ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಭಾನುವಾರ, 23 ಆಗಸ್ಟ್ 2020 (08:41 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಮೇಲಧಿಕಾರಿಗಳ ಕಿರಿ ಕಿರಿಯಿಂದ ಮನಸ್ಸಿಗೆ ಬೇಸರವಾಗಲಿದೆ. ಉದ್ಯೋಗ ಬದಲಾವಣೆಗೆ ಮನಸ್ಸು ಬಯಸುವುದು. ಕ್ರಿಯಾತ್ಮಕ ಕೆಲಸಗಳಿಗೆ ಚಾಲನೆ ನೀಡಿ. ಮಹಿಳೆಯರಿಗೆ ಅಪವಾದದ ಭೀತಿಯಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ.

ವೃಷಭ: ಹಿರಿಯರಿಗೆ ದೇವಾಲಯ ಸಂದರ್ಶನ ಯೋಗವಿದೆ. ಸರಕಾರಿ ಲೆಕ್ಕಪತ್ರಗಳನ್ನು ಸಂರಕ್ಷಿಸುವ ಹೊಣೆಗಾರಿಕೆ ನಿಮ್ಮ ಮೇಲಿರಲಿದೆ. ಅನಿರೀಕ್ಷಿತವಾಗಿ ಧನಲಾಭವಾಗಲಿದೆ. ದೇವತಾ ಕಾರ್ಯಗಳಿಗೆ ಚಾಲನೆ ನೀಡಲಿದ್ದೀರಿ. ವಿನಾಕಾರಣ ಖರ್ಚು ವೆಚ್ಚ ಮಾಡಬೇಡಿ.

ಮಿಥುನ: ದಾಯಾದಿಗಳೊಂದಿಗೆ ನಿಮ್ಮ ಕಲಹಕ್ಕೆ ಹಿರಿಯರ ಮಧ್ಯಸ್ಥಿಕೆಯಿಂದ ಪರಿಹಾರ ಸಿಗಲಿದೆ. ಶುಭ ಮಂಗಲ ಕಾರ್ಯ ನೆರವೇರಲಿದ್ದು, ಮನಸ್ಸಯಲ್ಲಿ ಬಂಧು ಮಿತ್ರರ ಆಗಮನದಿಂದ ಸಂತಸದ ವಾತಾವರಣವಿರಲಿದೆ.  ವಿದ್ಯಾರ್ಥಿಗಳಿಗೆ ಮುನ್ನಡೆಯಿರಲಿದೆ.

ಕರ್ಕಟಕ: ಅನುವಂಶಿಕ ಖಾಯಿಲೆಗಳು ಮತ್ತೆ ಮರುಕಳಿಸಲಿವೆ. ಧಾರ್ಮಿಕ ಕಾರ್ಯಗಳಿಗೆ ಧನವಿನಿಯೋಗ ಮಾಡಲಿದ್ದೀರಿ. ಅವಿವಾಹಿತರಿಗೆ ಶೀ‍‍ಘ್ರ ಕಂಕಣ ಬಲ ಕೂಡಿಬರಲಿದೆ. ಇಷ್ಟಮಿತ್ರರ ಭೇಟಿಯೋಗವಿದೆ. ನಿರುದ್ಯೋಗಿಗಳು ಸ್ವಯಂ ಉದ್ಯೋಗದ ಕಡೆಗೆ ಗಮನ ಹರಿಸಲಿದ್ದಾರೆ.

ಸಿಂಹ: ನೂತನ ದಂಪತಿಗಳಿಗೆ ಸಂತಾನ ಫಲ ಭಾಗ್ಯವಿದೆ. ಕೌಟುಂಬಿಕವಾಗಿ ಸುಮಧುರ ಕ್ಷಣಗಳನ್ನು ಕಳೆಯಲಿದ್ದೀರಿ. ನಾಲಿಗೆ ಚಪಲಕ್ಕೆ ಕಡಿವಾಣ ಹಾಕದೇ ಇದ್ದರೆ ಆರೋಗ್ಯ ಸಮಸ್ಯೆಗಳಾದೀತು. ಕಠಿಣಪರಿಶ್ರಮ ಪಟ್ಟರೆ ತಕ್ಕ ಫಲ ಸಿಕ್ಕೀತು.

ಕನ್ಯಾ: ಸರ್ಕಾರಿ ಅಧಿಕಾರಿಗಳಿಗೆ ಉತ್ತಮ ಆದಾಯ ಗಳಿಕೆಯಾಗಲಿದೆ. ಕೆಟ್ಟ ಸ್ನೇಹ ಸಂಗದಿಂದ ದೂರವಿರುವುದೇ ಉತ್ತಮ. ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ. ಮಕ್ಕಳ ಭವಿಷ್ಯಕ್ಕಾಗಿ ಯೋಜನೆ ರೂಪಿಸಲಿದ್ದೀರಿ. ಮಹಿಳೆಯರಿಗೆ ಬಿಡುವಿಲ್ಲದ ಕೆಲಸದಿಂದ ದೇಹಾಯಾಸವಾಗಬಹುದು.

ತುಲಾ: ಬಂಧು ವರ್ಗದವರ ಜತೆಗೂಡಿ ಶುಭ ಮಂಗಲ ಕಾರ್ಯದಲ್ಲಿ ಸಂಭ್ರಮಿಸಲಿದ್ದೀರಿ. ವಾಸಸ್ಥಳ ಬದಲಾವಣೆಗೆ ಚಿಂತನೆ ನಡೆಸಲಿದ್ದೀರಿ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗಾವಕಾಶಗಳು ಒದಗಿ ಬರಲಿವೆ.

ವೃಶ್ಚಿಕ: ಪೋಷಕರಿಗೆ ಮಕ್ಕಳ ವಿದ್ಯಾಭ‍್ಯಾಸದ ಬಗ್ಗೆ ಚಿಂತೆ ಕಾಡಲಿದೆ. ಹಿರಿಯರ ಮನಸ್ಸಿಗೆ ನೋವುಂಟು ಮಾಡದಂತೆ ನೋಡಿಕೊಳ್ಳಿ. ದೇಹಾರೋಗ್ಯದ ಬಗ್ಗೆ ಉಪೇಕ್ಷೆ ಬೇಡ. ಉದರ ಸಂಬಂಧೀ ಆರೋಗ್ಯ ಸಮಸ್ಯೆ ಕಂಡುಬಂದೀತು. ಎಚ್ಚರಿಕೆ ಅಗತ್ಯ.

ಧನು: ವೃತ್ತಿರಂಗದಲ್ಲಿ ಎಲ್ಲವೂ ನಿಮ್ಮ ಅನುಕೂಲಕ್ಕೆ ತಕ್ಕಂತೆ ನಡೆಯುವುದರಿಂದ ಚಿಂತೆ ಬೇಡ. ವಿದ್ಯಾರ್ಥಿಗಳಿಗೆ ಏಕಾಗ್ರತತೆಯ ಕೊರತೆ ಉಂಟಾಗಲಿದೆ. ಆರ್ಥಿಕವಾಗಿ ಹಣಕಾಸಿನ ಖರ್ಚು ವೆಚ್ಚಗಳ ಬಗ್ಗೆ ಎಚ್ಚರಿಕೆ ವಹಿಸಿ. ಚಿಂತೆ ಬೇಡ.

ಮಕರ: ಮನಸ್ಸಿನಲ್ಲಿ ಅಂದುಕೊಂಡ ಕಾರ್ಯಗಳನ್ನು ಕಾರ್ಯಗತಗೊಳಿಸಲು ಇದು ಸಕಾಲ. ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಆದರೆ ಮಾತಿನ ಮೇಲೆ ನಿಗಾ ಇರಲಿ. ನೂತನ ದಂಪತಿಗಳು ದೇವಾಲಯ ಸಂದರ್ಶನ ಮಾಡಲಿದ್ದಾರೆ.

ಕುಂಭ: ಮಹಿಳೆಯರಿಗೆ ಬಿಡುವಿಲ್ಲದ ಕೆಲಸದಿಂದ ದೈಹಿಕ, ಮಾನಸಿಕ ಶ್ರಮ ತಪ್ಪದು. ಆದರೆ ನಿಮ್ಮ ವರ್ತನೆ, ಮಾತಿನ ಮೇಲೆ ತಾಳ್ಮೆಯಿಲ್ಲದೇ ಹೋದರೆ ಇತರರ ಮನಸ್ಸಿಗೆ ಬೇಸರವಾದೀತು. ಮಕ್ಕಳ ಆರೋಗ್ಯ ಚಿಂತೆಗೆ ಕಾರಣವಾದೀತು. ದೇವತಾ ಪ್ರಾರ್ಥನೆ ಮಾಡಿ.

ಮೀನ: ಇಷ್ಟ ಮಿತ್ರರೊಂದಿಗೆ ಪ್ರವಾಸ ಮಾಡಲಿದ್ದೀರಿ. ಮನಸ್ಸಿಗೆ ಖುಷಿ ಕೊಡುವ ಕೆಲಸ ಮಾಡುವುದರಿಂದ ನೆಮ್ಮದಿ ಪಡೆಯುವಿರಿ. ಮಹಿಳೆಯರಿಗೆ ಉಡುಗೊರೆಗಳು ಸಿಗಲಿವೆ. ಕಿರು ಓಡಾಟ ನಡೆಸಬೇಕಾಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಈ ಮಂತ್ರವನ್ನು ಹೇಳಿಕೊಂಡು ಇಂದು ಶಿವನ ಪೂಜೆ ಮಾಡಿ

ಆಪದುದ್ದಾರಕ ಹನುಮತ್ ಸ್ತೋತ್ರ ಕನ್ನಡದಲ್ಲಿ

ಹಣಕಾಸಿನ ಸಮಸ್ಯೆ ನಿವಾರಣೆಗೆ ಈ ಲಕ್ಷ್ಮೀ ಸ್ತೋತ್ರ ಓದಿ

ಮಹಾವಿಷ್ಣುವಿನ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments