ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಮಂಗಳವಾರ, 26 ಮೇ 2020 (09:01 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಹೊಸ ಕೆಲಸಗಳಿಗೆ ಈಗ ಕೈಹಾಕುವುದರಿಂದ ಕೈ ಸುಟ್ಟುಕೊಳ್ಳಬೇಕಾದೀತು. ಒಳ್ಳೆಯ ದಿನಕ್ಕೆ ಕೆಲವು ದಿನ ಕಾಯುವುದು ಒಳಿತು. ದೇಹಾರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಿ. ಮಾನಸಿಕ ಉದ್ವೇಗದಿಂದ ಸಂಬಂಧ ಹಾಳು ಮಾಡಿಕೊಳ್ಳಬೇಡಿ.

ವೃಷಭ: ವೈಯಕ್ತಿಕ ಆರೋಗ್ಯದಲ್ಲಿ ಚೇತರಿಕೆ ಕಂಡುಬರುವುದು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ. ಕೃಷಿಕರಿಗೆ ವ್ಯವಹಾರದಲ್ಲಿ ಚೇತರಿಕೆ ಕಂಡುಬರಲಿದೆ. ಕುಲದೇವರ ಪ್ರಾರ್ಥನೆ ಮಾಡಿದರೆ ಶುಭವಾಗುವುದು.

ಮಿಥುನ: ಅನಿರೀಕ್ಷಿತ ಖರ್ಚು ವೆಚ್ಚಗಳಿಂದ ಹಣಕಾಸಿನ ವಿಚಾರದಲ್ಲಿ ಸಂಕಷ್ಟಕ್ಕೀಡಾಗುವಿರಿ. ಮಾನಸಿಕವಾಗಿ ಒಂದು ರೀತಿಯ ಅಧೈರ್ಯ ಕಾಡುವುದು. ಸಂಗಾತಿಯ ಸಲಹೆಗೆ ಕಿವಿಗೊಡುವುದು ಉತ್ತಮ. ಕಾರ್ಯನಿಮಿತ್ತ ಸಂಚಾರ ಮಾಡಬೇಕಾಗಬಹುದು.

ಕರ್ಕಟಕ: ಅವಿವಾಹಿತರಿಗೆ ಮನಸ್ಸಿಗೆ ಹಿಡಿಸಿದ ಸಂಬಂಧಗಳು ಕೂಡಿಬರಲಿವೆ. ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಅವಕಾಶಗಳು ಒದಗಿಬರಲಿವೆ. ಸಾಂಸಾರಿಕವಾಗಿ ಸಂತಸದ ದಿನವಾಗಿರಲಿದೆ. ಕಾರ್ಮಿಕ ವರ್ಗಕ್ಕೆ ಉದ್ಯೋಗದಲ್ಲಿ ಮುನ್ನಡೆಯ ಯೋಗವಿದೆ.

ಸಿಂಹ: ನೂತನ ದಂಪತಿಗಳಿಗೆ ಸಂತಾನ ಫಲ ಸೂಚನೆ ದೊರೆಯಲಿದೆ. ಯೋಗ್ಯ ಜನರ ಸಹವಾಸದಿಂದ ಉತ್ತಮ ದಾರಿ ಕಂಡುಕೊಳ್ಳಲಿದ್ದೀರಿ. ಧಾರ್ಮಿಕವಾಗಿ ಭಕ್ತಿ ಹೆಚ್ಚುವುದು. ದಾನ, ಧರ್ಮಾಧಿಗಳಿಂದ ಮನಸ್ಸಿಗೆ ನೆಮ್ಮದಿಯಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

 
ಕನ್ಯಾ: ಆರ್ಥಿಕವಾಗಿ ಧನಾಗಮನಕ್ಕೆ ಕೊರತೆಯಾಗದು. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳ ಅಸಹಕಾರ ಅಸಮಾಧಾನವುಂಟುಮಾಡಬಹುದು. ಸಂಗಾತಿಯ ಹಿತ ನುಡಿ ನೆಮ್ಮದಿ ನೀಡಲಿದೆ. ಮಕ್ಕಳಿಂದ ಸಂತೋಷ ಸಿಗುವುದು. ಚಿಂತೆ ಬೇಡ.

ತುಲಾ: ಕಾರ್ಯರಂಗದಲ್ಲಿ ಛಲ ಬಿಡದೇ ದುಡಿಯುವ ನಿಮ್ಮ ಗುಣದಿಂದ ಯಶಸ್ಸು ಸಿಗಲಿದೆ. ಹಿತಶತ್ರುಗಳ ಬಣ್ಣ ಬಯಲಾಗಲಿದೆ. ನಿರ್ಧಾರ ತೆಗೆದುಕೊಳ್ಳುವಾಗ ಹಿರಿಯರ ಸಲಹೆ ಪಡೆಯಿರಿ. ರಾಜಕೀಯ ವರ್ಗದವರಿಗೆ ಮುನ್ನಡೆಯ ದಿನಗಳಿವು.

ವೃಶ್ಚಿಕ: ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿದ್ದು, ಗೃಹೋಪಯೋಗಿ ವಸ್ತುಗಳ ಖರೀದಿ ಮಾಡಲಿದ್ದೀರಿ. ಮಹಿಳೆಯರಿಗೆ ಚಿನ್ನಾಭರಣ ಖರೀದಿಯ ಯೋಗವಿದೆ. ಸಾಂಸಾರಿಕವಾಗಿ ಸಂತಸದ ದಿನ. ಹಾಗಿದ್ದರೂ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಕಾಡಲಿದೆ.

ಧನು: ಮನಸ್ಸಿಗೆ ಉಲ್ಲಾಸ ನೀಡುವ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ಇಷ್ಟ ಮಿತ್ರರ ಭೇಟಿ, ಭೋಜನ ಮನಸ್ಸಿನ ಸಂತೋಷ ಹೆಚ್ಚಿಸಲಿದೆ. ವೈಯಕ್ತಿಕ ವಿಚಾರದಲ್ಲಿ ಬೇರೆಯವರು ಮೂಗು ತೂರಿಸಲು ಅವಕಾಶ ಕೊಡಬೇಡಿ. ಹಿತ ಮಿತವಾಗಿ ಖರ್ಚು ಮಾಡಿದರೆ ಉತ್ತಮ.

ಮಕರ: ಹಿತಶತ್ರುಗಳಿಗೆ ಎಷ್ಟು ಬೆಲೆ ಕೊಡಬೇಕೋ ಅಷ್ಟೇ ಕೊಟ್ಟರೆ ಉತ್ತಮ. ವ್ಯಾಪಾರ, ವ್ಯವಹಾರದಲ್ಲಿ ನಿಮ್ಮ ಕ್ರಿಯಾಶೀಲತೆ ಉಪಯೋಗಕ್ಕೆ ಬರುವುದು. ಸಂಚಾರದಿಂದ ಕಾರ್ಯಸಿದ್ಧಿಯಾಗಲಿದೆ. ದೇಹಾರೋಗ್ಯದಲ್ಲಿ ಏರುಪೇರಾಗುವ ಸಂಭವ, ಎಚ್ಚರಿಕೆಯಿರಲಿ.

ಕುಂಭ: ಸಂಗಾತಿಯ ಹಿತೋಪವಚನಗಳು ಪಥ್ಯವಾಗದೇ ಹೋಗಬಹುದು. ಹಿರಿಯರಿಗೆ ದೇಹಾರೋಗ್ಯದಲ್ಲಿ ಏರುಪೇರಾಗುವ ಸಂಭವವಿದೆ. ಆರ್ಥಿಕವಾಗಿ ಧನಾಗಮನದಂತೇ ಖರ್ಚೂ ಹೆಚ್ಚಲಿದೆ. ಮಕ್ಕಳಿಂದ ಸಂತಸದ ವಾರ್ತೆ ನಿರೀಕ್ಷಿಸಬಹುದು. ದೇವತಾ ಪ್ರಾರ್ಥನೆ ಮಾಡಿ.

ಮೀನ: ಕಾರ್ಯರಂಗದಲ್ಲಿ ಬಿಡುವಿಲ್ಲದ ಕೆಲಸಗಳಿಂದ ದೇಹ ಹೈರಾಣಾಗುವುದು. ಹಾಗಿದ್ದರೂ ಕಾರ್ಯ ಪೂರ್ತಿಯಾದ ತೃಪ್ತಿ ಸಿಗಲಿದೆ. ಅವಿವಾಹಿತರಿಗೆ ಶೀಘ‍್ರ ಕಂಕಣ ಬಲ ಕೂಡಿಬರಲಿದೆ. ಅನಿರೀಕ್ಷಿತವಾಗಿ ಹಳೆಯ ಮಿತ್ರನ ಭೇಟಿ ಮನಸ್ಸಿಗೆ ಸಂತೋಷ ಕೊಡಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ವೈಕುಂಠ ಏಕಾದಶಿ ದಿನವಾದ ಇಂದು ಮಹಾವಿಷ್ಣುವಿನ ಈ ಮಂತ್ರವನ್ನು ತಪ್ಪದೇ ಪಠಿಸಿ

ವಿವಾಹ, ಸಂತಾನಕ್ಕೆ ಅಡ್ಡಿಯಾಗುತ್ತಿದ್ದರೆ ಸುಬ್ರಹ್ಮಣ್ಯನ ಈ ಸ್ತೋತ್ರ ಓದಿ

ನಾಳೆ ವೈಕುಂಠ ಏಕಾದಶಿ, ಹೀಗಿರಲಿ ಪೂಜಾ ವಿಧಾನ

ಶಿವನ ಅನುಗ್ರಹಕ್ಕಾಗಿ ಇಂದು ಈ ಮಂತ್ರ ಓದಿ

ಸಂಕಟ ಮೋಚನ ಹನುಮಾನ್ ಅಷ್ಟಕಂ ಸ್ತೋತ್ರ

ಮುಂದಿನ ಸುದ್ದಿ
Show comments