Select Your Language

Notifications

webdunia
webdunia
webdunia
webdunia

2010ರಲ್ಲಿ ಮತ್ತೊಂದು ಚುನಾವಣೆ!: ಇದು ರಾಜಕೀಯ ಭವಿಷ್ಯ

2010ರಲ್ಲಿ ಮತ್ತೊಂದು ಚುನಾವಣೆ!: ಇದು ರಾಜಕೀಯ ಭವಿಷ್ಯ
ನವದೆಹಲಿ , ಗುರುವಾರ, 29 ಅಕ್ಟೋಬರ್ 2009 (14:55 IST)
NRB
30 ವರ್ಷಗಳಿಗೊಮ್ಮೆ ನಡೆಯುವ ಗುರುವಿನ ಅಪರೂಪದ ಸ್ಥಾನ ಪಲ್ಲಟದಿಂದಾಗಿ ಈ ಬಾರಿ ಭಾರತದ ಮೇಲೆ ಇದು ಕೆಲವು ಮಿಶ್ರ ಪರಿಣಾಮಗಳನ್ನು ಬೀರಲಿದೆ. ಮಕರ ರಾಶಿಯಿಂದ ಕುಂಭ ರಾಶಿಯೆಡೆಗೆ ಗುರು ಸ್ಥಾನಪಲ್ಲಟಗೊಳ್ಳಲಿದ್ದಾನೆ. ಇದರ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಭಾರತದಲ್ಲಿ ಆರ್ಥಿಕತೆ ಸುಧಾರಿಸಲಿದ್ದರೂ, ರಾಜಕೀಯ ಬಂಡಾಯ, ಗಲಭೆ ಕಂಡುಬರಬಹುದು.

ಜ್ಯೋತಿಷಿಗಳ ಪ್ರಕಾರ, ಮೇ 16ರ ನಂತರ ಹೊಸ ಸರ್ಕಾರ ಅಧಿಕಾರಕ್ಕೆ ಬಂದರೂ, ಅದು ಬಹಳ ಸಮಯ ಉಳಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಅಂದರೆ ಹೆಚ್ಚೆಂದರೆ ಈಗ ಅಧಿಕಾರಕ್ಕೆ ಬರಲಿರುವ ಸರ್ಕಾರ ಇನ್ನು ಒಂದರಿಂದ ಒಂದುವರೆ ವರ್ಷಗಳ ಕಾಲ ಆಳಲಿದ್ದು, ನಂತರ ಮತ್ತೆ ಚುನಾವಣೆ ಎದುರಾಗುವ ಸಂಭವವಿದೆ. ರಾಜಕೀಯ ಕ್ಷೋಭೆ ನಿಚ್ಛಳವಾಗಿ ಕಾಣಿಸುತ್ತಿದ್ದು, ಜ್ಯೋತಿಷಿಗಳ ಪ್ರಕಾರ 2010 ಅಥವಾ 2011ರ ಆರಂಭದ ದಿನಗಳಲ್ಲಿ ಮತ್ತೆ ಚುನಾವಣೆ ಇದಿರಾಗಲಿದೆ.

ಟೈಂಸ್ ಆಫ್ ಇಂಡಿಯಾ ಪ್ರಕಟಿಸಿರುವ ದೇಶದ ಮುಂದಿನ ಭವಿಷಯದ ಪ್ರಕಾರ, ಈ ಪ್ರಮುಖ ಅಂಶಗಳು ಎದ್ದು ಕಾಣುತ್ತಿವೆ. ಯಾವಾಗಲೂ ಗುರು ಸ್ಥಾನಪಲ್ಲಟವಾಗುವುದು 13 ತಿಂಗಳಿಗೊಮ್ಮೆ. ಅಂದರೆ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಗುರು 13 ತಿಂಗಳ ನಂತರ ಜಿಗಿಯುತ್ತಾನೆ. ಆದರೆ ಈ ಬಾರಿ ಐದೇ ತಿಂಗಳಲ್ಲಿ ಗುರುವಿನ ಸ್ಥಾನ ಬದಲಾಗುತ್ತಿದೆ. ಮಕರದಿಂದ ಕುಂಭಕ್ಕೆ ನೆಗೆದು ಮತ್ತೆ ಎರಡು ತಿಂಗಳ ನಂತರ ಮತ್ತೆ ತನ್ನ ಮೊದಲ ಮಕರ ರಾಶಿಗೇ ಗುರು ಮರಳಲಿದ್ದಾನೆ. ಈ ಸ್ಥಾನಪಲ್ಲಟದ ಪರಿಣಾಮಗಳು ಮಾತ್ರ ಗೋಚರವಾಗಲಿದೆ.

ಜ್ಯೋತಿಷ್ಯದ ಪ್ರಕಾರ ಗುರು ಗ್ರಹ ಅತ್ಯಂತ ಪ್ರಭಾವಶಾಲಿ, ಬಲಶಾಲಿ ಗ್ರಹ. ಆದರೆ, ಇದು ಮಕರದಲ್ಲಿದ್ದಾಗ ಇದರ ಪರಿಣಾಮ ಮಾತ್ರ ದುರ್ಬಲ. ಆದರೆ ಇದು ಕುಂಭಕ್ಕೆ ಕಾಲಿಟ್ಟರೆ ದೀರ್ಘಕಾಲಿಕ ಬದಲಾವಣೆ ಹಾಗೂ ಪರಿಣಾಮ ಬೀರುವ ಸಾಮರ್ಥ್ಯವನ್ನು ಹೊಂದಿದೆ. ಈ ಬಾರಿ ಮಾತ್ರ ಇದು ಕುಂಭಕ್ಕೆ ಕಾಲಿಟ್ಟರೂ ಎರಡುವರೆ ತಿಂಗಳೊಳಗೆ ಮತ್ತೆ ಮಕರ ರಾಶಿಗೆ ಮರಳಲಿರುವ ಕಾರಣ, ಇದರ ಅರ್ಥ ರಾಜಕೀಯವನ್ನು ಧ್ವನಿಸುತ್ತದೆ. ಗುರು ಮಕರಕ್ಕೆ ಅಂದರೆ ತನ್ನ ಹಳಎಯ ಸ್ಥಾನ ಮರಳುವುದು ಎಂದರೆ, ಮೇ 16ಕ್ಕೆ ಸರ್ಕಾರದ ರಚನೆಯಾದರೂ ಆಗಸ್ಟ್ ನಂತರ ತೊಂದರೆಗಳು ಎದುರಾಗುತ್ತದೆ. ಇದರ ಪರಿಣಾಮವೇ ಮತ್ತೊಂದು ಚುನಾವಣೆ ಎನ್ನುತ್ತಾರೆ ದೆಹಲ ಮೂಲದ ಜ್ಯೋತಿಷಿ ಮುಖೇಶ್ ಜೈನ್.
webdunia
PTI

ಯಾವ ಪಕ್ಷವೂ ನೇರವಾಗಿ ಸರ್ಕಾರ ರಚಿಸುವಷ್ಟು ಬಲಶಾಲಿಯಾಗಿ ಈ ಚುನಾವಣೆಯಲ್ಲಿ ರೂಪುಗೊಳ್ಳದಿದ್ದರೂ, ಈ ಚುನಾವಣೆಯ ಮೂಲಕ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಈವರೆಗೆ ಅಷ್ಟಾಗಿ ಬೆಳಕಿಗೆ ಬಾರದ ವ್ಯಕ್ತಿಯೊಬ್ಬರ ಉದಯವಾಗುತ್ತದೆ. ಅಂದರೆ, ಎಡಪಕ್ಷಗಳು ಕಾಂಗ್ರೆಸ್ ಅಥವಾ ಬಿಜೆಪಿಯ ಬೆಂಬಲದಿಂದ ಪೂರ್ವ ರಾಝ್ಯದ ಅಭ್ಯರ್ಥಿಯೊಬ್ಬರು ಪ್ರಧಾನ ಮಂತ್ರಿಯಾಗುವ ಲಕ್ಷಣಗಳಿವೆ ಎನ್ನುತ್ತಾರೆ ಜ್ಯೋತಿಷಿ ಅಶೋಕ್ ವಾಸುದೇವ್.

ಇವಿಷ್ಟೇ ಅಲ್ಲದೆ, ಹಲವು ಜ್ಯೋತಿಷಿಗಳ ಪ್ರಕಾರ ಎಲ್.ಕೆ.ಅಡ್ವಾಣಿ ಹಾಗೂ ಮನಮೋಹನ್ ಸಿಂಗ್ ಇಬ್ಬರಿಗೂ ರಾಜಯೋಗವಿದೆ. ಹಾಗಾಗಿ ಇಬ್ಬರಿಗೂ ಪ್ರಧಾನಮಂತ್ರಿಯಾಗುವ ಅವಕಾಶ ಅವರ ತಾರಾಬಲದ ಮೂಲಕ ಇದೆ. ಆದರೆ ಮನಮೋಹನ್ ಸಿಂಗ್ ಅವರಿಗೆ ಸೆಪ್ಟೆಂಬರ್ 10ರವರೆಗೆ ಏಳುವರೆ ಶನಿ ನಡೆಯುತ್ತಿದೆ. ಏಳುವರೆ ಶನಿಯ ಕಾಟವಿದ್ದರೂ ಅತ್ಯುನ್ನತ ಹುದ್ದೆಗೇರಿದ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಸಿಂಗ್ ಒಬ್ಬರಾಗಿದ್ದಾರೆ. ಈವರೆಗೆ ಸಿಂಗ್ ಅವರಿಗೆ ಮೂರು ಏಳುವರೆ ಶನಿ ನಡೆದಿದ್ದು, ಮೂರರಲ್ಲೂ ಸಿಂಗ್ ಅವರು ಉತ್ತಮ ಫಲವನ್ನೇ ಪಡೆದಿರುವುದು ವಿಶೇಷ. ಆದರೂ ಈ ಬಾರಿ ಸಿಂಗ್ ಅವರಿಗೆ ಮತ್ತೆ ಪ್ರಧಾನ ಮಂತ್ರಿಯಾಗುವ ಯೋಗವಿಲ್ಲ. ಅಡ್ವಾಣಿ ಅವರಿಗೂ ಅಷ್ಟೊಂದು ಬಲಶಾಲಿ ಗ್ರಹಗಳು ಅವರ ಕುಂಡಲಿಯಲ್ಲಿ ಕಾಣುತ್ತಿಲ್ಲ. ಹಾಗಾಗಿ ಅವರಿಗೂ ಈ ಬಾರಿ ಪ್ರಧಾನ ಮಂತ್ರಿ ಪಟ್ಟಕ್ಕೇರುವಷ್ಟರ ಮಟ್ಟಿಗಿನ ತಾರಾಬಲ ಇಲ್ಲ. ಅಲ್ಲದೆ, ಅಡ್ವಾಣಿ ಜಾತಕದ ಪ್ರಕಾರ, ಅವರು ಎಂದಿಗೂ ಪ್ರಧಾನ ಮಂತ್ರಿಯಾಗುವುದಿಲ್ಲ ಎನ್ನುತ್ತಾರೆ ವಾಸುದೇವ್.

webdunia
PTI
ರಾಜಕೀಯ ಜ್ಯೋತಿಷಿ ನವೀನ್ ಖನ್ನಾ ಹೇಳುವ ಪ್ರಕಾರ, ಈವರೆಗೆ ಅಷ್ಟಾಗಿ ಕಾಣಿಸಿಕೊಳ್ಳದೆ ಗುಪ್ತವಾಗಿದ್ದ ಕೆಲವು ರಾಜಕಾರಣಿಗಳು ಮುಂದಿನ ದಿನಗಳಲ್ಲಿ ತಮ್ಮ ಬಲ ಪ್ರದರ್ಶಿಸುತ್ತಾರೆ. ಪ್ರಣಬ್ ಮುಖರ್ಜಿಯವರೂ ಭವಿಷ್ಯದಲ್ಲಿ ಪ್ರವರ್ಧಮಾನಕ್ಕೆ ಬಂದು ನಿರ್ಣಾಯಕ ಪಾತ್ರ ವಹಿಸುವುದರಲ್ಲಿ ಸಂದೇಹವಿಲ್ಲ. ಅಲ್ಲದೆ, 2012ರ ನಂತರ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಉತ್ತಮ ರಾಜಕೀಯ ಭವಿಷ್ಯವಿದೆ ಎನ್ನುತ್ತಾರೆ.

Share this Story:

Follow Webdunia kannada