Webdunia - Bharat's app for daily news and videos

Install App

ಶನಿಗ್ರಹದ ಉಂಗುರಗಳ ಸೃಷ್ಟಿ

Webdunia
ಸೋಮವಾರ, 24 ಫೆಬ್ರವರಿ 2014 (11:43 IST)
PR
ಬೃಹತ್ ಗಾತ್ರದ ಡೈನಾಸರ್‌ಗಳ ಯುಗದಲ್ಲಿ ಶನಿಗ್ರಹದ ಸುತ್ತಲಿರುವ ಉಂಗುರುಗಳು ರಚನೆಯಾಗಿವೆಯೆಂದು ಈ ಹಿಂದೆ ಭಾವಿಸಲಾಗಿತ್ತು. ಆದರೆ ಈ ಉಂಗುರಗಳು 4.5 ಶತಕೋಟಿ ವರ್ಷಗಳ ಹಿಂದೆ ಸೌರಮಂಡಲ ನಿರ್ಮಾಣ ಹಂತದಲ್ಲಿದ್ದಾಗ ಸೃಷ್ಟಿಯಾಗಿರಬಹುದೆಂದು ಅಂದಾಜಿಸಲಾಗಿದೆ.

ಅಮೆರಿಕದ ವಿಜ್ಞಾನಿಗಳು ಈ ಕುರಿತು ನಾಸಾದ ಕ್ಯಾಸಿನಿ ಬಾಹ್ಯಾಕಾಶ ನೌಕೆ ಸಂಗ್ರಹಿಸಿದ ಅಂಕಿಅಂಶವನ್ನು ಬಳಸಿಕೊಂಡು ಅಧ್ಯಯನ ನಡೆಸಿದ್ದು, ಶನಿಗ್ರಹದ ಉಂಗುರಗಳು 100 ದಶಲಕ್ಷ ವರ್ಷಗಳಷ್ಟು ಹಿಂದೆ ರಚನೆಯಾಗಿಲ್ಲ. ಬದಲಿಗೆ ಸೌರಮಂಡಲ ನಿರ್ಮಾಣ ಹಂತದಲ್ಲಿದ್ದಾಗ ಸೃಷ್ಟಿಯಾಗಿದೆಯೆಂದು ಸೈನ್ಸ್ ಡೇಲಿ ವರದಿ ಮಾಡಿದೆ.

ನಾಸಾದ ವಾಯೇಜರ್ ನೌಕೆ 1970ರಲ್ಲಿ ಮತ್ತು ಹಬ್ಬಲ್ ಬಾಹ್ಯಾಕಾಶ ಟೆಲಿಸ್ಕೋಪ್ ಅಂಕಿಅಂಶಗಳಿಂದ ಶನಿಗ್ರಹದ ಉಂಗುರಗಳು ಕಿರಿಯ ವಯಸ್ಸಿನವನಾಗಿದ್ದು, ದೊಡ್ಡ ಚಂದ್ರನನ್ನು ನುಚ್ಚುನೂರು ಮಾಡಿದ ಧೂಮಕೇತುವಿನಿಂದ ನಿರ್ಮಾಣವಾಗಿರಬಹುದೆಂದು ವಿಜ್ಞಾನಿಗಳು ನಂಬಿದ್ದಾರೆ.

2004 ರಲ್ಲಿ ಶನಿಗ್ರಹಕ್ಕೆ ಆಗಮಿಸಿದ ಕ್ಯಾಸಿನಿಯ ಉಪಕರಣಗಳಲ್ಲಿ ಕಂಡ ಉಂಗುರದ ಲಕ್ಷಣಗಳಲ್ಲಿ, ಒಂದೇ ವಿನಾಶಕಾರಿ ವಿದ್ಯಮಾನದಿಂದ ಇದು ಘಟಿಸಿದ್ದಲ್ಲವೆಂದು ರುಜುವಾತು ಮಾಡುತ್ತದೆ. ವಿವಿಧ ಉಂಗುರಗಳ ವಯೋಮಾನಗಳಲ್ಲಿ ಮಹತ್ವದ ಬದಲಾವಣೆಯಿದ್ದು, ಉಂಗುರದ ವಸ್ತು ಸತತ ಪುನರ್‌ನವೀಕರಣಕ್ಕೆ ಒಳಗಾಗುತ್ತದೆ.

ಶನಿಗ್ರಹಕ್ಕೆ ಇತಿಹಾಸದುದ್ದಕ್ಕೂ ಉಂಗುರಗಳಿರುವ ಬಗ್ಗೆ ಪುರಾವೆಗಳು ರುಜುವಾತುಮಾಡಿವೆ. ಶನಿಗ್ರಹದ ಸುತ್ತ ತಿರುಗುವ ಚಂದ್ರಗಳು ಉಂಗುರದ ವಸ್ತುವಾಗಿ ನುಚ್ಚುನೂರಾಗುವ ಮೂಲಕ ಉಂಗುರದ ವಸ್ತುವಿನ ವ್ಯಾಪಕ, ಶೀಘ್ರ ಪುನರ್ಬಳಕೆಯನ್ನು ನಾವು ಗಮನಿಸಬಹುದು.

ಈ ಉಂಗುರಗಳು ಕಾಸ್ಮಿಕ್ ಯುಗದಲ್ಲಿ ನಿರ್ಮಾಣವಾಗಿಲ್ಲ ಎನ್ನುವುದು ಪತ್ತೆಯಾಗಿದೆ. ಅವು ಸತತ ಬದಲಾವಣೆಗೆ ಒಳಪಡುತ್ತಾ, ಅನೇಕ ಶತಕೋಟಿ ವರ್ಷಗಳಿಂದ ಅಸ್ತಿತ್ವದಲ್ಲಿದೆ ಎಂದು ಕ್ಯಾಸಿನಿಯ ಮುಖ್ಯ ತನಿಖೆದಾರ ಪ್ರೊ.ಲ್ಯಾರಿ ಎಸ್ಪೊಸಿಟೊ ತಿಳಿಸಿದ್ದಾರೆ.

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Show comments