Webdunia - Bharat's app for daily news and videos

Install App

ಅಧಿಕಾರ ಕಳೆದುಕೊಂಡಿದ್ದೀರಾ? ಇದು ಶಶಕಯೋಗದ ಪ್ರಭಾವ

Webdunia
ಬುಧವಾರ, 30 ಅಕ್ಟೋಬರ್ 2013 (12:48 IST)
PR
PR
ಜ್ಯೋತಿಷಿ : ಪರಮೇಶ್ವರ ಶೃಂಗೇರಿ
ಪ್ರತಿಯೊಬ್ಬ ವ್ಯಕ್ತಿಯ ಜಾತಕದಲ್ಲಿ ಹಲವು ಬಗೆಯ ಯೋಗಗಳು ಕಂಡುಬರುತ್ತವೆ.ಅದರಲ್ಲಿ ‘ಶಶಕಯೋಗ’ ಎಂಬುದು ಒಂದು ಮಹತ್ತರ ಸ್ಥಾನವನ್ನು ಪಡೆದಿದ್ದು ಜಾತಕನ ಭವಿಷ್ಯದ ಮೇಲೆ ವಿಶೇಷವಾದ ಪ್ರಭಾವ ಬೀರುತ್ತದೆ. ಶನಿಯ ಸ್ವಕ್ಷೇತ್ರವಾದ ಮಕರ, ಕುಂಭಗಳಲ್ಲಿ ಅಥವಾ ಉಚ್ಛಕ್ಷೇತ್ರವಾದ ತುಲಾದಲ್ಲಿದ್ದು ಈ ಕ್ಷೇತ್ರಗಳು ಲಗ್ನಕ್ಕೆ ಕೇಂದ್ರಸ್ಥಾನವಾದರೆ ಅದನ್ನು ಶಶಕಯೋಗ ಎಂದು ಕರೆಯುತ್ತಾರೆ. ಈ ಯೋಗದಲ್ಲಿ ಜನಿಸಿದವರು ಕೃಶವಾದ ಹಸ್ತಗಳನ್ನು ಹೊಂದಿದ್ದು, ಚಿಕ್ಕದಾದ ಬಾಯಿಯನ್ನು ಹೊಂದಿರುತ್ತಾರೆ.ಅಲ್ಲದೇ ಇವರು ಧೈರ್ಯವಂತರೂ,ಕೋಪಿಷ್ಠರೂ ಆಗಿದ್ದು ಏಕಾಂಗಿಯಾದ ಜೀವನ ನಡೆಸುವ ಸ್ವಭಾವವನ್ನು ಹೊಂದಿರುತ್ತಾರೆ.
PR
PR
ಸದಾ ಸಂಚಾರಶೀಲರಾದ ಇವರು ಸ್ತ್ರೀ ವ್ಯಾಮೋಹ ಉಳ್ಳವರೂ,ಮಾತೃ ನಿಷ್ಠೆ ಉಳ್ಳವರೂ ಆಗಿದ್ದು,ತಮ್ಮ ಬುದ್ಧಿಶಕ್ತಿಯಿಂದಲೇ ಶತ್ರುನಾಶಮಾಡುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಬೇರೊಬ್ಬರ ಸಂಪತ್ತನ್ನು ಹರಣ ಮಾಡುವ ಸ್ವಭಾವ ಹೊಂದಿರುವ ಇವರು ಸಮಾಜದಲ್ಲಿ ಪ್ರಭಾವಿ ಸ್ಥಾನವನ್ನು ಅಲಂಕರಿಸುತ್ತಾರೆ.

ಆದರೆ ಶಶಕಯೋಗದಲ್ಲಿ ಜನಿಸಿದವರು ಒಂದೊಮ್ಮೆ ರಾಜಯೋಗ ಬಂದರೂ ಸಹ ಅನುಭವಿಸಲು ವಿಫಲರಾಗುತ್ತಾರೆ.ರಾಜಯೋಗಕಾರಕಗಳಾದ ಗ್ರಹಗಳು ಶತ್ರುಕ್ಷೇತ್ರಗಳಲ್ಲಾಗಲೀ,ತಮ್ಮ ನೀಚಕ್ಷೇತ್ರಗಳಲ್ಲಾಗಲೀ ಕಂಡುಬಂದರೆ ತಾವು ಕೊಡತಕ್ಕ ರಾಜಯೋಗವನ್ನು ನಾಶಮಾಡುತ್ತವೆ.ಅಲ್ಲದೇ ರಾಜಯೋಗಕಾರಕವಾದ ಗ್ರಹಗಳು ಬೇರೆ ಗ್ರಹಗಳಿಗಿಂತ ಬಲಹೀನರಾಗಿ ಅಂದರೆ ಒಬ್ಬ ವ್ಯಕ್ತಿಯ ಜನನ ಕಾಲದಲ್ಲಿ ರಾಜಯೋಗವಿದ್ದರೂ ಲಗ್ನ ಕಾಲದಲ್ಲಿ,ಯಾವುದೇ ಒಂದು ಗ್ರಹವು ನೋಡದೇ ಇದ್ದರೆ ‘ರಾಜಯೋಗ’ ಹೀನರಾಗುತ್ತಾರೆ.

ಹಾಗಾಗಿ ಜನ್ಮ ಕಾಲದಲ್ಲಿ ಪ್ರಬಲವಾದ ರಾಜಯೋಗವಿದ್ದರೂ ರವಿ ತನ್ನ ನೀಚ ರಾಶಿಯಾದ ತುಲಾದಲ್ಲಿ ಪರಮ ನೀಚತ್ವ ಹೊಂದಿದ್ದರೆ ಅಥವಾ ತುಲಾರಾಶಿಯ ಹತ್ತನೆಯ ಅಂಶವನ್ನು ಪ್ರವೇಶ ಮಾಡಿದರೆ ಜಾತಕನು ತನ್ನ ರಾಜಯೋಗವನ್ನು ಕಳೆದುಕೊಳ್ಳುತ್ತಾನೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

ಜನ್ಮಲಗ್ನದಲ್ಲಿ ರವಿಯು ಸ್ವನವಾಂಶದಲ್ಲಿದ್ದು,ಪಾಪದೃಷ್ಟಿ ಹೊಂದಿದ್ದರೂ, ಕ್ಷೀಣ ಚಂದ್ರನು ಸ್ವನವಾಂಶದಲ್ಲಿದ್ದು ಪಾಪಗ್ರಹಗಳು ನೋಡದೇ ಇದ್ದ ಪಕ್ಷದಲ್ಲಿ ಸಂಪತ್ತು ನಾಶ ,ರಾಜ್ಯನಾಶ,ಅಧಿಕಾರ ವಿಯೋಗದಂತಹ ದುಷ್ಫಲಗಳು ಕಂಡುಬರುತ್ತವೆ.

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?