Webdunia - Bharat's app for daily news and videos

Install App

ಪ್ರೇಮ ವಿವಾಹಕ್ಕೆ ಜ್ಯೋತಿಷ್ಯದ ಪರಿಹಾರೋಪಾಯಗಳು

Webdunia
ಶುಕ್ರವಾರ, 24 ಜೂನ್ 2016 (11:36 IST)
ನೀವು ಯಾರನ್ನಾದರೂ ಪ್ರೀತಿಸುತ್ತಿದ್ದು ಅವರನ್ನು ಮದುವೆಯಾಗಲು ಬಯಸುತ್ತೀರೆಂದು ಭಾವಿಸೋಣ. ಆದರೆ ಪ್ರೇಮ ವಿವಾಹಕ್ಕೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಜ್ಯೋತಿಷ್ಯದ ಮೂಲಕ ನಿಮಗೆ ಪರಿಹಾರೋಪಾಯ ಸಿಗುತ್ತದೆ.  ನೀವು ಪ್ರೀತಿಸಿದ ಸಂಗಾತಿಯನ್ನು ಮದುವೆಯಾಗಲು ಜ್ಯೋತಿಷ್ಯವು ಉತ್ತಮ ಪರಿಹಾರವಾಗಿದೆ.

 ಗ್ರಹದೋಷವಿದ್ದರೆ ಸಂಗಾತಿಗಳ ನಡುವಿನ ಪ್ರೀತಿ ಮುರಿಯಬಹುದು. ಗ್ರಹವು ನಿಮಗೆ ನೆರವಾದರೆ ಮಾತ್ರ ಮದುವೆ ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಸಾಧ್ಯವಾಗುವುದಿಲ್ಲ. ಶುಕ್ರ ಮತ್ತು ಮಂಗಳವು ಪ್ರೇಮಸಂಬಂಧದ ಮೇಲೆ ಪ್ರಭಾವ ಬೀರುತ್ತದೆ. ಅವು ನಿಮಗೆ ಅನುಕೂಲಕರವಾಗಿದ್ದರೆ ಯಾವುದೇ ಸ್ಥಿತಿಯಲ್ಲೂ ಪ್ರೇಮ ವಿವಾಹ ಸಾಧ್ಯವಾಗುತ್ತದೆ.
 
ಶುಕ್ರ ದೇವರನ್ನು ನಿಮಗೆ ಸಾಧ್ಯವಾದಷ್ಟು ಪೂಜಿಸಿ,ಪಂಚಮೇಶ ಮತ್ತು ಸಪ್ತಮೇಶನ ಪೂಜೆ ಮಾಡಿ
 
ಸಪ್ತಮೇಶದ ಮುತ್ತಿನಹರಳನ್ನು ಸದಾ ಧರಿಸಿ, ನೀಲಿ ಪುಷ್ಯರಾಗ ರತ್ನವನ್ನು ಧರಿಸಿ
16 ಸೋಮವಾರಗಳ ಕಾಲ ಉಪವಾಸ ಮಾಡಿ. ಇದು ಅತ್ಯಂತ ಪರಿಣಾಮಕಾರಿ ಪ್ರಕ್ರಿಯೆ
ನಿಮ್ಮ ಮನೆಯಲ್ಲಿ ಮೊಲವನ್ನು ಸಾಕಿ ಮತ್ತು ನಿಮ್ಮ ಕೈಯಿಂದಲೇ ಅದಕ್ಕೆ ಆಹಾರ ಉಣಿಸಿ.
 
ಪ್ರತಿ ಗುರುವಾರ ಹಳದಿ ಉಡುಪನ್ನು ಧರಿಸಿ ಮತ್ತು ಭಗವಾನ್ ವಿಷ್ಣುವಿನ ಪೂಜೆ ಮಾಡಿದರೆ ಅದು ಖಂಡಿತವಾಗಿ ನೆರವಾಗುತ್ತದೆ.
ಚಂದ್ರನನ್ನು ಪೂಜಿಸಿದರೆ ಪ್ರೇಮ ವಿವಾಹದಲ್ಲಿ ಯಶಸ್ಸು ಸಿಗುತ್ತದೆ. ನಿಮ್ಮ ಜ್ಯೋತಿಷಿಯ ನೆರವು ಪಡೆದು ಜನ್ಮ ಕುಂಡಲಿಯನ್ನು ಪರೀಕ್ಷಿಸುವ ಮೂಲಕ ಪ್ರೇಮ ವಿವಾಹ ಸಾಧ್ಯವಾಗುತ್ತದೋ ಇಲ್ಲವೋ ಪರೀಕ್ಷೆ ಮಾಡಿ.
 
1ನೇ, 5ನೇ ಮತ್ತು 7ನೇ ಮನೆಯನ್ನು 12ನೇ ಮನೆಯನ್ನು ಕೂಡ ಪರೀಕ್ಷಿಸಿ. ಏಕೆಂದರೆ 12ನೇ ಮನೆ ಪ್ರೇಮ ವಿವಾಹಕ್ಕೆ ಕಾರಣವಾಗಿದೆ.
 
ಶನಿಯು ಅಂತರ್ಜಾತಿ ವಿವಾಹದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ನಿಮ್ಮ ಶನಿ ಪ್ರಬಲನಾಗಿದ್ದರೆ ನಿಮ್ಮ ಅಂತರ್ಜಾತಿ ವಿವಾಹ ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಜ್ಯೋತಿಷಿಯ ನೆರವಿನಿಂದ ಶನಿಗೆ ಕೆಲವು ಪರಿಹಾರಗಳನ್ನು ಮಾಡಿ. ಇವು ಕೆಲವು ಪರಿಹಾರಗಳಾಗಿದ್ದು ನಿಮ್ಮ ಜೀವನದಲ್ಲಿ ವ್ಯತ್ಯಾಸ ಉಂಟುಮಾಡುತ್ತದೆ. ಪ್ರೇಮವು ದೇವರು ಕೊಟ್ಟ ವರವಾಗಿದ್ದು, ದೇವರನ್ನು ತೃಪ್ತಿಪಡಿಸಿದ ಬಳಿಕ ನಿಮ್ಮ ಪ್ರೇಮಿಯನ್ನು ಖಂಡಿತವಾಗಿ ಪಡೆಯುತ್ತೀರಿ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 
 

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶತ್ರುಭಯ ನಾಶಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ರೋಗ, ಮೃತ್ಯು ಭಯ ನಾಶಕ್ಕಾಗಿ ಶಿವನ ಈ ಸ್ತೋತ್ರ ಓದಿ

ಶನಿ ದೋಷವಿರುವವರು ಓದಲೇ ಬೇಕಾದ ಸ್ತೋತ್ರ

ಮಹಾವಿಷ್ಣು, ಲಕ್ಷ್ಮಿ ದೇವಿಯ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ಅಂದುಕೊಂಡ ಕೆಲಸವಾಗಬೇಕಾದರೆ ಸಾಯಿ ಬಾಬಾ ಪ್ರಾರ್ಥನಾಷ್ಟಕಂ ಓದಿ

ಮುಂದಿನ ಸುದ್ದಿ
Show comments