ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಸೋಮವಾರ, 3 ಜೂನ್ 2019 (08:51 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಸಂಗಾತಿಯೊಂದಿಗಿನ ಮನಸ್ತಾಪಕ್ಕೆ ಪಶ್ಚಾತ್ತಾಪ ಪಡಬೇಕಾಗುವುದು. ಶೀತ ಸಂಬಂಧೀ ಆರೋಗ್ಯ ಸಮಸ್ಯೆಗಳು ಕಂಡುಬರಬಹುದು. ಅನಿರೀಕ್ಷಿತ ಖರ್ಚುಗಳು ಚಿಂತೆ ಹೆಚ್ಚಿಗೆ ಮಾಡಲಿವೆ. ದೇವತಾ ಪ್ರಾರ್ಥನೆಯಿಂದ ಮನಸ್ಸಿಗೆ ನೆಮ್ಮದಿ.

ವೃಷಭ: ದೈವಾನುಕೂಲದಿಂದ ನಿಮ್ಮ ಮನೋಕಾಮನೆಗಳು ಪೂರ್ತಿಯಾಗಲಿವೆ. ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆಯ ಯೋಗವಿದೆ. ಆರ್ಥಿಕವಾಗಿ ಪ್ರಗತಿ ಕಾಣುವಿರಿ. ದೂರ ಸಂಚಾರ ಯೋಗವಿದ್ದು ಎಚ್ಚರಿಕೆ ಅಗತ್ಯ.

ಮಿಥುನ: ವೃತ್ತಿರಂಗದಲ್ಲಿ ಸಹೋದ್ಯೋಗಿಗಳೊಂದಿಗೆ ಭಿನ್ನಾಭಿಪ್ರಾಯ ಮೂಡಿ ಹಿನ್ನಡೆ ಅನುಭವಿಸಬೇಕಾಗಬಹುದು. ವೃತ್ತಿ, ವಾಸ ಸ್ಥಳ ಬದಲಾವಣೆಗೆ ಚಿಂತನೆ ನಡೆಸುವಿರಿ. ಅನಗತ್ಯ ವಾದ ವಿವಾದಗಳಲ್ಲಿ ತೊಡಗಬೇಡಿ.

ಕರ್ಕಟಕ: ವಸ್ತ್ರ, ಚಿನ್ನಾಭರಣಗಳಿಗಾಗಿ ಖರ್ಚು ವೆಚ್ಚ ಮಾಡಬೇಕಾಗುತ್ತದೆ. ಕೌಟುಂಬಿಕವಾಗಿ ನೆಮ್ಮದಿಯ ದಿನಗಳಿವು. ಆದರೆ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಔದ್ಯೋಗಿಕ ಕ್ಷೇತ್ರದಲ್ಲಿ ಹಿನ್ನಡೆಯಿದ್ದರೂ ತಾಳ್ಮೆಯಿಂದಿರಿ.

ಸಿಂಹ: ವಿವಾಹ ಬೇಡವೆಂದು ಕುಳಿತಿದ್ದವರಿಗೆ ಅನಿರೀಕ್ಷಿತವಾಗಿ ವಿವಾಹ ಸಂಬಂಧಗಳು ಕೂಡಿಬರಲಿದೆ. ವಿದ್ಯಾರ್ಥಿಗಳಿಗೆ ಪ್ರಯತ್ನ ಬಲದಿಂದ ಯಶಸ್ಸು. ಸಂಗಾತಿಯಿಂದ ಶುಭ ವಾರ್ತೆ ಆಲಿಸುವಿರಿ.

 
ಕನ್ಯಾ: ಭೂ ವ್ಯವಹಾರದಲ್ಲಿ ಲಾಭ ಪಡೆಯುವಿರಿ. ಆದರೆ ಅಪರಿಚಿತರನ್ನು ನಂಬಿ ವ್ಯವಹಾರ ಮಾಡಬೇಡಿ. ಆರ್ಥಿಕವಾಗಿ ನಾನಾ ಖರ್ಚು ವೆಚ್ಚಗಳು ತಲೆದೋರಬಹುದು. ಸಂಗಾತಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಿರಿ.

ತುಲಾ: ಉದ್ಯೋಗ ಕ್ಷೇತ್ರದಲ್ಲಿ ಬಿಡುವಿಲ್ಲದ ಕೆಲಸದಿಂದ ದೇಹ ಹೈರಾಣಾಗುವುದು. ದೇಹಾರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಅಧಿಕಾರಿ ವರ್ಗದವರಿಗೆ ಮುನ್ನಡೆಯ ಭಾಗ್ಯವಿದೆ. ನಿರುದ್ಯೋಗಿಗಳು ತಾತ್ಕಾಲಿಕ ಉದ್ಯೋಗ ಕಂಡುಕೊಳ್ಳುವರು.

ವೃಶ್ಚಿಕ: ಮನೋಕಾಮನೆಗಳು ಈಡೇರುವುದು. ಸಂಗಾತಿಯಿಂದ ಸಂತಸ ಇಮ್ಮಡಿಗೊಳ್ಳುವುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣುವಿರಿ. ಧಾರ್ಮಿಕ ಕಾರ್ಯಗಳಿಗೆ ಧನವಿನಿಯೋಗ ಮಾಡಬೇಕಾಗುತ್ತದೆ.

ಧನು: ನಿಮ್ಮ ದುಡುಕು ಮಾತಿನಿಂದ ಸಂಸಾರದಲ್ಲಿ ಹದತಪ್ಪೀತು. ಎಚ್ಚರಿಕೆಯಿಂದಿರಬೇಕು. ಕೆಲಸ ಕಾರ್ಯಗಳಲ್ಲಿ ನಷ್ಟ ಅನುಭವಿಸಬೇಕಾದೀತು. ದೂರ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ. ವಾಹನ ಖರೀದಿ ಮಾಡಲು ಮುಂದಾಗುವಿರಿ.

ಮಕರ: ಆರ್ಥಿಕವಾಗಿ ಚೇತರಿಕೆ ಕಂಡುಬಂದು ಹಂತ ಹಂತವಾಗಿ ಅಭಿವೃದ್ಧಿ ಕಾಣುವಿರಿ. ಚಾಡಿ ಮಾತುಗಳಿಗೆ ಕಿವಿಗೊಡಬೇಡಿ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ. ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚೂ ಇರಲಿದೆ.

ಕುಂಭ: ಅನಗತ್ಯವಾಗಿ ಚಿಂತೆ ಮಾಡುತ್ತಾ ದೈನಂದಿನ ಕೆಲಸಗಳಲ್ಲಿ ನಿಧಾನ ಮಾಡುವಿರಿ. ಕಷ್ಟ-ಸುಖ ಎರಡೂ ಇಂದು ಸಮ್ಮಿಶ್ರವಾಗಿದ್ದು, ಸರಿದೂಗಿಸಿಕೊಂಡು ಹೋಗುವುದೇ ಜಾಣತನ. ದೇವರ ದರ್ಶನ ಪಡೆದರೆ ನೆಮ್ಮದಿ.

ಮೀನ: ಅಂದುಕೊಂಡ ಕಾರ್ಯಗಳು ಹಣಕಾಸಿನ ಅಭಾವದಿಂದ ಅರ್ಧಕ್ಕೆ ನಿಲ್ಲಲಿವೆ. ಹಿರಿಯರ ಆರೋಗ್ಯದಲ್ಲಿ ಸುಧಾರಣೆಯಾಗಲಿದೆ. ಅವಿವಾಹಿತರು ಯೋಗ್ಯ ಸಂಬಂಧಕ್ಕಾಗಿ ಕೆಲವು ಸಮಯ ಕಾಯುವುದು ಒಳ್ಳೆಯದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸಂಕಟ ಮೋಚನ ಹನುಮಾನ್ ಅಷ್ಟಕಂ ಸ್ತೋತ್ರ

ಹಣಕಾಸಿನ ಸಮಸ್ಯೆಯಿದ್ದರೆ ಕನಕಧಾರಾ ಸ್ತೋತ್ರ ತಪ್ಪದೇ ಓದಿ

2026 ರಲ್ಲಿ ಯಾವ ರಾಶಿಯವರು ಯಾವ ದೇವರ ಪ್ರಾರ್ಥನೆ ಮಾಡಬೇಕು ಗಮನಿಸಿ

ಗಣೇಶ ಕವಚ ಸ್ತೋತ್ರವನ್ನು ಮಕ್ಕಳಿಗೆ ಹೇಳಿಸಿ

ಈ ಐದು ರಾಶಿಯವರಿಗೆ 2026 ರಲ್ಲಿ ಸ್ವಂತ ಮನೆ ಕನಸು ನನಸಾಗುತ್ತದೆ

ಮುಂದಿನ ಸುದ್ದಿ
Show comments