Select Your Language

Notifications

webdunia
webdunia
webdunia
webdunia

2009ರಲ್ಲಿ ಆರ್ಥಿಕ ಸ್ಥಿತಿ ಚೇತರಿಕೆ

2009ರಲ್ಲಿ ಆರ್ಥಿಕ ಸ್ಥಿತಿ ಚೇತರಿಕೆ
ಧೈರ್ಯ ಮಾಡಿಕೊಳ್ಳಿ. ಜಾಗತಿಕ ಹಣಕಾಸು ಹಿಂಜರಿತದ ಬಿಸಿ ಭಾರತಕ್ಕೂ ತಟ್ಟುತ್ತದೆ. ದೇಶದ ಪ್ರಮುಖ ಜ್ಯೋತಿಷಿಗಳಲ್ಲೊಬ್ಬರಾದ ಬೇಜಾನ್ ದಾರುವಾಲಾ ಅವರು ಮುಂದಿನ ವರ್ಷ ಭಾರಿ ಬದಲಾವಣೆಗಳು ನಡೆಯಲಿವೆ ಎಂದು ಭವಿಷ್ಯ ನುಡಿದಿದ್ದಾರೆ. ಸೆನ್ಸೆಕ್ಸ್ ತನ್ನ ಪಾತಾಳಮುಖಿ ಪ್ರಯಾಣವನ್ನು ಸ್ಥಗಿತಗೊಳಿಸಲಿದೆ ಮತ್ತು ಕಠೋರ ದಿನಗಳು ಕಳೆದು, ದಪ್ಪವಾದ ವೇತನದ ಚೆಕ್‌ಗಳು, ಕಾರ್ಪೊರೇಟ್ ಸ್ವಾತಂತ್ರ್ಯ ಎಲ್ಲವೂ ದೊರೆಯುತ್ತದೆ ಎನ್ನುತ್ತಾರವರು.

ಹಿಂದ್ ಪಾಕೆಟ್ ಬುಕ್ಸ್ ಪ್ರಕಟಿಸಿರುವ ದಾರುವಾಲಾ ಅವರ 2009 ವರ್ಷ ಭವಿಷ್ಯದಲ್ಲಿ, ಏಳಿಗೆ ಮತ್ತು ವಿವೇಕದ ಅಧಿದೇವತೆಯಾಗಿರುವ ಗುರು, ಭ್ರಮೆ, ಕಲ್ಪನಾವಿಲಾಸ ಮತ್ತು ಕ್ರಿಯಾಶೀಲತೆಯ ಗ್ರಹವಾದ ನೆಪ್ಚೂನ್ ಮತ್ತು ಸಂಶೋಧನೆಗಳು, ವಿಜ್ಞಾನ ಮತ್ತು ನಿಗೂಢತೆಯ ಪ್ರತಿನಿಧಿ ರಾಹು ಗ್ರಹಗಳ ಶಕ್ತಿಗಳು, ಸಂಪರ್ಕ, ಸಂವಹನ, ಸಮಗ್ರತೆ, ಸಂಪರ್ಕಗಳು, ರಚನಾತ್ಮಕತೆ ಮತ್ತು ಪ್ರಜ್ಞೆಯ ಸಂಕೇತವಾಗಿರುವ ಕುಂಭ ರಾಶಿಯಲ್ಲಿ ಮಿಳಿತವಾಗುತ್ತವೆ. ಈ ಗ್ರಹಗಳು ಸಮರ್ಪಕ ರಾಶಿಯಲ್ಲಿ ಇರುವುದು ಶುಭ ಫಲದಾಯಕ ಎನ್ನುತ್ತಾರೆ ದಾರುವಾಲಾ.

ಗುರುವು ಜಗತ್ತಿನ ಅಧಿದೇವತೆ. ಇದರ ಪರಿಣಾಮ? ಬಾಲಿವುಡ್‌ನ 'ಕಿಂಗ್' ಶಾರೂಖ್ ಖಾನ್ ಅದ್ಭುತ ಎತ್ತರಕ್ಕೇರುತ್ತಾರೆ. 'ಅವರೊಂದು ಚಿತ್ರದಲ್ಲಿ ನಟಿಸಲಿದ್ದು, ಇದು ನೈಜ ಜಗತ್ತಿನೊಂದಿಗೆ ಸಂಬಂಧಿಸಿದ್ದಾಗಿರುತ್ತದೆ ಮತ್ತು ಅವರ ಕೀರ್ತಿ ಅಜರಾಮರವಾಗಿಬಿಡುತ್ತದೆ. ಮಾತ್ರವಲ್ಲ, ಸದ್ಯೋಭವಿಷ್ಯದಲ್ಲಿ ಅವರು ಬಾಲಿವುಡ್‌ಗೆ ಆಸ್ಕರ್ ಪ್ರಶಸ್ತಿಯನ್ನೂ ಗಳಿಸಿಕೊಡಬಲ್ಲವರಾಗಿದ್ದಾರೆ' ಎಂದು ಭವಿಷ್ಯ ನುಡಿದಿದ್ದಾರೆ ಬೇಜಾನ್ ದಾರುವಾಲಾ.

ಮುಂದಿನ ಐದು ವರ್ಷಗಳ ಕಾಲ ಕ್ರೀಡಾ ಜಗತ್ತನ್ನು ಕ್ರಿಕೆಟ್ ಆಳಲಿದೆ. ಮಹೇಂದ್ರ ಸಿಂಗ್ ಧೋನಿ ಅವರು ದೇಶವೇ ಹೆಮ್ಮೆ ಪಡುವ ಹಾಗೆ ಮಾಡುತ್ತಾರೆ. ಸಚಿನ್ ತೆಂಡುಲ್ಕರ್ ಅವರು 2010-2012ರ ಅವಧಿಯಲ್ಲಿ ಆರೋಗ್ಯ ಸಂಬಂಧಿತ ಕಾರಣಗಳಿಗಾಗಿ ಕ್ರಿಕೆಟಿಗೆ ವಿದಾಯ ಹಾಡಬಹುದಾಗಿದೆ ಎಂದು ದಾರುವಾಲಾ ಹೇಳಿದ್ದಾರೆ.

Share this Story:

Follow Webdunia kannada