ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಶುಕ್ರವಾರ, 4 ಅಕ್ಟೋಬರ್ 2019 (08:20 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಅಡೆತಡೆಗಳಿಂದಾಗಿ ನಿಮ್ಮ ಕೆಲಸ ಕಾರ್ಯಗಳು ವಿಳಂಬ ಗತಿಯಲ್ಲಿ ನಡೆಯಲಿವೆ. ಆರ್ಥಿಕವಾಗಿ ಹಣಕಾಸಿನ ಮುಗ್ಗಟ್ಟು ತೋರಿಬಂದೀತು. ರಾಜಕೀಯ ರಂಗದವರಿಗೆ ಪ್ರತಿಸ್ಪರ್ಧಿಯ ಪ್ರತಿರೋಧ ತೋರಿಬರಲಿದೆ. ಆರೋಗ್ಯದ ಬಗ್ಗೆ ಕಾಳಜಿವಹಿಸಿ.

ವೃಷಭ: ಕೌಟುಂಬಿಕ ಸಮಸ್ಯೆಗಳಿಗೆ ಮನಸ್ಸಿಗೆ ಕಿರಿ ಕಿರಿಯಾಗುವುದು. ಸಂಗಾತಿಯೊಂದಿಗೆ ಹೊಂದಾಣಿಕೆಯ ಕೊರತೆ ತೋರಿಬರಲಿದೆ. ದೇವತಾ ಪ್ರಾರ್ಥನೆ, ದೇವಾಲಯ ಸಂದರ್ಶನದಿಂದ ಮನಸ್ಸಿಗೆ ನೆಮ್ಮದಿಯಾಗುವುದು. ನೂತನ ಕೆಲಸ ಕಾರ್ಯಗಳಿಗೆ ಚಾಲನೆ ನೀಡುವಿರಿ.

ಮಿಥುನ: ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ನಿರೀಕ್ಷಿತ ಫಲಿತಾಂಶ ಬರಲಿದೆ. ದೇವತಾ ದರ್ಶನದಿಂದ ಮನಸ್ಸಿಗೆ ಸಂತಸವಾಗಲಿದೆ. ವ್ಯಾಪಾರ, ವ್ಯವಹಾರದಲ್ಲಿ ಲಾಭವಾಗಲಿದೆ. ಉದ್ಯೋಗ ನಿಮಿತ್ತ ದೂರ ಸಂಚಾರ ಮಾಡಬೇಕಾಗಬಹುದು.

ಕರ್ಕಟಕ: ಮನೆಯಲ್ಲಿ ಶುಭ ಮಂಗಲ ಕಾರ್ಯಗಳು ನೆರವೇರಲಿವೆ. ಕಾರ್ಯನಿಮಿತ್ತ ಓಡಾಟ ನಡೆಸಬೇಕಾಗುತ್ತದೆ. ಅಧಿಕಾರಿ ವರ್ಗದವರಿಗೆ ಬಡ್ತಿ ಯೋಗವಿದೆ. ಕೆಳ ಹಂತದ ನೌಕಕರರಿಗೆ ಉದ್ಯೋಗದಲ್ಲಿ ಮುನ್ನಡೆಯಿರಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ.

ಸಿಂಹ: ಮಹಿಳಾ ಉದ್ಯೋಗಿಗಳಿಗೆ ಉದ್ಯೋಗದಲ್ಲಿ ಮುನ್ನಡೆ ಸಿಗುವುದು. ಮೇಲಧಿಕಾರಿಗಳಿಂದ ಪ್ರಶಂಸೆ ಸಾಧ‍್ಯತೆ.
ಆದರೆ ದೇಹಾರೋಗ್ಯದಲ್ಲಿ ಏರುಪೇರಾಗಬಹುದು. ಕಾಳಜಿ ಅಗತ್ಯ. ನಿರೀಕ್ಷಿತ ಕೆಲಸ ಕಾರ್ಯಗಳಲ್ಲಿ ಮುನ್ನಡೆ ಯೋಗವಿದೆ. ದಿನದಂತ್ಯಕ್ಕೆ ಶುಭ ಸುದ್ದಿ.

 
ಕನ್ಯಾ: ಪಾಲು ಬಂಡವಾಳ ವ್ಯವಹಾರದಲ್ಲಿ ಲಾಭ ಸಿಗಬಹುದು ಆದರೆ ವಂಚನೆಗೊಳಗಾಗದಂತೆ ಎಚ್ಚರಿಕೆಯಿಂದಿರುವುದು ಮುಖ್ಯ. ಗೃಹೋಪಯೋಗಿ ವಸ್ತುಗಳ ಖರೀದಿ. ಯಂತ್ರೋಪಕರಣಗಳ ಕೆಲಸ ಮಾಡುವರಿಗೆ ಲಾಭವಾಗಲಿದೆ. ಅನಿರೀಕ್ಷಿತವಾಗಿ ದೇವಾಲಯ ಸಂದರ್ಶನ ಯೋಗವಿದೆ.

ತುಲಾ: ನಿರೀಕ್ಷಿತ ಕೆಲಸ ಕಾರ್ಯಗಳು ಅಡೆತಡೆಯಿದ್ದರೂ ಅಂದುಕೊಂಡ ರೀತಿ ನಡೆಯಲಿವೆ. ಮನೆ ರಿಪೇರಿ, ವಸ್ತುಗಳ ಖರೀದಿಗಾಗಿ ಧನವ್ಯಯವಾಗಲಿದೆ. ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನದಿಂದ ಸಂತಸವಾಗಲಿದೆ. ವಿದ್ಯಾರ್ಥಿಗಳಿಗೆ ಆಲಸ್ಯತನ ಕಂಡುಬರಲಿದೆ.

ವೃಶ್ಚಿಕ: ದೇಹಾರೋಗ್ಯದಲ್ಲಿ ಇದುವರೆಗೆ ಇದ್ದ ಸಮಸ್ಯೆಗಳು ನಿವಾರಣೆಯಾಗಲಿದೆ. ಆರ್ಥಿಕವಾಗಿ ಲಾಭ-ನಷ್ಟಗಳು ಸಮಾನವಾಗಿರುವುದು. ವ್ಯಾಪಾರ ವ್ಯವಾಹರದಲ್ಲಿ ಬರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಸಂಗಾತಿಯ ಸಲಹೆಗೆ ಕಿವಿಗೊಡಿ.

ಧನು: ನಿಮ್ಮ ಪ್ರಯತ್ನ ಬಲದಿಂದ ಅಂದುಕೊಂಡ ಕೆಲಸ ಕಾರ್ಯಗಳು ಸುಗಮವಾಗಿ ನೆರವೇರಲಿವೆ. ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು. ಆಹಾರ ಪದ್ಧತಿಯಿಂದ ಉದರ ಸಂಬಂಧೀ ಸಮಸ್ಯೆಗಳು ಕಾಡಬಹುದು. ದುಡುಕು ಮಾತಿಗೆ ಕಡಿವಾಣ ಹಾಕಿ.

ಮಕರ: ಸಂಗಾತಿಯ ಮನೋಕಾಮನೆಗಳನ್ನು ಪೂರ್ತಿ ಮಾಡುವಿರಿ. ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚೂ ಇರಲಿದೆ. ವಿದ್ಯಾರ್ಥಿಗಳು ಬಿಡುವಿನ ದಿನದ ಸಂತಸ ಅನುಭವಿಸಲಿದ್ದೀರಿ. ವ್ಯಾಪಾರ, ವ್ಯವಹಾರದಲ್ಲಿ ಲಾಭ ಕಂಡುಬರಲಿದೆ. ಆರೋಗ್ಯದ ಬಗ್ಗೆ ಎಚ್ಚರಿಕೆಯಿರಲಿ.

ಕುಂಭ: ಅವಿವಾಹಿತರಿಗೆ ಸದ್ಯದಲ್ಲೇ ಕಂಕಣ ಬಲ ಕೂಡಿಬರಲಿದೆ. ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗಳಿಗೆ ಸಿದ್ಧರಾಗಿ. ಹಿತಶತ್ರುಗಳ ಬಗ್ಗೆ ಎಚ್ಚರಿಕೆ ವಹಿಸಿ. ಉದ್ಯೋಗ, ವ್ಯವಹಾರದಲ್ಲಿ ಯಾರೂ ಸಹಾಯಕ್ಕೆ ಬರುತ್ತಿಲ್ಲ ಎಂಬ ಕೊರಗು ಕಾಡಲಿದೆ. ದೇವತಾ ಪ್ರಾರ್ಥನೆ ಮಾಡಿ.

ಮೀನ: ಗುರುಬಲದಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಪ್ರಗತಿ, ಆರ್ಥಿಕವಾಗಿ ಧನಾಗಮನವಾಗಲಿದೆ. ನಿಶ್ಚಿತ ರೂಪದಲ್ಲಿ ಕಾರ್ಯಪ್ರಾಪ್ತಿಯಾಗಲಿದೆ. ಆಲಸ್ಯತನದಿಂದ ಕಾರ್ಯಭಂಗವಾಗಲಿದೆ. ದೂರ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ. ವಾಹನ ಖರೀದಿ ಯೋಗವಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಗ್ರಹ ಪಂಚರತ್ನ ಸ್ತೋತ್ರ ಕನ್ನಡದಲ್ಲಿ

ಸೌಭಾಗ್ಯ ಲಕ್ಷ್ಮೀ ಸ್ತೋತ್ರಂ ಕನ್ನಡದಲ್ಲಿ ಇಲ್ಲಿದೆ

ಗುರು ಪಾದುಕಾ ಸ್ತೋತ್ರಂ ಕನ್ನಡದಲ್ಲಿ ಇಲ್ಲಿದೆ

ಜಾತಕದಲ್ಲಿ ಬುಧ ಗ್ರಹ ದೋಷವಿದ್ದರೆ ಈ ಮಂತ್ರ ಓದಿ

ಕುಜ ದೋಷವಿದ್ದರೆ ಇಂದು ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments