Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಶುಕ್ರವಾರ, 8 ಜನವರಿ 2021 (09:28 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ನಿಮ್ಮ ಪ್ರೀತಿ ಪಾತ್ರರ ಆರೋಗ್ಯದ ಬಗ್ಗೆ ಚಿಂತೆಯಾಗಲಿದೆ. ಸಹೋದರರೊಂದಿಗೆ ಭಿನ್ನಾಭಿಪ್ರಾಯಗಳಾಗದಂತೆ ಎಚ್ಚರಿಕೆ ವಹಿಸಿ. ಉದ್ಯೋಗ ಕ್ಷೇತ್ರದಲ್ಲಿ ಕೆಲಸದೊತ್ತಡ ಹೆಚ್ಚಲಿದೆ. ತಾಳ್ಮೆ, ಸಂಯಮ ಅಗತ್ಯ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಷಭ: ಸಮಾಜಕ್ಕೆ ಒಳಿತಾಗುವ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ನಿಮ್ಮ ಸ್ಥಾನ ಮಾನ ವೃದ್ಧಿಯಾಗುವುದು. ವಿದ್ಯಾರ್ಥಿಗಳ ಸಾಧನೆ ಪೋಷಕರ  ಸಂತಸಕ್ಕೆ ಕಾರಣವಾಗಲಿದೆ. ಸ್ವಯಂ ವ್ಯಾಪಾರಿಗಳಿಗೆ ಲಾಭದಾಯಕ ದಿನ.

ಮಿಥುನ: ನೂತನ ದಂಪತಿಗಳಿಗೆ ಶೀಘ‍್ರದಲ್ಲೇ ಸಂತಾನ ಫಲ ಸೂಚನೆ ಸಿಗಲಿದೆ. ದೇವತಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದೀರಿ. ಆರ್ಥಿಕವಾಗಿ ಭವಿಷ್ಯದ ಯೋಜನೆಗೆ ಸಿದ್ಧತೆ ಮಾಡಲಿದ್ದೀರಿ. ಖರ್ಚು ವೆಚ್ಚ ಮಿತಿಯಲ್ಲಿರಲಿ.

ಕರ್ಕಟಕ: ಕಷ್ಟಪಟ್ಟು ಕೆಲಸ ಮಾಡಿದರೆ ಅದಕ್ಕೆ ತಕ್ಕ ಫಲ ಸಿಗುವುದು. ಆರ್ಥಿಕವಾಗಿ ಹಣಕಾಸಿನ ವಿಚಾರದಲ್ಲಿ ಚೇತರಿಕೆ ಕಂಡುಬರಲಿದೆ. ಸಾಲಗಾರರ ಕಾಟದಿಂದ ಮುಕ್ತಿ ಸಿಗುವುದು. ಹೊಸ ಕಟ್ಟಡ ನಿರ್ಮಾಣಾದಿ ಕಾರ್ಯಗಳಿಗೆ ಚಾಲನೆ ನೀಡಲಿದ್ದೀರಿ.

ಸಿಂಹ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಅಭಿಪ್ರಾಯಗಳಿಗೆ ಬೆಲೆ ಸಿಗಲಿದೆ. ಧನಗಳಿಕೆಗೆ ನಾನಾ ರೀತಿಯ ಮಾರ್ಗ ಕಂಡುಕೊಳ್ಳಲಿದ್ದೀರಿ. ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗದ ದಾರಿಗಳು ಸಿಗಲಿವೆ. ದೇವತಾ ಪ್ರಾರ್ಥನೆ ಮಾಡಿ.

ಕನ್ಯಾ: ಕಲಿಕೆಯ ಮಾರ್ಗದಲ್ಲಿ ನಾನಾ ರೀತಿಯ ವಿಘ‍್ನಗಳು ತೋರಿಬಂದೀತು. ಆದರೆ ಆತ್ಮವಿಶ್ವಾಸದಿಂದ ಮುನ್ನಡೆದರೆ ಯಶಸ್ಸು ಸಿಗುವುದು. ಸಂಗಾತಿಯು ನಿಮ್ಮ ಭಾವನೆಗಳಿಗೆ ಸ್ಪಂದಿಸಲಿದ್ದೀರಿ. ಹೊಸ ಮಿತ್ರರ ಸಂಪಾದಿಸಲಿದ್ದೀರಿ.

ತುಲಾ: ಕೌಟುಂಬಿಕವಾಗಿ ನೆಮ್ಮದಿಯ ದಿನಗಳಿವು. ಬಂಧು ಮಿತ್ರರ ಆಗಮನ ಮನಸ್ಸಿನ ಸಂತೋಷ ಇಮ್ಮಡಿಗೊಳಿಸಲಿದೆ. ಆದರೆ ಆರ್ಥಿಕವಾಗಿ ಖರ್ಚು ವೆಚ್ಚಗಳಾದೀತು. ಹಿರಿಯರಿಗೆ ದೇವಾಲಯ ಸಂದರ್ಶನ ಯೋಗವಿದೆ. ಆರೋಗ್ಯ ಜೋಪಾನ.

ವೃಶ್ಚಿಕ: ವೃತ್ತಿರಂಗದಲ್ಲಿ ಕಾರ್ಯಬಾಹುಳ್ಯ ಅಧಿಕವಾಗಲಿದೆ. ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯಲು ಮನಸ್ಸು ಹಾತೊರೆಯಲಿದೆ. ವಾಹನ ಸವಾರರು ಚಾಲನೆಯಲ್ಲಿ ಎಚ್ಚರಿಕೆಯಿಂದಿರಬೇಕು. ಕುಲದೇವರ ಪ್ರಾರ್ಥನೆ ಮಾಡಿ.

ಧನು: ಸಂತಾನಹೀನ ದಂಪತಿ ದೇವರ ಮೊರೆ ಹೋಗಲಿದ್ದಾರೆ. ದಾಯಾದಿ ಕಲಹಗಳಿಗೆ ಹಿರಿಯರಿಂದ ಪರಿಹಾರ ಸಿಗಲಿದೆ. ಭೂಮಿ, ವಾಹನ ಖರೀದಿ ವಿಚಾರವನ್ನು ಕೆಲವು ದಿನ ಮುಂದೂಡುವುದು ಒಳಿತು. ಕಿರು ಸಂಚಾರ ಮಾಡಲಿದ್ದೀರಿ.

ಮಕರ: ಉದರ ಸಂಬಂಧೀ ಆರೋಗ್ಯ ಸಮಸ್ಯೆ ಕಂಡುಬಂದೀತು. ಇಷ್ಟಮಿತ್ರರೊಂದಿಗೆ ಕಿರು ಸಂಚಾರ ಮಾಡಲಿದ್ದೀರಿ. ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿ ಯೋಗವಿದೆ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ.

ಕುಂಭ: ನಿರುದ್ಯೋಗಿಗಳು ಉದ್ಯೋಗ ನಿಮಿತ್ತ ವಿದೇಶಯಾನ ಮಾಡುವ ಸಂದರ್ಭ ಬಂದೀತು. ಶುಭ ಮಂಗಲ ಕಾರ್ಯಗಳು ಸಾಂಗವಾಗಿ ನೆರವೇರಲಿದೆ. ಯೋಗ್ಯ ವಯಸ್ಕರಿಗೆ ಕಂಕಣ ಬಲ ಕೂಡಿಬರುವುದು. ಮಹಿಳೆಯರಿಗೆ ವಿಶ್ರಾಂತಿ ಸಿಗಲಿದೆ.

ಮೀನ: ಉದ್ಯೋಗ ಕ್ಷೇತ್ರದಲ್ಲಿ ನಿಮಗೆ ಸಿಗಬೇಕಾದ ಸ್ಥಾನ ಸಿಗುತ್ತಿಲ್ಲ ಎಂಬ ಬೇಸರ ಕಾಡಲಿದೆ. ಸಾಲ ಮಾಡಿಯಾದರೂ ತುಪ್ಪ ತಿನ್ನುವ ಆಸೆಯಾದೀತು. ತಾಳ್ಮೆ, ಸಂಯವಿರಲಿ. ಬೇರೆಯವರ ವಿಚಾರಕ್ಕೆ ಮೂಗು ತೂರಿಸಲು ಹೋಗಬೇಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ದೋಷವಿರುವವರು ಇಂದು ಆಂಜನೇಯನ ಈ ಸ್ತೋತ್ರವನ್ನು ಓದಿ

ಮಂಗಳವಾರ ಅಪ್ಪಿ ತಪ್ಪಿಯೂ ಈ ತಪ್ಪು ಮಾಡ್ಬೇಡಿ

ವಿಷ್ಣು ಶತನಾಮ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

Ganesha Festival: ಈ ಒಂದು ನೈವೇದ್ಯ ಗಣೇಶನಿಗೆ 21 ಭಕ್ಷ್ಯ ಅರ್ಪಿಸಿದ ಹಾಗೇ

Ganesha Festival 2025: ಮನೆಗೆ ಗಣೇಶ ಮೂರ್ತಿ ತರುವಾಗ ಈ ತಪ್ಪನ್ನು ಮಾಡಬೇಡಿ, ಮನೆಗೆ ಶ್ರೇಯಸ್ಸಲ್ಲ

ಮುಂದಿನ ಸುದ್ದಿ
Show comments