Select Your Language

Notifications

webdunia
webdunia
webdunia
webdunia

ಶನಿ ಬಿಡದೆ ಕಾಡಿದಾಗ ಕಂಡು ಬರುವ ಫಲಾಫಲಗಳು

ಶನಿ ಬಿಡದೆ ಕಾಡಿದಾಗ ಕಂಡು ಬರುವ ಫಲಾಫಲಗಳು
, ಗುರುವಾರ, 6 ಫೆಬ್ರವರಿ 2014 (11:09 IST)
PR
ಪರಮೇಶ್ವರ್ ಶೃಂಗೇರಿ.

ಮಾನವನ ಜೀವನದಲ್ಲಿ ‘ಸಾಡೇ ಸಾತಿ’ ಎನ್ನುವ ಶನಿಗ್ರಹಕ್ಕೆ ಸಂಬಂಧಿಸಿದ ದೋಷವು ಅತ್ಯಂತ ಕಷ್ಟಕರ ಅವಧಿಯೆಂದು ಬಿಂಬಿತವಾಗಿದ್ದ ಮನುಷ್ಯನ ಜೀವನಮಾನದ ಅವಧಿಯಲ್ಲಿ ಈ ಸಾಡೇ ಸಾತಿ ಶನಿಯು ಎರಡು ಅಥವಾ ಮೂರು ಬಾರಿ ಬರಬಹುದಾಗಿದೆ.

ಇದು ಅವರವರ ಪೂರ್ವಜನ್ಮದ ಕರ್ಮಕ್ಕನುಸಾರವಾಗಿ ಶುಭ ಅಥವಾ ಅಶುಭ ಫಲಗಳನ್ನು ತರುತ್ತದೆ. ಆದರೆ ಜಾತಕದಲ್ಲಿ ಯಾವ ರಾಶಿಯಲ್ಲಿ ಶನಿ ಸ್ಥಿತನಾಗಿದ್ದಾನೆ ಎಂಬುದರ ಮೇಲೆ ಆ ಫಲಗಳು ಘಟಿಸುತ್ತವೆ ಎಂಬುದು ಸುಸ್ಪಷ್ಟವಾಗಿರುತ್ತದೆ.

ಶನಿಯು ಮೇಷರಾಶಿಯಲ್ಲಿದ್ದ ಪಕ್ಷದಲ್ಲಿ ರೋಗಬಾಧೆ ಕಂಡುಬರುವುದು ಮಾತ್ರವಲ್ಲದೇ, ಮರಣ ಸೂಚಕವೂ ಹೌದು.

ವೃಷಭದಲ್ಲಿದ್ದರೆ ಧನ ನಾಶ, ಪಿತ್ರಾರ್ಜಿತ ಸಂಪತ್ತು ನಾಶವಾಗುವುದು. ಮಾತ್ರವಲ್ಲ ,ಸಂತಾನಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಂಡು ಬರುತ್ತದೆ. ಶನಿಯು ಮಿಥುನದಲ್ಲಿದ್ದರೆ ಉತ್ತಮ ಅಧಿಕಾರ ಪ್ರಾಪ್ತಿ, ಧನಲಾಭ, ಸೈಟು, ಮನೆಗಳ ಖರೀದಿ ಹೀಗೆ ಶುಭಕರ ಫಲಗಳು ದೊರೆಯುತ್ತವೆ. ಕರ್ಕಾಟಕದಲ್ಲಿದ್ದಾಗ ಬಂಧು ಬಾಂಧವರ ವಿರೋಧ, ಪತ್ನಿಯ ಮರಣ, ದ್ರವ್ಯನಾಶದಂತಹ ಆಶುಭಕಾರಕಗಳು ಜರಗುತ್ತವೆ.

webdunia
PR
ಶನಿಯು ಸಿಂಹರಾಶಿಯಲ್ಲಿದ್ದ ಪಕ್ಷದಲ್ಲಿ ಮಾನಸಿಕ ಚಿಂತೆ ಕಾಡುವುದಲ್ಲದೇ, ಧನ ಹಾನಿ, ಸಂತಾನ ನಾಶದಂತಹ ಅವಘಡಗಳು ಘಟಿಸುತ್ತವೆ. ಕನ್ಯಾರಾಶಿಯಲ್ಲಿ ಶನಿ ಇದ್ದ ಪಕ್ಷದಲ್ಲಿ ಸಕಲ ಕಾರ್ಯಾನುಕೂಲವಾಗುವುದಲ್ಲದೇ ಧನಪ್ರಾಪ್ತಿ, ಸ್ತ್ರೀ ಸೌಖ್ಯ ದೊರೆಯುತ್ತದೆ.
ಶನಿಯು ತುಲಾರಾಶಿಯಲ್ಲಿದ್ದಾಗ ಪ್ರಯಾಣದಲ್ಲಿ ಹಾನಿ, ಪತ್ನಿಗೆ ಅನಾರೋಗ್ಯ, ಸಮಾಜದಿಂದ ಅಗೌರವವನ್ನು ಅನುಭವಿಸಲೇ ಬೇಕು.

ಶನಿಯು ವೃಶ್ಚಿಕ ರಾಶಿಯಲ್ಲಿದ್ದರೆ ಪಶುನಾಶ, ಸಂಪತ್ತು, ಬೆಳೆ ನಾಶವಾಗವುದಲ್ಲದೇ ಮಿತ್ರರೂ ಶತ್ರುಗಳಾಗುತ್ತಾರೆ.

ಧನುರಾಶಿಯಲ್ಲಿ ಶನಿ ಇದ್ದರೆ ದಾರಿದ್ರ್ಯ, ತಂದೆ ಅಥವಾ ಕುಟುಂಬದ ಹಿರಿಯರ ಮರಣ,ಸಕಲ ಕೆಲಸದಲ್ಲಿಯೂ ವಿಘ್ನ ಎದುರಾಗುತ್ತದೆ.
ಮರಕ ರಾಶಿಯಲ್ಲಿ ಶನಿ ಇದ್ದರೆ ದುಷ್ಟ ಪ್ರವೃತ್ತಿಯಲ್ಲಿ ತೊಡಗುವಿಕೆ, ಮಾನಭಂಗ, ರೋಗ ಬಾಧೆ ಕಂಡುಬರುತ್ತದೆ.

ಕುಂಭ ರಾಶಿಯಲ್ಲಿ ಶನಿ ಸ್ಥಿತನಾಗಿದ್ದಾಗ ಜಾತಕನು ಸುಖದ ಹಾಗೂ ವೈಭಪೋಪೇತ ಜೀವನವನ್ನು ನಡೆಸುವುದಲ್ಲದೇ ಸಮಾಜದಿಂದ ಉತ್ತಮ ಗೌರವ ಪ್ರಾಪ್ತಿ ಹೊಂದುತ್ತಾನೆ .
ಇನ್ನೂ ಮೀನಾ ರಾಶಿಯಲ್ಲಿ ಶನಿಯಿದ್ದಾಗ ಕೈಗೊಳ್ಳುವ ಕಾರ್ಯದಲ್ಲಿ ಹಿನ್ನಡೆ, ಶತ್ರುಗಳ ಉಪಟಳ, ಧನ ಹಾನಿ, ಮಕ್ಕಳಿಗೆ ರೋಗ ಬಾಧೆ ಹೀಗೆ ಅಶುಭ ಫಲಗಳೇ ಕಂಡುಬರುತ್ತದೆ.
ಹಾಗಾಗೀ ಇವೆಲ್ಲವನ್ನು ಅರಿತು ಜೀವನದಲ್ಲಿ ಧೈರ್ಯದಿಂದ ಮುನ್ನುಗ್ಗಲು ಸೂಕ್ತ ಜ್ಯೋತಿಷಿಗಳಿಂದ ಸಲಹೆ ಪಡೆದು ಶನಿ ಜಪ, ಶನಿ ಶಾಂತಿ, ಹೀಗೆ ಶನಿಗೆ ಸಂಬಂಧಿಸಿದ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವುದು ಸೂಕ್ತ. ಇದರಿಂದ ಅಶುಭ ಫಲಗಳನ್ನು ಸಂರ್ಪೂಣವಾಗಿ ನಿರ್ಬಂಧಿಸಲು ಸಾಧ್ಯವಾಗದಿದ್ದರೂ , ಪರಿಸ್ಥಿತಿಯನ್ನು ಎದುರಿಸುವ ಸಾಮರ್ಥ್ಯ ಉಂಟಾಗುವುದು.

Share this Story:

Follow Webdunia kannada