Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಭಾನುವಾರ, 2 ಜೂನ್ 2019 (09:03 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.



ಮೇಷ: ಸಂಗಾತಿಯ ಆರೋಗ್ಯ ಹದತಪ್ಪಿ ಆಸ್ಪತ್ರೆಗೆ ಅಲೆದಾಡಬೇಕಾಗುತ್ತದೆ. ಮಕ್ಕಳಿಗಾಗಿ ಹೊಸ ವಸ್ತುಗಳ ಖರೀದಿ ಮಾಡುವಿರಿ. ಶುಭ ಮಂಗಲ ಕಾರ್ಯಗಳಿಗೆ ಓಡಾಟ ನಡೆಸಬೇಕಾಗುತ್ತದೆ. ಆರ್ಥಿಕವಾಗಿ ಖರ್ಚು ವೆಚ್ಚಗಳು ಅಧಿಕವಾದೀತು.

ವೃಷಭ: ಸ್ತ್ರೀಯರಿಂದ ಹೊಸ ಸಮಸ್ಯೆಗಳು ತೋರಿಬರಲಿವೆ. ಎಚ್ಚರಿಕೆಯಿಂದ ವ್ಯವಹರಿಸುವುದು ಮುಖ್ಯ. ವಾಸ ಸ್ಥಳ ಬದಲಾವಣೆಗೆ ಚಿಂತನೆ ನಡೆಸುವಿರಿ. ಸಾಂಸಾರಿಕವಾಗಿ ಹೊಂದಾಣಿಕೆ ಅಗತ್ಯ. ಓಡಾಟದಿಂದ ದೇಹಾಯಾಸವಾಗಬಹುದು.

ಮಿಥುನ: ಕೌಟುಂಬಿಕ ಜವಾಬ್ಧಾರಿಗಳನ್ನು ನಿಭಾಯಿಸಲು ಹೊಸ ವ್ಯಕ್ತಿಗಳ ಸಹಾಯ ಪಡೆಯಬೇಕಾಗುತ್ತದೆ. ಸ್ವ ಉದ್ಯೋಗಕ್ಕೆ ಕೈ ಹಾಕಿದರೆ ಲಾಭ ಗಳಿಸಬಹುದು. ಮಿತ್ರರ ಭೇಟಿ, ಭೋಜನ ಸಾಧ್ಯತೆಯಿದೆ.

ಕರ್ಕಟಕ: ಅವಿವಾಹಿತರಿಗೆ ಮನಸ್ಸಿಗೆ ಹಿಡಿಸಿದ ವೈವಾಹಿಕ ಸಂಬಂಧಗಳು ಕೂಡಿಬರಲಿವೆ. ನಿರುದ್ಯೋಗಿಗಳು ಉದ್ಯೋಗ ನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ. ನೆರೆಹೊರೆಯವರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ.

ಸಿಂಹ: ಗೃಹೋಪಯೋಗಿ ವಸ್ತುಗಳ ಖರೀದಿಗೆ ಹೆಚ್ಚಿನ ಧನವ್ಯಯಮಾಡಬೇಕಾಗುತ್ತದೆ. ಹಿರಿಯರ ಮಾತಿಗೆ ಮನ್ನಣೆ ಕೊಡಿ. ಸಂತಾನಾಪೇಕ್ಷಿತ ದಂಪತಿಗಳಿಗೆ ಶುಭ ಸೂಚನೆ ಸಿಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ.

 
ಕನ್ಯಾ: ಉದ್ದೇಶಿತ ಕಾರ್ಯಗಳಿಗೆ ಕೆಲವೊಂದು ಅಡ್ಡಿ ಆತಂಕಗಳು ಎದುರಾದರೂ ಧೃತಿಗೆಡದೇ ಮುನ್ನಡೆಯಿರಿ. ಹಳೆಯ ಮಿತ್ರರು ಸಹಾಯಕ್ಕೆ ಬರುವರು. ವಾತ ಸಂಬಂಧೀ ಆರೋಗ್ಯ ಸಮಸ್ಯೆ ಎದುರಾಗಬಹುದು. ಎಚ್ಚರಿಕೆ ಅಗತ್ಯ.

ತುಲಾ: ಕೌಟುಂಬಿಕವಾಗಿ ನೆಮ್ಮದಿಯ ದಿನ. ಪತ್ನಿ ಮಕ್ಕಳೊಂದಿಗೆ ಸುಂದರ ಕ್ಷಣ ಕಳೆಯುವಿರಿ. ಆದರೆ ಅನಿರೀಕ್ಷಿತವಾಗಿ ಬರುವ ಕೆಲವೊಂದು ಖರ್ಚುಗಳು ಚಿಂತೆ ಹೆಚ್ಚಿಸುವುದು. ಶುಭ ಕಾರ್ಯ ನಡೆಸಲು ಸೂಕ್ತ ಕಾಲ.

ವೃಶ್ಚಿಕ: ಸಾಂಸಾರಿಕವಾಗಿ ಸಾಮರಸ್ಯದ ಕೊರತೆಯಿಂದ ಸಂಗಾತಿಯೊಂದಿಗೆ ಮನಸ್ತಾಪವಾಗಬಹುದು. ಚಾಡಿ ಮಾತುಗಳು ಕೇಳಿಬಂದೀತು. ಆದರೆ ತಾಳ್ಮೆಯಿಂದ ಮುನ್ನಡೆಯುವುದು ಅಗತ್ಯ.

ಧನು: ವಿವೇಚನಾ ಶಕ್ತಿ ಬಳಸಿ ಕಾರ್ಯದಲ್ಲಿ ತೊಡಗಿಕೊಂಡರೆ ಸೂಕ್ತ. ಸಂಗಾತಿಯ ಮಾತುಗಳಿಗೆ ಮನ್ನಣೆ ನೀಡಿ. ಮಕ್ಕಳೊಂದಿಗೆ ಭಿನ್ನಾಭಿಪ್ರಾಯಗಳಾಗಬಹುದು. ವಿದ್ಯಾರ್ಥಿಗಳು ಅಭ್ಯಾಸದ ಕಡೆಗೆ ಗಮನಹರಿಸಬೇಕು.

ಮಕರ: ವಿವಾಹೇಪೇಕ್ಷಿತರಿಗೆ ಸೂಕ್ತ ಸಂಬಂಧ ಕೂಡಿಬರುವುದು. ವ್ಯಾಪಾರಿಗಳಿಗೆ ಕೊಂಚ ನಷ್ಟವಾಗಬಹುದು. ನೂತನ ಗೃಹ ನಿರ್ಮಾಣ ಕಾರ್ಯಕ್ಕೆ ಮುಂದಾಗುವಿರಿ. ನೂತನ ದಂಪತಿಗಳಿಗೆ ಮಧುಚಂದ್ರದ ಭಾಗ್ಯ.

ಕುಂಭ: ದೈವಾನುಕೂಲದಿಂದ ಎಷ್ಟೋ ದಿನದಿಂದ ಕಾಡುತ್ತಿದ್ದ ಸಮಸ್ಯೆಗೆ ಪರಿಹಾರ ದೊರಕಲಿದೆ. ಆದರೆ ಸಂಗಾತಿಯಿಂದ ಅಪಸ್ವರ ಕೇಳಿಬಂದೀತು. ಧಾರ್ಮಿಕ ಕಾರ್ಯಗಳಿಗೆ ಧನಸಹಾಯ ಮಾಡುವಿರಿ.

ಮೀನ: ನಿರುದ್ಯೋಗಿಗಳು ಪಾಲಿಗೆ ಬಂದ ಅವಕಾಶವನ್ನು ಬಳಸಿಕೊಳ್ಳಬೇಕಾಗುತ್ತದೆ. ಪ್ರೇಮಿಗಳಿಗೆ ಮನೆಯವರಿಂದ ವಿರೋಧ ವ್ಯಕ್ತವಾಗಬಹುದು. ಇಷ್ಟಾರ್ಥ ಸಿದ್ಧಿಗೆ ಕುಲದೇವರ ಧ್ಯಾನ ಮಾಡಿ. ಆರ್ಥಿಕವಾಗಿ ಸಬಲರಾಗುವಿರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ದೋಷವಿರುವವರು ಓದಲೇ ಬೇಕಾದ ಸ್ತೋತ್ರ

ಮಹಾವಿಷ್ಣು, ಲಕ್ಷ್ಮಿ ದೇವಿಯ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ಅಂದುಕೊಂಡ ಕೆಲಸವಾಗಬೇಕಾದರೆ ಸಾಯಿ ಬಾಬಾ ಪ್ರಾರ್ಥನಾಷ್ಟಕಂ ಓದಿ

ಬುಧ ಕವಚಂ ಸ್ತೋತ್ರವನ್ನು ವಿದ್ಯಾರ್ಥಿಗಳು ತಪ್ಪದೇ ಓದಬೇಕು ಯಾಕೆ ನೋಡಿ

ನಾಗದೋಷ ಪರಿಹಾರಕ್ಕಾಗಿ ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments