ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಶನಿವಾರ, 10 ಆಗಸ್ಟ್ 2019 (08:42 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಇಂದು ಅತ್ಯಂತ ಸಂಕಷ್ಟಗಳಿಂದ ಕೂಡಿದ ದಿನ ನಿಮ್ಮದಾಗಲಿದೆ. ಆದರೆ ಸಹನೆ ಕಳೆದುಕೊಳ್ಳದೇ ತಾಳ್ಮೆಯಿಂದ ನಡೆದುಕೊಳ್ಳಬೇಕಾದ ಅಗತ್ಯವಿದೆ. ವಿದ್ಯಾರ್ಥಿಗಳಲ್ಲಿ ನಿರುತ್ಸಾಹ ಕಂಡುಬಂದೀತು.

ವೃಷಭ: ಸಂದಿಗ್ಧತೆಗಳು ಎದುರಾದಾಗ ಗೆಳೆಯರಿಂದ ಸೂಕ್ತ ಸಲಹೆಗಳು ಸಿಕ್ಕಿ ಪರಿಹಾರ ಕಂಡುಕೊಳ್ಳುವಿರಿ. ವೃತ್ತಿರಂಗದಲ್ಲಿ ಮುನ್ನಡೆಯಿರುತ್ತದೆ. ಪ್ರೇಮಿಗಳ ಪಾಲಿಗೆ ಮಹತ್ವದ ದಿನ. ದಿನದಂತ್ಯಕ್ಕೆ ಶುಭ ವಾರ್ತೆ.

ಮಿಥುನ: ನಿಮ್ಮ ದುಡುಕು ವರ್ತನೆಯಿಂದ ಪರರ ಅಸಹನೆಗೆ ಗುರಿಯಾಗುವಿರಿ. ನಿರ್ಧಾರ ಕೈಗೊಳ್ಳುವಾಗ ಗೊಂದಲಗಳು ಎದುರಾಗಬಹುದು. ಸಂಗಾತಿಯ ಅಸಮಾಧಾನಕ್ಕೆ ಗುರಿಯಾಗುವಿರಿ. ಎಚ್ಚರಿಕೆ ಅಗತ್ಯ.

ಕರ್ಕಟಕ: ಬಿಡುವಿಲ್ಲದೇ ದುಡಿಯಬೇಕಾಗುತ್ತದೆ. ಇದರಿಂದ ಮನಸ್ಸಿಗೂ, ದೇಹಕ್ಕೂ ಆಯಾಸ. ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚೂ ಇರುತ್ತದೆ. ರಹಸ್ಯಗಳು ಬಯಲಾಗಲಿವೆ. ಕಾರ್ಯನಿಮಿತ್ತ ಕಿರು ಸಂಚಾರ ಮಾಡಬೇಕಾಗುತ್ತದೆ.

ಸಿಂಹ: ಆರ್ಥಿಕವಾಗಿ ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ವಾದ ವಿವಾದಗಳನ್ನು ಸೌಹಾರ್ದಯುತವಾಗಿ ಬಗೆಹರಿಸುವುದು ಒಳಿತು. ಆರೋಗ್ಯದಲ್ಲಿ ಹಂತ ಹಂತವಾಗಿ ಚೇತರಿಕೆ ಕಾಣುವಿರಿ.

ಕನ್ಯಾ: ದೂರ ಸಂಚಾರದಿಂದ ನಿರೀಕ್ಷಿತ ಕಾರ್ಯಸಾಧನೆಯಾಗದೇ ನಿರಾಸೆಯಾಗುವುದು. ಮಾನಸಿಕವಾಗಿ ದೃಢ ಚಿತ್ತರಾಗಬೇಕು. ನಿಮ್ಮ ಒಳ್ಳೆಯತನವನ್ನು ದುರುಪಯೋಗಪಡಿಸಿಕೊಂಡಾರು. ಎಚ್ಚರಿಕೆ ಅಗತ್ಯ.

ತುಲಾ: ಉದ್ಯೋಗ ಕ್ಷೇತ್ರದಲ್ಲಿ ಹೊಸ ಜವಾಬ್ಧಾರಿಗಳು ಹೆಗಲಿಗೇರಲಿವೆ. ಆರ್ಥಿಕವಾಗಿ ಹಣಕಾಸಿನ ಮುಗ್ಗಟ್ಟು ಎದುರಾದೀತು. ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ.

ವೃಶ್ಚಿಕ: ಬಂಧು, ಮಿತ್ರರೊಂದಿಗೆ ಪ್ರವಾಸ, ಸುಂದರ ಕ್ಷಣ ಕಳೆಯುವಿರಿ. ಯೋಚನೆ ಮಾಡಿ ಮುನ್ನಡೆಯುವುದು ಮುಖ್ಯ. ಆತುರದ ನಿರ್ಧಾರದಿಂದ ತೊಂದರೆಗೆ ಸಿಲುಕಿಕೊಳ್ಳಬೇಕಾದೀತು. ದೇವತಾ ಪ್ರಾರ್ಥನೆ ಮಾಡಿ.

ಧನು: ಸಹೋದ್ಯೋಗಿಗಳ ಸಹಕಾರದಿಂದ ನಿರೀಕ್ಷಿಸಿದ ಕೆಲಸ ಪೂರ್ತಿ ಮಾಡುವಿರಿ. ಬಾಕಿ ಹಣ ಪಾವತಿಯಾಗುವುದು. ಆರ್ಥಿಕವಾಗಿ ಹಂತ ಹಂತವಾಗಿ ಚೇತರಿಕೆ ಕಂಡುಬರುವುದು. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಆಲಸ್ಯತನ ಕಂಡುಬರಲಿದೆ.

ಮಕರ: ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನವಾಗಲಿದೆ. ದಾಯಾದಿಗಳೊಂದಿಗಿನ ಮನಸ್ತಾಪಗಳು ಹಿರಿಯರ ಮಧ್ಯಸ್ಥಿಕೆಯಲ್ಲಿ ಬಗೆಹರಿಯುವುದು. ಹಿತ ಶತ್ರುಗಳಿಂದ ವಂಚನೆಗೊಳಗಾಗದಂತೆ ಎಚ್ಚರಿಕೆ ವಹಿಸಿ.

ಕುಂಭ: ಬಂಧು ಮಿತ್ರರಿಂದ ಚಾಡಿ ಮಾತು ಕೇಳಿಬಂದೀತು. ಅದಕ್ಕೆ ಕಿವಿಗೊಡಬೇಕಿಲ್ಲ. ಕೌಟುಂಬಿಕವಾಗಿ ಕೆಲವೊಂದು ಜವಾಬ್ಧಾರಿಗಳು ಹೆಗಲಿಗೇರಲಿವೆ. ಉದ್ಯೋಗ ರಂಗದಲ್ಲಿ ನಿರೀಕ್ಷಿತ ಮುನ್ನಡೆ ಸಿಗುವುದು.

ಮೀನ: ಆಪ್ತರೊಂದಿಗಿನ ಕಲಹ ಮನಸ್ಸಿಗೆ ಬೇಸರವುಂಟುಮಾಡಲಿದೆ. ನಿರುದ್ಯೋಗಿಗಳಿಗೆ ಸರ್ಕಾರಿ ಉದ್ಯೋಗಕ್ಕೆ ಕರೆ ಬರುವುದು. ಹೊಸ ಯೋಜನೆಗಳನ್ನು ರೂಪಿಸುವಿರಿ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರವುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನ ಅನುಗ್ರಹಕ್ಕಾಗಿ ಇಂದು ಈ ಮಂತ್ರ ಓದಿ

ಸಂಕಟ ಮೋಚನ ಹನುಮಾನ್ ಅಷ್ಟಕಂ ಸ್ತೋತ್ರ

ಹಣಕಾಸಿನ ಸಮಸ್ಯೆಯಿದ್ದರೆ ಕನಕಧಾರಾ ಸ್ತೋತ್ರ ತಪ್ಪದೇ ಓದಿ

2026 ರಲ್ಲಿ ಯಾವ ರಾಶಿಯವರು ಯಾವ ದೇವರ ಪ್ರಾರ್ಥನೆ ಮಾಡಬೇಕು ಗಮನಿಸಿ

ಗಣೇಶ ಕವಚ ಸ್ತೋತ್ರವನ್ನು ಮಕ್ಕಳಿಗೆ ಹೇಳಿಸಿ

ಮುಂದಿನ ಸುದ್ದಿ
Show comments