Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಮಂಗಳವಾರ, 30 ಜೂನ್ 2020 (08:53 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಉದ್ಯೋಗ ಕ್ಷೇತ್ರದಲ್ಲಿ ಒಂದು ಸಮಸ್ಯೆ ತೀರಿತು ಎಂದುಕೊಳ್ಳುವಾಗ ಹೊಸ ಸಮಸ್ಯೆಗಳು ಎದುರಾಗಿ ತಲೆನೋವು ತರಲಿದೆ. ಸಂಗಾತಿಯೊಂದಿಗೆ ತಾಳ್ಮೆಯಿಂದ ನಡೆದುಕೊಳ್ಳಿ. ಮಕ್ಕಳ ಭವಿಷ್ಯಕ್ಕಾಗಿ ಯೋಜನೆ ರೂಪಿಸಲಿದ್ದೀರಿ. ದೇವತಾ ಪ್ರಾರ್ಥನೆ ಮಾಡಿ.

ವೃಷಭ: ವಿದ್ಯಾರ್ಥಿಗಳಲ್ಲಿ ಉತ್ಸಾಹದ ಕೊರತೆ ಕಂಡುಬರಲಿದೆ. ಅನಿವಾರ್ಯವಾಗಿ ದೂರ ಸಂಚಾರ ಮಾಡಬೇಕಾಗುತ್ತದೆ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗೆ ಸಿದ್ಧತೆ ನಡೆಸಲಿದ್ದೀರಿ. ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ. ಹಿರಿಯರ ಮಾತಿಗೆ ಕಿವಿಗೊಡಿ.

ಮಿಥುನ: ಆರ್ಥಿಕವಾಗಿ ಖರ್ಚು ವೆಚ್ಚಗಳಾಗಲಿದ್ದು, ಹೊಸ ಯೋಜನೆಗೆ ಕೈ ಹಾಕಲಿದ್ದೀರಿ. ದಾಯಾದಿಗಳೊಂದಿಗೆ ಎಚ್ಚರಿಕೆಯಿಂದ ವ್ಯವಹರಿಸಿ. ವಿನಾಕಾರಣ ಮಾತು, ವಿವಾದ ಬೇಡ. ವೃತ್ತಿರಂಗದಲ್ಲಿ ನಿಮ್ಮ ಬಗ್ಗೆ ಇದ್ದ ತಪ್ಪು ಅಭಿಪ್ರಾಯಗಳು ದೂರವಾಗಲಿದೆ.

ಕರ್ಕಟಕ: ನಿರುದ್ಯೋಗಿಗಳಿಗೆ ದೂರ ಸಂಚಾರದಿಂದ ಕಾರ್ಯಸಿದ್ಧಿಯಾಗಲಿದೆ. ಹಿರಿಯರಿಗೆ ಸಂತೋಷದಾಯಕ ವಾರ್ತೆ ಕೇಳುವ ಯೋಗವಿದೆ. ವಿದ್ಯಾರ್ಥಿಗಳಿಗೆ ಮುನ್ನಡೆ ತೋರಿಬರುವುದು. ಸರಕಾರಿ ಕೆಲಸಗಳಿಗಾಗಿ ಓಡಾಟ ನಡೆಸಬೇಕಾಗಬಹುದು.

ಸಿಂಹ: ವಿದ್ಯಾರ್ಥಿಗಳು ಬಯಸಿದ ಫಲಿತಾಂಶ ಪಡೆಯಲಿದ್ದು, ಪೋಷಕರ ಮೆಚ್ಚುಗೆಗೆ ಪಾತ್ರರಾಗಲಿದ್ದಾರೆ. ಮಿತ್ರರ ಸಹಕಾರದಿಂದ ನೀವು ಅಂದುಕೊಂಡಿದ್ದ ಕೆಲಸ ನೆರವೇರಲಿದೆ. ವ್ಯಾಪಾರ, ವ್ಯವಹಾರಗಳಲ್ಲಿ ಅಭಿವೃದ್ಧಿ ಕಂಡುಬರಲಿದೆ. ಚಿಂತೆ ಬೇಡ.

ಕನ್ಯಾ: ಹಿಂದೆ ಬಂಡವಾಳ ಹೂಡಿಕೆ ಮಾಡಿದ್ದಕ್ಕೆ ಇಂದು ಫಲ ಪಡೆಯಲಿದ್ದೀರಿ. ಸರಕಾರಿ ಲೆಕ್ಕಪತ್ರಗಳನ್ನು ಎಚ್ಚರಿಕೆಯಿಂದ ಸಂರಕ್ಷಿಸಿ. ಕೌಟುಂಬಿಕವಾಗಿ ಅನಿರೀಕ್ಷಿತ ಅತಿಥಿಗಳ ಆಗಮನವಾಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವ ಯೋಗವಿದೆ.

ತುಲಾ: ಸಾಂಸಾರಿಕವಾಗಿ ಹೊಂದಾಣಿಕೆ ಮನೋಭಾವವಿದ್ದರೆ ಸಮಸ್ಯೆಗಳು ಸರಿಹೋಗಲಿವೆ. ಎಲ್ಲವನ್ನೂ ಸಮಚಿತ್ತದಿಂದ ಸರಿದೂಗಿಸಿಕೊಂಡು ಹೋಗುವ ತಾಳ್ಮೆ ಬೇಕು. ವಿದ್ಯಾರ್ಥಿಗಳಿಗೆ ಮುನ್ನಡೆಯಿರಲಿದೆ. ವ್ಯಾಪಾರಿಗಳಿಗೆ ಲಾಭವಿಲ್ಲದಿದ್ದರೂ ನಷ್ಟವಾಗದು.

ವೃಶ್ಚಿಕ: ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗ ಸಿಗದೇ ನಿರಾಶೆಯಾಗಬಹುದು. ನಿರ್ಧಾರ ಕೈಗೊಳ್ಳುವಾಗ ಗೊಂದಲ ಕಾಡಬಹುದು. ಸಂಗಾತಿಯ ಸಲಹೆಗಳನ್ನು ಪಾಲಿಸಿ. ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಯೋಜನೆ ಹಾಕಿಕೊಳ್ಳಲಿದ್ದೀರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಧನು: ಯೋಗ್ಯ ವಯಸ್ಕರು ಶೀಘ್ರದಲ್ಲೇ ವೈವಾಹಿಕ ಸಂಬಂಧ ಕಂಡುಕೊಳ್ಳಲಿದ್ದಾರೆ. ನೂತನ ದಂಪತಿಗಳಿಗೆ ಹೊಂದಾಣಿಕೆ ಕೊರತೆ ಕಂಡುಬರಬಹುದು. ಹಿರಿಯರ ಸಲಹೆಗಳನ್ನು ಪಾಲಿಸಿ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ದೇವತಾ ಪ್ರಾರ್ಥನೆ ಮಾಡಿ.

ಮಕರ: ಇಷ್ಟು ದಿನ ಕಠಿಣವೆನಿಸಿದ್ದ ಕಾರ್ಯಗಳು ಇಂದು ಅನಿರೀಕ್ಷಿತ ರೀತಿಯಲ್ಲಿ ನಡೆದುಹೋಗಲಿವೆ. ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಮುನ್ನಡೆ ಪಡೆಯಲಿದ್ದೀರಿ. ಗೃಹ ಸಂಬಂಧೀ ವಸ್ತುಗಳ ಖರೀದಿಗೆ ಖರ್ಚು ವೆಚ್ಚ ಮಾಡಲಿದ್ದೀರಿ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.

ಕುಂಭ: ವೃತ್ತಿರಂಗದಲ್ಲಿ ಹಲವಾರು ಸಮಸ್ಯೆಗಳು ನಿಮ್ಮ ಮುಂದೆ ಎದುರಾದೀತು. ಸಹೋದ್ಯೋಗಿಗಳ ನೆರವು ಪಡೆಯಲಿದ್ದೀರಿ. ಎಷ್ಟೇ ಅಡೆತಡೆಯಿದ್ದರೂ ಕೆಲಸ ಕಾರ್ಯಗಳಲ್ಲಿ ಅಂತಿಮ ಜಯ ನಿಮ್ಮದಾಗಲಿದೆ. ಖರ್ಚು ವೆಚ್ಚಗಳ ಮೇಲೆ ನಿಗಾ ಇರಲಿ.

ಮೀನ: ಮಾನಸಿಕವಾಗಿ ಋಣಾತ್ಮಕ ಚಿಂತೆಗಳು ನಿಮ್ಮನ್ನು ಕಾಡಲಿದ್ದು ಕೆಲಸದಲ್ಲಿ ನಿರುತ್ಸಾಹ ಕಂಡುಬರಬಹುದು. ಬೇಡದ ವಿಚಾರಗಳಲ್ಲಿ ಮೂಗು ತೂರಿಸಲು ಹೋಗಬೇಡಿ. ಮಹಿಳೆಯರಿಗೆ ಆಕಸ್ಮಿಕ ಧನಲಾಭವಾಗಲಿದೆ. ಶುಭ ಮಂಗಲ ಕಾರ್ಯಗಳು ಅರ್ಧಕ್ಕೇ ನಿಲ್ಲಿಸಬೇಕಾಗಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Krishna Mantra: ಶ್ರೀಕೃಷ್ಣಾಷ್ಟಕಂ ಪ್ರತಿನಿತ್ಯ ಓದಿ: ಕನ್ನಡದಲ್ಲಿ ಇಲ್ಲಿದೆ

Lakshmi Mantra: ಹಣಕಾಸಿನ ಸಮಸ್ಯೆಯಿದ್ದರೆ ತಪ್ಪದೇ ಈ ಮಂತ್ರ ಓದಿ

Durga Mantra: ದುರ್ಗಾ ಚಾಲೀಸ ಮಂತ್ರ ಕನ್ನಡದಲ್ಲಿ ಇಲ್ಲಿದೆ ನೋಡಿ

Shiva Mantra: ಶಿವನ ದ್ವಾದಶ ಲಿಂಗ ಸ್ತೋತ್ರ ತಪ್ಪದೇ ಇಂದು ಓದಿ

Shani chalisa: ಶನಿ ಚಾಲೀಸಾ ಕನ್ನಡದಲ್ಲಿ ಇಲ್ಲಿದೆ, ಇಂದು ತಪ್ಪದೇ ಓದಿ

ಮುಂದಿನ ಸುದ್ದಿ
Show comments