Select Your Language

Notifications

webdunia
webdunia
webdunia
webdunia

ನಿಮ್ಮ ಜಾತಕದಲ್ಲಿ ಗ್ರಹಬಲವಿದ್ದಾಗ..

ನಿಮ್ಮ ಜಾತಕದಲ್ಲಿ ಗ್ರಹಬಲವಿದ್ದಾಗ..
ಜ್ಯೋತಿಷ್ಯ , ಶನಿವಾರ, 19 ಅಕ್ಟೋಬರ್ 2013 (16:45 IST)
PR
PR
ಜಾತಕನ ಜಾತಕದಲ್ಲಿನ ಗ್ರಹಗಳಲ್ಲಿನ ಸ್ಥಾನ ,ದಶಾಭುಕ್ತಿ, ಅಂತರ್ದಶಾಭುಕ್ತಿ , ಕಾಲಚಕ್ರ ನಿರ್ಣಯ ಹೀಗೆ ಇವೆಲ್ಲವನ್ನೂ ಅರಿತು ನಿರ್ಣಯಿಸುವ ಫಲವೇ ಭವಿಷ್ಯ ಎಂಬುದಾಗಿ ಜ್ಯೋತಿಷ್ಯ ಸಿದ್ಧಾಂತವು ಪ್ರಚುರಪಡಿಸಿದೆ. ಇದರಲ್ಲಿ ಗ್ರಹಬಲ ಎಂಬುದು ವಿಶೇಷವಾಗಿ ನಾಲ್ಕು ಪ್ರಕಾರದ ಬಲವೆಂಬುದಾಗಿ ಬಿಂಬಿಸಲ್ಪಟ್ಟಿದೆ.
ü ಸ್ಥಾನ ಬಲ: ಜಾತಕದಲ್ಲಿ ಯಾವುದೇ ಗ್ರಹವು ತನ್ನ ಉಚ್ಛ ಸ್ಥಾನದಲ್ಲಿ ಸ್ಥಿತವಾಗಿದ್ದರೆ ತನ್ನ ಮಿಶ್ರರಾಶಿ ಹಾಗೂ ಸ್ವಕ್ಷೇತ್ರದಲ್ಲಿದ್ದರೆ ಅದರ ಮೂಲ ತ್ರಿಕೋಣ ಹಾಗೂ ನವಾಂಶದಲ್ಲಿದ್ದರೆ ಅದನ್ನು ಸ್ಥಾನ ಬಲವೆಂದು ಕರೆಯುತ್ತಾರೆ. ಜಾತಕದಲ್ಲಿ ಈ ಸ್ಥಾನ ಬಂದಿರುವಾಗ ಜಾತಕನಿಗೆ ಅತಿಶಯವಾದ ಐಶ್ವರ್ಯ ವೃದ್ಧಿಯಾಗುವುದಲ್ಲದೇ ಸಾಮಾಜಿಕ ಹಾಗೂ ರಾಜಕೀಯದಲ್ಲಿ ಉತ್ತಮ ಸ್ಥಾನ ಪ್ರಾಪ್ತಿಯಾಗುತ್ತದೆ. ಇನ್ನು ಚಂದ್ರ ಶುಕ್ರರು ಸ್ತ್ರೀ ಕ್ಷೇತ್ರದಲ್ಲಿರುವಾಗಲೂ, ಉಳಿದ ಗ್ರಹಗಳು ಪುರುಷ ಕ್ಷೇತ್ರದಲ್ಲಿದ್ದಾಗಲೂ ಉತ್ತಮವಾದ ಶುಭಫಲಗಳು ದೊರೆಯುತ್ತವೆ.

ü ಜೇಷ್ಠಬಲ : ಗ್ರಹಗಳಿಗೆ ವಕ್ರ, ಅತಿವಕ್ರ , ಕುಟಿಲ, ಮಂದಾ,ಮಂದರಕ, ಸಮ, ಶೀಘ್ರ ,ಅತಿಶೀಘ್ರ, ಎಂಬ ಎಂಟು ಪ್ರಕಾರದ ಗತಿಗಳಿದ್ದು ಈ ಗ್ರಹಗಳಿಗೆ ಯುದ್ಧದಂತಹ ಸಮಯದಲ್ಲಿ ಉತ್ತರ ದಿಕ್ಕಿನಲ್ಲಿರುವ ಗ್ರಹಗಳೇ
ಬಲಶಾಲಿಯೆಂಬ ನಿಯಮವಿದೆ.ಹಾಗಾಗಿ ಜಯಶಾಲಿಯಾದ ಗ್ರಹಕ್ಕೆ ಅಧಿಕಬಲವೆಂದು , ಸೋತ ಗ್ರಹಕ್ಕೆ ಕ್ಷೀಣ ಬಲವೆಂದೂ ಕಲ್ಪಿಸಿ ಅವುಗಳ ಬಲಾಬಲವನ್ನು ವಿಮರ್ಶಿಸಿ ಜಾತಕನ ಭವಿಷ್ಯ ಫಲವನ್ನು ನಿರ್ಣಯಿಸಲಾಗುತ್ತದೆ. ಹಾಗಾಗಿ ಗ್ರಹಗಳು ತಮ್ಮ ಜೇಷ್ಠ ಬಲದಲ್ಲಿದ್ದರೆ ಜಾತಕನಿಗೆ ಉತ್ತಮ ಸ್ಥಾನಮಾನ, ಗೌರವ ಪ್ರಾಪ್ತಿ, ಯಶಸ್ಸು ಹಾಗೂ ಅತಿಶಯವಾದ ಕೀರ್ತಿ ದೊರೆಯುತ್ತದೆ.

webdunia
PR
PR
ü ದಿಗ್ಪಲ: ಸೂರ್ಯ,ಮಂಗಳನು ದಕ್ಷಿಣ ದಿಕ್ಕಿನಲ್ಲಿದ್ದಾಗ ಚಂದ್ರ-ಶುಕ್ರರು ಉತ್ತರ ದಿಕ್ಕಿನಲ್ಲಿದ್ದಾಗ, ಬುಧ-ಗುರು ಗ್ರಹಗಳು ಪೂರ್ವ ದಿಕ್ಕಿನಲ್ಲಿದ್ದಾಗ ಹಾಗೂ ಶನಿಯು ಪಶ್ಚಿಮ ದಿಕ್ಕಿನಲ್ಲಿದ್ದಾಗ ಜಾತಕನು ದಿಗ್ಬಲ ಉಳ್ಳವನಾಗಿರುತ್ತಾನೆ. ಈ ಸಂದರ್ಭದಲ್ಲಿ ಜಾತಕನಿಗೆ ಈ ದಿಗ್ಬಲವುಳ್ಳ ಗ್ರಹಗಳು ಉತ್ತಮ ಸಂಪತ್ತು, ಕೀರ್ತಿ ದೊರೆಯುವಂತೆ ಮಾಡುವುದಲ್ಲದೇ ವಾಹನ ಯೋಗ, ಅಧಿಕಾರ ಪ್ರಾಪ್ತಿಯಂತಹ ಉತ್ತಮ ಫಲಗಳನ್ನೇ ನೀಡುತ್ತದೆ.
ü ಕಾಲಬಲ : ಚಂದ್ರ,ಮಂಗಳ, ಶನಿಗ್ರಹಗಳು ರಾತ್ರಿ ಕಾಲದಲ್ಲಿ ಬಲವಾಗಿದ್ದು, ಬುಧನು ಹಗಲು ಮತ್ತು ರಾತ್ರಿ ಎರಡೂ ಸಮಯದಲ್ಲಿಯೂ ಬಲವಾಗಿರುತ್ತಾನೆ. ಅಲ್ಲದೇ ಸೌಮ್ಯಗ್ರಹಗಳು ಶುಕ್ಲ ಪಕ್ಷದಲ್ಲಿಯೂ , ಕ್ರೂರ ಗ್ರಹಗಳು ಕೃಷ್ಣ ಪಕ್ಷದಲ್ಲಿಯೂ ಬಲವಾಗಿರುತ್ತಾರೆ. ಇಂತಹ ಸಂದರ್ಭದಲ್ಲಿ ಜಾತಕನಿಗೆ ಗ್ರಹಗಳ ಬಲವಿರುವ ಸಮಯದಲ್ಲಿ ಉತ್ತಮವಾದ ಫಲಗಳನ್ನು ನೀಡುವುದು ಮಾತ್ರವಲ್ಲ, ನಿಶ್ಚಯಿಸಿದ ಕಾರ್ಯದಲ್ಲಿ ಯಶಸ್ಸು,ಅಧಿಕಾರ, ಉತ್ತಮ ಸ್ಥಾನಗಳನ್ನು ಒದಗಿಸಿಕೊಡುತ್ತದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

Share this Story:

Follow Webdunia kannada