Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಶನಿವಾರ, 23 ನವೆಂಬರ್ 2019 (08:40 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ದೇಹಾರೋಗ್ಯದಲ್ಲಿ ಏರುಪೇರಾಗುವುದು. ವಿದ್ಯಾರ್ಥಿಗಳಿಗೆ ಹೊಸ ಅವಕಾಶಗಳ ಬಾಗಿಲು ತೆರೆಯಲಿವೆ. ನಿರುದ್ಯೋಗಿಗಳು ಪಾಲಿಗೆ ಬಂದ ಅವಕಾಶವನ್ನು ಬಳಸಿಕೊಳ್ಳಬೇಕು. ವ್ಯವಹಾರದಲ್ಲಿ ಮುನ್ನಡೆ ಸಿಗಲಿದೆ. ಆರ್ಥಿಕವಾಗಿ ಚೇತರಿಕೆ ಇರುವುದು.

ವೃಷಭ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕಾರ್ಯದಕ್ಷತೆಗೆ ಪ್ರಶಂಸೆ ಸಿಗಲಿದೆ. ಜವಾಬ್ಧಾರಿ ಹೆಚ್ಚಲಿದೆ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ವ್ಯಾಪಾರ ವ್ಯವಹಾರದಲ್ಲಿ ಹೂಡಿಕೆ ಮಾಡಲು ಇದು ಸಕಾಲ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.

ಮಿಥುನ: ಪ್ರಯತ್ನ ಬಲಕ್ಕೆ ತಕ್ಕ ಪರಿಶ್ರಮ ತೋರಿಬರುವುದು. ದೂರ ಸಂಚಾರ ಕೈಗೊಳ್ಳುವಾಗ ಕಳ್ಳತನವಾಗದಂತೆ ಎಚ್ಚರವಹಿಸಿ. ಹಿರಿಯರ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ಅಲೆದಾಡಬೇಕಾದೀತು. ಹಣಕಾಸಿಗೆ ತೊಂದರೆಯಾಗದು. ದಿನದಂತ್ಯಕ್ಕೆ ಮತ್ತಷ್ಟು ಶುಭಫಲ.

ಕರ್ಕಟಕ: ಮನೆಯಲ್ಲಿ ಶುಭ ಮಂಗಲ ಕಾರ್ಯ ನಡೆಸಲು ಉದ್ದೇಶಿಸಿದರೂ ಆಗಾಗ ಅಡಚಣೆಗಳು ತೋರಿಬಂದೀತು. ಸಂಕಷ್ಟದ ಸಮಯದಲ್ಲಿ ಮಿತ್ರರ ಸಹಕಾರ ದೊರೆಯಲಿದೆ. ಸಾಂಸಾರಿಕವಾಗಿ ದಾಯಾದಿಗಳ ಕಿರಿ ಕಿರಿ ತಪ್ಪದು. ದೇವತಾ ಪ್ರಾರ್ಥನೆ ಮಾಡಿ.

ಸಿಂಹ: ನೆರೆಹೊರೆಯವರೊಂದಿಗೆ ಇದ್ದ ವಿವಾದಗಳು, ಅಸಮಾಧಾನಗಳು ಮರೆಯಲಾಗಲಿವೆ. ವಿದ್ಯಾರ್ಥಿಗಳ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ. ಭವಿಷ್ಯದ ದೃಷ್ಟಿಯಿಂದ ವ್ಯವಹಾರದಲ್ಲಿ ಕೆಲವು ಮಾರ್ಪಾಟು ಮಾಡುವಿರಿ. ಮಕ್ಕಳ ಭವಿಷ್ಯಕ್ಕೆ ಯೋಜನೆ ರೂಪಿಸುವಿರಿ.

 
ಕನ್ಯಾ: ನಾನಾ ರೀತಿಯಲ್ಲಿ ಧನಾಮನದ ಮಾರ್ಗ ಕಂಡುಕೊಳ್ಳಲು ಪ್ರಯತ್ನಿಸುವಿರಿ. ಮಾನಸಿಕವಾಗಿ ಗಟ್ಟಿಯಾಗಿರಬೇಕಾದ ಸಮಯವಿದು. ಸಾಂಸಾರಿಕವಾಗಿ ಬರುವ ಸಮಸ್ಯೆಗಳನ್ನು ಸಂಗಾತಿಯ ಸಲಹೆಯೊಂದಿಗೆ ಪರಿಹರಿಸಲು ಯತ್ನಿಸಿ. ಕುಲದೇವರ ಪ್ರಾರ್ಥನೆ ಮಾಡಿ.

ತುಲಾ: ಅಸಾಧ್ಯವಾದುದನ್ನೂ ಸಾಧ್ಯವಾಗಿಸಲು ಪ್ರಯತ್ನಿಸುವ ಉತ್ಸಾಹ ಕಂಡುಬರಲಿದೆ. ವೃತ್ತಿರಂಗದಲ್ಲಿ ನಿಮ್ಮ ಕ್ರಿಯಾಶೀಲತೆಗೆ ತಕ್ಕ ಫಲ ಸಿಗಲಿದೆ. ವ್ಯಾಪಾರ ವ್ಯವಹಾರಗಳಿಂದ ಲಾಭ ಗಳಿಸುವಿರಿ. ಆದರೆ ನಯವಂಚಕರ ಬಗ್ಗೆ ಎಚ್ಚರವಾಗಿರಬೇಕು.

ವೃಶ್ಚಿಕ: ಆತ್ಮಸ್ಥೈರ್ಯವೊಂದೇ ನಿಮಗೆ ಇಂದು ಶ್ರೀರಕ್ಷೆಯಾಗಲಿದೆ. ಕಾರ್ಯಸಾಧನೆಯ ಹಾದಿಯಲ್ಲಿ ಹಲವು ಅಡೆತಡೆಗಳು ಬರಬಹುದು, ತಾಳ್ಮೆ ಕಳೆದುಕೊಳ್ಳಬೇಡಿ. ಆರ್ಥಿಕವಾಗಿ ಬಾಕಿ ಹಣ ಪಾವತಿಯಾಗಲಿವೆ. ಮನೆಗೆ ನೆಂಟರ ಆಗಮನವಾಗಬಹುದು.

ಧನು: ಹಲವು ಸಾಂಸಾರಿಕ ಸಮಸ್ಯೆಗಳಿಂದ ಕಾರ್ಯದೊತ್ತಡವಾಗಲಿದೆ. ನೀವು ಮಾಡುವ ತಪ್ಪುಗಳಿಗೆ ಪ್ರೀತಿ ಪಾತ್ರರ ಅಸಮಾಧನಕ್ಕೆ ಗುರಿಯಾಗಬೇಕಾಗುತ್ತದೆ. ದುಡುಕಿ ಮಾತನಾಡಲು ಹೋಗಬೇಡಿ. ಸಂಗಾತಿಯ ಸಲಹೆಗಳನ್ನು ಪಾಲಿಸಿ. ಖರ್ಚಿನ ಮೇಲೆ ಹಿಡಿತವಿರಲಿ.

ಮಕರ: ಕಷ್ಟದಲ್ಲಿರುವ ನಿಮ್ಮ ವ್ಯವಹಾರ ಚೇತರಿಕೆಗೆ ಹಲವು ಮಾರ್ಗ ಕಂಡುಕೊಳ್ಳುವಿರಿ. ಆದರೆ ಯೋಚಿಸಿ ಮುಂದೆ ಹೆಜ್ಜೆಯಿಡುವುದು ಮುಖ್ಯ. ಗೃಹೋಪಯೋಗಿ ವಸ್ತುಗಳಿಗೆ ಖರ್ಚು ವೆಚ್ಚಗಳಾಗಬಹುದು. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಸಿಗಲಿದೆ.

ಕುಂಭ: ಸಾಂಸಾರಿಕ ಸಮಸ್ಯೆಗಳ ನಿವಾರಣೆಯಲ್ಲೇ ಇಂದಿನ ದಿನ ಕಳೆದುಹೋಗುವುದು. ಕಾರ್ಯದೊತ್ತಡದಿಂದ ದೇಹ ಹೈರಾಣಾಗಬಹುದು. ವೃತ್ತಿರಂಗದಲ್ಲಿ ನಿಮ್ಮ ಜಾಣತನ ಪ್ರದರ್ಶಿಸಲು ವೇದಿಕೆ ಸಿಗಬಹುದು. ಆದರೆ ಹಿತಶತ್ರುಗಳ ಬಗ್ಗೆ ಎಚ್ಚರಿಕೆಯಿಂದಿರಿ.

ಮೀನ: ಅನವಶ್ಯಕ ವಾದ ವಿವಾದಗಳಿಂದ ದೂರವಿದ್ದರೆ ಒಳ್ಳೆಯದು. ಮಹಿಳೆಯರಿಗೆ ಚಿನ್ನಾಭರಣ ಖರೀದಿ ಯೋಗವಿದೆ. ಆದಾಯಕ್ಕೆ ಕೊರತೆಯಿರದು. ಆದರೆ ಖರ್ಚಿನ ಬಗ್ಗೆ ಹಿಡಿತವಿರಲಿ. ಅವಿವಾಹಿತರ ವಿವಾಹ ಪ್ರಯತ್ನಕ್ಕೆ ಮುನ್ನಡೆ ಸಿಗಲಿದೆ. ದೇವತಾ ಪ್ರಾರ್ಥನೆ ಮಾಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶುಕ್ರವಾರದಂದು ಲಕ್ಷ್ಮೀ ದೇವಿಯ ಈ ಐದು ಸರಳ ಮಂತ್ರಗಳನ್ನು ಪಠಿಸಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಅಚ್ಚ ಕನ್ನಡದಲ್ಲಿ ಲಕ್ಷ್ಮೀ ಹೃದಯ ಸ್ತೋತ್ರ ಪಾರಾಯಣ ಮಾಡಿ: ಸಂಪತ್ತು ವೃದ್ಧಿಗೆ ಇದುವೇ ದಾರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಏಕಾಗ್ರತೆಗೆ ತೊಂದರೆಯಾಗುತ್ತಿದೆಯೇ ಮಹಾವಿಷ್ಣುವಿನ ಈ ಮಂತ್ರ ಓದಿ

ಮುಂದಿನ ಸುದ್ದಿ
Show comments