ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಶನಿವಾರ, 19 ಡಿಸೆಂಬರ್ 2020 (08:53 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 

ಮೇಷ: ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಿರದು. ಆದರೆ ಖರ್ಚು ವೆಚ್ಚಗಳೂ ಮಿತಿ ಮೀರಲಿವೆ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಅವಕಾಶಗಳು ಬಂದಾಗ ಎರಡೂ ಕೈಗಳಿಂದ ಬಾಚಿಕೊಳ್ಳಿ. ದೂರ ಸಂಚಾರಕ್ಕೆ ಸಿದ್ದತೆ ನಡೆಸಲಿದ್ದೀರಿ.

ವೃಷಭ: ಮನೆಯಲ್ಲಿ ಸಂಗಾತಿಯ ದೇಹಾರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ಅಲೆದಾಡುವ ಪರಿಸ್ಥಿತಿ ಎದುರಾಗಲಿದೆ. ವ್ಯವಹಾರದಲ್ಲಿ ವಿಘ್ನ ಭಯ ಕಾಡಲಿದೆ. ಆರ್ಥಿಕವಾಗಿ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಲಿದ್ದೀರಿ. ತಾಳ್ಮೆ ಅಗತ್ಯ.

ಮಿಥುನ: ದೇಹಾರೋಗ್ಯದಲ್ಲಿ ಇದುವರೆಗೆ ಇದ್ದ ಸಮಸ್ಯೆಗಳು ನಿಧಾನವಾಗಿ ಪರಿಹಾರವಾಗಲಿದೆ. ಪ್ರೀತಿ ಪಾತ್ರರನ್ನು ಭೇಟಿಯಾಗುವ ಯೋಗ ಸದ್ಯದಲ್ಲೇ ಕೂಡಿಬರಲಿದೆ.  ಮಾನಸಿಕವಾಗಿ ಹೆಚ್ಚಿನ ಉತ್ಸಾಹ ಕಂಡುಬರಲಿದೆ.

ಕರ್ಕಟಕ: ಕೆಲಸ ಕಾರ್ಯಗಳಲ್ಲಿ ಮುನ್ನಡೆ ತೋರಿಬರುವುದರಿಂದ ವ್ಯವಹಾರದಲ್ಲಿ ಚೇತರಿಕೆ ಕಂಡುಬರುವುದು. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿದೆ. ಪ್ರೀತಿ ಪಾತ್ರರಿಗೆ ಉಡುಗೊರೆ ನೀಡಿ ಸಂತೋಷ ಕೊಡಲಿದ್ದೀರಿ.

ಸಿಂಹ: ಜೀವನದಲ್ಲಿ ಅತ್ಯಂತ ಸಂತೋಷದಾಯಕ ದಿನವೆಂದು ನಿಮಗನಿಸಬಹುದು. ಪ್ರೀತಿ, ಪ್ರೇಮ ವ್ಯವಹಾರದಲ್ಲಿ ಮನೆಯವರ ಒಪ್ಪಿಗೆ ಸಿಗಲಿದೆ. ಕಾರ್ಯಕ್ಷೇತ್ರದಲ್ಲಿ ನೀವು ಅಂದುಕೊಂಡ ಕೆಲಸಗಳು ಸುಗಮವಾಗಿ ನೆರವೇರಲಿದೆ.

ಕನ್ಯಾ: ಉದ್ಯೋಗ ಕ್ಷೇತ್ರದಲ್ಲಿ ನಿರ್ಧಾರಗಳನ್ನು ಕೈಗೊಳ್ಳಲು ಗೊಂದಲ ಕಾಡೀತು. ನಿಮ್ಮ ಮೇಲೆ ನಂಬಿಕೆಯಿಟ್ಟವರ ನಂಬಿಕೆ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಕೊರಗು ಕಾಡೀತು. ಸಂಗಾತಿಯ ಸಾಂತ್ವನ ಸಿಗಲಿದೆ. ಕುಲದೇವರ ಪ್ರಾರ್ಥನೆ ಮಾಡಿ.

ತುಲಾ: ಮಕ್ಕಳ ಉನ್ನತ ವಿದ್ಯಾಭ್ಯಾಸದ ಬಗ್ಗೆ ಪೋಷಕರು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಲಿದೆ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ನಾನಾ ಮೂಲಗಳನ್ನು ಕಂಡುಕೊಳ್ಳಲಿದ್ದೀರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಶ್ಚಿಕ: ಅನಗತ್ಯ ಚಿಂತೆ ಬಿಟ್ಟು ಮಾಡುವ ಕೆಲಸದಲ್ಲಿ ಏಕಾಗ್ರತೆ ವಹಿಸಿದರೆ ಯಶಸ್ಸು ಖಂಡಿತಾ. ನೆರೆಹೊರೆಯವರ ಚಾಡಿ ಮಾತುಗಳಿಗೆ ಕಿವಿಗೊಡಬೇಕಾಗಿಲ್ಲ. ಸನ್ಮಿತ್ರರ ಸಹವಾಸದಿಂದ ಶುಭವಾಗಲಿದೆ. ಹಿರಿಯರಿಗೆ ವಾತ ಸಂಬಂಧೀ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಯಾದೀತು.

ಧನು: ದೇಹಾರೋಗ್ಯದ ಬಗ್ಗೆ ಉಪೇಕ್ಷೆ ಮಾಡಿದರೆ ಮುಂದೆ ತೊಂದರೆ ಅನುಭವಿಸಬೇಕಾದೀತು. ಮಕ್ಕಳ ವಿಚಾರದಲ್ಲಿ ಸಂತಸ ಸಿಗಲಿದೆ. ಮನೆಗೆ ಅನಿರೀಕ್ಷಿತ ಅತಿಥಿಗಳ ಆಗಮನವಾಗಲಿದೆ. ವಿದ್ಯಾರ್ಥಿಗಳಿಗೆ ಮುನ್ನಡೆಯ ಯೋಗವಿದೆ.

ಮಕರ: ನಿಮ್ಮ ಮನಸ್ಸು, ದೇಹ ಎರಡೂ ನಿಮ್ಮ ಸಮತೋಲನದಲ್ಲಿರುವಂತೆ ನೋಡಿಕೊಳ್ಳಿ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಕೃಷಿಕರಿಗೆ ವ್ಯವಹಾರದಲ್ಲಿ ಅಡೆತಡೆಗಳು ಕಂಡುಬಂದೀತು. ಅಪರಿಚಿತರ ಜೊತೆಗೆ ವ್ಯವಹರಿಸುವಾಗ ಎಚ್ಚರಿಕೆಯಿರಲಿ.

ಕುಂಭ: ಮಹಿಳೆಯರಿಗೆ ಪ್ರೀತಿ ಪಾತ್ರರಿಂದ ಅನಿರೀಕ್ಷಿತ ಉಡುಗೊರೆಗಳು ಸಿಗಲಿವೆ. ಸಾಂಸಾರಿಕವಾಗಿ ಹೊಂದಾಣಿಕೆ ಅಗತ್ಯ. ಹಿರಿಯರಿಂದ ಬಂದ ಬಳವಳಿ ಸಂರಕ್ಷಿಸುವ ಹೊಣೆಗಾರಿಕೆ ಹೆಗಲಿಗೇರಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗುವುದು.

ಮೀನ: ಆರ್ಥಿಕವಾಗಿ ಹಣಕಾಸಿನ ಮುಗ್ಗಟ್ಟು ತೋರಿಬರಲಿದ್ದು, ಸಾಲ ಮಾಡುವ ಪರಿಸ್ಥಿತಿ ಎದುರಾದೀತು. ವ್ಯಾಪಾರ, ವ್ಯವಹಾರದಲ್ಲಿ ಏಳಿಗೆಗಾಗಿ ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ಕ್ರಿಯಾತ್ಮಕ ಯೋಚನೆಗಳು ಉಪಯೋಗಕ್ಕೆ ಬರುವುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಹಣಕಾಸಿನ ಸಮಸ್ಯೆ ನಿವಾರಣೆಗೆ ಓದಬೇಕಾದ ಗಣೇಶ ಸ್ತೋತ್ರ

ಮಂಗಳವಾರ ಆಂಜನೇಯನ ಕೃಪೆಗೆ ಹನುಮದಷ್ಟಕಂ ಓದಿ

ಶ್ರೀ ಕಾಲಭೈರವ ಬ್ರಹ್ಮ ಕವಚಂ ಸ್ತೋತ್ರವನ್ನು ತಪ್ಪದೇ ಓದಿ

ಶನಿ ಮಂತ್ರಗಳನ್ನು ಜಪಿಸಲು ಬೆಸ್ಟ್ ಟೈಂ ಯಾವುದು

ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ

ಮುಂದಿನ ಸುದ್ದಿ
Show comments