ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಮಂಗಳವಾರ, 3 ನವೆಂಬರ್ 2020 (09:32 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ದೂರ ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ ಅಗತ್ಯ. ಯೋಗ್ಯ ವಯಸ್ಕರಿಗೆ ವಿವಾಹ ಸಂಬಂಧಗಳು ಕೂಡಿಬರಲಿವೆ. ಉದ್ಯೋಗ ಕ್ಷೇತ್ರದಲ್ಲಿ ಹಗ್ಗದ ಮೇಲಿನ ನಡಿಗೆ ನಿಮ್ಮದಾಗೀತು. ಎಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ.

ವೃಷಭ: ಕಾರ್ಯರಂಗದಲ್ಲಿ ನಿಮ್ಮ ಕೆಲಸಗಳಿಗೆ ಪ್ರಶಂಸೆ ವ್ಯಕ್ತವಾಗಲಿದೆ. ಸ್ನೇಹಿತರೊಂದಿಗೆ ಅತಿಯಾದ ಸಲುಗೆಯೂ ಮನಸ್ತಾಪಕ್ಕೆ ಕಾರಣವಾದೀತು. ಆರ್ಥಿಕವಾಗಿ ಸರಿಯಾದ ಲೆಕ್ಕಾಚಾರವಿದ್ದರೆ ಭವಿಷ್ಯದ ದೃಷ್ಟಿಯಿಂದ ಉತ್ತಮ.

ಮಿಥುನ: ಎಲ್ಲಾ ವಿಚಾರದಲ್ಲೂ ದೂರದೃಷ್ಟಿಯಿಂದ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಂಡರೆ ಮುಂದೆ ನಿಮಗೆ ಒಳ್ಳೆಯದಾಗಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವಿದೆ. ಶೈಕ್ಷಣಿಕ ರಂಗದಲ್ಲಿ ಸಾಧನೆ ಮಾಡಲಿದ್ದೀರಿ.

ಕರ್ಕಟಕ: ಕುಲದೇವರ ಪ್ರಾರ್ಥನೆಯೊಂದಿಗೆ ಇಂದಿನ ದಿನದಾರಂಭ ಮಾಡಿದರೆ ಎಲ್ಲವೂ ನೀವಂದುಕೊಂಡಂತೇ ನಡೆಯಲಿದೆ. ಮಹಿಳೆಯರಿಗೆ ಚಿನ್ನಾಭರಣ ಖರೀದಿ ಯೋಗವಿದೆ. ದಾಯಾದಿ ಕಲಹಗಳು ಮನಸ್ಸಿಗೆ ಕಿರಿ ಕಿರಿಯಾದೀತು.

ಸಿಂಹ: ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ. ಯೋಗ್ಯ ವಯಸ್ಕರಿಗೆ ಸೂಕ್ತ ವೈವಾಹಿಕ ಸಂಬಂಧಕ್ಕಾಗಿ ಕಾಯಬೇಕಾಗುತ್ತದೆ. ಅಧಿಕಾರಿ ವರ್ಗದವರೊಡನೆ ಮನಸ್ತಾಪವಾಗದಂತೆ ಎಚ್ಚರಿಕೆ ವಹಿಸಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಕನ್ಯಾ: ನಿಮ್ಮ ದುಃಖ ದುಮ್ಮಾನಗಳಿಗೆ ಸಂಗಾತಿಯ ಸಾಂತ್ವನ ಸಿಗುವುದು. ಮಕ್ಕಳ ದೇಹಾರೋಗ್ಯದಲ್ಲಿ ಕೊಂಚ ಸುಧಾರಣೆಯಾಗಲಿದೆ. ಆರ್ಥಿಕವಾಗಿ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕುವುದು ಒಳಿತು. ಕಿರು ಓಡಾಟ ನಡೆಸುವಿರಿ.

ತುಲಾ: ಆಪ್ತ ಮಿತ್ರರೊಂದಿಗೆ ಕಲಹವಾಗದಂತೆ ಎಚ್ಚರಿಕೆ ವಹಿಸಿ. ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆಗೆ ಮನಸ್ಸು ಬಯಸುವುದು. ಗೃಹ ಸಂಬಂಧೀ ಕೆಲಸಗಳಿಗಾಗಿ ಓಡಾಟ ನಡೆಸುವಿರಿ. ಹಿರಿಯರಿಗೆ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.

ವೃಶ್ಚಿಕ: ಬೇರೆಯವರು ನಿಮ್ಮ ಬಗ್ಗೆ ಏನಂದುಕೊಳ್ಳುವರೋ ಎಂಬ ಹಿಂಜರಿಕೆ ಬೇಡ. ಮನಸ್ಸಿಗೆ ಅನಿಸಿದ್ದನ್ನು ಮಾಡಿದರೆ ಯಶಸ್ಸು ಸಿಗಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ವಿದ್ಯಾರ್ಥಿಗಳಿಗೆ ಮುನ್ನಡೆಯಿರಲಿದೆ.

ಧನು: ಅಂದುಕೊಂಡ ಕೆಲಸಗಳು ಆಗದೇ ಮನಸ್ಸಿಗೆ ಒಂದು ರೀತಿಯ ಕಿರಿ ಕಿರಿಯಾಗಲಿದೆ. ಆರೋಗ್ಯದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳಿದ್ದೇ ಇರುತ್ತದೆ. ಮಕ್ಕಳ ವಿಚಾರವಾಗಿ ಹೊಸ ನಿರ್ಧಾರ ಕೈಗೊಳ್ಳುವಿರಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ.

ಮಕರ: ವೃತ್ತಿರಂಗದಲ್ಲಿ ಹೊಸ ಉತ್ಸಾಹದಲ್ಲಿ ಕೆಲಸ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ. ಉಳಿತಾಯ ಮಾಡುವ ಯೋಜನೆಗಳ ಬಗ್ಗೆ ಚಿಂತನೆ ನಡೆಸುವಿರಿ. ಮನೆಯಲ್ಲಿ ಶುಭ ಮಂಗಲ ಕಾರ್ಯ ನಡೆಸಲು ಸಿದ್ಧತೆ ನಡೆಸುವಿರಿ.

ಕುಂಭ: ಆದಾಯ ವೃದ್ಧಿಗಾಗಿ ನಾನಾ ದಾರಿಗಳನ್ನು ಹುಡುಕಾಡಲಿದ್ದೀರಿ. ಸಂಗಾತಿಯ ದೇಹಾರೋಗ್ಯ ಹೊಸ ತಲೆನೋವು ನೀಡಲಿದೆ. ಸರಕಾರಿ ಕೆಲಸಗಾರರಿಗೆ ಕೆಲಸದೊತ್ತಡ ತಪ್ಪದು. ತಾಳ್ಮೆ, ಸಂಯಮದಿಂದ ನಿಭಾಯಿಸಿ. ದೇವತಾ ಪ್ರಾರ್ಥನೆ ಮಾಡಿ.

ಮೀನ: ಹೊಸ ಮಿತ್ರರ ಸಂಪಾದನೆ ಮಾಡಲಿದ್ದೀರಿ. ಮನಸ್ಸಿಗೆ ಬಯಸಿದ ವ್ಯಕ್ತಿಗಳ ಭೇಟಿಯಾಗುವ ಯೋಗವಿದೆ. ಉದರ ಸಂಬಂಧೀ ಸಣ್ಣ ಆರೋಗ್ಯ ಸಮಸ್ಯೆ ಕಾಡೀತು. ಚಿಂತೆ ಬೇಡ. ಅನಿರೀಕ್ಷಿತವಾಗಿ ಧನ ಸಂಪಾದನೆಯಾಗುವುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

2026 ರಲ್ಲಿ ಯಾವ ರಾಶಿಯವರು ಯಾವ ದೇವರ ಪ್ರಾರ್ಥನೆ ಮಾಡಬೇಕು ಗಮನಿಸಿ

ಗಣೇಶ ಕವಚ ಸ್ತೋತ್ರವನ್ನು ಮಕ್ಕಳಿಗೆ ಹೇಳಿಸಿ

ಈ ಐದು ರಾಶಿಯವರಿಗೆ 2026 ರಲ್ಲಿ ಸ್ವಂತ ಮನೆ ಕನಸು ನನಸಾಗುತ್ತದೆ

ಮಂಗಳವಾರ ದೇವಿಯ ಅನುಗ್ರಹಕ್ಕಾಗಿ ನವರತ್ನ ಮಾಲಿಕಾ ಸ್ತೋತ್ರ

ಶಿವ ಪಂಚಾಕ್ಷರಿ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಮುಂದಿನ ಸುದ್ದಿ
Show comments