Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಭಾನುವಾರ, 8 ಮಾರ್ಚ್ 2020 (09:15 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಗೃಹ ಸಂಬಂಧೀ ಕೆಲಸಗಳಲ್ಲಿ ಮುಳುಗಿ ಹೋಗಲಿದ್ದೀರಿ. ಪತ್ನಿಯ ಬೇಡಿಕೆಗೆ ಕಿವಿಗೊಡಬೇಕಾಗುತ್ತದೆ. ಸಂಸಾರದಲ್ಲಿ ಹೊಂದಾಣಿಕೆ ಅಗತ್ಯ. ಧಾರ್ಮಿಕ ಕ್ಷೇತ್ರಗಳ ಸಂದರ್ಶನ ಯೋಗವಿದೆ. ಸ್ವಂತ ವೃತ್ತಿಯವರಿಗೆ ಆರ್ಥಿಕ ಲಾಭವಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಷಭ: ಅಧಿಕ ಲಾಭ ತರುವ ಯೋಜನೆಗಳನ್ನು ಆರಂಭಿಸಲು ಇದು ಸಕಾಲ. ಮಿತ್ರರ ಸಹಕಾರ ದೊರೆಯಲಿದೆ. ಹಿರಿಯರ ದೇಹಾರೋಗ್ಯದ ಬಗ್ಗೆ ಕಾಳಜಿವಹಿಸುವುದು ಉತ್ತಮ. ಸಹೋದರರೊಂದಿಗೆ ಆಸ್ತಿ ವಿವಾದವಾಗದಂತೆ ಎಚ್ಚರಿಕೆ ವಹಿಸಿ. ದೇವತಾ ಪ್ರಾರ್ಥನೆ ಮಾಡಿ.

ಮಿಥುನ: ಕೊಡು ಕೊಳ್ಳುವಿಕೆ ವ್ಯವಹಾರದಿಂದ ಲಾಭವಾಗಲಿದೆ. ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನ ಹೆಚ್ಚಲಿದೆ. ಮಿತ್ರರೊಂದಿಗೆ ಇಷ್ಟಭೋಜನ ಸವಿಯುವ ಯೋಗವಿದೆ. ಅವಿವಾಹಿತರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.

ಕರ್ಕಟಕ: ಮನೆಗೆ ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನವಾಗಲಿರುವುದರಿಂದ ಮನೆಯಲ್ಲಿ ಸಂಭ್ರಮದ ವಾತಾವರಣವಿರುವುದು. ಮಕ್ಕಳ ಸಂತೋಷದಲ್ಲಿ ಭಾಗಿಯಾಗುವಿರಿ. ಆರ್ಥಿಕವಾಗಿ ಆದಾಯಕ್ಕೆ ಕೊರೆತೆಯಿಲ್ಲದಿದ್ದರೂ ದುಂದು ವೆಚ್ಚ ಬೇಡ.

ಸಿಂಹ: ಅನಗತ್ಯವಾಗಿ ಸಲಹೆ ಕೊಡುವವರನ್ನು ಉಪೇಕ್ಷಿಸುವುದೇ ಉತ್ತಮ. ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಅಧಿಕ ಲಾಭ ತರುವ ಯೋಜನೆಗಳ ಕುರಿತು ಚಿಂತನೆ ನಡೆಸಲಿದ್ದೀರಿ. ವಾತ ಸಂಬಂಧೀ ಆರೋಗ್ಯ ಸಮಸ್ಯೆ ಕಾಡಬಹುದು, ಕಾಳಜಿಯಿರಲಿ.

ಕನ್ಯಾ: ಆದಾಯ ಹೆಚ್ಚಳವಾಗುವುದರಿಂದ ಶತ್ರುಭಯ ಕಾಡುವುದು. ವ್ಯವಹಾರದಲ್ಲಿ ಅಪರಿಚಿತರನ್ನು ದೂರವಿಡುವುದೇ ಉತ್ತಮ. ಕೃಷಿಕರಿಗೆ ವ್ಯವಹಾರದಲ್ಲಿ ಮುನ್ನಡೆ ಸಿಗಲಿದೆ. ಮನೆಯಲ್ಲಿ ಶುಭ ಮಂಗಲ ಕಾರ್ಯ ನಡೆಸಲು ಸಿದ್ಧತೆ ನಡೆಸಲಿದ್ದೀರಿ.

ತುಲಾ: ನಾಲಿಗೆ ಚಪಲದಿಂದ ಉದರ ಸಂಬಂಧೀ ಆರೋಗ್ಯ ಸಮಸ್ಯೆ ಕಾಡಬಹುದು. ಎಷ್ಟೋ ದಿನಗಳಿಂದ ಅಂದುಕೊಂಡಿದ್ದ ಕೆಲಸವನ್ನು ಮಾಡಿ ಮುಗಿಸಲಿದ್ದೀರಿ. ಹೊಸ ಮಿತ್ರರ ಸಂಪಾದನೆ ಮಾಡಲಿದ್ದೀರಿ. ಹಿರಿಯರಿಂದ ಬಂದ ಉಡುಗೊರೆಯನ್ನು ಸಂರಕ್ಷಿಸಬೇಕಾದ ಹೊಣೆಗಾರಿಕೆ ಹೆಗಲಿಗೇರಲಿದೆ.

ವೃಶ್ಚಿಕ: ಎಷ್ಟೇ ಆದಾಯವಿದ್ದರೂ ಕೈಗೆಟುಕುತ್ತಿಲ್ಲ ಎಂಬ ನಿರಾಶಾವಾದಿ ಮನಸ್ಥಿತಿ ಕಾಡಲಿದೆ. ಮಾನಸಿಕವಾಗಿ ಗಟ್ಟಿಯಾಗಬೇಕಾದ ಸಮಯವಿದು. ಗೃಹೋಪಯೋಗಿ ವಸ್ತುಗಳ ಖರೀದಿ ಮಾಡಲಿದ್ದೀರಿ. ಸಂಗಾತಿಯೊಂದಿಗೆ ಮನಸ್ತಾಪವಾಗದಂತೆ ಎಚ್ಚರಿಕೆ ವಹಿಸಿ.

ಧನು: ಇನ್ನೊಬ್ಬರ ವಿಚಾರದಲ್ಲಿ ಮೂಗು ತೂರಿಸುವ ಮೂರ್ಖತನ ಮಾಡಿದರೆ ಸಮಸ್ಯೆ ಮೈಮೇಲೆಳೆದುಕೊಳ್ಳಬೇಕಾಗುತ್ತದೆ. ಮಾತಿನ ಮೇಲೆ ನಿಗಾ ಇರಲಿ. ಸಂಗಾತಿಯ ಮಾತಿಗೆ ಕಿವಿಗೊಡಿ. ಚಿನ್ನಾಭರಣ ಖರೀದಿಯಿಂದ ಲಾಭವಾಗಲಿದೆ. ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆ ಕಾಡಬಹುದು.

ಮಕರ: ಬಂಧು ಜನರ ಭೇಟಿಯಿಂದ ಮನಸ್ಸು ಉಲ್ಲಾಸದಾಯಕವಾಗಿರುವುದು. ಭೂರಿ ಭೋಜನ ಸವಿಯುವ ಯೋಗವಿದೆ. ಸಂಗಾತಿಗೆ ಉಡುಗೊರೆ ನೀಡಲಿದ್ದೀರಿ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿಯಿರಲಿ. ವ್ಯವಹಾರದಲ್ಲಿ ಎಚ್ಚರಿಕೆಯಿಂದಿರುವುದು ಉತ್ತಮ.

ಕುಂಭ: ಅನಿರೀಕ್ಷಿತವಾಗಿ ಬರುವ ನೆಂಟರಿಂದ ಪೀಕಲಾಟವಾದೀತು. ನೀವು ಇಂದು ಅಂದುಕೊಂಡ ಕೆಲಸಗಳನ್ನು ಪೂರ್ತಿ ಮಾಡಲು ಅಡ್ಡಿ ಆತಂಕಗಳು ಎದುರಾದೀತು. ಕುಲದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿ. ಕಿರು ಸಂಚಾರ ಮಾಡಬೇಕಾಗುತ್ತದೆ.

ಮೀನ: ಪ್ರೇಮಿಗಳಿಗೆ ಇಂದು ಶುಭ ದಿನ, ಹಿರಿಯರ ಒಪ್ಪಿಗೆ ಸಿಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಸಂದರ್ಶನಕ್ಕಾಗಿ ದೂರದೂರಿಗೆ ಪ್ರಯಾಣಕ್ಕೆ ಸಿದ್ಧತೆ ನಡೆಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಚಾಡಿ ಮಾತುಗಳಿಗೆ ಕಿವಿಗೊಡಬೇಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶ್ರೀ ವೆಂಕಟೇಶ್ವರ ಅಷ್ಟೋತ್ತರ ಶತನಾಮಾವಳಿ ಕನ್ನಡದಲ್ಲಿ

ವಿಘ್ನ ವಿನಾಯಕನ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ತಪ್ಪದೇ ಓದಿ

ಇಂದು ಅಂದುಕೊಂಡ ಕೆಲಸವಾಗಬೇಕಾದರೆ ಆಂಜನೇಯನ ಈ ಮಂತ್ರ ಹೇಳಿ

ಗ್ರಹಗತಿಗಳ ಸಮಸ್ಯೆಯಿದ್ದಲ್ಲಿ ಈ ಸ್ತೋತ್ರವನ್ನು ತಪ್ಪದೇ ಓದಿ

ಆಂಜನೇಯ ಅಷ್ಟಕಂ ಕನ್ನಡದಲ್ಲಿ ಇಲ್ಲಿದೆ ಈ ದೋಷವಿರುವವರು ತಪ್ಪದೇ ಓದಿ

ಮುಂದಿನ ಸುದ್ದಿ
Show comments