ನಿಮ್ಮ ವ್ಯಕ್ತಿತ್ವದ ಆಕರ್ಷಣೆ ವೃದ್ಧಿಗೆ ಜ್ಯೋತಿಷ್ಯದ ಟಿಪ್ಸ್

Webdunia
ಗುರುವಾರ, 23 ಜೂನ್ 2016 (11:42 IST)
ಲಕ್ಷ್ಮಿ ದೇವತೆಯನ್ನು ಪೂಜಿಸಿ- ಲಕ್ಷ್ಮಿಯು ಶುಕ್ರನ ಸತ್ತಾರೂಢ ದೇವತೆ. ಲಕ್ಷ್ಮಿಯನ್ನು ಪೂಜಿಸುವುದರಿಂದ ನಿಮ್ಮ ವ್ಯಕ್ತಿತ್ವದಲ್ಲಿ ಶುಕ್ರನ ಗುಣಗಳನ್ನು ತರುತ್ತವೆ. ಲಕ್ಷ್ಮಿಯನ್ನು ಸಂಪತ್ತಿನ ದೇವತೆ ಎಂದು ಕೂಡ ಕರೆಯಲಾಗುತ್ತದೆ. ಆದ್ದರಿಂದ ಇದು ಹಣಕಾಸಿನ ಲಾಭಕ್ಕಾಗಿ ಅನುಕೂಲಕರ.
 
 ಶುಕ್ರ ಬೀಜ ಮಂತ್ರವನ್ನು ಜಪಿಸಿ- ನಿಮ್ಮಲ್ಲಿ ನಿರ್ದಿಷ್ಟ ತರಂಗಾಂತರದ ಕಾಸ್ಮಿಕ್ ಶಕ್ತಿಯನ್ನು ಸೆಳೆಯಲು ಬೀಜ ಮಂತ್ರವು ಶಕ್ತಿಶಾಲಿ ಅಸ್ತ್ರವಾಗಿದೆ. ಶುಕ್ರ ಬೀಜ ಮಂತ್ರವನ್ನು ಸರಿಯಾಗಿ ಜಪಿಸಿದರೆ, ಅದು ಆಕರ್ಷಕವಾಗಿ ಜನರು ನಿಮ್ಮತ್ತ ಸಕಾರಾತ್ಮಕವಾಗಿ ನೋಡುತ್ತಾರೆ. ಇದರ ಸಂಪೂರ್ಣ ಲಾಭ ಪಡೆಯಲು ''ಓಮ್ ದ್ರಾಮ್ ದ್ರೀಮ್ ದ್ರೌಮ್ ಸಾಹ ಶುಕ್ರಾಯ ನಮಃ'' ಮಂತ್ರವನ್ನು 40 ದಿನಗಳ ಕಾಲ 20,000 ಸಲ ಜಪಿಸಿರಿ. 
 
ಬಟ್ಟೆಗಳನ್ನು ಮತ್ತು ಮೊಸರು ದಾನ ಮಾಡಿ-ಬಟ್ಟೆಗಳು ಮತ್ತು ಮೊಸರು ಶುಕ್ರನನ್ನು ಸಂಕೇತಿಸುತ್ತವೆ.ಈ ವಸ್ತುಗಳ ದಾನದಿಂದ ಶುಕ್ರನ ನಕಾರಾತ್ಮಕ ಪರಿಣಾಮವನ್ನು ತಗ್ಗಿಸುತ್ತದೆ ಮತ್ತು ಸೌಂದರ್ಯ ಮತ್ತು ಆಕರ್ಷಣೆಯ ಗುಣಗಳನ್ನು ನಿವಾರಿಸುತ್ತದೆ.
ಶ್ರೀ ಸುಕ್ತಾ ಜಪಿಸಿ- ಶ್ರೀ ಸುಕ್ತಮ್ ರಿಗ್ ವೇದದ ಭಾಗವಾಗಿದೆ. ಇದೊಂದು ಪ್ರಾಚೀನ ಪಠ್ಯವಾಗಿದ್ದು 5 ಸಾವಿರ ವರ್ಷಗಳಷ್ಟು ಹಿಂದಿನದು ಇದು ನಿಮ್ಮ ಶುಕ್ರನ ಚೇತರಿಕೆಗೆ ಪ್ರಭಾವಶಾಲಿ ಪರಿಣಾಮ ಬೀರುತ್ತದೆ. ಆದ್ದರಿಂದ ನಿಮ್ಮ ವ್ಯಕ್ತಿತ್ವ, ನೋಟ, ಇತರರ ಮೇಲೆ ಪ್ರಬಾವ ಮತ್ತು ಆಕರ್ಷಣೆ ಹೆಚ್ಚುತ್ತದೆ.
 
ಶುಕ್ರವಾರ ಉಪವಾಸ- ಶುಕ್ರವಾರಗಳಂದು ಉಪವಾಸ ಆಚರಿಸಿ. ಶುಕ್ರ ಗ್ರಹವು ಶುಕ್ರವಾರ ಅಧಿಪತಿ. ಈ ದಿನಗಳಂದು ಉಪವಾಸವು ಶುಕ್ರನ ಸಕಾರಾತ್ಮಕ ಶಕ್ತಿಯನ್ನು ತರುತ್ತದೆ.
 
ಆರಂದ್ ಮೂಲ- ಜಾದಿ ಅಥವಾ ಆರಂದ್ ಮೂಲದ ಬೇರನ್ನು ಕುತ್ತಿಗೆಯಲ್ಲಿ ಧರಿಸಿ, ಇದು ಶುಕ್ರನಿಗೆ ಬಲ ನೀಡಿ ನಿಮ್ಮಲ್ಲಿ ವರ್ಚಸ್ವಿ ವ್ಯಕ್ತಿತ್ವವನ್ನು ಹೆಚ್ಚಿಸುತ್ತದೆ.
 
ಮುಖಿ ರುದ್ರಾಕ್ಷ- ಪುರಾಣದಲ್ಲಿ  ರುದ್ರಾಕ್ಷವನ್ನು ಭಗವಾನ್ ಶಿವನ ಮಾಂತ್ರಿಕ ಶಕ್ತಿ ಎನ್ನಲಾಗುತ್ತದೆ. 6 ಮುಖಿ ರುದ್ರಾಕ್ಷವನ್ನು ಧರಿಸುವುದು ಶುಕ್ರನಿಗೆ ಬಲ ನೀಡುತ್ತದೆ ಮತ್ತು ಅದರ ದುರ್ಬಲತೆಯಿಂದ ಉಂಟಾಗುವ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತದೆ.
 ವಜ್ರ- ವಜ್ರವು ಅಮೂಲ್ಯ ಮುತ್ತು ಮಾತ್ರವಾಗಿರದೇ ಶುಕ್ರನ ಚೇತರಿಕೆಗೆ ಪರಿಣಾಮಕಾರಿಯಾಗಿದೆ.  ಇದನ್ನು ಧರಿಸುವುದರಿಂದ ಧ್ವನಿಯ ಮೇಲೆ ಪ್ರಭಾವ ಬೀರುತ್ತದೆ. ಕಣ್ಣುಗಳಲ್ಲಿ ಕಾಂತಿ ಉಂಟಾಗುತ್ತದೆ. ಆದರೆ ಯಾವುದೇ ಮುತ್ತಿನ ಹರಳನ್ನು ಧರಿಸುವ ಮುಂಚೆ ಜ್ಯೋತಿಷಿಯನ್ನು ಸಂಪರ್ಕಿಸುವುದು ಒಳ್ಳೆಯದು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ

ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಶಿವನಿಗೆ ಪೂಜೆ ಮಾಡುವಾಗ ಈ ಸ್ತೋತ್ರವನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments