ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಶನಿವಾರ, 27 ಏಪ್ರಿಲ್ 2019 (06:32 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಆಪ್ತೇಷ್ಟರ ಭೇಟಿ ಮನಸ್ಸಿಗೆ ಸಂತಸ ನೀಡುವುದು. ಮಕ್ಕಳಿಂದ ಖುಷಿಯ ವಾತಾವರಣ. ಪಾಲು ಬಂಡವಾಳ ಹೂಡಿಕೆ ವಿಚಾರದಲ್ಲಿ ಲಾಭ ಗಳಿಸುವಿರಿ. ಆರ್ಥಿಕವಾಗಿ ಸಮಾಧಾನಕರ ದಿನ. ದಿನದಂತ್ಯಕ್ಕೆ ಶುಭ ಸುದ್ದಿ.

ವೃಷಭ: ಬಯಸಿದ ರೀತಿಯಲ್ಲಿ ಕೆಲಸ ಕಾರ್ಯಗಳು ನಡೆಯುವುದು. ಆದರೆ ಹಿತಶತ್ರುಗಳಿಂದ ಮನಸ್ಸಿಗೆ ಕಿರಿ ಕಿರಿಯಾಗುವುದು. ಉದ್ಯೋಗ ಕ್ಷೇತ್ರದಲ್ಲಿ ಬಡ್ತಿ, ಮುನ್ನಡೆ ಸಾಧ್ಯತೆಯಿದೆ. ವ್ಯಾಪಾರ ವ್ಯವಹಾರಗಳಿಂದ ಲಾಭ.

ಮಿಥುನ: ಕಷ್ಟದ ಸಂದರ್ಭದಲ್ಲಿ ಮಹಿಳೆಯರಿಂದ ಪರಿಹಾರ ಸಿಗುವುದು. ಆರ್ಥಿಕವಾಗಿ ಸಂಕಷ್ಟದ ಸಮಯ. ವಿವಾಹ ಪ್ರಸ್ತಾಪಗಳು ಬಂದರೂ ಮನಸ್ಸಿಗೆ ಹಿಡಿಸದು. ಬಂಡವಾಳ ಹೂಡಿಕೆಯಲ್ಲಿ ಎಚ್ಚರ ವಹಿಸಿ.

ಕರ್ಕಟಕ: ಸಂಗಾತಿಯಿಂದ ಸಹಾಯ ಸಿಗುವುದು. ಪತ್ನಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ. ಆದರೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ಕಂಡುಬರಬಹುದು. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ.

ಸಿಂಹ: ಆಗಾಗ ಆರ್ಥಿಕ ಮುಗ್ಗಟ್ಟುಗಳು ಎದುರಾಗುವುದು. ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಜಯ ನಿಮ್ಮದಾಗುವುದು. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ. ಆದರೆ ಮಕ್ಕಳ ವಿಚಾರದಲ್ಲಿ ಚಿಂತೆ ಮಾಡಬೇಕಾಗುತ್ತದೆ.

 
ಕನ್ಯಾ: ಇಂದು ದೈವಾನುಕೂಲದಿಂದ ಕೈಗೊಂಡ ಕಾರ್ಯಗಳು ಸುಗಮವಾಗಿ ನೆರವೇರುವುದು. ವ್ಯಾಪಾರ, ವ್ಯವಹಾರಗಳಲ್ಲಿ ಜಯ. ಆರ್ಥಿಕವಾಗಿ ಲಾಭ ಗಳಿಸುವಿರಿ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರುವುದು.

ತುಲಾ: ನಿಮ್ಮ ಉತ್ತಮ ನಡವಳಿಕೆಗೆ ಶತ್ರುಗಳೇ ಮನಸೋಲುವರು. ಆರ್ಥಿಕವಾಗಿ ನಾನಾ ಮೂಲಗಳಿಂದ ಧನಾಗಮನವಾಗಲಿದೆ. ಆದರೆ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ದೂರ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ.

ವೃಶ್ಚಿಕ: ವ್ಯಾಪಾರ, ವ್ಯವಹಾರಗಳಿಂದ ನಷ್ಟ ಅನುಭವಿಸಬೇಕಾದೀತು. ತಾಳ್ಮೆ ಸಮಾಧಾನದಿಂದಲೇ ಮುಂದುವರಿಯಬೇಕು. ವಿದ್ಯಾರ್ಥಿಗಳಿಗೆ ಕೊಂಚ ನಿರಾಶಾದಾಯಕ ಫಲಿತಾಂಶ. ಆರೋಗ್ಯದ ಬಗ್ಗೆ ಕಾಳಜಿವಹಿಸಿ.

ಧನು: ಬಂಧು ಮಿತ್ರರ ಸಹಕಾರ ದೊರೆಯಲಿದೆ. ಉದ್ಯೋಗ ನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಅಲ್ಪ ಮುನ್ನಡೆ ಇರಲಿದೆ. ಆರ್ಥಿಕ ಮುಗ್ಗಟ್ಟುಗಳು ಎದುರಾಗಬಹುದು.

ಮಕರ: ಮನೆ ಬದಲಾವಣೆ, ಹೊಸ ವಸ್ತುಗಳ ಖರೀದಿಗೆ ಚಿಂತನೆ ನಡೆಸುವಿರಿ. ವ್ಯವಹಾರಗಳಲ್ಲಿ ಜಯ ಕಾಣುವಿರಿ. ಪಾಲಿಗೆ ಬಂದ ಅವಕಾಶವನ್ನು ಬಳಸಿಕೊಳ್ಳಿ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ.

ಕುಂಭ: ಮಾತಿನಲ್ಲಿ ದುಡುಕದಿರಿ. ವಾದ ವಿವಾದಗಳಾಗುವ ಸಾಧ್ಯತೆಯಿದೆ. ಕಾರ್ಯದೊತ್ತಡ ಹೆಚ್ಚಿ ದೇಹ ಹೈರಾಣಾಗಲಿದೆ. ಮಕ್ಕಳ ಬಗ್ಗೆ ಚಿಂತೆ ಮಾಡಬೇಕಾಗುವುದು. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.

ಮೀನ: ಅವಿವಾಹಿತರಿಗೆ ವಿವಾಹ ಭಾಗ್ಯ. ಸಂತಾನಹೀನರಿಗೆ ಶುಭ ಸೂಚಕ ಫಲಗಳಿರಲಿದೆ. ಅನಿರೀಕ್ಷಿತವಾಗಿ ಬರುವ ಬಂಧು ಮಿತ್ರರಿಂದ ಮನಸ್ಸಿಗೆ ಸಂತಸವಾಗುವುದು. ಶುಭ ಮಂಗಲಕಾರ್ಯಗಳಿಗೆ ಓಡಾಟ ನಡೆಸಬೇಕಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸಂಕಟ ಮೋಚನ ಹನುಮಾನ್ ಅಷ್ಟಕಂ ಸ್ತೋತ್ರ

ಹಣಕಾಸಿನ ಸಮಸ್ಯೆಯಿದ್ದರೆ ಕನಕಧಾರಾ ಸ್ತೋತ್ರ ತಪ್ಪದೇ ಓದಿ

2026 ರಲ್ಲಿ ಯಾವ ರಾಶಿಯವರು ಯಾವ ದೇವರ ಪ್ರಾರ್ಥನೆ ಮಾಡಬೇಕು ಗಮನಿಸಿ

ಗಣೇಶ ಕವಚ ಸ್ತೋತ್ರವನ್ನು ಮಕ್ಕಳಿಗೆ ಹೇಳಿಸಿ

ಈ ಐದು ರಾಶಿಯವರಿಗೆ 2026 ರಲ್ಲಿ ಸ್ವಂತ ಮನೆ ಕನಸು ನನಸಾಗುತ್ತದೆ

ಮುಂದಿನ ಸುದ್ದಿ
Show comments