Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಭಾನುವಾರ, 12 ಜುಲೈ 2020 (08:59 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಸಾಂಸಾರಿಕವಾಗಿ ಹೊಂದಾಣಿಕೆ ಅಗತ್ಯ. ಸಂಗಾತಿಯ ಆರೋಗ್ಯದಲ್ಲಿ ಏರುಪೇರಾದೀತು, ಕಾಳಜಿ ವಹಿಸಿ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ರಂಗದಲ್ಲಿ ಪ್ರಗತಿ ಸಾಧಿಸುವ ಯೋಗ ಎದುರಾಗಲಿದೆ. ವ್ಯಾಪಾರ, ವ್ಯವಹಾರಗಳಲ್ಲಿ ಮುನ್ನಡೆಯಿರಲಿದೆ.

ವೃಷಭ: ಬಂಧು ಮಿತ್ರರ ಭೇಟಿಯಾಗಲಿದ್ದು, ಮನೆಯಲ್ಲಿ ಸಂಭ್ರಮದ ವಾತಾವರಣವಿರಲಿದೆ. ವಾಹನ ಖರೀದಿ ಯೋಗವಿರಲಿದೆ.  ಮನೆಯಲ್ಲಿ ಕಳ್ಳತನದ ಭೀತಿಯಿದೆ. ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ದೇವತಾ ಪ್ರಾರ್ಥನೆ ಮಾಡಿ.

ಮಿಥುನ: ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬಂದರೂ ಸ್ವಲ್ಪದರಲ್ಲೇ ಕೈ ತಪ್ಪಿ ಬೇಸರವಾಗಬಹುದು. ವ್ಯಾಪಾರ, ವ್ಯವಹಾರದಲ್ಲಿ ನಷ್ಟದ ಭೀತಿ ಎದುರಾಗಲಿದೆ. ವಾಹನ ಸವಾರರು ಚಾಲನೆಯಲ್ಲಿ ಎಚ್ಚರದಿಂದಿರಬೇಕು. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ.

ಕರ್ಕಟಕ: ಕುಟುಂಬ ಸದಸ್ಯರೊಬ್ಬರ ಅನಾರೋಗ್ಯ ಚಿಂತೆಗೆ ಕಾರಣವಾಗಬಹುದು. ಉದ್ಯೋಗ ಕ್ಷೇತ್ರದಲ್ಲಿ ಸ್ಥಾನ ಪಲ್ಲಟ ಭೀತಿ ಎದುರಾಗಲಿದೆ. ಪ್ರೀತಿ ಪಾತ್ರರೊಂದಿಗೆ ದುಃಖ ಹಂಚಿಕೊಳ್ಳಲಿದ್ದೀರಿ.  ಶುಭ ಮಂಗಲ ಕಾರ್ಯ ನೆರವೇರಿಸಲು ಚಿಂತನೆ ನಡೆಸಲಿದ್ದೀರಿ.

ಸಿಂಹ: ಕಲಾ ಕ್ಷೇತ್ರದಲ್ಲಿರುವವರಿಗೆ ಕೀರ್ತಿ ಸಂಪಾದಿಸುವ ಯೋಗವಿದೆ. ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನ ವೃದ್ಧಿಯಾಗಲಿದೆ. ಕೌಟುಂಬಿಕವಾಗಿ ಅನಿರೀಕ್ಷಿತ ಖರ್ಚುಗಳಿಗೆ ಸಿದ್ಧರಾಗಬೇಕಾಗುತ್ತದೆ. ದೇಹಾರೋಗ್ಯದ ಬಗ್ಗೆ ಕಾಳಜಿವಹಿಸಿ.

ಕನ್ಯಾ: ನಾನಾ ರೀತಿಯ ಕೆಲಸ ಕಾರ್ಯಗಳಿಗೆ ಕೈ ಹಾಕಲಿದ್ದೀರಿ. ಕ್ರಿಯಾತ್ಮಕ ಚಟುವಟಿಕೆಗಳಿಂದ ಮನಸ್ಸಿಗೆ ಸಂತಸವಾಗಲಿದೆ. ಮಕ್ಕಳೊಂದಿಗೆ ಸಂತೋಷದ ಕ್ಷಣ ಕಳೆಯುವಿರಿ. ನೂತನ ದಂಪತಿಗಳಿಗೆ ಸಂತೋಷದ ವಾರ್ತೆ ಸಿಗಲಿದೆ.

ತುಲಾ: ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗಕ್ಕೆ ಸಂದರ್ಶನ ಕರೆ ಬಾರದೇ ನಿರಾಸೆಯಾಗಬಹುದು. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮಪಡಬೇಕಾದ ಅನಿವಾರ್ಯತೆಯಿದೆ. ಸಾಂಸಾರಿಕವಾಗಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಸರಿದೂಗಿಸಿಕೊಂಡು ಹೋಗಬೇಕಾಗುತ್ತದೆ.

ವೃಶ್ಚಿಕ: ಅಂದುಕೊಂಡ ಕೆಲಸ ಕಾರ್ಯಗಳನ್ನು ಪೂರೈಸುವ ಹಾದಿಯಲ್ಲಿ ಅಡೆತಡೆಗಳು ಸಾಮಾನ್ಯ. ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗಬೇಕಾದ ಅನಿವಾರ್ಯತೆಯಿದೆ. ಅವಸರದ ತೀರ್ಮಾನ ಕೈಗೊಳ್ಳಲು ಹೋಗಬೇಡಿ. ತಾಳ್ಮೆಯಿಂದಿರಿ.

ಧನು: ಅತಿಯಾದ ಮಾತುಕತೆಯೂ ಕೆಲವರಿಗೆ ಇಷ್ಟವಾಗದೇ ಹೋಗಬಹುದು. ಹೀಗಾಗಿ ಮಿತವಾದ ಮಾತನಾಡಿ ಮನಸ್ಸು ಗೆಲ್ಲುವ ಪ್ರಯತ್ನ ಮಾಡಿ. ಹಿರಿಯರಿಗೆ ಧಾರ್ಮಿಕ ಕ್ಷೇತ್ರಗಳ ಸಂದರ್ಶನ ಯೋಗವಿದೆ. ಶುಭ ಕಾರ್ಯಗಳು ಸಾಂಗವಾಗಿ ನೆರವೇರಲಿದೆ.

ಮಕರ: ಎಷ್ಟೋ ದಿನದಿಂದ ಕೂಡಿಟ್ಟುಕೊಂಡಿದ್ದ ಸಂಪತ್ತು ಕಳೆದುಕೊಂಡ ಭೀತಿ ಎದುರಾಗಲಿದೆ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿದೆ. ಸ್ವಜನರಿಂದಲೇ ವಂಚನೆಗೊಳಗಾಗುವ ಭೀತಿಯಿದ್ದು, ಯಾರನ್ನೂ ನಂಬದ ಸ್ಥಿತಿಯಿರಲಿದೆ. ಎಚ್ಚರಿಕೆಯಿಂದ ಹೆಜ್ಜೆಯಿಡಿ.

ಕುಂಭ: ಅತಿಯಾಗಿ ಇನ್ನೊಬ್ಬರ ಮೇಲೆ ಅವಲಂಬನೆ ಮಾಡುವುದರಿಂದ ತೊಂದರೆಗೆ ಸಿಲುಕಿಕೊಳ್ಳಲಿದ್ದೀರಿ. ಸರಕಾರಿ ಲೆಕ್ಕ ಪತ್ರಗಳ ಬಗ್ಗೆ ಜಾಗರೂಕತೆ ಅಗತ್ಯ. ಯಂತ್ರೋಪಕರಣಗಳ ವೃತ್ತಿಯಲ್ಲಿರುವವರಿಗೆ ಹಿನ್ನಡೆಯಾದೀತು. ಖರ್ಚು ವೆಚ್ಚಗಳ ಬಗ್ಗೆ ನಿಗಾ ಇರಲಿ.

ಮೀನ: ದೂರ ಪ್ರಯಾಣಕ್ಕೆ ಸಿದ್ಧತೆ ನಡೆಸಲಿದ್ದೀರಿ. ಮನೋಕಾಮನೆಗಳು ಪೂರ್ತಿಯಾಗಲಿವೆ. ಧರ್ಮ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಕಾರ್ಯಕ್ಷೇತ್ರದಲ್ಲಿ ಅಡಚಣೆಗಳು ಬಂದರೂ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಕುಲದೇವರ ಪ್ರಾರ್ಥನೆಯಿಂದ ನೆಮ್ಮದಿ ಸಿಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Devi Mantra: ಮನೆಯಲ್ಲಿರುವ ಅವಿವಾಹಿತ ಕನ್ಯಾಮಣಿಗಳು ತಪ್ಪದೇ ಈ ಸ್ತೋತ್ರ ಓದಿ

Ardanaristaka Stothram: ವಿವಾಹಾದಿ ಸಮಸ್ಯೆಗಳಿಗೆ ಅರ್ಧನಾರೀಶ್ವರಾಷ್ಟಕಂ ಸ್ತೋತ್ರ ಓದಿ

Gayatri Mantra: ಗಾಯತ್ರಿ ಅಷ್ಟೋತ್ತರ ಶತನಾಮಾವಳಿ ಕನ್ನಡದಲ್ಲಿ ಇಲ್ಲಿದೆ

Shani Mantra: ಶನಿ ಕವಚ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ಇಂದು ತಪ್ಪದೇ ಓದಿ

Lucky number: ಹುಟ್ಟಿದ ದಿನಾಂಕಕ್ಕೆ ಅನುಸಾರವಾಗಿ ನಿಮ್ಮ ಅದೃಷ್ಟ ಸಂಖ್ಯೆ ಲೆಕ್ಕ ಹಾಕುವುದು ಹೇಗೆ ನೋಡಿ

ಮುಂದಿನ ಸುದ್ದಿ
Show comments