Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಬುಧವಾರ, 17 ಏಪ್ರಿಲ್ 2019 (06:45 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಕಾರ್ಯ ನಿಮಿತ್ತ ಓಡಾಟ ನಡೆಸಬೇಕಾಗುತ್ತದೆ. ಮನೆಯವರೊಡನೆ ಸಂತೋಷದಿಂದ ಕಾಲ ಕಳೆಯುವಿರಿ. ಹೊಸ ವಸ್ತುಗಳ ಖರೀದಿ ಮಾಡುವಿರಿ. ಆದರೆ ಖರ್ಚು ವೆಚ್ಚಗಳ ಬಗ್ಗೆ ನಿಗಾ ಇರಲಿ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.

ವೃಷಭ: ನಿರುದ್ಯೋಗಿಗಳು ಉದ್ಯೋಗ ಅರಸಿಕೊಂಡು ಬೇರೆ ಊರಿಗೆ ಪ್ರಯಾಣ ಮಾಡಬೇಕಾಗುತ್ತದೆ. ನೆರೆಹೊರೆಯವರೊಡನೆ ವಾಗ್ವಾದಕ್ಕಿಳಿಯಬೇಡಿ. ಆಸ್ತಿ ವಿವಾದಗಳು ಕೋರ್ಟು ಮೆಟ್ಟಿಲೇರಲಿವೆ. ಹಿರಿಯರ ಮಾತಿಗೆ ಮನ್ನಣೆ ನೀಡಿ.

ಮಿಥುನ: ಅವಿವಾಹಿತರು ಮನಸ್ಸಿಗೆ ಬಯಸಿದಂತಹ ವಿವಾಹ ಪ್ರಸ್ತಾಪಗಳಿಂದು ಸಂತಸಗೊಳ್ಳುವರು. ಪ್ರೇಮಿಗಳಿಗೆ ಮನೆಯವರಿಂದ ಕೊಂಚ ವಿರೋಧ ವ್ಯಕ್ತವಾಗುವುದು. ವ್ಯಾಪಾರ ವಹಿವಾಟಿನಲ್ಲಿ ಚೇತರಿಕೆ ಕಂಡುಬಂದು ಮನಸ್ಸಿಗೆ ನೆಮ್ಮದಿಯಾಗುವುದು.

ಕರ್ಕಟಕ: ಆರ್ಥಿಕವಾಗಿ ಸಕಾಲದಲ್ಲಿ ಹಣಕಾಸಿನ ಹರಿವು ಬರುವುದರಿಂದ ಅಂದುಕೊಂಡ ಕಾರ್ಯಗಳು ಸುಗಮವಾಗಿ ನೆರವೇರುವುದು. ಆರೋಗ್ಯ ಸಮಸ್ಯೆಗಳು ದೂರವಾಗುವುದು. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರುವುದು.

ಸಿಂಹ: ಸಾಮಾಜಿಕ, ಧಾರ್ಮಿಕ ಕೆಲಸಗಳಿಗೆ ನಾಯಕತ್ವ ವಹಿಸುವಿರಿ. ನಿಮ್ಮ ಪರಿಶ್ರಮಕ್ಕೆ ಪ್ರಶಂಸೆ, ಬೆಲೆ ಸಿಗಲಿದೆ. ಆದಾಯ ಗಳಿಕೆಗೆ ನಾನಾ ಮೂಲಗಳನ್ನು ಹುಡುಕುವಿರಿ. ಕೃಷಿಕರು ಲಾಭ ಗಳಿಸುವರು. ಹಿರಿಯರ ಆರೋಗ್ಯದ ಬಗ್ಗೆ ಎಚ್ಚರಿಕೆಯಿರಲಿ.

ಕನ್ಯಾ: ಸಂಗಾತಿಯ ಅಲಂಕಾರಿಕ ವಸ್ತುಗಳಿಗೆ ಹೆಚ್ಚಿನ ಧನವ್ಯಯವಾಗಲಿದೆ. ಹಾಗಿದ್ದರೂ ಆರ್ಥಿಕವಾಗಿ ಆದಾಯಕ್ಕೆ ಕೊರತೆಯಾಗದು. ಉದ್ಯೋಗ ಕ್ಷೇತ್ರದಲ್ಲಿ ಕಾರ್ಯದೊತ್ತಡ ತಪ್ಪದು. ದೇಹಾಯಾಸವಾದರೂ ಮನಸ್ಸಿನ ನೆಮ್ಮದಿಗೆ ಕೊರತೆಯಿರದು.

ತುಲಾ: ನಿರುದ್ಯೋಗಿಗಳು ತಾತ್ಕಾಲಿಕ ಉದ್ಯೋಗ ಪಡೆಯುವರು ಹೆಚ್ಚಿನ ಆದಾಯ ಗಳಿಕೆಗೆ ಪ್ರಯತ್ನಿಸುವಿರಿ. ಅಪರೂಪಕ್ಕೆ ಸಿಗುವ ಮಿತ್ರರಿಂದ ನಿಮ್ಮ ಬಹುಕಾಲದ ಸಮಸ್ಯೆಯೊಂದಕ್ಕೆ ಪರಿಹಾರ ಸಿಗಲಿದೆ. ದೇವತಾ ಪ್ರಾರ್ಥನೆ ಮಾಡಿದರೆ ಹೆಚ್ಚಿನ ಶುಭ ಫಲ.

ವೃಶ್ಚಿಕ: ಮಕ್ಕಳಿಲ್ಲದ ದಂಪತಿಗೆ ಶುಭ ಸೂಚನೆಯಿದೆ. ನೂತನ ದಂಪತಿಗಳಿಗೆ ಮಧು ಚಂದ್ರ ಭಾಗ್ಯ. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಂದ ಕಿರಿ ಕಿರಿ ಇದ್ದರೂ, ಸಹೋದ್ಯೋಗಿಗಳು ನೆರವಿಗೆ ಬರುವರು. ಹಿತಶತ್ರುಗಳ ಬಗ್ಗೆ ಎಚ್ಚರಿಕೆ ಅಗತ್ಯ.

ಧನು: ದಾನ, ಧರ್ಮ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿರಿ. ಮಕ್ಕಳಿಂದ ಸಂತೋಷ, ನೆಮ್ಮದಿ ಸಿಗಲಿದೆ. ಆದರೂ ಕೌಟುಂಬಿಕ ವಿಚಾರದಲ್ಲಿ ಜವಾಬ್ಧಾರಿ, ಕೆಲಸಗಳು ಹೆಚ್ಚಿ ದೇಹಾಯಾಸವಾಗಬಹುದು.

ಮಕರ: ದುಡುಕು ವರ್ತನೆ ತೋರದಿರಿ, ವಾದ ವಿವಾದಗಳಿಂದ ದೂರವಿರಿ. ನಿರುದ್ಯೋಗ ಸಮಸ್ಯೆ ತಾತ್ಕಾಲಿಕ ಪರಿಹಾರ ಸಿಗುವುದು. ಕೈಗೆ ಬಂದ ಅವಕಾಶ ಕಳೆದುಕೊಳ್ಳದಿರಿ. ವಿದ್ಯಾರ್ಥಿಗಳು ಸತತ ಪರಿಶ್ರಮ ಪಡಬೇಕಾಗುವುದು.

ಕುಂಭ: ಯಾವುದೋ ಒಂದು ಮಾನಸಿಕ ಕೊರಗು ನಿಮ್ಮನ್ನು ಕಾಡಲಿದ್ದು, ಕೆಲಸ ಕಾರ್ಯಗಳಲ್ಲಿ ಉದಾಸೀನ ಪ್ರವೃತ್ತಿ ಕಂಡುಬರುವುದು. ಸಂಗಾತಿಯೊಂದಿಗೆ ಮನಸ್ತಾಪ ಮಾಡಿಕೊಳ್ಳಲಿದ್ದೀರಿ. ಉದ್ಯೋಗ, ವ್ಯವಹಾರದಲ್ಲಿ ಸಮಾಧಾನಕರ ಫಲ.

ಮೀನ: ಚಂಚಲ ಮನಸ್ಸು ನಿಮ್ಮದಾಗಿ ನಿರ್ಧಾರ ಕೈಗೊಳ್ಳುವಲ್ಲಿ ಸೋತು ಹೋಗುವಿರಿ. ದಾಯಾದಿಗಳಿಂದ ಆಸ್ತಿ ಸಂಬಂಧವಾದ ವ್ಯಾಜ್ಯಗಳು ಎದುರಾಗಬಹುದು. ಅವಿವಾಹಿತರಿಗೆ ಕಂಕಣ ಭಾಗ್ಯವಿದೆ. ದಿನದಂತ್ಯಕ್ಕೆ ಶುಭ ಸುದ್ದಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ                         

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸಾಲದಿಂದ ಮುಕ್ತಿ ಬೇಕಾದರೆ ಕನಕಧಾರಾ ಸ್ತೋತ್ರ ಪಠಿಸಿ: ಕನ್ನಡದಲ್ಲಿ ಇಲ್ಲಿದೆ ನೋಡಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಧನುರ್ಮಾಸದಲ್ಲಿ ವಿಷ್ಣುವಿನ ಆರಾಧನೆಯಿಂದ ಸಿಗುತ್ತದೆ ಭಾರೀ ಪ್ರತಿಫಲ

ವಿವಾಹಾದಿ ವಿಘ್ನಗಳಿದ್ದರೆ ಲಲಿತಾ ಅಷ್ಟೋತ್ತರ ಮಂತ್ರ ಓದಿ: ಕನ್ನಡದಲ್ಲಿ ಇಲ್ಲಿದೆ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments