Daily Horoscope
✕

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಸೋಮವಾರ, 11 ಜನವರಿ 2021 (08:43 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಹಿರಿಯರೊಡನೆ ಭಿನ್ನಾಭಿಪ್ರಾಯದಿಂದಾಗಿ ಮನಸ್ಸಿಗೆ ನೆಮ್ಮದಿ ಇರದು. ನಿಮ್ಮದೇ ನಡೆಯಬೇಕೆಂಬ ಹಠ ಬಿಡಬೇಕಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಕಾರ್ಯದೊತ್ತಡ ತಪ್ಪದು. ಭವಿಷ್ಯದ ಯೋಜನೆಗೆ ಸಿದ್ಧತೆ ನಡೆಸುವಿರಿ.

ವೃಷಭ: ಉದ್ಯೋಗ ಕ್ಷೇತ್ರದಲ್ಲಿ ಎಷ್ಟೇ ಕೆಲಸ ಮಾಡಿದರೂ ಆ ಪರಿಶ್ರಮಕ್ಕೆ ತಕ್ಕ ಫಲ ಸಿಗದೇ ನಿರಾಸೆಯಾದೀತು. ಆರ್ಥಿಕವಾಗಿ ಹಣಕಾಸಿನ ಖರ್ಚು ವೆಚ್ಚಗಳ ಬಗ್ಗೆ ಮಿತಿಯಿರಲಿ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ.

ಮಿಥುನ: ನಿಮ್ಮದಲ್ಲದ ವಸ್ತುಗಳ ಬಗ್ಗೆ ಅತಿಯಾದ ಆಸೆ ಪಡಬೇಡಿ. ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ನೂತನ ದಂಪತಿಗಳಿಗೆ ಹೊಂದಾಣಿಕೆ ಕೊರತೆ ಕಂಡುಬಂದೀತು. ತಾಳ್ಮೆ, ಸಂಯಮ ಅಗತ್ಯ.

ಕರ್ಕಟಕ: ಮನಸ್ಸಿಲ್ಲದೇ ಹೋದರೂ ಕೆಲವೊಂದು ಕೆಲಸಗಳನ್ನು ಅನಿವಾರ್ಯವಾಗಿ ಮಾಡಬೇಕಾಗುತ್ತದೆ. ಹಿರಿಯರಿಗೆ ತೀರ್ಥ ಯಾತ್ರೆ ಕೈಗೊಳ್ಳುವ ಯೋಗ ಎದುರಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ನೆರವು ಸಿಗಲಿದೆ.

ಸಿಂಹ: ಮನಸ್ಸಿಗೆ ಇಷ್ಟವಾದವರ ಜೊತೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಲಿದ್ದೀರಿ. ಪ್ರೇಮಿಗಳಿಗೆ ಶುಭ ದಿನ. ಹಿರಿಯರ ದೇಹಾರೋಗ್ಯದ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ. ಕೌಟುಂಬಿಕವಾಗಿ ಹೆಚ್ಚಿನ ಜವಾಬ್ಧಾರಿಗಳು ಹೆಗಲಿಗೇರಲಿವೆ.

ಕನ್ಯಾ: ನಿಮ್ಮ ಪ್ರೀತಿ ಪಾತ್ರರ ಮನಸ್ಸಿಗೆ ನೋವುಂಟಾಗದಂತೆ ಎಚ್ಚರಿಕೆ ವಹಿಸಿ. ಸಾಹಿತ್ಯ, ಕಲೆ ಕ್ಷೇತ್ರದಲ್ಲಿರುವವರಿಗೆ ಕೀರ್ತಿ ಸಂಪಾದಿಸುವ ಯೋಗ. ನಿಮ್ಮ ಹಿತೈಷಿಗಳಿಂದ ಸಹಾಯ ಸಿಗಲಿದೆ. ಕಾರ್ಯನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ.

ತುಲಾ: ನೂತನ ವಸ್ತ್ರಾಭರಣ ಖರೀದಿಯಿಂದ ಮನಸ್ಸಿಗೆ ಸಂತೋಷ ಸಿಗಲಿದೆ. ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಅಗತ್ಯ. ಸಂಗಾತಿಯ ಬೇಡಿಕೆ ಪೂರೈಸಲಿದ್ದೀರಿ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚವಾಗಲಿದೆ.

ವೃಶ್ಚಿಕ: ಎಷ್ಟೋ ದಿನದಿಂದ ಬಾಕಿಯಿದ್ದ ಕೆಲಸಗಳನ್ನು ಪೂರ್ತಿ ಮಾಡಲಿದ್ದೀರಿ. ಸರಕಾರಿ ಕೆಲಸಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ಧಾರ್ಮಿಕ ಕಾರ್ಯಗಳಿಗೆ ಧನವಿನಿಯೋಗ ಮಾಡಲಿದ್ದೀರಿ. ಕುಲದೇವರ ಪ್ರಾರ್ಥನೆ ಮಾಡಿ.

ಧನು: ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡುವುದರಿಂದ ಎಲ್ಲವೂ ಶುಭವಾಗಲಿದೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಭರವಸೆ ಸಿಗಲಿದೆ. ಚಿಂತೆ ಬೇಡ.

ಮಕರ: ಮಾನಸಿಕವಾಗಿ ನಿಮ್ಮನ್ನು ಕಾಡುತ್ತಿದ್ದ ಚಿಂತೆಗಳಿಗೆ ಪರಿಹಾರ ಕಂಡುಕೊಳ್ಳಲಿದ್ದೀರಿ. ನಿಮ್ಮ ಕೆಲಸಗಳಿಗೆ ಸಂಗಾತಿಯ ಸಹಕಾರ ಸಿಗಲಿದೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ವೈವಾಹಿಕ ಪ್ರಸ್ತಾಪಗಳು ಬರಲಿವೆ. ದೇವತಾ ಪ್ರಾರ್ಥನೆಯಿಂದ ನೆಮ್ಮದಿ.

ಕುಂಭ: ನಿಮ್ಮ ಆಪ್ತೇಷ್ಟರ ಆರೋಗ್ಯದಲ್ಲಿ ಏರುಪೇರಾಗುವ ಸಾಧ‍್ಯತೆಯಿದೆ. ಹಣಕಾಸಿನ ಮುಗ್ಗಟ್ಟು ತೋರಿಬಂದೀತು. ಕಷ್ಟದ ಸಮಯದಲ್ಲಿ ಮಿತ್ರರ ಸಹಕಾರ ಪಡೆಯಲಿದ್ದೀರಿ. ಶುಭ ಮಂಗಲ ಕಾರ್ಯಗಳನ್ನು ಅನಿವಾರ್ಯವಾಗಿ ಮುಂದೂಡಬೇಕಾದೀತು.

ಮೀನ: ಹಿಂದೆ ಮಾಡಲುದ್ದೇಶಿಸಿದ್ದ ಕೆಲಸಗಳನ್ನು ಇಂದು ಪೂರ್ತಿ ಮಾಡಲು ಪ್ರಯತ್ನ ಮಾಡುವಿರಿ. ಕಾರ್ಯಕ್ಷೇತ್ರದಲ್ಲಿ ವಿಘ್ನ ಭಯವಿದೆ. ಬಂಧು ಮಿತ್ರರ ಚಾಡಿ ಮಾತುಗಳಿಗೆ ಕಿವಿಗೊಡಬೇಕಾಗಿಲ್ಲ. ಸಂಗಾತಿಯ ಸಲಹೆಗಳನ್ನು ಪಾಲಿಸಿದರೆ ಉತ್ತಮ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಕಾಳ ಸರ್ಪ ದೋಷವಿದ್ದರೆ ಈ ಸ್ತೋತ್ರವನ್ನು ಪಠಿಸಿ

ಶತ್ರುಭಯ ನಾಶಕ್ಕಾಗಿ ಕಾಳಿಕಾ ಕವಚ ಸ್ತೋತ್ರವನ್ನು ಓದಿ

ಶಿವನ ಕುರಿತಾದ ಶ್ರೀ ಗಂಗಾಧರ ಸ್ತೋತ್ರ ಇಲ್ಲಿದೆ

ಗೌರಿ ಹಬ್ಬಕ್ಕೆ ಉಪವಾಸ ವ್ರತ ಮಾಡುವುದು ಹೇಗೆ, ಏನು ಫಲ

ಗಣೇಶನಿಗೆ ಪ್ರಿಯವಾದ ಪಂಚಾಮೃತವನ್ನು ಅರ್ಪಿಸುವುದರಿಂದ ಸಿಗುವ ಪ್ರಯೋಜನ ಗೊತ್ತಾ

ಮುಂದಿನ ಸುದ್ದಿ
Show comments