸ್ಯ ಮೂಡಿಬಂದೀತು. ನಾಜೂಕಾಗಿ ನಿಭಾಯಿಸಿ.