ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಶನಿವಾರ, 29 ಡಿಸೆಂಬರ್ 2018 (09:03 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಕೆಲಸ ಕಾರ್ಯಗಳಿಗಾಗಿ ಓಡಾಟ ಹೆಚ್ಚಿ  ದೇಹಾಯಾಸವಾಗುವುದು. ಕೈಗೊಳ್ಳಲು ಮುಂದಾಗುವ ಕಾರ್ಯಗಳಲ್ಲಿ ವಿಘ್ನಗಳು ಎದುರಾದೀತು. ವಿಘ್ನೇಶ್ವರನ ಪ್ರಾರ್ಥನೆ ಮಾಡಿ ಕೆಲಸಗಳಿಗೆ ಕೈ ಹಾಕಿ.

ವೃಷಭ: ಮಹಿಳೆಯರಿಗೆ ಉದ್ಯೋಗದಲ್ಲಿ ಕಿರಿ ಕಿರಿ ಎದುರಾದೀತು. ಹೊಸ ವಸ್ತುಗಳ ಖರೀದಿಗೆ ಖರ್ಚು ವೆಚ್ಚಗಳನ್ನು ಮಾಡುವಿರಿ. ವಿದ್ಯಾರ್ಥಿಗಳಿಗೆ ಪ್ರಯತ್ನ ಬಲದಿಂದ ಯಶಸ್ಸು.

ಮಿಥುನ: ಆರೋಗ್ಯದಲ್ಲಿ ವ್ಯತ್ಯಯವಾಗಿಲದೆ. ಆರ್ಥಿಕ ಆದಾಯವಿದ್ದಷ್ಟೇ ಖರ್ಚುವೆಚ್ಚಗಳೂ ಅಧಿಕವಾಗುವುದು. ಹೊಸ ವಸ್ತುಗಳನ್ನು ಖರೀದಿಸುವಿರಿ. ದಿನದಂತ್ಯಕ್ಕೆ ಶುಭ ಸುದ್ದಿ.

ಕರ್ಕಟಕ: ಕುಟುಂಬದಲ್ಲೇ ಯಾವುದೋ ವಿಚಾರಕ್ಕೆ ವಾಗ್ವಾದಗಳಾಗಿ ಮನಸ್ತಾಪಗಳು ಎದುರಾದಾವು. ಎಚ್ಚರಿಕೆಯಿಂದ ವರ್ತಿಸಿ. ಸಂಗಾತಿ ಜತೆ ಕಲಹ ಮಾಡುವಿರಿ. ಹಿತ ಶತ್ರುಗಳ ಬಗ್ಗೆ ಎಚ್ಚರವಾಗಿರಿ.

ಸಿಂಹ: ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಖರ್ಚು ವೆಚ್ಚಗಳು ಅಧಿಕವಾಗುವುದು. ಬರಬೇಕಾದ ಬಾಕಿ ನಿಧಾನವಾಗಿಯಾದರೂ ಸಂದಾಯವಾಗಲಿದೆ. ದಂಪತಿಗಳ ನಡುವೆ ಸಾಮರಸ್ಯವಿರಲಿದೆ.

ಕನ್ಯಾ: ಬೇರೆಯವರಿಗೆ ಧನ ಸಹಾಯ ಮಾಡಲು ಹೋಗಬೇಡಿ. ಇಂದು ವಂಚನೆಗೊಳಗಾಗುವ ಸಾಧ್ಯತೆಯಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ. ದೂರ ಸಂಚಾರ ಯೋಗವಿದ್ದು, ಪ್ರಯಾಣದಲ್ಲಿ ಎಚ್ಚರ.

ತುಲಾ: ದುಡುಕಿನ ವರ್ತನೆ ತೋರದಿರಿ. ಬಾಯ್ತಪ್ಪಿ ಆಡುವ ಮಾತುಗಳು ಸಂಬಂಧ ಹಾಳು ಮಾಡೀತು. ಅವಿವಾಹಿತರಿಗೆ ಕಂಕಣ ಬಲ ಕೂಡಿಬರುವುದು. ಖರ್ಚು ವೆಚ್ಚಗಳು ಅಧಿಕವಾಗುವುದು.

ವೃಶ್ಚಿಕ: ಆರೋಗ್ಯ ಸಮಸ್ಯೆ ಎದುರಾದೀತು. ವ್ಯಾಪಾರಿಗಳಿಗೆ ಧನ ಲಾಭ ಯೋಗವಿದೆ. ಹೊಸ ವಸ್ತು ಖರೀದಿಯಿಂದ ನಷ್ಟ ಅನುಭವಿಸುವಿರಿ. ಮನೆ ಖರ್ಚುಗಳು ಹೆಚ್ಚಾಗುವುದು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿರಿ.

ಧನು: ಇದುವರೆಗೆ ಕೈಗೊಳ್ಳುತ್ತಿದ್ದ ಕಾರ್ಯಗಳಿಗೆ ವಿಘ್ನಗಳು ಎದುರಾಗಿ ಅರ್ಧಕ್ಕೆ ನಿಂತುಬಿಡುತ್ತವೆ. ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿ ಬರುವಂತಹ ವಿಘ್ನ ನಿವಾರಣೆಗೆ ಪ್ರಾರ್ಥಿಸಿ. ವಿದ್ಯಾರ್ಥಿಗಳಿಗೆ ಪ್ರಯತ್ನ ಬಲ ಅಗತ್ಯ.

ಮಕರ:ಹಣ ಕಾಸಿನ ಮುಗ್ಗಟ್ಟಿನಿಂದ ಅಗತ್ಯ ಕಾರ್ಯ ಕೈಗೊಳ್ಳಲು ಅಡ್ಡಿಯಾದೀತು. ಸಾಲ ಮಾಡಲು ಹೋಗಬೇಡಿ. ಹಾಸಿಗೆ ಇದ್ದಷ್ಟೇ ಕಾಲು ಚಾಚುವುದು ಉತ್ತಮ. ಸಹನೆಯಿಂದ ಬರುವಂತಹ ಕಷ್ಟಗಳನ್ನು ಎದುರಿಸಿದರೆ ಮುಂದೆ ಶುಭ ಫಲವಿದೆ.

ಕುಂಭ: ಯಾರನ್ನೂ ಅತಿಯಾಗಿ ನಂಬಲು ಹೋಗಬೇಡಿ. ಅತಿಯಾದ ವಿಶ್ವಾಸ ನಿಮಗೇ ತಿರುಗುಬಾಣವಾದೀತು. ಹೊಸ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡುವಿರಿ. ವಿವಿಧ ಮೂಲಗಳಿಂದ ಧನಾಗಮನವಾಗಲಿದೆ.

ಮೀನ: ವಿವಿಧ ವಿಚಾರಗಳನ್ನು ಮನಸ್ಸನ್ನು ಕೊರೆಯುತ್ತಿಲಿದ್ದು, ಅದರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ತೊಂದರೆಯಾಗಬಹುದು. ಹಣಕಾಸಿನ ಅಡಚಣೆ ಎದುರಾಗಲಿದೆ. ನೂತನ ದಂಪತಿಗಳು ಸಂತಸದ ಕ್ಷಣ ಕಳೆಯುವರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.        

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸಂಕಟ ಮೋಚನ ಹನುಮಾನ್ ಅಷ್ಟಕಂ ಸ್ತೋತ್ರ

ಹಣಕಾಸಿನ ಸಮಸ್ಯೆಯಿದ್ದರೆ ಕನಕಧಾರಾ ಸ್ತೋತ್ರ ತಪ್ಪದೇ ಓದಿ

2026 ರಲ್ಲಿ ಯಾವ ರಾಶಿಯವರು ಯಾವ ದೇವರ ಪ್ರಾರ್ಥನೆ ಮಾಡಬೇಕು ಗಮನಿಸಿ

ಗಣೇಶ ಕವಚ ಸ್ತೋತ್ರವನ್ನು ಮಕ್ಕಳಿಗೆ ಹೇಳಿಸಿ

ಈ ಐದು ರಾಶಿಯವರಿಗೆ 2026 ರಲ್ಲಿ ಸ್ವಂತ ಮನೆ ಕನಸು ನನಸಾಗುತ್ತದೆ

ಮುಂದಿನ ಸುದ್ದಿ
Show comments