ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಶನಿವಾರ, 1 ಜೂನ್ 2019 (08:25 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಹಿನ್ನಡೆಯಾಗಬಹುದು. ಮನೆ ಮಾಲಿಇಕರ ಕಿರಿ ಕಿರಿಯಿಂದಾಗಿ ಮನೆ ಬದಲಾವಣೆಗೆ ಚಿಂತನೆ ಮಾಡುವಿರಿ. ಸ್ವ ಉದ್ಯೋಗಿಗಳು ಆರ್ಥಿಕ ಲಾಭ ಗಳಿಸುವರು.

ವೃಷಭ: ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಾಣುವಿರಿ. ವೃತ್ತಿರಂಗದಲ್ಲಿ ಮುನ್ನಡೆಯಿರುತ್ತದೆ. ಆದರೆ ಸಾಂಸಾರಿಕವಾಗಿ ಸಂಗಾತಿಯೊಂದಿಗೆ ಮನಸ್ತಾಪ ಮಾಡಿಕೊಳ್ಳುವಿರಿ.

ಮಿಥುನ: ದೂರ ಸಂಚಾರ ಮಾಡುವಾಗ ಅಪಘಾತದ ಭಯ ಎದುರಾಗಲಿದೆ. ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿರಲಿ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ. ಖರ್ಚು ವೆಚ್ಚಗಳ ಬಗ್ಗೆ ಗಮನಹರಿಸುವುದು ಮುಖ್ಯ.

ಕರ್ಕಟಕ: ದೈವಾನುಗ್ರಹದಿಂದ ಸಾಂಸಾರಿಕವಾಗಿ ಸುಖ ಶಾಂತಿ ನೆಲೆಸಲಿದೆ. ಆರ್ಥಿಕವಾಗಿ ಪ್ರಗತಿ ಕಾಣುವಿರಿ. ಸಾಲಗಳು ಮರುಪಾವತಿಯಾಗುವುದು. ನಿರುದ್ಯೋಗಿಗಳು ಉದ್ಯೋಗ ನಿಮಿತ್ತ ದೂರ ಸಂಚಾರ ಮಾಡಬೇಕಾಗಬಹುದು.

ಸಿಂಹ: ಅನವಶ್ಯಕವಾಗಿ ಕೋಪದ ಕೈಗೆ ಬುದ್ಧಿ ಕೊಟ್ಟು ಆತುರದ ನಿರ್ಧಾರ ಕೈಗೊಳ್ಳಬೇಡಿ. ಹಿರಿಯರ ಹಿತವಚನಗಳಿಗೆ ಕಿವಿಗೊಡಿ. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳು ನಿಮ್ಮ ಸಹಾಯ ಬಯಸುವರು.

 
ಕನ್ಯಾ: ಮನೆಯಲ್ಲಿ ಶುಭ ಕಾರ್ಯಗಳಿಗಾಗಿ ಓಡಾಟ ಹೆಚ್ಚುವುದು. ಹೊಸ ಜನರ ಸಂಪರ್ಕ ಹೊಸ ದಾರಿ ನೀಡುವುದು. ಗೃಹೋಪಯೋಗಿ ವಸ್ತುಗಳಿಗಾಗಿ ಖರ್ಚು ಮಾಡಬೇಕಾಗುತ್ತದೆ. ಕಷ್ಟದ ಸಂದರ್ಭದಲ್ಲಿ ಮಹಿಳೆಯರಿಂದ ಸಹಾಯ.

ತುಲಾ: ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಮೂಡಲಿದೆ. ಮಕ್ಕಳ ಭವಿಷ್ಯದ ಬಗ್ಗೆ ಹೊಸ ದಾರಿ ಕಂಡುಕೊಳ್ಳುವಿರಿ. ರಾಜಕೀಯವಾಗಿ ನಿಮ್ಮ ಸ್ಥಾನ ಮಾನ ಹೆಚ್ಚುವುದು. ಆದರೆ ಖರ್ಚುಗಳ ಬಗ್ಗೆ ಹಿಡಿತವಿರಬೇಕು.

ವೃಶ್ಚಿಕ: ಋಣಬಾಧೆಗಳು ನಿವಾರಣೆಯಾಗುವುದು. ಆರ್ಥಿಕವಾಗಿ ನಿಧಾನವಾಗಿ ಪ್ರಗತಿ ಕಾಣುವಿರಿ. ಅಂದುಕೊಂಡ ಕಾರ್ಯಗಳಿಗೆ ಕೈ ಹಾಕಲು ಇದುವೇ ಸಕಾಲ. ಸಾಮಾಜಿಕವಾಗಿ ಗೌರವ ಪ್ರತಿಷ್ಠೆ ಹೆಚ್ಚಿಸಿಕೊಳ್ಳುವಿರಿ.

ಧನು: ಮಕ್ಕಳು ಹೇಳುವ ಯಾವುದೋ ಒಂದು ವಿಚಾರ ನಿಮ್ಮ ಚಿಂತೆ ಹೆಚ್ಚಿಸಲಿದೆ. ಆದರೆ ಮನೆಯವರಲ್ಲಿ ವಿಶ್ವಾಸವಿಡುವುದು ಮುಖ್ಯ. ದೈಹಿಕ ಆರೋಗ್ಯದ ಬಗ್ಗೆ ಕಾಳಜಿಯಿಡಬೇಕು. ಹೊಸ ವಸ್ತುಗಳು ಮನೆಗೆ ಬರಲಿವೆ.

ಮಕರ: ವೃತ್ತಿ ರಂಗದಲ್ಲಿ ಮುನ್ನಡೆ, ಬಡ್ತಿ ಯೋಗವಿದೆ. ಯಾರ ಮನಸ್ಸನ್ನೂ ನೋಯಿಸುವ ಕೆಲಸ ಮಾಡದಂತೆ ಎಚ್ಚರಿಕೆ ವಹಿಸಬೇಕು. ಆರ್ಥಿಕ ಪ್ರಗತಿ ನಿಮ್ಮ ಸಂತಸ ಹೆಚ್ಚಲು ಕಾರಣವಾಗುತ್ತದೆ. ದೇವತಾ ಪ್ರಾರ್ಥನೆ ಮಾಡಿ.

ಕುಂಭ: ಬೇಡದ ಯೋಚನೆ, ಚಿಂತೆ ಮಾಡುತ್ತಾ ಕಾಲ ಹರಣ ಮಾಡಬೇಡಿ. ಕೌಟುಂಬಿಕ ಜವಾಬ್ಧಾರಿಗಳಿಗೆ ಹೆಗಲುಗೊಡಿ. ನಿರುದ್ಯೋಗಿಗಳು ಉತ್ತಮ ಅವಕಾಶಕ್ಕಾಗಿ ಕಾಯಬೇಕಾಗುತ್ತದೆ. ದಿನದಂತ್ಯಕ್ಕೆ ಶುಭ ಸುದ್ದಿ.

ಮೀನ: ನೂತನ ದಂಪತಿಗಳಿಗೆ ಮಧುಚಂದ್ರ ಭಾಗ್ಯ. ಪ್ರಯತ್ನ ಬಲವಿದ್ದರೆ ಯಾವುದೇ ಕೆಲಸ ಮಾಡಿದರೂ ಯಶಸ್ಸು ಖಂಡಿತಾ. ಗುರುವಿನ ಅನುಗ್ರಹಕ್ಕೆ ಪಾತ್ರರಾಗಲಿದ್ದೀರಿ. ಪ್ರವಾಸ ಇತ್ಯಾದಿ ಮನಸ್ಸಿಗೆ ಮುದ ನೀಡುವ ಕೆಲಸ ಮಾಡಲಿದ್ದೀರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಬುಧವಾರ ಗಣೇಶನ ಅನುಗ್ರಹಕ್ಕೆ ಈ ಸ್ತೋತ್ರ ಓದಿ

ವೈಕುಂಠ ಏಕಾದಶಿ ದಿನವಾದ ಇಂದು ಮಹಾವಿಷ್ಣುವಿನ ಈ ಮಂತ್ರವನ್ನು ತಪ್ಪದೇ ಪಠಿಸಿ

ವಿವಾಹ, ಸಂತಾನಕ್ಕೆ ಅಡ್ಡಿಯಾಗುತ್ತಿದ್ದರೆ ಸುಬ್ರಹ್ಮಣ್ಯನ ಈ ಸ್ತೋತ್ರ ಓದಿ

ನಾಳೆ ವೈಕುಂಠ ಏಕಾದಶಿ, ಹೀಗಿರಲಿ ಪೂಜಾ ವಿಧಾನ

ಶಿವನ ಅನುಗ್ರಹಕ್ಕಾಗಿ ಇಂದು ಈ ಮಂತ್ರ ಓದಿ

ಮುಂದಿನ ಸುದ್ದಿ
Show comments