Webdunia - Bharat's app for daily news and videos

Install App

ಜೂ.6ರಂದು ಸೌರ ಮಂಡಲದಲ್ಲಿ ಅಪರೂಪದ ವಿಸ್ಮಯ 'ಶುಕ್ರ ಸಂಕ್ರಮಣ'

Webdunia
ಮಂಗಳವಾರ, 5 ಜೂನ್ 2012 (12:16 IST)
PR
ಖಗೋಳ ವಿದ್ಯಮಾನದಲ್ಲಿ ಸೂರ್ಯ, ಚಂದ್ರ ಮತ್ತು ಭೂಮಿಯ ಸಹ ವರ್ತನೆಯಿಂದ ತಮ್ಮದೇ ಆದ ಚಲನೆಯ ಪಥಗಳನ್ನು ಹೊಂದಿರುವ ಇವುಗಳ ವಿಶಿಷ್ಠ ಹೊಂದಾಣಿಕೆಯಿಂದ ಗ್ರಹಣಗಳು ಸಂಭವಿಸುತ್ತವೆ. ಇದೇ ರೀತಿ ಸೂರ್ಯ ಮತ್ತು ಭೂಮಿಯ ಮಧ್ಯದಲ್ಲಿ ಚಲಿಸುವ ಬುದ ಮತ್ತು ಶುಕ್ರಗ್ರಹಗಳು ಸಹಾ ಅಪರೂಪಕ್ಕೊಮ್ಮೆ ಸೂರ್ಯನ ಬಿಂಬದ ಮೇಲೆ ಹಾದು ಹೋಗುತ್ತವೆ. ಈಗ ಶುಕ್ರನು ಜೂನ್ 6ರಂದು ಸೂರ್ಯಬಿಂಬದ ಮೇಲೆ ಹಾದು ಹೋಗುವ ಅಪರೂಪದ ವಿಸ್ಮಯ ವಿದ್ಯಮಾನವನ್ನು ನೋಡಬಹುದಾಗಿದೆ. ಇದು ಆಕಾಶ ಕಾಯಗಳ ನೈಸರ್ಗಿಕ ಕ್ರಿಯೆ. ನಿಸರ್ಗದ ಸುಂದರ ಪ್ರದರ್ಶನ ಜಗತ್ತಿನಾದ್ಯಂತ ವಿಜ್ಞಾನಿಗಳು ಮತ್ತು ಹವ್ಯಾಸಿ ಖಗೋಳ ಶಾಸ್ತ್ರಜ್ಞರು ಕಾತುರದಿಂದ ಕಾಯುತ್ತಿದ್ದಾರೆ.

ಶುಕ್ರಗ್ರಹವು ಜೂನ್ 6ರಂದು ಭೂಮಂಡಲಕ್ಕೆ ಅನ್ವಯಿಸುವಂತೆ ಭಾರತೀಯ ಕಾಲಮಾನ ಬೆಳಗಿನ ಜಾವ 3ಗಂಟೆ 39 ನಿಮಿಷ 38 ಸೆಕೆಂಡಿಗೆ ಸೂರ್ಯಬಿಂಬದ ಹೊರಾವರಣಕ್ಕೆ ಪ್ರವೇಶಿಸುತ್ತದೆ. ಸೂರ್ಯಬಿಂಬದ ಒಳಾವರಣಕ್ಕೆ 3 ಗಂಟೆ 57 ನಿಮಿಷ 34 ಸೆಕೆಂಡಿಗೆ ಪ್ರವೇಶಿಸುತ್ತದೆ. ಈ ವೇಳೆಯಲ್ಲಿ ಭಾರತದಲ್ಲಿ ಸೂರ್ಯೋದಯವಾಗಿರುವುದಿಲ್ಲ. ಭಾರತದಲ್ಲಿ ಸೂರ್ಯೋದಯಕ್ಕೆ ಗ್ರಸ್ತೌದಯ ಶುಕ್ರ ಸಂಕ್ರಮಣವನ್ನು ನೋಡಬಹುದು.

ಸೂರ್ಯೋದಯ ಸಮಯದಲ್ಲಿ ಬರಿಗಣ್ಣಿನಲ್ಲಿ ನೋಡಬಹುದು ನಂತರ ಸೋಲಾರ್ ಫಿಲ್ಟರ್ ಉಪಕರಣದಿಂದ ನೋಡಬಹುದು. ಸೂರ್ಯನ ಬಿಂಬದಲ್ಲಿ ಶುಕ್ರಗ್ರಹದ ಪರಿ ಪೂರ್ಣತೆಯ (ಮದ್ಯಕಾಲ) ಬೆಳೆಗ್ಗೆ 6 ಗಂಟೆ 59 ನಿಮಿಷ 36 ಸೆಕೆಂಡ್ ಆಗಿರುತ್ತದೆ. ಭಾರತದ ಎಲ್ಲಾ ಪ್ರದೇಶಗಳಲ್ಲೂ ಸೂರ್ಯೋದಯ ಕಾಲದಲ್ಲಿ ಗ್ರಸ್ತೌದಿತ ಶುಕ್ರ ಸಂಕ್ರಮಣ ದೃಶ್ಯವನ್ನು ನೋಡಬಹುದು. ಕರ್ನಾಟಕದ ಎಲ್ಲಾ ಪ್ರದೇಶಗಳಲ್ಲಿ ಸೂರ್ಯೋದಯ ಕಾಲದಲ್ಲಿ ಸೂರ್ಯ ಬಿಂಬದಲ್ಲಿ ಶುಕ್ರ ಸಂಕ್ರಮಣವನ್ನು ವೀಕ್ಷಿಸಬಹುದು ಬೆಂಗಳೂರಿನಲ್ಲಿ ಬೆಳೆಗ್ಗೆ 5 ಗಂಟೆ 54 ನಿಮಿಷಕ್ಕೆ ಸೂರ್ಯೋದಯವಾಗುತ್ತದೆ. ಗ್ರಸ್ತೌದಿತ ಶುಕ್ರ ಸಂಕ್ರಮಣವನ್ನು ನೋಡಬಹುದು.

ಶುಕ್ರ ಗ್ರಹವು ಸೂರ್ಯ ಬಿಂಬದ ಒಳಾವರಣದಿಂದ ನಿರ್ಗಮನ ಬೆಳೆಗ್ಗೆ 10 ಗಂಟೆ 1 ನಿಮಿಷ 39 ಸೆಕೆಂಡಿಗೆ ಪ್ರಾರಂಭವಾಗುತ್ತದೆ. 10 ಗಂಟೆ 19 ನಿಮಿಷ 35 ಸೆಕೆಂಡಿಗೆ ಸೂರ್ಯಬಿಂಬದ ಹೊರಾವರಣಕ್ಕೆ ನಿರ್ಗಮಿಸುತ್ತದೆ. ಶುಕ್ರನು ಸೂರ್ಯ ಬಿಂಬದಲ್ಲಿ ಚಲಿಸುವ ಅವಧಿ ಒಟ್ಟು 6 ಗಂಟೆ 40 ನಿಮಿಷಗಳು. ಗ್ರಾಸ ಪ್ರಮಾಣ 40 ನಿಮಿಷಗಳು ಗ್ರಾಸ ಪ್ರಮಾಣ 100ಕ್ಕೆ 3.09 ಭಾಗದಷ್ಟಿರುತ್ತದೆ.

ಈ ಹಿಂದೆ 2004ರ ಜೂನ್ 8 ರಂದು ಶುಕ್ರ ಸಂಕ್ರಮಣ ಜರುಗಿತ್ತು. ಮುಂದಿನ ಶುಕ್ರ ಸಂಕ್ರಮಣವು 2117 ಡಿಸೆಂಬರ್ 11 ರಂದು ಸಂಭವಿಸುತ್ತದೆ. ಒಟ್ಟು 6000 ವರ್ಷಗಳ ಅವಧಿ 2000 DC ಯಿಂದ 4000 AD ಯಲ್ಲಿ ಒಟ್ಟು 81 ಭಾರಿ ಶುಕ್ರ ಸಂಕ್ರಮಣ ಸಂಭವಿಸುತ್ತದೆ.

ಪೂರ್ಣ ಶುಕ್ರ ಸಂಕ್ರಮಣವನ್ನು ಏಷ್ಯ, ಉತ್ತರ ಆಸ್ಟ್ರೇಲಿಯಾ, ಉತ್ತರ ಅಮೇರಿಕಾ, ಫೆಸಿಪಿಕ್ ಸಾಗರಗಳಲ್ಲಿ ವೀಕ್ಷಿಸಬಹುದು. ಸಂಕ್ರಮಣದ ಪ್ರಾರಂಭ ಭಾರತದಲ್ಲಿ ಗೋಚರಿಸುವುದಿಲ್ಲ ಸೂರ್ಯೋದಯದಿಂದ, ಶುಕ್ರ ಸೂರ್ಯಬಿಂಬದ ಹೊರಾವರಣಕ್ಕೆ ನಿರ್ಗಮಿಸುವುದನ್ನು ವೀಕ್ಷಿಸಬಹುದು.

ಶುಕ್ರನ ಈ ಸಂಕ್ರಮಣ ನಿಮಿತ್ತ ಯಾವುದೇ ವಿಶೇಷ ಧಾರ್ಮಿಕ ಕಾರ್ಯಗಳನ್ನು ನಡೆಸಬೇಕಾಗಿಲ್ಲ. ಈ ವಿದ್ಯಮಾನ ನಿಮಿತ್ತ ಸ್ನಾನ, ತರ್ಪಣ, ಹೋಮ, ಶಾಂತಿ ಇತ್ಯಾದಿಗಳ ಅವಶ್ಯಕತೆಯಿರುವುದಿಲ್ಲ ಹಾಗೂ ಯಾವ ರಾಶಿಯವರಿಗೂ ದೋಷ-ತೊಂದರೆಯಿರುವುದಿಲ್ಲ ಇದೊಂದು ಆಕಾಶಕಾಯಗಳ ನೈಸರ್ಗಿಕ ಕ್ರಿಯೆ.

ಆರ್. ಸೀತಾರಾಮಯ್ಯ,
ಜೋತೀಷ್ಕರು,
ಕಮಲ, 5ನೇ ತಿರುವು,
ಬಸವನಗುಡಿ,
ಶಿವಮೊಗ್ಗ - 577 201
ಮೋ: 94490 48340
ಪೋನ್: 08182-227344

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Horoscope 2025: ಮೀನ ರಾಶಿಯವರು 2025 ರಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಗಮನಹರಿಸಿ

Horoscope 2025: ಕುಂಭ ರಾಶಿಯವರಿಗೆ 2025 ರಲ್ಲಿ ಆರೋಗ್ಯವನ್ನು ಹಗುರವಾಗಿ ಪರಿಗಣಿಸುವಂತಿಲ್ಲ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Horoscope 2025: ಮಕರ ರಾಶಿಯವರಿಗೆ 2025 ರಲ್ಲಿ ಆರೋಗ್ಯದ ಬಗ್ಗೆ ಚಿಂತೆ ಬೇಡ

Horoscope 2025: ಧನು ರಾಶಿಯವರಿಗೆ ಆರೋಗ್ಯದಲ್ಲಿ ಕುಟುಂಬಕ್ಕೂ ತೊಂದರೆ

Show comments