Daily Horoscope
✕

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಶುಕ್ರವಾರ, 29 ಮಾರ್ಚ್ 2019 (08:14 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಕಾರ್ಯಕ್ಷೇತ್ರದಲ್ಲಿ ಹಲವು ಅಡ್ಡಿ ಆತಂಕಗಳು ಎದುರಾಗಲಿವೆ. ಮಿತ್ರರ ಸಹಕಾರ ದೊರೆಯುವುದು. ಶುಭ ಮಂಗಲ ಕಾರ್ಯಗಳಿಗೆ ಚಿಂತನೆ ನಡೆಸುವಿರಿ. ಕಷ್ಟಕಾಲದಲ್ಲಿ ಹಿರಿಯರ ಸಲಹೆಗೆ ಕಿವಿಗೊಡಿ.

ವೃಷಭ: ಆರೋಗ್ಯ ಕೈಕೊಟ್ಟು ಆಸ್ಪತ್ರೆಗೆ ಅಲೆದಾಡುವ ಪರಿಸ್ಥಿತಿ ಎದುರಾಗಬಹುದು. ಮೈ ಕೈ ನೋವಿನಂತಹ ಸಮಸ್ಯೆ ಬರಲಿದೆ. ವ್ಯಾಪಾರ, ವ್ಯವಹಾರದಲ್ಲಿ ಲಾಭ ಗಳಿಸುವಿರಿ. ಆರ್ಥಿಕವಾಗಿ ಆದಾಯಕ್ಕೆ ಕೊರತೆಯಿರದು.

ಮಿಥುನ: ಅಧಿಕಾರಿ ವರ್ಗದವರಿಗೆ ಉದ್ಯೋಗದಲ್ಲಿ ಹಿನ್ನಡೆ ಭೀತಿಯಿದೆ. ವಿನಾಕಾರಣ ಅಪವಾದಕ್ಕೆ ಗುರಿಯಾಗಬೇಕಾಗಬಹುದು. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರಲಿವೆ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ.

ಕರ್ಕಟಕ: ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣುವರು, ಶಿಕ್ಷಕರು, ಪೋಷಕರಿಂದ ಪ್ರಶಂಸೆಗೊಳಗಾಗುವರು. ಮಿತ್ರರ ಸಹಕಾರದಿಂದ ಬರಬಹುದಾದ ಕಷ್ಟದಿಂದ ಪಾರಾಗುವಿರಿ. ಪ್ರವಾಸ, ದೂರಸಂಚಾರ ಕೈಗೊಳ್ಳುವ ಸಂಭವವಿದೆ.

ಸಿಂಹ: ಕೌಟುಂಬಿಕವಾಗಿ ಜವಾಬ್ಧಾರಿಗಳು ಹೆಚ್ಚುವುದು. ಸಹೋದರಿಯ ಮದುವೆ ಜವಾಬ್ಧಾರಿ ನಿಭಾಯಿಸಬೇಕಾಗುತ್ತದೆ. ಆರ್ಥಿಕವಾಗಿ ನಾನಾ ಖರ್ಚುಗಳು ಕಂಡುಬರುವುದು. ಆದರೆ ಆದಾಯಕ್ಕೂ ಕೊರತೆಯಿರದು. ದಿನದಂತ್ಯಕ್ಕೆ ಶುಭ ಸುದ್ದಿ.

ಕನ್ಯಾ: ಸಾಲ ಮಾಡಿದ್ದರೆ, ಸಾಲಗಾರರು ಮನೆ ಬಾಗಿಲಿಗೆ ಬರುವರು. ಆರ್ಥಿಕ ಸಂಕಷ್ಟ ನಿಮ್ಮನ್ನು ಹೈರಾಣಾಗಿಸಲಿದೆ. ಆರೋಗ್ಯ ಕೈಕೊಡದಂತೆ ಎಚ್ಚರವಹಿಸಿ. ಕೃಷಿಕರು ಹೆಚ್ಚಿನ ಪರಿಶ್ರಮ ಪಡಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಮುನ್ನಡೆ ಇದೆ.

ತುಲಾ: ದೈವಾನುಕೂಲದಿಂದ ಆದಾಯ ಹೆಚ್ಚಿ, ವಾಹನ, ಆಸ್ತಿ ಖರೀದಿಗೆ ಮನಸ್ಸು ಮಾಡುವಿರಿ. ಯೋಗ್ಯ ವಯಸ್ಕರು ಸಂಗಾತಿಯ ಹುಡುಕಾಟಕ್ಕೆ ತೊಡಗುವರು. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದೆ.

ವೃಶ್ಚಿಕ: ಉದ್ಯೋಗದಲ್ಲಿ ಬದಲಾವಣೆ, ವಾಸ ಸ್ಥಳ ಬದಲಾವಣೆ ಯೋಗವಿದೆ. ಮನೆಗೆ ಬೇಕಾದ ವಸ್ತುಗಳಿಗೆ ಖರ್ಚು ವೆಚ್ಚ ಮಾಡಬೇಕಾಗುತ್ತದೆ. ಮಹಿಳೆಯರಿಂದ ಶುಭವಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಪ್ರತಿಸ್ಪರ್ಧಿಗಳು ಹುಟ್ಟಿಕೊಳ್ಳುವರು. ಎಚ್ಚರ ಅಗತ್ಯ.

ಧನು: ಅನಿರೀಕ್ಷಿತವಾಗಿ ಬರುವ ಬಂಧು ಮಿತ್ರರಿಂದ ಶುಭ ಸುದ್ದಿ ಸಿಗಲಿದೆ. ನೀವು ಅಂದುಕೊಂಡ ಕಾರ್ಯ ನೆರವೇರುವುದು. ಆದರೆ ಅನವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಿ. ವಿದ್ಯಾರ್ಥಿಗಳು ಪ್ರಯತ್ನ ಬಲ ಮುಂದುವರಿಸಬೇಕು.

ಮಕರ: ಇಂದಿನ ದಿನ ನೀವು ಅಂದುಕೊಂಡಂತೆ ಕಾರ್ಯಗಳು ನೆರವೇರುವುದು. ಆರ್ಥಿಕವಾಗಿಯೂ ಚೇತರಿಕೆ ಕಾಣುವಿರಿ. ಹೀಗಾಗಿ ಒಂದು ರೀತಿಯ ಶುಭ ದಿನವೇ ಸರಿ. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸುವಿರಿ. ಅತಿಥಿಗಳ ಆಗಮನವಾಗಲಿದೆ.

ಕುಂಭ: ಉದ್ಯೋಗಿಗಳಿಗೆ ವೇತನ ಸಮಸ್ಯೆ ಕಾಡಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಉದಾಸೀನ ಪ್ರವೃತ್ತಿ ಪೋಷಕರನ್ನು ಚಿಂತೆಗೀಡುಮಾಡಲಿದೆ. ಧಾರ್ಮಿಕ ಕಾರ್ಯಗಳಿಗೆ ಧನ ವಿನಿಯೋಗ ಮಾಡಬೇಕಾಗುತ್ತದೆ.

ಮೀನ: ಕಾರ್ಯನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ. ಆದರೆ ಬೇಡದ ಚಿಂತೆಗಳಿಂದ ಮನಸ್ಸಿಗೆ ಬೇಸರ ಮಾಡಿಕೊಳ್ಳುವಿರಿ. ಅನಗತ್ಯ ಮಾತುಗಳಿಂದ ದೂರವಿರಿ. ವ್ಯಾಪಾರಿಗಳಿಗೆ ನಿವ್ವಳ ಲಾಭ ಸಿಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ             

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶ್ರೀ ಕಾಳಿ ಏಕಾಕ್ಷರ ಮಂತ್ರ ಜಪಿಸುವ ವಿಧಾನ, ಫಲವೇನು ನೋಡಿ

ಸಂಜೆ ಹೊತ್ತು ಓದಲೇಬೇಕಾದ ಶ್ರೀ ಚಂದ್ರಮೌಳೀಶ್ವರ ಸ್ತವ ಸ್ತೋತ್ರ

ನಿತ್ಯ ಬೆಳಿಗ್ಗೆ ಈ ಸೂರ್ಯ ಸ್ತೋತ್ರ ಪಠಿಸಿದರೆ ಸಕಲ ರೋಗಗಳಿಂದ ಮುಕ್ತಿ

ಶನಿಯ ಪವರ್ ಫುಲ್ ಮಂತ್ರಗಳಲ್ಲಿ ಇದೂ ಒಂದು

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಓದಿ ಶ್ರೀ ಭದ್ರಲಕ್ಷ್ಮಿ ಸ್ತೋತ್ರಂ

ಮುಂದಿನ ಸುದ್ದಿ
Show comments