Select Your Language

Notifications

webdunia
webdunia
webdunia
webdunia

ಮಾತೃತ್ವದ ಮೇಲೆ ಚಂದ್ರನ ಚಲನೆಯ ಪ್ರಭಾವ

ಮಾತೃತ್ವದ ಮೇಲೆ ಚಂದ್ರನ ಚಲನೆಯ ಪ್ರಭಾವ
WD
'ಚಂದ್ರಮಾ ಮನಸೋ ಜಾತಹ' ಚಂದ್ರನು ಮನಸ್ಸಿಗೆ ಕಾರಕನಾಗಿದ್ದಾನೆ. ಹಾಗೆಯೇ, ಚಂದ್ರನು ಮಾತೃಕಾರಕನಾಗಿದ್ದಾನೆ. ಮತ್ತು ಸ್ತ್ರೀಯರ ಋತುಚಕ್ರ ಕಾರಕನೂ ಆಗಿದ್ದಾನೆ.

ಕೆಲವು ವರ್ಷಗಳ ಹಿಂದೆ, ಪ್ರಾಚೀನ ಗ್ರಂಥಗಳ ಶೋಧನೆ ಪ್ರವೃತ್ತಿಯುಳ್ಳವರಾಗಿದ್ದ ಜಕೋಸ್ಲೊವಾಕಿಯ ದೇಶದ ಮನಃಶಾಸ್ತ್ರಜ್ಞರಾದ ಡಾ|| ಯುಜನ್ ಜೋನಸ್ ಎಂಬುವವರು, ಪ್ರಾಚೀನ ಗ್ರಂಥಗಳ ಸಂಶೋಧನೆಯಲ್ಲಿ ತೊಡಗಿದ್ದರು. ಅವರಿಗೆ ಬೆಬಿಲೋನಿಯಾದಲ್ಲಿ ದೊರೆತ ಕೆಲವು ಪ್ರಾಚೀನ ಹಸ್ತ ಪ್ರತಿಗಳಲ್ಲಿ, ಚಂದ್ರನ ಕಾಲಚಕ್ರದ ಗತಿಯಿಂದ ಸ್ತ್ರೀಯರು ಗರ್ಭ ಧರಿಸುತ್ತಾರೆ ಎಂದು ಬರೆದಿದ್ದನ್ನು ಇವರು ಪುನಃ ಸಂಶೋಧನೆ ನಡೆಸಿ, ಚಂದ್ರನ ಕಾಲಚಕ್ರದ ಮೇಲೆ ಕೆಲವು ಅಂಶಗಳನ್ನು ಕಂಡುಹಿಡಿದರು. ಶೇಕಡ 70ರಿಂದ 85 ಸ್ತ್ರೀಯರು ಕಾಲಚಕ್ರದಲ್ಲಿ ಚಂದ್ರನ ಚಲನೆಯು, ಸ್ತ್ರೀಯ ಕುಂಡಲಿಯಲ್ಲಿರುವ ಚಂದ್ರನ ಅವಸ್ಥೆಗೆ (ಸ್ಥಿತಿಗೆ) ಬಂದಾಗ ಸ್ತ್ರೀಯು ಗರ್ಭ ಧರಿಸುತ್ತಾಳೆ. ಶೇಕಡ 15 ರಿಂದ 30 ಸ್ತ್ರೀಯರ ಗರ್ಭಧಾರಣೆ ಮಾತ್ರ ಅಂಡೋತ್ಪತ್ತಿಯ ಅವಸ್ಥೆಯಲ್ಲಿ ಜರುಗುತ್ತದೆ. ವಿದೇಶಗಳಲ್ಲಿ ಗರ್ಭಧಾರಣೆಯನ್ನು ಹೆಚ್ಚಾಗಿ ತಡೆಗಟ್ಟುವುದರಿಂದ ಅಲ್ಲಿ ಕ್ರಮಬದ್ಧ ಋತುಚಕ್ರ ಚಲನೆಯ ಕ್ರಮ ಅನಿಶ್ಚಿತಗೊಳ್ಳುತ್ತದೆ.

ಾ|| ಯುಜನ್ ಜೋನಸ್ ಪ್ರಕಾರ, ಹೆಚ್ಚಾಗಿ ಸ್ತ್ರೀಯರು ಗರ್ಭಧರಿಸುವ ಸಮಯವು ಸ್ತ್ರೀಯರಲ್ಲಿ ಅಂಡೋತ್ಪತ್ತಿಯ ಕಾಲಚಕ್ರ ಹಾಗೂ ಜ್ಯೋತಿಷ್ಯದಲ್ಲಿ ಗರ್ಭಧಾರಣೆಯ ಕಾಲ (ಚಂದ್ರನ ಸ್ಥಿತಿ) ಒಂದೇ ಸಮನಾಗಿರುವುದು. ಈ ಎರಡೂ ಕಾಲಚಕ್ರಗಳು ಜೊತೆಗೆ ಸೇರಿದಾಗ, ತಾಯ್ತನವು ಉಂಟಾಗುತ್ತದೆಂದು ಅವರು ಸಂಶೋಧಿಸಿದರು.

ಇದನ್ನು ಸರಳವಾಗಿ ಹೇಳಬೇಕೆಂದರೆ, ಗರ್ಭಧಾರಣೆಯ ಅವಕಾಶವು ಕಾಲಚಕ್ರದಲ್ಲಿ ಚಂದ್ರನ ಅವಸ್ಥೆಯು (ಸ್ಥಿತಿಯು) ತಾಯಿಯ ಕುಂಡಲಿಯಲ್ಲಿ ಚಂದ್ರನ ಅವಸ್ಥೆಗೆ (ಸ್ಥಿತಿಗೆ) ಸಮನಾದಾಗ ಒದಗಿ ಬರುತ್ತದೆ. ಉದಾಹರಣೆಗೆ ಸ್ತ್ರೀಯು ಹುಣ್ಣಿಮೆ ದಿವಸ ಜನಿಸಿದ್ದರೆ, ಗರ್ಭಧಾರಣೆಯ ಸಮಯವು ಹುಣ್ಣಿಮೆಯಾಗಿರುತ್ತದೆ. ಜನನ ಸಮಯದಲ್ಲಿ ಚಂದ್ರನು ನಕ್ಷತ್ರದ ಯಾವ ಪಾದದಲ್ಲಿರುತ್ತಾನೋ ಆ ಪಾದದಲ್ಲಿಯೇ ಗರ್ಭಧಾರಣೆಯಾಗುತ್ತದೆ.

ಾ|| ಯುಜನ್ ಜೋನಸ್‌ರವರು ಇನ್ನೂ ಮುಖ್ಯವಾದ ವಿಷಯವನ್ನು ಸಂಶೋಧಿಸಿದರು. ಗರ್ಭಧಾರಣೆಯ ಸಮಯದಲ್ಲಿ ಚಂದ್ರನು, ಪುರುಷ ರಾಶಿಗಳಾದ ಮೇಷ, ಮಿಥುನ, ಸಿಂಹ, ತುಲಾ, ಧನಸ್ಸು ಅಥವಾ ಕುಂಭ ರಾಶಿಯಲ್ಲಿದ್ದರೆ, ಗಂಡು ಸಂತಾನವಾಗುತ್ತದೆ. ಅದೇ ಚಂದ್ರನು ಗರ್ಭಧಾರಣೆಯ ಸಮಯದಲ್ಲಿ ಸ್ತ್ರೀ ರಾಶಿಗಳಾದ ವೃಷಭ, ಕಟಕ, ಕನ್ಯಾ, ವೃಶ್ಚಿಕ, ಮಕರ ಅಥವಾ ಮೀನ ರಾಶಿಯಲ್ಲಿದ್ದರೆ, ಹೆಣ್ಣು ಸಂತಾನವಾಗುತ್ತದೆ. ಗರ್ಭಧಾರಣೆಯ ಸಮಯದಲ್ಲಿ ಚಂದ್ರನು ರಾಶಿ ಬದಲಾಯಿಸುವ ವೇಳೆಯಾಗಿದ್ದರೆ, ಅವಳಿ ಮಕ್ಕಳಾಗುತ್ತವೆ. ಇದು ಶೇಕಡ 100 ಭಾಗ ಸತ್ಯವಾಗಿದೆಯೆಂದು ಅವರು ತಮ್ಮ ಸಂಶೋಧನಾ ವರದಿಗಳಲ್ಲಿ ನಿರೂಪಿಸಿದ್ದಾರೆ.

ಆರ್.ಸೀತಾರಾಮಯ್ಯ
ಜ್ಯೋತೀಷ್ಕರು
ಕಮಲ, 5ನೇ ತಿರುವು
ಬಸವನಗುಡಿ ಶಿವಮೊಗ್ಗ.
08182 - 227344

Share this Story:

Follow Webdunia kannada