Select Your Language

Notifications

webdunia
webdunia
webdunia
webdunia

ರಾಹು ಶುಭಕಾರಕನೇ?

ರಾಹು ಶುಭಕಾರಕನೇ?
, ಸೋಮವಾರ, 24 ಫೆಬ್ರವರಿ 2014 (11:44 IST)
PR
ರಾಹು ಕಾಲದ ಬಗ್ಗೆ ಶಂಕೆಗೊಳಗಾಗದವರು ಯಾರೂ ಇಲ್ಲ. ಯಾವುದೇ ಶುಭ ಕಾರ್ಯಗಳಿಗೆ ರಾಹುಕಾಲವು ಒಳ್ಳೆಯದಲ್ಲ ಎಂಬ ನಂಬಿಕೆ ಗಾಢವಾದದ್ದು. ಇದಕ್ಕೆ ಕಾರಣ ಸರ್ಪ ರೂಪಿಯಾದ ರಾಹು ಒಂದೂವರೆ ಗಂಟೆಗಳ ಕಾಲ ವಿಷವನ್ನು ಪಸರಿಸುತ್ತಾನೆ ಎಂಬ ನಿಟ್ಟಿನಲ್ಲಿ ಈ ಗಳಿಗೆಯು ಅಶುಭವೆಂದು ತಿಳಿಯಲ್ಪಡುತ್ತದೆ.

ಆದರೂ ರಾಹುಕಾಲವು ಕೆಲ ಕಾರ್ಯಗಳಿಗೆ ಗುಣಕರವಾಗಿದ್ದು ಭಾಗ್ಯದಾಯಕವಾಗಿರುವ ಕೆಲವು ಸಂದರ್ಭಗಳನ್ನು ನಾವು ಕಾಣಬಹುದು.ಉದ್ದಿಷ್ಟ ಕಾರ್ಯಗಳಿಗೆ ಮನೆಯಿಂದ ಈ ಕಾಲದಲ್ಲಿ ಹೊರಡುವುದು ಅಶುಭದಾಯಕ.

ರಾಹುಕಾಲದಲ್ಲಿ ಕಾರ್ಯಗಳನ್ನು ನೆರವೇರಿಸುವುದಕ್ಕೆ ಯಾವುದೇ ಹೆಚ್ಚಿನ ಅಡಚಣೆಗಳು ಇಲ್ಲ. ಇನ್ನೂ ಕೆಲವು ಕಾರ್ಯಗಳು ಶುಭಕರವಾಗಿ ಪರಿಣಮಿಸುವುದೂ ಇದೆ. ಆದರೆ ಬಹುತೇಕ ಮಂದಿ ಶುಭಕಾರ್ಯಗಳಿಗೆ ರಾಹುಕಾಲವನ್ನು ಬಳಸುವುದಿಲ್ಲ.

ರಾಹು ದೆಶೆಯು 18 ವರ್ಷಗಳಾಗಿವೆ. ಅದೇ ರೀತಿ ರಾಹು ದೆಶೆಯು ಯಾವಾಗಲೂ ಅಶುಭವಾಗ ಬೇಕೆಂದಿಲ್ಲ. ಸಾಮಾನ್ಯವಾಗಿ ರಾಹು ದೆಶೆಯು ಅಶುಭವೆಂದು ಪರಿಗಣಿಸಿದರೂ ಕೆಲವು ಗ್ರಹಗಳ ಭ್ರಮಣಕಾಲದಲ್ಲಿ ಇದು ಶುಭಕರವಾಗಿ ಪರಿಣಮಿಸುತ್ತದೆ.

ರಾಹು ಇಷ್ಟ ಸ್ಥಾನದಲ್ಲಿರುವ ಜಾತಕನಿಗೆ ಅವರ ಗುರು ಮತ್ತು ಚಂದ್ರನು ಪ್ರಬಲ ಸ್ಥಾನದಲ್ಲಿರುವುದಾದರೆ ವಿದ್ಯಾಭ್ಯಾಸ, ಉದ್ಯೋಗ ಲಬ್ಧಿ ಹಾಗೂ ಉನ್ನತ ಸ್ಥಾನಮಾನಗಳ ಪ್ರಾಪ್ತಿಯೊಂದಿಗೆ ವಿದೇಶ ಯಾತ್ರೆಯು ಕೈಗೂಡಿ ಬರುವ ಸಾಧ್ಯತೆ ಇರುತ್ತದೆ.

Share this Story:

Follow Webdunia kannada