Webdunia - Bharat's app for daily news and videos

Install App

2018 ರಲ್ಲಿ ಸಿಂಹ ರಾಶಿಯವರ ಭವಿಷ್ಯ

Webdunia
ಶನಿವಾರ, 30 ಡಿಸೆಂಬರ್ 2017 (13:52 IST)
ಸಿಂಹ ರಾಶಿಯ ಮಕ್ಕಳು ಯಾವಾಗಲೂ ಗುಂಪಿನಲ್ಲಿ ನಾಯಕರಾಗಿರುತ್ತಾರೆ. ಅದು ಆಟದ ಮೈದಾನದಲ್ಲಿರಬಹುದು, ಅಥವಾ ತರಗತಿಯಲ್ಲಿರಬಹುದು. ಎಲ್ಲಿದ್ದರೂ ತಂಡಕ್ಕೆ ಸಿಂಹ ರಾಶಿಯ ಮಗುವೇ ಪುಟಾಣಿ ಹೀರೋ/ ಹೀರೋಯಿನ್. ಈ ರಾಶಿಯ ಮಕ್ಕಳು ತುಂಬ ಬುದ್ಧಿವಂತರಾಗಿರುತ್ತಾರೆ. ಖುಷಿಯಿಂದಿರುತ್ತಾರೆ. ಜಗಳದಲ್ಲೂ ಅಷ್ಟೆ, ಸಿಟ್ಟಿಗೆದ್ದ ಸಿಂಹದಂತೆಯೇ ಸಿಂಹ ರಾಶಿಯ ಮಕ್ಕಳು ಕಾದಾಡುತ್ತಾರೆ. ಹಾಗಾಗಿ ಜಗಳಕ್ಕೆ ಇವರನ್ನು ಉತ್ತೇಜಿಸುವುದು ಬೇಡ.
ಈ ಮಕ್ಕಳನ್ನು ತುಂಬ ಕೀಳಾಗಿ ಕಾಣಬೇಡಿ. ಇದರಿಂದ ಅವರಿಗೆ ಮಾನಸಿಕವಾಗಿ ಆಘಾತವಾಗುತ್ತದೆ. ಮಕ್ಕಳ ಗುಂಪಿನಲ್ಲಿ ಬಾಸ್ ಆಗಿ ಬೀಗಿದರೆ ಅದು ಅವರ ಹುಟ್ಟುಗುಣ. ಅದನ್ನು ಏನು ಮಾಡಿದರೂ ಹೋಗಲಾಡಿಸಲು ಸಾಧ್ಯವಾಗೋದಿಲ್ಲ. ಅಗತ್ಯ ಬಂದರೆ, ಬೈಯ್ಯದೆ, ಹೊಡೆಯದೆ, ಹಾಗೆಲ್ಲಾ ಬಾಸ್ ಥರ ಆಡಬಾರದು ಪುಟ್ಟಾ, ಇನ್ನೊಬ್ಬರ ಮೇಲೆ ಡಾಮಿನೇಟ್ ಮಾಡಬಾರದೆಂದು ತಿಳಿಸಿ ಹೇಳಿ.
 
ಸ್ವಲ್ಪ ತೋರಿಕೆಯ ಸ್ವಭಾವ ಇವರಲ್ಲಿ ಜಾಸ್ತಿ. ಎಡವಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಜಾಯಮಾನ ಇವರದ್ದು. ಇನ್ನೊಬ್ಬರ ಗಮನ ಸೆಳೆಯುವುದು ಇವರಿಗಿಷ್ಟ. ಅಷ್ಟೇ ಅಲ್ಲ, ಮನೆಯಲ್ಲಿ ಶುದ್ಧ ಸೋಮಾರಿಗಳಿವರು. ಒಂದು ವಸ್ತುವನ್ನು ಕೂಡಾ ಆಚೀಚೆ ಇಡಲಾರರು. ಇಂಥ ಸಂದರ್ಭ ಅವರಿಗೆ, ಅವರವರ ಕೆಲಸ ಅವರವರೇ ಮಾಡಬೇಕೆಂಬುದನ್ನು ಸೂಚ್ಯವಾಗಿ ಹೇಳುತ್ತಾ ಬನ್ನಿ. ಗಿಡವಿರುವಾಗಲೇ ಬಗ್ಗಿಸದಿದ್ದರೆ ಮರವಾದ ಮೇಲೆ ಬಗ್ಗಿಸೋದು ಕಷ್ಟ.
 
ಇನ್ನು ಸಿಂಹ ರಾಶಿಯ ಮಕ್ಕಳ ಹೆತ್ತವರು ಮೊದಲು ಮಾಡಬೇಕಾದ ಕೆಲಸ ತಮ್ಮ ಮಗುವಿಗೆ ಇನ್ನೊಬ್ಬರ ಮನೋಭಾವಕ್ಕೂ ಗೌರವ ನೀಡಬೇಕೆಂಬುದನ್ನು. ಇನ್ನೊಬ್ಬರನ್ನು ಹಗುರವಾಗಿ ಕಾಣದಂತೆ ಅವರಿಗೆ ತಿಳಿ ಹೇಳಬೇಕು. ಸಿಂಹ ರಾಶಿಯ ಮಕ್ಕಳು ತುಂಬ ನಾಚಿಕೆಯ ಸ್ವಭಾವವಿರೋದು ಕಡಿಮೆ. ಹಾಗಿದ್ದರೂ, ಅವರಿಗೆ ತುಂಬ ಪ್ರೇತ್ಸಾಹ ನೀಡಿ ಮಕ್ಕಳಾಗಿದ್ದಾಗಲೇ ಅವರನ್ನು ತೆರೆದುಕೊಳ್ಳಲು ಹೇಳಿಕೊಡಿ.
 
ಸಿಂಹ ರಾಶಿಯ ಮಕ್ಕಳಲ್ಲಿ ಹುಡುಗರು ತುಂಬ ಗಟ್ಟಿಮುಟ್ಟಾದ ಶರೀರ ಹೊಂದಿರುತ್ತಾರೆ. ಹುಡುಗಿಯರು ಚೆಂದದ ಶರೀರ, ಮುಖ ಹೊಂದಿರುತ್ತಾರೆ. ತುಂಬ ಬೇಗ ಯಾವುದನ್ನೂ ಕಲಿತುಕೊಳ್ಳಬಲ್ಲ ಬುದ್ಧಿಮತ್ತೆ ಇವರಿಗಿರುತ್ತದೆ. ಆದರೆ ತಮಗಿಷ್ಟವಾದರೆ ಮಾತ್ರ ಕಲಿಯುತ್ತಾರೆ. ಇಲ್ಲವಾದರೆ ಒತ್ತಾಯಿಸಿದರೂ ಇವರು ಕಲಿಯುವುದಿಲ್ಲ. ಆದರೆ ಇವರು ಕಲಿತಾಗ ಇವರಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿ. ಆಗ ಅವರ ಉತ್ಸಾಹ ಇಮ್ಮಡಿಗೊಳ್ಳುತ್ತದೆ. ತಮ್ಮ ಗೆಳೆಯರಿಗೆ, ಗೆಳತಿಯರಿಗೆ ಹಣವನ್ನು ಸಾಲವಾಗಿಯೂ ಇವರು ಕೆಲವೊಮ್ಮೆ ನೀಡುತ್ತಾರೆ. ಆದರೆ, ಅದನ್ನು ವಾಪಸ್ ಪಡೆಯಲು ಮರೆತೇ ಹೋಗುತ್ತದೆ. ಪಾರ್ಟಿಗೆ ಹೋಗುವುದು, ಮಜಾ ಮಾಡೋದು ಎಲ್ಲ ಇವರಿಗಿಷ್ಟ. ಇಂಥ ಮಕ್ಕಳನ್ನು ತುಂಬ ಪ್ರೀತಿಯಿಂದ, ಸ್ವಲ್ಪ ಸ್ಟ್ರಿಕ್ಟ್ ಆಗಿ ಬೆಳೆಸಬೇಕು. ಹಾಗಾದರೆ ಇವರು ಸರಿಯಾಗಿ ಮುಂದೆ ಸಾಗಬಲ್ಲರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ದೋಷವಿರುವವರು ಓದಲೇ ಬೇಕಾದ ಸ್ತೋತ್ರ

ಮಹಾವಿಷ್ಣು, ಲಕ್ಷ್ಮಿ ದೇವಿಯ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ಅಂದುಕೊಂಡ ಕೆಲಸವಾಗಬೇಕಾದರೆ ಸಾಯಿ ಬಾಬಾ ಪ್ರಾರ್ಥನಾಷ್ಟಕಂ ಓದಿ

ಬುಧ ಕವಚಂ ಸ್ತೋತ್ರವನ್ನು ವಿದ್ಯಾರ್ಥಿಗಳು ತಪ್ಪದೇ ಓದಬೇಕು ಯಾಕೆ ನೋಡಿ

ನಾಗದೋಷ ಪರಿಹಾರಕ್ಕಾಗಿ ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments