ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಬುಧವಾರ, 13 ನವೆಂಬರ್ 2019 (09:01 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಕಾರ್ಯನಿಮಿತ್ತ ದೂರ ಸಂಚಾರ ಮಾಡಬೇಕಾಗಿ ಬರುತ್ತದೆ. ಗೃಹ ವಾಹನಾದಿಗಳ ಖರೀದಿ ಯೋಗವಿದೆ. ವ್ಯಾಪಾರದಲ್ಲಿ ಲಾಭವಾಗಲಿದೆ. ಆರ್ಥಿಕವಾಗಿ ಆದಾಯಕ್ಕೆ ಖರ್ಚು ಹೆಚ್ಚಾಗದಂತೆ ಎಚ್ಚರಿಕೆ ವಹಿಸಿ. ದೇವತಾ ಪ್ರಾರ್ಥನೆ ಮಾಡಿ.

ವೃಷಭ: ಮಕ್ಕಳ ವಿಚಾರವಾಗಿ ಸಂಗಾತಿಯೊಂದಿಗೆ ಮನಸ್ತಾಪವಾಗಲಿದೆ. ಮಾನಸಿಕವಾಗಿ ನೆಮ್ಮದಿ ಕೆಡಿಸುವಂತಹ ವಿಚಾರಗಳು ಕೇಳಿಬಂದೀತು. ಉದ್ಯೋಗ ಕ್ಷೇತ್ರದಲ್ಲಿ ಬಿಡುವಿಲ್ಲದ ಕೆಲಸದಿಂದ ದೇಹ ಹೈರಾಣಾಗಬಹುದು. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಮಿಥುನ: ಕಾರ್ಯದೊತ್ತಡ ಅಧಿಕವಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಮೇಲಿರುವ ಜವಾಬ್ಧಾರಿಗಳು ಹೆಚ್ಚಾಗುವುದು. ಆದರೆ ಅಂತಿಮವಾಗಿ ಜಯ ನಿಮ್ಮದಾಗುವುದು. ಆತ್ಮಸ್ಥೈರ್ಯದಿಂದ ಮುನ್ನಡೆಯಿರಿ. ದೇಹಾರೋಗ್ಯದ ಬಗ್ಗೆ ಕಾಳಜಿಯಿರಬೇಕು.

ಕರ್ಕಟಕ: ಇತರರೊಂದಿಗೆ ಉತ್ತಮ ಸಂಬಂಧ ಕಾಯ್ದುಕೊಳ್ಳುವ ಆತುರದಲ್ಲಿ ಪ್ರೀತಿ ಪಾತ್ರರ ಮನಸ್ಸಿಗೆ ನೋವುಂಟು ಮಾಡದಿರಿ. ಪ್ರಯಾಣದಲ್ಲಿ ಸಣ್ಣ ಪುಟ್ಟ ತೊಂದರೆಗಳು ಎದುರಾದೀತು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ.

ಸಿಂಹ: ಕೋರ್ಟು ಕಚೇರಿ ವ್ಯವಹಾರಗಳಲ್ಲಿ ನಿಮ್ಮ ಪರವಾದ ತೀರ್ಪು ಬರಲಿದೆ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ. ಅನಗತ್ಯ ಚಿಂತೆಗಳಿಗೆ ಕಡಿವಾಣ ಹಾಕಿ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಧನವ್ಯಯವಾಗಲಿದೆ.

 
ಕನ್ಯಾ: ಆಪ್ತರ ಸಲಹೆಗಳು ಕಷ್ಟದ ಸಂದರ್ಭದಲ್ಲಿ ನೆರವಿಗೆ ಬರಲಿದೆ. ಸಮಯ, ಸಂದರ್ಭಕ್ಕೆ ತಕ್ಕಂತೆ ವ್ಯವಹರಿಸಬೇಕಾಗುತ್ತದೆ. ಆಗಾಗ ಆರೋಗ್ಯ ಸಮಸ್ಯೆ ಕಾಣಿಸಿಕೊಂಡು ಚಿಂತೆಯಾಗಬಹುದು. ಮಾನಸಿಕವಾಗಿ ನೀವು ಗಟ್ಟಿಯಾಗಲೇಬೇಕು.

ತುಲಾ: ಮಾನಸಿಕವಾಗಿ ಗೊಂದಲದ ಸ್ಥಿತಿ ಎದುರಾಗಬಹುದು. ನಿರ್ಧಾರ ಕೈಗೊಳ್ಳುವಾಗ ಸಂಗಾತಿಯೊಂದಿಗೆ ಚರ್ಚಿಸುವುದು ಒಳಿತು. ಆರ್ಥಿಕವಾಗಿ ಖರ್ಚು ವೆಚ್ಚದ ಬಗ್ಗೆ ನಿಯಂತ್ರಣ ಅಗತ್ಯ. ಸಾಮರ್ಥ್ಯವಿದೆಯೆಂದು ಬಂಡೆಗೆ ತಲೆ ಚಚ್ಚುವ ಕೆಲಸ ಮಾಡಬೇಡಿ. ತಾಳ್ಮೆ ಅಗತ್ಯ.

ವೃಶ್ಚಿಕ: ಪ್ರೀತಿ  ಪಾತ್ರರೊಂದಿಗೆ ಸುಂದರ ಕ್ಷಣ ಕಳೆಯುವಿರಿ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಕೌಟುಂಬಿಕವಾಗಿ ನೆಮ್ಮದಿಯ ದಿನಗಳಿವು. ಪ್ರೇಮಿಗಳ ಪ್ರೀತಿ ಕೈಗೂಡುವುದು. ಹಿರಿಯರ ಆಶೀರ್ವಾದ ಪಡೆದು ಹೊಸ ಕೆಲಸಕ್ಕೆ ಕೈ ಹಾಕಬಹುದು.

ಧನು: ನೀವು ಅತಿಯಾಗಿ ನಂಬಿದವರಿಂದ ನಂಬಿಕೆ ದ್ರೋಹವಾಗುವುದು. ಇದರಿಂದ ಮನಸ್ಸಿಗೆ ನೋವಾಗಬಹುದು. ಉದ್ಯೋಗ ಕ್ಷೇತ್ರದಲ್ಲಿ ಎಚ್ಚರಿಕೆಯಿಂದ ಹೆಜ್ಜೆಯಿಡಿ. ದೂರ ಪ್ರಯಾಣದಲ್ಲಿ ಜಾಗ್ರತೆ ವಹಿಸಬೇಕು. ಶುಭ ಮಂಗಲ ಕಾರ್ಯಕ್ಕೆ ಸಿದ್ಧತೆ ನಡೆಸುವಿರಿ.

ಮಕರ: ಹೊಸ ಯೋಜನೆಗಳಿಗೆ ಕೈ ಹಾಕುವ ಮೊದಲು ಯೋಚಿಸಿ ಹೆಜ್ಜೆಯಿಡಿ. ದುಡುಕು ವರ್ತನೆ, ಮಾತು ಕೆಲಸ ಹಾಳು ಮಾಡೀತು. ಉದ್ಯೋಗ ಕ್ಷೇತ್ರದಲ್ಲಿ ಮೇಲ್ವರ್ಗದ ಅಧಿಕಾರಿಗಳಿಗೆ ಅಪವಾದದ ಭೀತಿ ಎದುರಾಗಲಿದೆ. ಅಪರಿಚಿತರೊಂದಿಗೆ ವ್ಯವಹರಿಸುವಾಗ ಜಾಗ್ರತೆಯಿರಲಿ.

ಕುಂಭ: ಕೌಟುಂಬಿಕವಾಗಿ ಉತ್ತಮ ಬಾಂಧವ್ಯವಿರಲಿದೆ. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ.  ಕಿರು ಸಂಚಾರ ಮಾಡಬೇಕಾಗಿಬರಬಹುದು. ಗೃಹ ಸಂಬಂಧೀ ಕೆಲಸಗಳಲ್ಲಿ ಹೆಚ್ಚಿನ ಓಡಾಟ ನಡೆಸಬೇಕಾಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಮೀನ: ಹೂಡಿಕೆ ವ್ಯವಹಾರಗಳಲ್ಲಿ ಹೆಚ್ಚಿನ ಲಾಭ ಕಂಡುಬರುವುದು. ಕೃಷಿ ಕ್ಷೇತ್ರದಲ್ಲಿರುವವರಿಗೆ ತಮ್ಮ ವ್ಯವಹಾರ ಸರಾಗವುದು. ಸಾಂಸಾರಿಕವಾಗಿ ಜಂಜಾಟಗಳಿಂದ ಮನಸ್ಸಿನ ನೆಮ್ಮದಿ ಹಾಳಾಗಬಹುದು. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಹಣಕಾಸಿನ ಸಮಸ್ಯೆಯಿದ್ದರೆ ಕನಕಧಾರಾ ಸ್ತೋತ್ರ ತಪ್ಪದೇ ಓದಿ

2026 ರಲ್ಲಿ ಯಾವ ರಾಶಿಯವರು ಯಾವ ದೇವರ ಪ್ರಾರ್ಥನೆ ಮಾಡಬೇಕು ಗಮನಿಸಿ

ಗಣೇಶ ಕವಚ ಸ್ತೋತ್ರವನ್ನು ಮಕ್ಕಳಿಗೆ ಹೇಳಿಸಿ

ಈ ಐದು ರಾಶಿಯವರಿಗೆ 2026 ರಲ್ಲಿ ಸ್ವಂತ ಮನೆ ಕನಸು ನನಸಾಗುತ್ತದೆ

ಮಂಗಳವಾರ ದೇವಿಯ ಅನುಗ್ರಹಕ್ಕಾಗಿ ನವರತ್ನ ಮಾಲಿಕಾ ಸ್ತೋತ್ರ

ಮುಂದಿನ ಸುದ್ದಿ
Show comments