ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಶುಕ್ರವಾರ, 28 ಡಿಸೆಂಬರ್ 2018 (08:40 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನವಾಗಲಿದ್ದು, ಸಂತಸ ನೀಡಲಿದೆ. ಆದರೆ ಅಷ್ಟೇ ಖರ್ಚು ವೆಚ್ಚಗಳೂ ಅಧಿಕವಾಗಲಿದೆ. ವ್ಯವಹಾರಗಳಲ್ಲಿ ಜಯ ಸಿಗುವುದು. ಅವಿವಾಹಿತರಿಗೆ ಕಂಕಣ ಬಲ ಕೂಡಿ ಬರುವುದು.

ವೃಷಭ: ಆರ್ಥಿಕ ಲಾಭ ಸಿಗುವುದರಿಂದ ಆದಾಯ ಹೆಚ್ಚಿ ನೆಮ್ಮದಿ ಕಾಣುವಿರಿ. ಉದ್ಯೋಗದಲ್ಲಿ ಮುನ್ನಡೆ ಸಾಧಿಸುವಿರಿ. ಜನಾನುರಾಗಿಯಾಗುವಿರಿ. ದಿನದಂತ್ಯದಲ್ಲಿ ಮತ್ತಷ್ಟು ಶುಭ ಫಲ ಸಿಗಲಿದೆ.

ಮಿಥುನ: ವೃತ್ತಿ ರಂಗದಲ್ಲಿ ಮೇಲ್ವರ್ಗದವರಿಂದ ಕಿರಿ ಕಿರಿ ಎದುರಾದೀತು. ಖರ್ಚು ವೆಚ್ಚಗಳು ಅಧಿಕವಾದೀತು. ಕುಲದೇವರ ಪ್ರಾರ್ಥನೆ ಮಾಡಿ. ಒಳ್ಳೆಯದಾಗುತ್ತದೆ.

ಕರ್ಕಟಕ: ಹಣ ಸಂಗ್ರಹಕ್ಕೆ ಹಲವು ಮಾರ್ಗಗಳನ್ನು ಕಂಡುಕೊಳ್ಳುವಿರಿ. ಸಾಕಷ್ಟು ಓಡಾಟ ಮಾಡಬೇಕಾಗಿ ಬರುತ್ತದೆ.ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಸಿಂಹ: ಆರೋಗ್ಯ ಹದಗೆಡುವ ಸಂಭವವಿದೆ. ಸಂಗಾತಿ ಜತೆಗೆ ಹೊಂದಾಣಿಕೆಯ ಹೆಜ್ಜೆಯಿಡಬೇಕು. ನಿಮ್ಮ ಹಠ, ಛಲ ಒಳ್ಳೆಯ ರೀತಿಯಲ್ಲಿ ಬಳಕೆಯಾಗಲಿ. ದಿನದಂತ್ಯಕ್ಕೆ ಶುಭ ಸುದ್ದಿ.

ಕನ್ಯಾ: ಎಷ್ಟೋ ದಿನಗಳಿಂದ ಪೂರ್ತಿ ಮಾಡಬೇಕೆಂದಿದ್ದ ಕೆಲಸ ಇಂದು ಸಲೀಸಾಗಿ ನೆರವೇರಿ ನೆಮ್ಮದಿ ಕಾಣುವಿರಿ. ದಾಂಪತ್ಯದಲ್ಲಿ ಸರಸಮಯ ಕ್ಷಣ ಕಳೆಯುವಿರಿ. ಪ್ರೀತಿ ಪ್ರೇಮದಲ್ಲಿ ಬಿದ್ದವರಿಗೆ ಯಶಸ್ಸು ಸಿಗುತ್ತದೆ.

ತುಲಾ: ಮನೆಯಲ್ಲಿ ಕೊಂಚ ಕಿರಿ ಕಿರಿಯ ವಾತಾವರಣವಿದ್ದರೂ ಆರ್ಥಿಕ ಲಾಭಕ್ಕೆ ಏನೂ ಕೊರತೆಯಾಗದು. ದೂರ ಸಂಚಾರ ಕೈಗೊಳ್ಳುವ ಸಾಧ್ಯತೆಯೂ ಇದೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.

ವೃಶ್ಚಿಕ: ಸಂಗಾತಿಯ ಸಹಕಾರ ಸಿಗುವುದರಿಂದ ಮನೆಯಲ್ಲಿ ನೆಮ್ಮದಿಯ ವಾತಾವರಣವಿರುವುದು. ಆದರೆ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಕಾರ್ಯ ಕ್ಷೇತ್ರದಲ್ಲಿ ಕೊಂಚ ಅಡೆ ತಡೆ ಇರುವುದಾದರೂ ದೇವತಾ ಪ್ರಾರ್ಥನೆಯಿಂದ ಒಳಿತು.

ಧನು: ಹಣ ಗಳಿಸುವ ಮಾರ್ಗದ ಬಗ್ಗೆ ಚಿಂತನೆ ನಡೆಸಬೇಕಾಗುತ್ತದೆ. ಮಂಗಳ ಕಾರ್ಯ ನಡೆಸುವ ಬಗ್ಗೆ ಚಿಂತನೆ ನಡೆಸುತ್ತೀರಿ. ಉದ್ಯೋಗದಲ್ಲಿ ಕಿರಿ ಕಿರಿ, ಆರೋಗ್ಯದಲ್ಲಿ ಏರುಪೇರು ಕಂಡುಬರಬಹುದು.

ಮಕರ: ಅಂದುಕೊಂಡ ಕೆಲಸಗಳು ನೆರವೇರುವುದು. ಅವಿವಾಹಿತರಿಗೆ ಕಂಕಣ ಬಲ ಕೂಡಿಬರುವುದು. ಪ್ರೇಮಿಗಳಿಗೆ ಪೋಷಕರ ಒಪ್ಪಿಗೆ ಸಿಗುವುದು. ವೃತ್ತಿ ರಂಗದಲ್ಲಿ ಹಿತಶತ್ರುಗಳ ಬಗ್ಗೆ ಎಚ್ಚರ ಅಗತ್ಯ.

ಕುಂಭ: ವಿದ್ಯಾರ್ಥಿಗಳಿಗೆ ಬಯಸಿದ ಫಲಿತಾಂಶ ಸಿಗುವುದು. ಆರ್ಥಿಕವಾಗಿ ಏನೂ ಕೊರತೆ ಕಾಡದು. ಬಂಧು ಮಿತ್ರರಿಂದ ಕಿರಿ ಕಿರಿ ಅನುಭವಿಸುವಿರಿ. ಓಡಾಟಗಳ ಒತ್ತಡದಿಂದ ದೇಹಾಯಾಸವಾದೀತು.

ಮೀನ: ಬಯಸಿದ ಉದ್ಯೋಗ ಸಿಗಲಿಲ್ಲವೆಂದು ಕೊರಗುತ್ತಾ ಕೂರುವ ಬದಲು ಬಂದ ಅವಕಾಶವನ್ನು ಸದುಪಯೋಗಪಡಿಸಿಕೊಂಡರೆ ಮುಂದೆ ಒಳ್ಳೆಯ ಭವಿಷ್ಯವಿದೆ. ಬಂಧು ಮಿತ್ರರ ಸಹಕಾರ ದೊರೆಯಲಿದೆ. ದೂರ ಸಂಚಾರ ಕೈಗೊಳ್ಳುವ ಸಾಧ‍್ಯತೆಯಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.        

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸಂಕಟ ಮೋಚನ ಹನುಮಾನ್ ಅಷ್ಟಕಂ ಸ್ತೋತ್ರ

ಹಣಕಾಸಿನ ಸಮಸ್ಯೆಯಿದ್ದರೆ ಕನಕಧಾರಾ ಸ್ತೋತ್ರ ತಪ್ಪದೇ ಓದಿ

2026 ರಲ್ಲಿ ಯಾವ ರಾಶಿಯವರು ಯಾವ ದೇವರ ಪ್ರಾರ್ಥನೆ ಮಾಡಬೇಕು ಗಮನಿಸಿ

ಗಣೇಶ ಕವಚ ಸ್ತೋತ್ರವನ್ನು ಮಕ್ಕಳಿಗೆ ಹೇಳಿಸಿ

ಈ ಐದು ರಾಶಿಯವರಿಗೆ 2026 ರಲ್ಲಿ ಸ್ವಂತ ಮನೆ ಕನಸು ನನಸಾಗುತ್ತದೆ

ಮುಂದಿನ ಸುದ್ದಿ
Show comments