Webdunia - Bharat's app for daily news and videos

Install App

ಹೊಸ ವರ್ಷಕ್ಕೆ ಚಂದ್ರ ಗ್ರಹಣ: ಶುಭವಲ್ಲವಿದು!

Webdunia
ND
ಪಂ. ಅಶೋಕ್ ಪವಾರ್ 'ಮಯಂಕ ್'
ಡಿಸೆಂಬರ್ 31ರ ಗುರುವಾರ-ಶುಕ್ರವಾರ ನಡುವಿನ ರಾತ್ರಿ ಭಾರತೀಯ ಕಾಲಮಾನ ಪ್ರಕಾರ 00.21.52 ಸಮಯಕ್ಕೆ ಚಂದ್ರಗ್ರಹಣದ ಸ್ಪರ್ಶವು ಆರಂಭವಾಗುತ್ತದೆ. ಮೋಕ್ಷದ ಸಮಯವು 25 ಗಂಟೆ 23 ನಿಮಿಷ 52 ಸೆಕೆಂಡ್. ಈ ಗ್ರಹಣದ ಮಧ್ಯಾವಧಿಯು 00.53.07 ನಿಮಿಷ ಇರುತ್ತದೆ. ವೇಧ ಅವಧಿಯು ಡಿಸೆಂಬರ್ 31ರ 3 ಗಂಟೆ 21 ನಿಮಿಷದಲ್ಲಿ ಪ್ರಾರಂಭವಾಗುತ್ತದೆ.

ರಾಶಿಗಳ ಮೇಲೆ ಗ್ರಹಣ ಪ್ರಭಾವ: ಈ ಗ್ರಹಣವು ಆರ್ದ್ರಾ ನಕ್ಷತ್ರ, ಮಿಥುನ ರಾಶಿಯಲ್ಲಿ ಸಂಭವಿಸುತ್ತಿದೆ. ಹೀಗಾಗಿ ಆರ್ದ್ರಾ ನಕ್ಷತ್ರ, ಮಿಥುನ ರಾಶಿಯವರಿಗೆ ಸಂಕಷ್ಟದಾಯಕವೂ ಹೌದು. ಮೇಷ ರಾಶಿಯವರಿಗೆ ಆರ್ಥಿಕ ಲಾಭವಾಗುತ್ತದೆ. ವೃಷಭ ರಾಶಿಯವರಿಗೆ ಧನ ಹಾನಿ ಯೋಗ ಉಂಟಾಗುತ್ತದೆ, ಹೀಗಾಗಿ ವೃಷಭ ರಾಶಿಯ ಜಾತಕನು ಧನ ಸಂಬಂಧಿತ ವಿಷಯಗಳಲ್ಲಿ ಎಚ್ಚರ ವಹಿಸುವುದು ಒಳಿತು.

ಮಿಥುನ ರಾಶಿಯವರಿಗೆ ದುರ್ಘಟನೆಯ ಯೋಗವಿದ್ದು, ವಾಹನಗಳಲ್ಲಿ ಸಂಚರಿಸುವಾಗ ಎಚ್ಚರಿಕೆ ವಹಿಸುವುದು ಅಗತ್ಯ. ಕಟಕ ರಾಶಿಯವರು ಹಣಕಾಸು ವಿಷಯಗಳಿಗೆ ಸಂಬಂಧಿಸಿದಂತೆ ಜಾಗರೂಕವಾಗಿ ಹೆಜ್ಜೆ ಇಡಬೇಕಾಗುತ್ತದೆ. ಸಿಂಹ ರಾಶಿಯವರಿಗೆ ಲಾಭದಾಯಕ ಸ್ಥಿತಿ ಉಂಟಾಗುತ್ತದೆ. ಕನ್ಯಾ ರಾಶಿಯವರಿಗೆ ಸುಖದ ಸಮಯ ಮುಂದಿದೆ ಮತ್ತು ಮನಸ್ಸನ್ನು ಪ್ರಸನ್ನಗೊಳಿಸುವ ಶುಭ ಸಮಾಚಾರವನ್ನು ಕೇಳಲಿದ್ದಾರೆ.

ತುಲಾ ರಾಶಿಯವರು ಅವಮಾನಕರ ಪರಿಸ್ಥಿತಿ ಉದ್ಭವಿಸದಂತಹಾ ಕೆಲಸವನ್ನೇ ಕೈಗೊಳ್ಳಬೇಕಾಗುತ್ತದೆ. ವೃಶ್ಚಿಕ ರಾಶಿಯವರು ಹೆಚ್ಚು ಎಚ್ಚರಿಕೆಯಿಂದ ಕೆಲಸ ಕಾರ್ಯದಲ್ಲಿ ಮುಂದುವರಿಯಬೇಕಾಗುತ್ತದೆ. ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಿ. ಧನು ರಾಶಿಯವರಿಗೆ ಸ್ತ್ರೀಯಿಂದ ಅಥವಾ ಪತಿಯಿಂದ ಕಷ್ಟಗಳು ಎದುರಾಗಬಹುದು. ಹೀಗಾಗಿ ದಾಂಪತ್ಯ ಜೀವನದಲ್ಲಿ ತಗಾದೆಗಳು ಏಳದಂತೆ ಎಚ್ಚರವಹಿಸಬೇಕು.

ವ್ಯಾಪಾರದ ಮೇಲೆ ಪ್ರಭಾವ: ಈ ಗ್ರಹಣವು ಆರ್ದ್ರಾ ನಕ್ಷತ್ರ, ಮಿಥುನ ರಾಶಿ ಮತ್ತು ಪೌಷ ಮಾಸದಲ್ಲಿ ಸಂಭವಿಸುತ್ತಿವುದರಿಂದ, ಲೋಹ, ತೈಲ, ತುಪ್ಪ, ಬೆಲ್ಲ, ಬೇಳೆ, ನಾರಗಸೆ, ಹತ್ತಿ, ಉಣ್ಣೆ, ಹತ್ತಿ ಬೀಜ ಮುಂತಾದ ವ್ಯಾಪಾರಿ ವಸ್ತುಗಳ ದರವು ಅಧಿಕವಾಗಿರುತ್ತದೆ.

ರಾಜಕಾರಣ: ಗ್ರಹಣದಿಂದ ರಾಜಕಾರಣದ ಮೇಲೆ ಯಾವ ರೀತಿ ಪರಿಣಾಮವಾಗುತ್ತದೆ? ಕನ್ಯಾ ಲಗ್ನ ಮತ್ತು ವೃಷಭ ನವಾಂಶ ಹಾಗೂ ರಾಹುವಿನ ಮಹಾದಶೆಯಲ್ಲಿ ಶುಕ್ರನ ಅಂತರದಿಂದಾಗಿ ಗ್ರಹಣವಾಗುತ್ತಿರುವುದರಿಂದ, ಇದರ ಪ್ರಭಾವವು ಜನತೆ ಅಥವಾ ಸಂಬಂಧಿತ ಕೆಲಸ ಕಾರ್ಯಗಳ ಮೇಲೆ ಉತ್ತಮ ಪರಿಣಾಮ ಇರುವುದಿಲ್ಲ.

ಶುಕ್ರನು ಗುರುವಿನ ರಾಶಿ ಧನುವಿನಲ್ಲಿ ಭಾಗ್ಯೇಶ ಅಥವಾ ಧನೇಶನಾಗಿ, ದ್ವಾದಶೇಶ ಸೂರ್ಯ, ದಶಮೇಶ ಅಥವಾ ಲಗ್ನೇಶ ಬುಧನೊಂದಿಗೆ ರಾಹುಗ್ರಸ್ತನಾಗಿರುತ್ತಾನೆ. ಹೀಗಾಗಿ ಜನ ಸಾಮಾನ್ಯರು ದುಃಖದ ದಿನಗಳಿಗೆ ಈಡಾಗುತ್ತಾರೆ. ಯಾವುದೇ ಪಕ್ಷದ ಗಮನವೂ ಇತ್ತ ಕಡೆ ಹರಿಯುವುದೇ ಇಲ್ಲ.

ಮುಂಬರುವ ಆರು ತಿಂಗಳಲ್ಲಿ ಹಿರಿಯ ರಾಜಕಾರಣಿಯೊಬ್ಬರ ಅವಸಾನವಾಗುವ ಸಾಧ್ಯತೆಗಳೂ ಇವೆ. ಸಪ್ತಮೇಶ ಗುರುವು ಒಂದು ಮನೆ ಹಿಂದೆ ಇರುವುದರಿಂದ, ಸ್ತ್ರೀಯರಿಗೆ ಕಷ್ಟ ಕೋಟಲೆಗಳಿರುತ್ತವೆ. ಶನಿಯ ದೃಷ್ಟಿಯು ದಶಮ ಭಾವದಿಂದ ಪ್ರತ್ಯೇಕಗೊಂಡು ಕಾರಕ ಕೇತುವಿನ ಮೇಲೆ ಬೀಳುತ್ತದೆ, ಇದು ರಾಜಕಾರಣಿಗಳಿಗೆ ಶುಭ ಸಂಕೇತವಲ್ಲ. ಗುಪ್ತ ಶತ್ರುಗಳಿಂದಲೂ ಹಾನಿಯ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Show comments